ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರೂ ಕೃಷಿ ಬಗ್ಗೆ ಅಪಾರ ಒಲವು ಹೊಂದಿದ್ದ ಕೋಲಾರ ಮೂಲದ ಗಗನ್ ಎನ್ನುವ ಯುವಕರೊಬ್ಬರು ಇಂದು ಸೀಬೆ ಕೃಷಿಯಲ್ಲಿ ತೊಡಗಿಕೊಂಡು ಕೈ ತುಂಬಾ ಲಾಭ ಪಡೆಯುತ್ತಿದ್ದಾರೆ. ಥೈವಾನ್ ತಳಿಯ ಸೀಬೆ ಬೆಳೆಯುತ್ತಿರುವ ಇವರು ಯುವಜನತೆ ಕೃಷಿ ಮಾಡಲು ಬಯಸುವುದಾದರೆ ಸೀಬೆ ಕೃಷಿ ಆರಿಸಿ ಲಾಭ ಆಗುತ್ತದೆಯೋ ಇಲ್ಲವೋ ಎಂದು ಅನುಮಾನ ಪಡಲೇಬೇಡಿ.
ಯಾಕೆಂದರೆ ಇರುವ 6 ಎಕರೆಯಲ್ಲಿ ಪ್ರತಿನಿತ್ಯವು ನಾವು ಕನಿಷ್ಠ KG300 ಮೇಲೆ ಸೇಲ್ ಮಾಡುತಿದ್ದೇವೆ. ಮಾರ್ಕೆಟಿಂಗ್ ಮಾಡಬೇಕಾದ ಅವಶ್ಯಕತೆಯೇ ಇಲ್ಲ ಒಮ್ಮೆ ಕಾಂಟಾಕ್ಟ್ ಬೆಳೆದರೆ ಅವರೇ ಪದೇ ಪದೇ ನಮ್ಮನ್ನು ಕೇಳುತ್ತಲೇ ಇರುತ್ತಾರೆ ಎನ್ನುವ ಧೈರ್ಯ ಕೊಡುತ್ತಾರೆ.
ಕೋಲಾರ ಸಿಟಿಯ ಪಕ್ಕದಲ್ಲಿ CMS ಎಸ್ಟೇಟ್ ಎನ್ನುವ ಆರು ಎಕರೆ ಲ್ಯಾಂಡ್ ಮಾಡಿರುವ ಇವರು 6 ಎಕರೆಯಲ್ಲೂ ಕೂಡ ಇದೆ ಸೀಬೆ ಕೃಷಿ ಬೆಳೆಯುತ್ತಿದ್ದಾರೆ. ತಂದೆ ಜೊತೆ ಕೊಲ್ಕತ್ತಾ ಗೆ ಭೇಟಿ ಕೊಟ್ಟಿದ್ದ ಇವರು ಅಲ್ಲಿ ರೈತರು ಪಡೆದಿದ್ದನ್ನು ನೋಡಿ ತಾವು ಡಿಸೈಡ್ ಮಾಡಿ ಅದೇ ತಳಿಯನ್ನು ತಂದು ಇಲ್ಲಿ ನೆಟ್ಟಿದ್ದಾರೆ.
ಈ ಸುದ್ದಿ ಓದಿ:- ಮನೆ ಕಟ್ಟುವಾಗ ಎಷ್ಟೆಲ್ಲಾ ಮೋ’ಸಗಳು ನಡೆಯುತ್ತೆ ಗೊತ್ತಾ? ಮೊದಲೇ ತಿಳಿದುಕೊಂಡರೆ ನಂತರ ಶ್ರಮ ಪಡುವುದು ತಪ್ಪುತ್ತದೆ.!
ಇಂದು ಅವರೇ ಒಂದು ನರ್ಸರಿ ಕೂಡ ಓಪನ್ ಮಾಡಿ ಆಸಕ್ತಿ ಇರುವವರಿಗೆ ಮಾರುತ್ತಿದ್ದಾರೆ. ಇವರಿಗೆ ಪ್ರತಿ ಹಂತದಲ್ಲಿ ಕೂಡ ತೋಟಗಾರಿಕೆ ಇಲಾಖೆಯಿಂದ ಬೆಂಬಲ ಸಿಕ್ಕಿದ್ದು ಪ್ರತಿಯೊಬ್ಬ ರೈತನು ಕೂಡ ಆಸಕ್ತಿ ವಹಿಸಿದರೆ ತನ್ನ ತಾಲೂಕಿನ ವ್ಯಾಪ್ತಿಗೆ ಬರುವ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಗೆ ಭೇಟಿ ಕೊಟ್ಟು ಸರ್ಕಾರದಿಂದ ದೊರೆಯುವ ಎಲ್ಲಾ ಪ್ರಯೋಜನವನ್ನು ಪಡೆದುಕೊಳ್ಳಿ ಎನ್ನುವ ಸಲಹೆ ಕೂಡ ನೀಡುತ್ತಾರೆ.
ಇನ್ನು ಸೀಬೆ ಕೃಷಿ ಬಗ್ಗೆ ಹೇಳುತ್ತಾ ಒಂದು ಎಕರೆಗೆ 800 ಗಿಡಗಳನ್ನು ಬೆಳೆದಿದ್ದೇವೆ ತುಂಬಾ ಹತ್ತಿರಕ್ಕೆ ಹಾಕುವುದಾದರೆ ಸಾವಿರ ಗಿಡದವರೆಗೂ ಕೂಡ ಹಾಕಬಹುದು ವರ್ಷ ಪೂರ್ತಿ ಬೆಳೆ ಇರುತ್ತದೆ ಸೀಸನ್ ಟೈಮ್ ನಲ್ಲಿ ಇನ್ನು ಹೆಚ್ಚಾಗಿರುತ್ತದೆ ಒಂದು ಹಣ್ಣು 300ಗ್ರಾಂ ನಿಂದ ಅರ್ಧ ಕೆಜಿ ವರೆಗೂ ಇರುತ್ತದೆ. ತೂಕ ಹೆಚ್ಚಾದಷ್ಟು ಬೆಲೆ ಹೆಚ್ಚು ಇರುತ್ತದೆ.
ಮೋರ್, ರಿಲಯನ್ಸ್ ಫ್ರೆಶ್ ಇವುಗಳಿಗೆ ಮಾರಾಟ ಮಾಡುವುದಾದರೆ ಯಾವುದೇ ಸ್ಕ್ರಾಚಸ್ ಆಗಬಾರದು ಒಂದು ವೇಳೆ ಡ್ಯಾಮೇಜ್ ಆದರೂ ಲೋಕಲ್ ನವರು ಕೊಂಡುಕೊಳ್ಳುತ್ತಾರೆ. Kg ಗೆ ರೂ.120ರಂತೆ ಕೂಡ ಮಾರಾಟ ಮಾಡಿದ್ದೇವೆ. ನೀವು ಗಿಡ ಹಾಕಿದ 9 ತಿಂಗಳ ಒಳಗೆ ಇಳುವರಿ ಬರುತ್ತದೆ. ಬಿಳಿ ಹಾಗೂ ಕೆಂಪು ಬಣ್ಣದ ತೈವಾನ್ ಇರುತ್ತದೆ ಇದರಲ್ಲಿ ಕೆಂಪು ಇಳುವರಿ ಹಾಗೂ ರುಚಿ ಹೆಚ್ಚು, ಹಾಗಾಗಿ ಇದನ್ನೇ ಆರಿಸಿಕೊಂಡಿದ್ದೇವೆ.
ಈ ಸುದ್ದಿ ಓದಿ:- ಹಳ್ಳಿ ಜನರು ಕೂಡ ಸುಲಭವಾಗಿ ಮಾಡಬಹುದಾದ ಬಿಸಿನೆಸ್ ಇದು, ಖಾಲಿ ಬಿಯರ್ ಬಾಟಲ್ ನಿಂದ ಲಕ್ಷ ಲಕ್ಷ ಸಂಪಾದನೆ.!
ಕರ್ನಾಟಕದಲ್ಲಿ ಯಾವುದೇ ಜಿಲ್ಲೆಯ ಮಣ್ಣಿನಲ್ಲಿ ಬೇಕಾದರು ಬೆಳೆಯಬಹುದು ಕೆಂಪು ಮಣ್ಣಿನಲ್ಲಿ ಬೆಳೆದರೆ ಇನ್ನು ಹೆಚ್ಚು ಇಳುವರಿ ಸಿಗುತ್ತದೆ ಕಪ್ಪು ಮಣ್ಣು ಕೂಡ ತೊಂದರೆ ಇಲ್ಲ ಎನ್ನುವ ಮಾಹಿತಿ ನೀಡುತ್ತಾರೆ. ಒಟ್ಟು 6 ಎಕರೆಯಿಂದ 8 ಕೆಲಸಗಾರರು ಕೆಲಸ ಮಾಡುತ್ತಾರೆ, ನಮ್ಮದೇ ವ್ಯಾನ್ ನಲ್ಲಿ ಮಾರ್ಕೆಟ್ ಗೆ ಸಾಗಿಸುತ್ತೇವೆ. ಹಕ್ಕಿ ಕಾಟದಿಂದ ತಪ್ಪಿಸಿಕೊಳ್ಳಲು ಮಾಯಿಶ್ಚರೈಸರ್ ಗಳನ್ನು ಹಾಕುತ್ತೇವೆ.
ಒಂದು ಗಿಡ ಬಿಡುವ ಕಾಯಿಯಲ್ಲಿ ಅರ್ಧದಷ್ಟು ಉಳಿಸಿಕೊಂಡು ಅರ್ಧದಷ್ಟು ನಾವೇ ಕಿತ್ತು ಹಾಕುತ್ತೇವೆ ಇಲ್ಲವಾದಲ್ಲಿ ಬೆಳವಣಿಗೆ ಚೆನ್ನಾಗಿ ಆಗುವುದಿಲ್ಲ. ಆರ್ಗಾನಿಕ್ ಕೃಷಿ ಮಾಡುತಿದ್ದೇವೆ ಆದರೆ ಮೂರು ತಿಂಗಳಿಗೊಮ್ಮೆ ಹುಳಗಳ ಕಾಟದಿಂದ ತಪ್ಪಿಸಿಕೊಳ್ಳಲು ಸ್ಪ್ರೇ ಮಾಡಬೇಕಿದೆ.
ಅದನ್ನು ಹೊರತು ಪಡಿಸಿ ಕೊಟ್ಟಿಗೆ ಗೊಬ್ಬರ, ಕುರಿ ಗೊಬ್ಬರ ಇದನ್ನೇ ಬಳಸುವುದು ಕೃಷಿ ನೆಮ್ಮದಿ ಕೊಟ್ಟಿದೆ ಖರ್ಚು ಕಳೆದು ಎಕರೆಗೆ 20 ಲಕ್ಷದ ವರೆಗೂ ಕೂಡ ಹಣ ಉಳಿಸಬಹುದು ಎನ್ನುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಪೂರ್ತಿಯಾಗಿ ನೋಡಿ.
https://youtu.be/LZbyNMu8G0Q?si=M4k83Z9TxAvlqsUe