ಅಪ್ಪು ನಮ್ಮೆಲ್ಲರನ್ನು ಬಿಟ್ಟು ಹೋಗುವ ಮುಂಚೆ ದರ್ಶನ್ ಮತ್ತು ಸುದೀಪ್ ಬಗ್ಗೆ ಹೇಳಿದ ಮಾತುಗಳು ಇದೀಗ ವೈರಲ್ ಆಗಿದೆ. ಅಷ್ಟಕ್ಕೂ ಅಪ್ಪು ಹೇಳಿದ್ದೇನೂ ಗೊತ್ತಾ.?

ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನೆಲ್ಲ ಅ’ಗ’ಲಿ ಒಂದು ವರ್ಷಗಳಾದರೂ ಸಹ ಇನ್ನು ಅಭಿಮಾನಿಗಳ ಮನಸ್ಸಿನಲ್ಲಿ ರಾರಾಜಿಸುತ್ತಿದ್ದಾರೆ ಪುನೀತ್ ರಾಜ್‌ಕುಮಾರ್ ಅವರು ಯಾಕೆ ಎಲ್ಲರಿಗೂ ಇಷ್ಟವಾಗುತ್ತಾರೆ ಎಂದರೆ ಅವರು ತಾನು ಒಬ್ಬ ಸ್ಟಾರ್ ನಟ ಎನ್ನುವಂತಹ ಹಮ್ಮು ಬಿಮ್ಮು ಮನಸ್ಸಿನಲ್ಲಿ ಇಟ್ಟುಕೊಂಡಿರಲಿಲ್ಲ ಎಲ್ಲರಂತೆ ತಾನು ಒಬ್ಬ ಮನುಷ್ಯ ಎಂದು ಭಾವಿಸಿಕೊಂಡಿದ್ದರು. ಇದೀಗ ಪುನೀತ್ ಅವರು ದರ್ಶನ್ ಮತ್ತು ಸುದೀಪ್ ಅವರ ಬಗ್ಗೆ ಮಾತನಾಡಿರುವಂತಹ ಕೆಲವೊಂದು ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದೆ. ತಮ್ಮ ಸಹನಟರನ್ನು ಸಹ ತುಂಬಾ ಗೌರವದಿಂದ ಕಾಣುತ್ತಿದ್ದಂತಹ ಅಪ್ಪು ಅವರು ದರ್ಶನ್ ಹಾಗೂ ಸುದೀಪ್ ಅವರ ಜೊತೆಯಲ್ಲಿ ಉತ್ತಮವಾದಂತಹ ಬಾಂಧವ್ಯವನ್ನು ಹೊಂದಿದ್ದರು.

WhatsApp Group Join Now
Telegram Group Join Now

ಚಿತ್ರರಂಗದಲ್ಲಿ ಇರುವಂತಹ ಯಾವ ನಟರ ಜೊತೆಯಲ್ಲೂ ಇವರು ಯಾವುದೇ ಕಂಟ್ರೋವರ್ಸಿ ಮಾಡಿಕೊಂಡಿರಲಿಲ್ಲ ಎಲ್ಲರೊಂದಿಗೂ ಸಹ ಸ್ನೇಹಜೀವಿ ಆಗಿದ್ದಂತಹ ಅಪ್ಪು ಅವರು ಇಷ್ಟು ಬೇಗ ನಮ್ಮನ್ನೆಲ್ಲ ಅ’ಗ’ಲಿ ಹೋಗಿರುವುದು ತುಂಬಾ ವಿಷಾದನೀಯ. ಸಂದರ್ಶನ ಒಂದರಲ್ಲಿ ಅಪ್ಪು ಅವರಿಗೆ ಒಂದು ಪ್ರಶ್ನೆಯನ್ನು ಕೇಳಲಾಗುತ್ತದೆ ನೀವು ಸುದೀಪ್ ಅವರ ಜೊತೆಯಲ್ಲಿ ಯಾವಾಗ ಸಿನಿಮಾ ಮಾಡುತ್ತೀರಾ ಎಂದು ಆಗ ಪುನೀತ್ ರಾಜ್‌ಕುಮಾರ್ ಅವರು ನನಗೂ ಸಹ ಸುದೀಪ್ ಅವರ ಜೊತೆಯಲ್ಲಿ ನಟಿಸಲು ಆಸೆ ಇದೆ ಒಳ್ಳೆಯ ಕಥೆ ಚಿತ್ರಕಥೆ ಬಂದರೆ ಖಂಡಿತವಾಗಿಯೂ ಸುದೀಪ್ ಅವರ ಜೊತೆಯಲ್ಲಿ ನಾನು ನಟಿಸುತ್ತೇನೆ ಎಂದು ಹೇಳಿದ್ದರು.

ಹಾಗೆಯೇ ಸಂದರ್ಶಕರು ದರ್ಶನ್ ಅವರ ಜೊತೆಯಲ್ಲಿ ಯಾವಾಗ ನಟಿಸುತ್ತೀರಾ ಎಂದು ಕೇಳಿದಾಗ ದರ್ಶನ್ ಅವರು ನನಗೆ ಉತ್ತಮ ಸ್ನೇಹಿತ ವೈಯಕ್ತಿಕವಾಗಿ ನನಗೆ ದರ್ಶನ್ ಎಂದರೆ ತುಂಬಾ ಇಷ್ಟ ನಾನು ಮತ್ತು ದರ್ಶನ್ ಅವರು ಅರಸು ಚಿತ್ರದಲ್ಲಿ ಕಾಣಿಸಿಕೊಂಡಿದ್ದೆವು. ಆದರೆ ದರ್ಶನವರು ಮೈನ್ ಹೀರೋ ಆಗಿರಲಿಲ್ಲ ಬದಲಿಗೆ ಗೆಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಮುಂದಿನ ದಿನಗಳಲ್ಲಿ ದರ್ಶನ್ ಅವರ ಜೊತೆಯಲ್ಲಿ ತೆರೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು. ಪುನೀತ್ ರಾಜ್‌ಕುಮಾರ್ ಅವರಿಗೆ ಎಲ್ಲರೊಡನೆಯೂ ಸ್ನೇಹ ಸಂಬಂಧದಿಂದ ಇರುವುದು ಎಂದರೆ ತುಂಬಾ ಇಷ್ಟ ಹಾಗೆ ದರ್ಶನ್ ಮತ್ತು ಸುದೀಪ್ ಅವರ ಜೊತೆಯಲ್ಲೂ ಇವರು ಸಿನಿಮಾ ಮಾಡಲು ರೆಡಿ ಇದ್ದರು ಆದರೆ ದೇವರು ಆ ಅವಕಾಶವನ್ನು ಕಲ್ಪಿಸಿ ಕೊಡಲಿಲ್ಲ, ಇವರ ಆಸೆ ಈಡೇರುವ ಮೊದಲೇ ಅಪ್ಪು ಅವರು ನಮ್ಮೆಲ್ಲರನ್ನು ಬಿಟ್ಟು ದೂರಾಗಿದ್ದಾರೆ.

ಇನ್ನು ಸುದೀಪ್ ಮತ್ತು ಅಪ್ಪು ಅವರ ಸ್ನೇಹ ಸಂಬಂಧ ಈಗಿನದಲ್ಲ ಬಾಲ್ಯದಿಂದಲೂ ಸಹ ಇವರು ಉತ್ತಮ ಸ್ನೇಹಿತರು ನಾವು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಫೋಟೋಗಳನ್ನು ನೋಡಿದ್ದೇವೆ ಸುದೀಪ್ ಮತ್ತು ಅಪ್ಪು ಅವರು ಬಾಲ್ಯದಲ್ಲಿ ಇರುವಂತಹ ಫೋಟೋಗಳು ಸಹ ನಮಗೆ ಲಭ್ಯವಾಗುತ್ತದೆ ಆದರೆ ದರ್ಶನಬರು ಚಿತ್ರರಂಗಕ್ಕೆ ಬಂದ ನಂತರ ಪುನೀತ್ ರಾಜ್‌ಕುಮಾರ್ ಅವರಿಗೆ ಪರಿಚಯವಾದ ಗೆಳೆತನ. ಪುನೀತ್ ರಾಜ್‌ಕುಮಾರ್ ಅವರು ಇದ್ದರೆ ಮುಂದಿನ ದಿನಗಳಲ್ಲಿ ಸುದೀಪ್ ಮತ್ತೆ ದರ್ಶನ್ ಅವರ ಜೊತೆಯಲ್ಲಿ ಖಂಡಿತವಾಗಿಯೂ ತೆರೆಯನ್ನು ಹಂಚಿಕೊಳ್ಳುತ್ತಿದ್ದರು. ಇವರ ಜೊತೆಯಲ್ಲಿ ನಟಿಸಿದಂತಹ ಸಿನಿಮಾಗಳು ಖಂಡಿತವಾಗಿಯೂ ಸೂಪರ್ ಹಿಟ್ ಸಿನಿಮಾಗಳು ಆಗುತ್ತಿದ್ದವು. ಆದರೆ ಆ ಅವಕಾಶ ನಮಗೆ ಇನ್ನು ಇಲ್ಲ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now