ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕೆನ್ನುವುದು ಅನೇಕರ ಇಚ್ಛೆ. ಯಾಕೆಂದರೆ ಅಧಿಕ ಕೆಲಸದ ಒತ್ತಡವಿಲ್ಲದೆ ನಿಗದಿತ ಸಮಯದ ಗಡಿಯ ಒಳಗೆ ಕಾರ್ಯನಿರ್ವಹಿಸಬಹುದು. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದ ಸಮಾಧಾನವೂ ಇರುತ್ತದೆ ಮತ್ತು ಅತಿ ಹೆಚ್ಚಿನ ರಜಾ ದಿನಗಳು ಕೂಡ ಸಿಗುತ್ತವೆ ಎನ್ನುವ ಇತ್ಯಾದಿ ಕಾರಣಗಳಿವೆ.
ನೀವು ಹೀಗೆ ಬ್ಯಾಂಕಿಂಗ್ ವಿಭಾಗದಲ್ಲಿ ಕೆಲಸ ಹುಡುಕುತ್ತಿದ್ದರೆ ಇದೀಗ ನಿಮಗೆ ದಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ನಲ್ಲಿ ಹುದ್ದೆ ಪಡೆಯುವ ಅವಕಾಶ ಸಿಗುತ್ತದೆ. ಕೆನರಾ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ (Canara Bank Recruitment) ಅಧಿಸೂಚನೆ ಹೊರಡಿಸಲಾಗಿದೆ.
ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ನಾವು ಸಹ ಈ ಲೇಖನದಲ್ಲಿ ಹುದ್ದೆ ಕುರಿತ ಮತ್ತು ನೇಮಕಾತಿ ಪ್ರಕ್ರಿಯೆ ಕುರಿತ ಸಂಪೂರ್ಣ ವಿವರವನ್ನು ಹಂಚಿಕೊಳ್ಳುತ್ತಿದ್ದೇವೆ. ತಪ್ಪದೆ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ:- ಅರ್ಧಕ್ಕರ್ಧ ಡೌನ್ ಆಗಲಿದೆ ಚಿನ್ನದ ರೇಟ್.! ಚಿನ್ನ ಖರೀದಿಸುವ ಮುನ್ನ ಈ ವಿಚಾರಗಳು ಗೊತ್ತಿರಲಿ.!
ನೇಮಕಾತಿ ಸಂಸ್ಥೆ:- ಕೆನರಾ ಬ್ಯಾಂಕ್
ಹುದ್ದೆ ಹೆಸರು:- ಸೆಕ್ರೆಟರಿ – ಅಕೌಂಟ್ ಅಡ್ಮಿನಿಸ್ಟ್ರೇಟರ್
ಒಟ್ಟು ಹುದ್ದೆಗಳ ಸಂಖ್ಯೆ:- 10 ಹುದ್ದೆ
ಉದ್ಯೋಗ ಸ್ಥಳ:- ಬೆಂಗಳೂರು…
ವೇತನ ಶ್ರೇಣಿ:- ಈ ಹುದ್ದೆಗೆ ಆಯ್ಕೆ ಆಗುವ ಅಭ್ಯರ್ಥಿಗೆ ಮಾಸಿಕವಾಗಿ ರೂ.30,000 ದವರೆಗೆ ವೇತನ ಇರುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ B.com ಪರೀಕ್ಷೆ ಉತ್ತೀರ್ಣರಾಗಿರಬೇಕು
* ಕಂಪ್ಯೂಟರ್ ಜ್ಞಾನದ ಅರಿವಿರಬೇಕು
* ಲೆಕ್ಕಪರಿಶೋಧಕ ಸಾಫ್ಟ್ವೇರ್ ಜ್ಞಾನದೊಂದಿಗೆ ಖಾತೆಗಳು ಹಾಗೂ ಸಾಮಾನ್ಯ ಆಡಳಿತ ನಿರ್ವಹಿಸುವಲ್ಲಿ ಕನಿಷ್ಠ 02 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.
ವಯೋಮಿತಿ:-
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷಗಳು
* SC / ST ವರ್ಗದ ಅಭ್ಯರ್ಥಿಗಳಿಗೆ 28 ವರ್ಷಗಳು
ಈ ಸುದ್ದಿ ಓದಿ:- PM ವಿಶ್ವಕರ್ಮ ಯೋಜನೆಗೆ ಅರ್ಜಿ ಹಾಕಿದವರಿಗೆ 3 ಲಕ್ಷ ಹಣ, 15,000 ಮೌಲ್ಯದ ಕಿಟ್ ವಿತರಣೆ.!
ಅರ್ಜಿ ಸಲ್ಲಿಸುವ ವಿಧಾನ:-
* ಆಫ್ಲೈನ್ ವಿಧಾನದಲ್ಲಿಯೇ ಅರ್ಜಿ ಸಲ್ಲಿಸಬೇಕು
* ಕೆನರಾ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಆದ https://canarabank.com/pages/Recruitment ಕ್ಲಿಕ್ ಮಾಡಿ
* ಅಪ್ಲಿಕೇಶನ್ ಫಾರಂ ಡೌನ್ಲೋಡ್ ಮಾಡಿಕೊಂಡು ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
* ನಿಮ್ಮ ಫೋಟೋ ಸಹಿ ಹಾಗೂ ಸರಿಯಾದ ಮೊಬೈಲ್ ನಂಬರ್ ಗಳೊಂದಿಗೆ ಕೇಳಲಾದ ಎಲ್ಲ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿಗೆ ಸಂಬಂಧಪಟ್ಟ ದಾಖಲೆಗಳನ್ನು ಕೂಡ ಲಗತ್ತಿಸಿ.
* ನಿಮ್ಮ ವರ್ಗಕ್ಕೆ ಅನುಗುಣವಾದ ಅರ್ಜಿ ಶುಲ್ಕವನ್ನು ಕ್ಯಾನ್ ಬ್ಯಾಂಕ್ ವೆಂಚರ್ ಕ್ಯಾಪಿಟಲ್ ಫಂಡ್ ಲಿಮಿಟೆಡ್ (Canbank Venture Capital Fund Ltd) ಪರವಾಗಿ ಡಿಮ್ಯಾಂಡ್ ಡ್ರಾಫ್ಟ್ ಖರೀದಿಸಿ
* ನಂತರ ತುಂಬಿದ ಅರ್ಜಿ ಫಾರಂ ಹಾಗೂ ಸಂಬಂಧಿಸಿದ ದಾಖಲೆಗಳು ಮತ್ತು ಅರ್ಜಿ ಶುಲ್ಕ ಪಾವತಿ ಮಾಡಿದ ಡಿಮ್ಯಾಂಡ್ ಡ್ರಾಫ್ಟ್ ಎಲ್ಲವನ್ನು ಕೂಡ ಅಂಚೆ ಮೂಲಕ ಕ್ಯಾನ್ಬ್ಯಾಂಕ್ ವೆಂಚರ್ ಕ್ಯಾಪಿಟಲ್ ಫಂಡ್ ಲಿಮಿಟೆಡ್ (CVCFL), ಬೆಂಗಳೂರು – 560004. ಈ ವಿಳಾಸಕ್ಕೆ ಕಳುಹಿಸಿಕೊಡಿ.
ಈ ಸುದ್ದಿ ಓದಿ:- ರೈತರಿಗೆ ಸಿಹಿಸುದ್ದಿ ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ
ಅರ್ಜಿ ಶುಲ್ಕ
* SC/ST ಅಭ್ಯರ್ಥಿಗಳಿಗೆ ರೂ.300
* ಉಳಿದ ಅಭ್ಯರ್ಥಿಗಳಿಗೆ ರೂ.500
ಆಯ್ಕೆ ವಿಧಾನ:-
* ಅಭ್ಯರ್ಥಿಗಳ ಶೈಕ್ಷಣಿಕ ವಿದ್ಯಾರ್ಹತೆ ಕೆಲಸದ ಅನುಭವ ಪರಿಗಣಿಸಿ ಶಾರ್ಟ್ ಲಿಸ್ಟ್ ತಯಾರಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ
* ಆಯ್ಕೆ ಆದ ಅಭ್ಯರ್ಥಿಗಳು 12 ತಿಂಗಳುಗಳ ಕಾಲ ಪ್ರೊಬೆಷನರಿ ಅವಧಿ ಪೂರ್ತಿಗೊಳಿಸಬೇಕು.
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 30 ಜೂನ್, 2024.