ರೈಲ್ವೆ ಹುದ್ದೆಗಳ ನೀರಿಕ್ಷೆಯಲ್ಲಿರುವವರಿಗೆ ಈಗ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅದೇನೆಂದರೆ, ವಾಯುವ್ಯ ರೈಲ್ವೆ ಇಲಾಖೆ NWR ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರನ್ನು ಅಸಿಸ್ಟೆಂಟ್ ಲೋಕೋ ಪೈಲೆಟ್ ಆಗಿ ನೇಮಕ ಮಾಡಲು ಇಲಾಕೆ ರೆಡಿಯಾಗಿದ್ದು ಇದಕ್ಕೆ ಸಂಬಂಧಿಸಿದವಾಗಿ ಇತ್ತೀಚಿಗೆ ಅಧಿಸೂಚನೆ ಕೂಡ ಹೊರಡಿಸಿದೆ.
ಭಾರತದಾದ್ಯಂತ ಇರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳು ಕೂಡ ಈ ಹುದ್ದೆಗಳಿಗೆ ಅರ್ಹತೆ ಮತ್ತು ಆಸಕ್ತಿ ಹೊಂದಿದ್ದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ರೈಲ್ವೆ ಇಲಾಖೆ ಅಧಿಕೃತ ವೆಬ್ ಸೈಟ್ ನಲ್ಲಿ ಇದರ ಸಂಪೂರ್ಣ ವಿವರ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ಗೆ ಭೇಟಿ ಕೊಟ್ಟು ತಿಳಿದುಕೊಳ್ಳಬಹುದು. ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳ ಅನುಕೂಲತೆಗಾಗಿ ಅಧಿಸೂಚನೆಯಲ್ಲಿ ತಿಳಿಸಿರುವ ಕೆಲ ಪ್ರಮುಖ ಅಂಶಗಳ ಬಗ್ಗೆ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿಕೊಡಲಾಗಿದೆ.
ಇಲಾಖೆಯ ಹೆಸರು:- ನೈರುತ್ಯ ರೈಲ್ವೆ ಇಲಾಖೆ (NWR).
ಹುದ್ದೆ:- NWR ಅಸಿಸ್ಟೆಂಟ್ ಲೋಕೋ ಪೈಲೆಟ್.
ಉದ್ಯೋಗ ಸ್ಥಳ:- ಜೈಪುರ (ರಾಜಸ್ಥಾನ).
ಹುದ್ದೆಗಳ ಸಂಖ್ಯೆ:- 238.
ಶೈಕ್ಷಣಿಕ ವಿದ್ಯಾರ್ಹತೆ:-
● ಟ್ರೇಡ್ ನಲ್ಲಿ ಮೆಟ್ರಿಕ್ಯುಲೇಷನ್ ಪಾಸ್ ಇದರ ಜೊತೆಗೆ ಐಟಿಐ ನಲ್ಲಿ ಆಕ್ಟ್ ಅಪ್ರೆಂಟಿಸ್ ಶಿಪ್ ಆಗಿರಬೇಕು.
ಐಟಿಐ ನಲ್ಲಿ ಫಿಟ್ಟರ್ / ಎಲೆಕ್ಟ್ರಿಷಿಯನ್ / ಇನ್ಸ್ಟ್ರುಮೆಂಟ್ ಮೆಕಾನಿಕ್ / ಮಿಲ್ ರೈಟ್ ಮೆಂಟೇನೆನ್ಸ್ ಮೆಕ್ಯಾನಿಕ್ / ಮೆಕ್ಯಾನಿಕ್ (ರೇಡಿಯೋ ಮತ್ತು ಟಿವಿ),/ ಎಲೆಕ್ಟ್ರಾನಿಕ್ಸ್ ಮೆಕಾನಿಕ್ / ಮೆಕ್ಯಾನಿಕ್ (ಮೋಟಾರ್ ವೆಹಿಕಲ್) ವಯರ್ ಮ್ಯಾನ್ / ಟ್ರ್ಯಾಕ್ಟರ್ ಮೆಕಾನಿಕ್ / ಮ್ರಾಚೆರ್ ಕಾಯಿಲ್ ವಿಂಡರ್ / ಮೆಕ್ಯಾನಿಕ್ ಹೀಟ್ ಎಂಜಿನ್ ಅಭ್ಯಾಸ ಮಾಡಿದವರು.
● ಐಟಿಐ ಬದಲು ಮೆಕಾನಿಕಲ್ ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ / ಆಟೋಮೊಬೈಲ್ ವಿಭಾಗದಲ್ಲಿ ಡಿಪ್ಲೋಮಾ ಅಥವಾ ಇಂಜಿನಿಯರಿಂಗ್ ಮಾಡಿದವರು ಅರ್ಜಿ ಸಲ್ಲಿಸಬಹುದು.
ವಯೋಮಾನ ಮಿತಿ:-
● ಎಲ್ಲಾ ಅಭ್ಯರ್ಥಿಗಳಿಗೂ ಕನಿಷ್ಠ 18 ವರ್ಷ ತುಂಬಿರಬೇಕು.
● ಗರಿಷ್ಠ ವಯಸ್ಸಿನ ಮಿತಿ ಸಾಮಾನ್ಯ ವರ್ಗದವರಿಗೆ 42 ವರ್ಷಗಳು.
● OBC ವರ್ಗದವರಿಗೆ 45 ವರ್ಷಗಳು.
● SC&ST ವರ್ಗದವರಿಗೆ 47 ವರ್ಷಗಳು.
ಆಯ್ಕೆ ಪ್ರಕ್ರಿಯೆ:-
● ಸಾಮಾನ್ಯ ಇಲಾಖೆ ಸ್ಪರ್ಧಾತ್ಮಕ ಪರೀಕ್ಷೆ GDCE – 2023 ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
● ಕಂಪ್ಯೂಟರ್ ಬೇಸ್ಡ್ ಟೆಸ್ಟ್
● ಲಿಖಿತ ಪರೀಕ್ಷೆ
● ಆಪ್ಟಿಟ್ಯೂಡ್ ಟೆಸ್ಟ್
● ದಾಖಲೆಗಳ ಪರಿಶೀಲನೆ
● ವೈದ್ಯಕೀಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:-
● ಮೇಲೆ ತಿಳಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಮೊದಲಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ಆದ www.rrc.jaipur.in ವೆಬ್ ಸೈಟ್ ಗೆ ಭೇಟಿ ಕೊಡಿ.
● GDCE ಆನ್ಲೈನ್ / ಇ-ಅಪ್ಲಿಕೇಶನ್ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ಹೊಸ ನೋಂದಣಿ ಎಂದು ನೋಂದಣಿ ಆಗುವ ಮೂಲಕ ಅರ್ಜಿ ಫಾರಂ ತೆರೆದು ನಿಮ್ಮ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಪೋಷಕರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಸರಿಯಾಗಿ ತುಂಬಿ.
● ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿಗೆ ಸಂಬಂಧಪಟ್ಟ ದಾಖಲೆಗಳ ಪ್ರತಿಯೊಂದು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
● ಪ್ರಕ್ರಿಯೆ ಯಶಸ್ವಿಯಾಗಿ ಪೂರ್ತಿಗೊಂಡ ಬಳಿಕ ಇದರ ಸಂಬಂಧಿತವಾದ SMS ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಅಥವಾ ಇ-ಮೇಲ್ ಐಡಿಗೆ ಬರುತ್ತದೆ.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 7 ಏಪ್ರಿಲ್, 2023.
● ಅರ್ಜಿ ಸಲ್ಲಿಸಲು ಕೊನೆ ದಿನಾಂಕ – 6 ಮೇ, 2023.