ಕರ್ನಾಟಕದ ಗ್ಯಾರೆಂಟಿ ಯೋಜನೆಗಳಲ್ಲಿ (Guarantee Scheme) ಮಹತ್ವಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ (Gruhalakshmi 2nd moth ammount) ಬಿಡುಗಡೆ ಆಗುತ್ತಿದೆ. ಈ ಹಿಂದೆ ಅನುಸರಿಸಿದಂತೆ RBI ನಿಯಾನುಸಾರವಾಗಿ ಗೃಹಲಕ್ಷ್ಮಿ ಯೋಜನೆ ಹಣವನ್ನು ಹಂತ ಹಂತವಾಗಿ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ವರ್ಗಾವಣೆ ಮಾಡಲಾಗುತ್ತಿದೆ.
ಸೆಪ್ಟೆಂಬರ್ 27ರಿಂದ ಎರಡನೇ ಕಂತಿನ ಹಣ ಜಮೆ ಮಾಡಲಾಗುತ್ತಿದೆ ಆದರೆ ಇನ್ನೂ ಸಹ ಲಕ್ಷಾಂತರ ಮಹಿಳೆಯರು ಆಗಸ್ಟ್ ತಿಂಗಳಿನ ಹಣವನ್ನೇ ಪಡೆದಿಲ್ಲ ಎಂದು ಗೊಂದಲಕ್ಕೊಳಗಾಗಿದ್ದಾರೆ. ಗೃಹಲಕ್ಷ್ಮೀ ಯೋಜನೆಗೆ ಅರ್ಹರಾಗಿದ್ದು ಮೊದಲನೇ ಕಂತಿನ ಹಣವನ್ನು ಪಡೆದಿಲ್ಲ ಎಂದರೆ ಅವರಿಗೆ ಒಟ್ಟಿಗೆ ಎರಡು ತಿಂಗಳ 4,000 ರೂ. ಒಟ್ಟಿಗೆ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತಿದೆ.
ನಿಮಗೆ ಇನ್ನು ಸ್ಕಾಲರ್ಶಿಪ್ ಹಣ ರೂ.10,000 ಬಂದಿಲ್ವಾ.? ನಿಮ್ಮ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ.!
ಹಾಗಾದರೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದೀರಾ? ನಿಮ್ಮ ಅರ್ಜಿ ಸ್ಥಿತಿ ಯಾವ ರೀತಿ ಇದೆ ಎನ್ನುವುದನ್ನು ಚೆಕ್ ಮಾಡಿಕೊಂಡು ಹಣ ಬರುತ್ತದೆಯೋ ಇಲ್ಲವೋ ಎನ್ನುವುದನ್ನು ದೃಢಪಡಿಸಿಕೊಳ್ಳಿ. ಕಳೆದ ತಿಂಗಳು ಸೇವಾ ಸಿಂಧು ಪೋರ್ಟಲ್ (Sevasindhu portal) ಮೂಲಕ ಪಬ್ಲಿಕ್ ಗೆ ತಮ್ಮ ಗೃಹಲಕ್ಷ್ಮಿ ಯೋಜನೆ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿತ್ತು.
ಆದರೆ ಈಗ ಅದು ಸ್ಥಗಿತಗೊಂಡಿದೆ ಗೃಹಲಕ್ಷ್ಮಿ ಮಂಜೂರಾತಿ ಪತ್ರ ಅಥವಾ ಪಡಿತರ ಚೀಟಿ ಸಂಖ್ಯೆಯನ್ನು ತೆಗೆದುಕೊಂಡು ಹೋಗಿ ಹತ್ತಿರದಲ್ಲಿರುವ ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಗ್ರಾಮ ಒನ್ ಸೇವಾಕೇಂದ್ರಗಳಲ್ಲಿ ಗೃಹಲಕ್ಷ್ಮೀ ಯೋಜನೆ ಸ್ಟೇಟಸ್ ಚೆಕ್ ಮಾಡಿಸಿಕೊಳ್ಳಬಹುದು.
ಹೆರಿಗೆ ನಂತರ ಹೊಟ್ಟೆ ಬೊಜ್ಜು ಕರಗಿಸುವ ಸುಲಭ ವಿಧಾನ..!
1. ಅರ್ಜಿ ಸ್ಥಿತಿ Process in payment ಎಂದು ಇದ್ದರೆ ನಿಮ್ಮ ಖಾತೆಗೆ ಖಂಡಿತವಾಗಿಯೂ ಹಣ ವರ್ಗಾವಣೆ ಶೀಘ್ರದಲ್ಲೇ ಆಗುತ್ತದೆ ಎಂದು ಅರ್ಥ.
2. Push to dbt ಎಂದರೆ DBT ಗೆ ವರ್ಗಾವಣೆ ಮಾಡಲಾಗಿದೆ ಎಂದು ಅರ್ಥ.
3. ಅರ್ಜಿ ಸ್ಟೇಟಸ್ ನಲ್ಲಿ Pending ಎಂದು ಇದ್ದರೆ ನೀವು ಕೊಟ್ಟಿರುವ ದಾಖಲೆಗಳಲ್ಲಿ ಸಮಸ್ಯೆ ಇರಬಹುದು, ನೀವು ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕು.
ಹಣ ವರ್ಗಾವಣೆಯಾಗದೆ ಇರಲು ಕಾರಣಗಳು:-
● ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ಬಹುತೇಕರು ಬ್ಯಾಂಕ್ ಖಾತೆ ನೀಡಿಲ್ಲ ಸರ್ಕಾರ ನೆರವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ DBT ಮೂಲಕ ಹಣ ವರ್ಗಾವಣೆ ಮಾಡುತ್ತಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗಳು ಆಕ್ಟಿವ್ (bank account active) ಆಗಿ ಇಲ್ಲದಿದ್ದರೆ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಆಗುವುದಿಲ್ಲ ಹಾಗೆಯೇ ಆ ಖಾತೆಗಳಿಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ (Aadhar seeding npci mapping)ಆಗಿರಬೇಕು.
ಎಲ್ಲಾ ರೈತರ ಗಮನಕ್ಕೆ, ಇಂದಿನಿಂದ ದನ ಕರುಗಳ ಕಾಲುಬಾಯಿ ರೋಗಕ್ಕೆ ಉಚಿತ ಲಸಿಕೆ, ನಿಮ್ಮ ದನಕರುಗಳಿಗೆ ತಪ್ಪದೇ ಹಾಕಿಸಿ.!
● ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಮಾಹಿತಿಗಳಲ್ಲಿ ಹೆಸರಿನಲ್ಲಿ ಯಾವುದೇ ದೋಷವಿಲ್ಲದೆ ಎಲ್ಲಾ ದಾಖಲೆಗಳಲ್ಲೂ ಒಂದೇ ರೀತಿಯಾಗಿ ಹೆಸರು ಇರಬೇಕು ಇದರಲ್ಲಿ ವ್ಯತ್ಯಾಸ ಆದಾಗಲೂ ಕೂಡ ಪರಿಶೀಲನೆ ವೇಳೆ ನಿಮ್ಮ ಅರ್ಜಿ ರಿಜೆಕ್ಟ್ ಆಗಿರಬಹುದು ಅಥವಾ ನಿಮ್ಮ ಖಾತೆಗೆ ಹಣ ವರ್ಗಾವಣೆ ಮಾಡಲು ಸಮಸ್ಯೆ ಆಗಿರಬಹುದು.
● ನೀವೇನಾದರೂ ಇತ್ತೀಚೆಗೆ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿದ್ದರೆ (correction update) ಅದು ಅನುಮೋದನೆಯಾಗಿ ಎಲ್ಲೆಡೆ ಆ ಮಾಹಿತಿ ಅಪ್ಡೇಟ್ ಆಗುವವರಿಗೆ ಹಣ ವರ್ಗಾವಣೆ ಆಗದೆ ಸ್ಥಗಿತಗೊಂಡಿರುತ್ತದೆ. ಹಾಗಾಗಿ ನೀವು ಕೆಲವು ದಿನ ಕಾಯಬೇಕಾಗುತ್ತದೆ.