ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿಸುದ್ದಿ, ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ ಬೃಹತ್ ಮಟ್ಟದಲ್ಲಿ ನೇಮಕಾತಿ ನಡೆಯುತ್ತಿದ್ದು ಸಾವಿರಾರು ಆಕಾಂಕ್ಷಿಗಳಿಗೆ ತಮ್ಮ ಕನಸು ನನಸಾಗುವ ಅವಕಾಶ ಸಿಕ್ಕಿದೆ.
ರೈಲ್ವೆ ಇಲಾಖೆಯಿಂದ ಈ ಹುದ್ದೆಗಳ ನೇಮಕಾತಿ ಕುರಿತು ಅಧಿಕೃತ ಅಧಿಸೂಚನೆ ಕೂಡ ಹೊರ ಬಿದ್ದಿದ್ದು ಈ ಹುದ್ದೆಗಳಿಗೆ ಸಂಬಂಧಿಸಿದ ಹಾಗೆ ಸಂಪೂರ್ಣ ವಿವರ ಹಾಗೂ ಅರ್ಜಿ ಸಲ್ಲಿಸುವ ವಿಧಾನವನ್ನು ಕೂಡ ತಿಳಿಸಲಾಗಿದೆ. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಇದರಲ್ಲಿರುವ ಪ್ರಮುಖ ಅಂಶಗಳನ್ನು ಹಂಚಿಕೊಳ್ಳುತ್ತಿದ್ದೇವೆ.
ಇದನ್ನು ಓದಿ:- ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣ ಪಡೆಯುವವರ ಪಟ್ಟಿ ಬಿಡುಗಡೆ, ಇದರಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ.!
ನೇಮಕಾತಿ ಸಂಸ್ಥೆ:- ರೈಲ್ವೆ ನೇಮಕಾತಿ ಮಂಡಳಿ(RRB)
ಒಟ್ಟು ಹುದ್ದೆಗಳು:- 5,696 ಹುದ್ದೆಗಳು
ಹುದ್ದೆಗಳ ವಿವರ:-
ಸಹಾಯಕ ಲೋಕೋ ಪೈಲೆಟ್ (ALP)
ಉದ್ಯೋಗ ಸ್ಥಳ:- ಭಾರತದಾದ್ಯಂತ….
ವೇತನ ಶ್ರೇಣಿ:-
ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.19,900 ವೇತನ ಇರುತ್ತದೆ ಇದರ ಜೊತೆಗೆ ಕೇಂದ್ರ ಸರ್ಕಾರದ ಹುದ್ದೆಗಳಿಗೆ ಸಿಗುವ ವಿಶೇಷ ಸೌಲತ್ತುಗಳು ಕೂಡ ಸಿಗುತ್ತವೆ.
ಶೈಕ್ಷಣಿಕ ವಿದ್ಯಾರ್ಹತೆ:-
* ಅಭ್ಯರ್ಥಿಗಳು 10 ನೇ ತರಗತಿ ತೇರ್ಗಡೆಯಾಗಿರಬೇಕು ಅಥವಾ ಮೆಟ್ರಿಕ್ಯುಲೇಟ್ ಆಗಿರಬೇಕು ಮತ್ತು ಫಿಟ್ಟರ್ / ಎಲೆಕ್ಟ್ರಿಷಿಯನ್ / ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ / ಮಿಲ್ ರೈಟ್/ಮೇಂಟೆನೆನ್ಸ್ ಮೆಕ್ಯಾನಿಕ್ / ಮೆಕ್ಯಾನಿಕ್ (Radio or TV), ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಮೆಕ್ಯಾನಿಕ್ ಟ್ರೇಡ್‌ಗಳಲ್ಲಿ NCVT/SCVT ಯ ಮಾನ್ಯತೆ ಪಡೆದ ಸಂಸ್ಥೆಯಿಂದ ITI ಹೊಂದಿರಬೇಕು.
* ITI ಬದಲಿಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಆಟೋಮೊಬೈಲ್ ಇಂಜಿನಿಯರಿಂಗ್ ಅಥವಾ ಈ ಎಂಜಿನಿಯರಿಂಗ್ ವಿಭಾಗಗಳ ವಿವಿಧ ಸ್ಟ್ರೀಮ್‌ಗಳ ಸಂಯೋಜನೆಯಲ್ಲಿ 10ನೇ ತರಗತಿ ಪಾಸ್ ಅಥವಾ ಮೆಟ್ರಿಕ್ಯುಲೇಟ್ ಪಾಸ್ ಆಗಿರಬೇಕು.
ಇದನ್ನು ಓದಿ:- ಗೃಹಲಕ್ಷ್ಮಿ 6ನೇ ಕಂತಿನ ಹಣಕ್ಕೆ NPCI ಮತ್ತು E-KYC ಕಡ್ಡಾಯ, ಇಲ್ಲದಿದ್ರೆ 2,000 ಹಣ ಕ್ಯಾನ್ಸಲ್.!
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 30 ವರ್ಷಗಳು
* ಕೇಂದ್ರ ಸರ್ಕಾರದ ಉದ್ಯೋಗ ನಿಯಮಗಳನ್ವಯ ಕೆಲವು ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ, ಅಧಿಸೂಚನೆಯಲ್ಲಿ ಗಮನಿಸಿ.
ಅರ್ಜಿ ಸಲ್ಲಿಸುವ ವಿಧಾನ:-
* ಅಧಿಕೃತ RRB ವೆಬ್‌ಸೈಟ್‌ಗೆ ಭೇಟಿ ಮಾಡಿ
https://www.rrbbnc.gov.in/ ಕ್ಲಿಕ್ ಮಾಡುವ ಮೂಲಕ ಬೆಂಗಳೂರು ವಿಭಾಗದವರು ಅರ್ಜಿ ಸಲ್ಲಿಸಬಹುದು.
* RRB ALP ನೇಮಕಾತಿ 2024 ಆಯ್ಕೆಮಾಡಿ, ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು
ಅರ್ಹತಾ ಮಾನದಂಡಗಳು, ಖಾಲಿ ವಿವರಗಳು, ಆಯ್ಕೆ ಪ್ರಕ್ರಿಯೆ ಮತ್ತು ಪ್ರಮುಖ ದಿನಾಂಕಗಳ ಮಾಹಿತಿ ಪಡೆಯಿರಿ
* ಅಪ್ಲಿಕೇಶನ್ ಪೋರ್ಟಲ್‌ನಲ್ಲಿ ಕೇಳಿರುವ ಸೂಚನೆಯಂತೆ ನಿಮ್ಮ ವೈಯಕ್ತಿಕ ವಿವರಗಳನ್ನು ಹಾಕಿ ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ.
* ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
* ಅರ್ಜಿ ಶುಲ್ಕ ಪಾವತಿ ಪ್ರಕ್ರಿಯೆ ಪೂರ್ತಿಗೊಳಿಸಿ ತಪ್ಪದೇ ಇ-ರಶೀದಿ ಪಡೆದುಕೊಳ್ಳಿ.
* ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ.
ಇದನ್ನು ಓದಿ:- ಸೈಟ್ ಅಥವಾ ಮನೆ ಖರೀದಿಸುವ ಮೊದಲು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕಾದ 12 ದಾಖಲೆಗಳು ಇವು.!
ಆಯ್ಕೆ ವಿಧಾನ:-
* ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
* ಮೆಡಿಕಲ್ ಟೆಸ್ಟ್ (ME)
* ನೇರ ಸಂದರ್ಶನ
* ದಾಖಲೆಗಳ ಪರಿಶೀಲನೆ
ಅರ್ಜಿ ಶುಲ್ಕ:-
* ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ನಲ್ಲಿಯೇ ಪಾವತಿ ಮಾಡಬೇಕು
* ಸಾಮಾನ್ಯ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ.500
* SC/ST, ವಿಶೇಷ ಚೇತನ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ. 250
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 20 ಜನವರಿ, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 19 ಫೆಬ್ರವರಿ, 2024.