ಆರ್ ಆರ್ ಬಿ ಎಂದರೆ ರೈಲ್ವೆ ರಿಕ್ರೂಟ್ಮೆಂಟ್ ಬೋರ್ಡ್ ಖಾಲಿ ಇರುವ 7700 ಕ್ಕೂ ಅಧಿಕ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರ ಬಿದ್ದಿದ್ದು ಆರ್ಆರ್ಬಿ ಬೋರ್ಡ್ ವತಿಯಿಂದ ಇದಕ್ಕೆ ಇರುವ ನಿಯಮಗಳನ್ನು ತಿಳಿಸಿದೆ. ಈ ಪ್ರಕಟಣೆ ಪ್ರಕಾರ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಹೊಂದಬೇಕಾದ ಶೈಕ್ಷಣಿಕ ಅರ್ಹತೆ, ವಯೋಮಾನ, ವಯೋಮಾನ ಸಡಿಲಿಕೆ, ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಸಲು ಆರಂಭ ದಿನಾಂಕ ಮತ್ತು ಕೊನೆ ದಿನಾಂಕ, ಉದ್ಯೋಗ ಸ್ಥಳ, ವೇತನ ಶ್ರೇಣಿ ಇನ್ನು ಮುಂತಾದ ಅನೇಕ ಮಾಹಿತಿಗಳ ವಿವರಗಳು ಈ ರೀತಿ ಇವೆ
ಇವುಗಳನ್ನು ಸರಿಯಾಗಿ ತಿಳಿದುಕೊಂಡು ಅರ್ಥೈಸಿಕೊಂಡು ನೀವು ಸಹ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಮಾಡಲು ಇಚ್ಚಿಸುತ್ತಿದ್ದರೆ ತಪ್ಪದೆ ಈ ಕೂಡಲೇ ಅರ್ಜಿ ಸಲ್ಲಿಸಿ. ಆರ್ ಆರ್ ಬಿ ಈ ಸಂಸ್ಥೆಯು ಈ ನೇಮಕಾತಿ ಮಾಡಿಕೊಳ್ಳುತ್ತದೆ. ಈ ಅಧಿಸೂಚನೆಯನ್ನು ಕೂಡ ಆರ್ಆರ್ಬಿ ಹೊರಡಿಸಿದ್ದು ಒಟ್ಟು ಭಾರತದಾದ್ಯಂತ ಖಾಲಿ ಇರುವ 7784 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವುದಾಗಿ ಹೇಳಿದೆ. ಇದಕ್ಕೆ ಅರ್ಜಿ ಸಲ್ಲಿಸಿ ಆಯ್ಕೆ ಆದ ಅಭ್ಯರ್ಥಿಗಳು ಭಾರತದ ಯಾವುದೇ ಭಾಗದ ರೈಲ್ವೆ ಸ್ಟೇಷನ್ ಅಲ್ಲಿ ಉದ್ಯೋಗ ಮಾಡಲು ಒಪ್ಪಿಕೊಳ್ಳಬೇಕಾಗುತ್ತದೆ.
ಇದು ಪ್ರಯಾಣ ಟಿಕೆಟ್ ಪರೀಕ್ಷಕ ಹುದ್ದೆಯಾಗಿದ್ದು ಶೈಕ್ಷಣಿಕ ಅರ್ಹತೆಯನ್ನು ಈ ರೀತಿ ಕೇಳಲಾಗಿದೆ. ಪ್ರಯಾಣ ಟಿಕೆಟ್ ಪರೀಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛೆ ಪಡುವ ವಿದ್ಯಾರ್ಥಿಯು ಭಾರತದ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ದ್ವಿತೀಯ ಪಿಯುಸಿ ಮತ್ತು ಪದವಿಯನ್ನು ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು.
ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಹುದ್ದೆಗಳನ್ನು ಪಡೆಯಬೇಕು ಎಂದರೆ ಅದರಲ್ಲಿ ವಯೋಮಿತಿ ನಿಗದಿ ಮುಖ್ಯ ಅಂಶ ಆಗಿರುತ್ತದೆ. ಈಗ ನಡೆಯುತ್ತಿರುವ ರೈಲ್ವೆ ಇಲಾಖೆಯ ಈ ನೇಮಕಾತಿಯ ಅಭ್ಯರ್ಥಿಗಳಿಗೂ ಕೂಡ ವಯೋಮಾನ ನಿಗದಿ ಆಗಿದ್ದು ಪ್ರಕರಣದ ಪ್ರಕಾರ ಅದು ಈ ರೀತಿ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನೀಡಿರುವ ಅಂತಿಮ ದಿನಾಂಕಕ್ಕೆ ಸರಿಯಾಗಿ ಕನಿಷ್ಠ 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ 28 ವರ್ಷಗಳನ್ನು ಮೀರಿರಬಾರದು.
ಮತ್ತು ಕೆಲ ವರ್ಗದ ಅಭ್ಯರ್ಥಿಗಳಿಗೆ ವಯೋಮಾನ ಸಡಿಲಿಕೆಯು ಕೂಡ ಇದೆ ಅದರ ಪ್ರಕಾರ ಒಬಿಸಿ ವಿದ್ಯಾರ್ಥಿಗಳಿಗೆ ಮೂರು ವರ್ಷ ಮತ್ತು ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ವಯೋಮಾನ ಸಡಿಲಿಕೆಯನ್ನು ನೀಡಲಾಗಿದೆ. ಜೊತೆಗೆ ಕೇಂದ್ರ ಸರ್ಕಾರದ ಉದ್ಯೋಗ ಎಂದು ಕರೆಸಿಕೊಂಡಿರುವ ರೈಲ್ವೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ತೆರಬೇಕಾಗಿಲ್ಲ.
ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿಕೊಟ್ಟು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಲಿಖಿತ ಪರೀಕ್ಷೆ ನಡೆಸಿ ನಂತರ ಮೆರಿಟ್ ಲಿಸ್ಟ್ ತಯಾರಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕಳೆದ ತಿಂಗಳಿನಿಂದಲೇ 8.2.2023 ರಿಂದ ಆರಂಭ ಆಗಿದೆ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10.3.2023 ಆಗಿದೆ. ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಪರಿಚಯಸ್ಥರ ಜೊತೆ ಹಂಚಿಕೊಂಡು ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಮಾಡಲು ಇಚ್ಛಿಸುವವರಿಗೆ ಹಾಗೂ ನಿರುದ್ಯೋಗಿಗಳಿಗೆ ಎಲ್ಲರಿಗೂ ತಲುಪುವಂತೆ ಮಾಡಿ.