ಸಾರಾ ಗೋವಿಂದು ಅವರ ಮಗನ ಮದುವೆಯಲ್ಲಿ ಪುನೀತದರ್ಶನ ಹೌದು ಸಾರ ಗೋವಿಂದು ಅವರ ಮಗ ಅನುಪ್ ಅವರ ಮದುವೆಯಲ್ಲಿ ಪುನೀತ್ ರಾಜ್ಕುಮಾರ್ ಹಾಗೂ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ತುಂಬಾ ಸರಳವಾಗಿ ಕಾಣಿಸಿಕೊಂಡಿರುವ ವೀಡಿಯೋ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಪುನೀತ್ ರಾಜ್ಕುಮಾರ್ ಅವರು ಎಲ್ಲೇ ಹೋದರು ಸಹ ಅವರ ಪತ್ನಿ ಅಶ್ವಿನಿ ಅವರ ಜೊತೆಯಲ್ಲಿ ಹೋಗುತ್ತಾ ಇದ್ದರು. ಸಾರ ಗೋವಿಂದು ಅವರು ಕನ್ನಡ ಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರು ಅಷ್ಟೇ ಅಲ್ಲದೆ ಕನ್ನಡ ಚಿತ್ರರಂಗದ ನಿರ್ಮಾಪಕರು ಸಹ ಹೌದು ಸಾಕಷ್ಟು ಸಿನಿಮಾಗಳನ್ನು ಇವರು ನಿರ್ಮಾಣ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇವರು ಸಾಕಷ್ಟು ಕನ್ನಡಪರ ಹೋರಾಟಗಳನ್ನು ನಡೆಸಿ ಕನ್ನಡದಲ್ಲಿ ಉತ್ತಮ ನಾಯಕ ಎನಿಸಿಕೊಂಡಿದ್ದಾರೆ.
ಸಾರ ಗೋವಿಂದು ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಇವರಿಗೆ ಮೂರು ಜನ ಮಕ್ಕಳು ಎರಡು ಹೆಣ್ಣು ಹಾಗೆಯೇ ಒಂದು ಗಂಡು, ಸಾರ ಗೋವಿಂದು ಅವರ ಗಂಡು ಮಗ ಅನುಪ್ ಸಾರಾ ಗೋವಿಂದು ಅವರ ಮದುವೆ ತುಂಬಾ ಅದ್ದೂರಿಯಾಗಿ ನಡೆಸಿದ್ದಾರೆ. ಚಲನಚಿತ್ರ ರಂಗದಲ್ಲಿ ಇರುವಂತಹ ಎಲ್ಲಾ ನಟ ನಟಿಯರು ಗಣ್ಯರಿಗೆ ಆಹ್ವಾನ ಪತ್ರಿಕೆಯನ್ನು ನೀಡಿ ಅವರನ್ನು ಮದುವೆಗೆ ಕರೆದಿದ್ದರು ಅದೇ ರೀತಿಯಲ್ಲಿ ಸಾಕಷ್ಟು ನಟ ನಟಿಯರು ಈ ಒಂದು ಮದುವೆಗೆ ಆಗಮಿಸಿ ವಧು ಮತ್ತು ವರರಿಗೆ ಆಶೀರ್ವಾದವನ್ನು ಮಾಡಿದ್ದರು. ಬೆಂಗಳೂರಿನ ಯಲಹಂಕದ ಒಂದು ದೊಡ್ಡ ಕನ್ವೆನ್ಷನ್ ಹಾಲ್ ನಲ್ಲಿ ನ ಅನೀಪ್ ಹಾಗೂ ಮೇಘನಾ ಅವರಿಗೆ ವಿವಾಹವು ಜರುಗಿತ್ತು.
ಇವರ ವಿವಾಹ ಮಹೋತ್ಸವಕ್ಕೆ ಕನ್ನಡ ಚಿತ್ರರಂಗದವರಾದ ನಟ ಪುನೀತ್ ರಾಜ್ ಕುಮಾರ್, ರಮೇಶ್, ಮಾಲಾಶ್ರೀ, ಪ್ರೇಮಾ, ದೇವರಾಜ್, ನಿರ್ದೇಶಕ ಭಾರ್ಗವ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಪಾಲ್ಗೊಂಡಿದ್ದರು. ‘ಡವ್’ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿ ಪ್ರವೇಶಿಸಿದ ಅನೂಪ್ ಅವರು ನಂತರದಲ್ಲಿ ‘ಸಾಗುವ ದಾರಿಯಲ್ಲಿ’ ಹಾಗೂ ‘ಮಿಸ್ಟರ್ ಪರ್ಫೆಕ್ಟ್’ ಎನ್ನುವ ಚಿತ್ರಗಳಲ್ಲಿ ನಟಿಸಿದ್ದಾರೆ. ಸಾರ ಗೋವಿಂದು ಅವರ ಮಗ ಅನುಪ್ ಅವರ ಮದುವೆಯಲ್ಲಿ ಅಪ್ಪು ಅವರ ನಯ ವಿನಯ ಹಾಗೆ ಸರಳತೆಯನ್ನು ನೋಡುತ್ತಿದ್ದರೆ ಎಂತಹವರಲ್ಲಿಯೂ ದುಃಖ ಎನ್ನುವಂತಹದ್ದು ಹೊರ ಹೊಮ್ಮುತ್ತದೆ ಅವರು ನಮ್ಮೊಟ್ಟಿಗೆ ದೈಹಿಕವಾಗಿ ಇಲ್ಲ ಎನ್ನುವಂತಹ ನೋವು ಕಾಡುತ್ತದೆ ಆದರೆ ಲಕ್ಷಾಂತರ ಅಭಿಮಾನಿಗಳ ಮನಸ್ಸಿನಲ್ಲಿ ಅವರು ಜೀವಂತವಾಗಿ ಇದ್ದಾರೆ. ಅಭಿಮಾನಿಗಳು ಇವರನ್ನು ದೇವರು ಎಂದೇ ಪೂಜಿಸುತ್ತಾ ಇದ್ದಾರೆ ಸಾಕಷ್ಟು ಅಭಿಮಾನಿಗಳು ಇವರನ್ನು ಕಳೆದುಕೊಂಡ ನಂತರ ನೋವನ್ನು ಇಂದಿಗೂ ಅನುಭವುಸುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಅವರು ಜನರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಕೇವಲ ಅಭಿಮಾನಿಗಳಾಗಿ ನಮಗೆ ಇಷ್ಟೊಂದು ನೋವಾಗುವ ಸಮಯದಲ್ಲಿ ಇನ್ನೂ ಅವರ ಪತ್ನಿಯ ಅಶ್ವಿನಿಯವರಿಗೆ ಎಷ್ಟು ನೋವಾಗುತ್ತದೆ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ ಅವರ ಜೊತೆಗೆ ಕಾಲ ಕಳೆದಂತಹ ಸಮಯವನ್ನು ಮರೆಯಲು ಅವರಿಂದ ಸಾಧ್ಯವೇ ಇಲ್ಲ. ಅಪ್ಪು ಅವರ ಜೊತೆಯಲ್ಲಿ ತೆಗೆಸಿಕೊಂಡಂತಹ ಫೋಟೋಗಳು ಮತ್ತೆ ವಿಡಿಯೋಗಳನ್ನು ನೋಡಿಕೊಂಡು ಹಿಂದಿನ ದಿನಗಳನ್ನು ನೆನಪು ಮೆಲಕು ಹಾಕಬೇಕು. ಅಶ್ವಿನಿ ಅವರು ಅಪ್ಪು ಅವರ ಮಾರ್ಗದರ್ಶನದಲ್ಲಿಯೇ ಎಲ್ಲವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಅಪ್ಪು ಅವರಿಗೆ ಎಷ್ಟು ಹೃದಯವಂತಿಕೆ ಇತ್ತು ಅದೇ ಹೃದಯವಂತಿಕೆ ಅಶ್ವಿನಿ ಅವರಲ್ಲೂ ಸಹ ನಾವು ನೋಡಬಹುದು. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.