ಗೃಹಲಕ್ಷ್ಮಿ ಯೋಜನೆ 2000 ಸಹಾಯಧನ ಪಡೆಯಲಿರುವ ಫಲಾನುಭವಿಗಳ ಲಿಸ್ಟ್ ಬಿಡುಗಡೆ, ಈ ಪಟ್ಟಿಯಲ್ಲಿ ಹೆಸರು ಇದ್ದವರಿಗೆ ಮಾತ್ರ ಎರಡನೇ ಕಂತಿನ ಹಣ.!

 

WhatsApp Group Join Now
Telegram Group Join Now

ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಮೊದಲನೇ ಕಂತಿನ ಹಣ ಪಡೆದವರೆಲ್ಲರೂ ಈ ತಿಂಗಳ 15ರ ಒಳಗೆ ಎರಡನೇ ಕಂತಿನ ಹಣ ಪಡೆಯಲಿದ್ದಾರೆ. ಈಗಷ್ಟೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರು ಅಥವಾ ಸಮಸ್ಯೆ ಇದ್ದದ್ದನ್ನು ತಿದ್ದುಪಡಿ ಮಾಡಿಸಿಕೊಂಡವರು ಮೊದಲನೇ ಕಂತಿನ ಹಣವನ್ನು ಈ ಸಮಯದಲ್ಲಿ ಪಡೆಯಲಿದ್ದಾರೆ.

ಇದರೊಂದಿಗೆ ಸರ್ಕಾರವು ಗೃಹಲಕ್ಷ್ಮಿ ಯೋಜನೆ 2000ರೂ. ಸಹಾಯಧನವನ್ನು ಪಡೆಯುವ ಮಹಿಳೆಯರ ಪಟ್ಟಿಯನ್ನು (beneficiary list) ಬಿಡುಗಡೆ ಮಾಡಿದೆ. ಆಹಾರ ಇಲಾಖೆಯ ವೆಬ್ ಸೈಟ್ ಗೆ ಭೇಟಿ ಕೊಡುವ ಮೂಲಕ ನೀವು ಈ ಪಟ್ಟಿಯನ್ನು ಚೆಕ್ ಮಾಡಬಹುದು ಹೇಗೆಂದರೆ, ಸರ್ಕಾರದ ಕಡೆಯಿಂದ ರೇಷನ್ ಕಾರ್ಡ್ ಸರ್ವೆ ನಡೆಯುತ್ತಿದೆ.

ಬಾಯಿ ಹುಣ್ಣು ಆದರೆ ಎದರಬೇಡಿ ಇಲ್ಲಿದೆ ಸುಲಭ ಪರಿಹಾರ.! ಡಾಕ್ಟರ್ ಅಂಜನಪ್ಪ ಅವರ ಸಲಹೆ ಒಮ್ಮೆ ಕೇಳಿ.!

ಮಾನದಂಡಗಳನ್ನು ಮೀರಿ ರೇಷನ್ ಕಾರ್ಡ್ ಪಡೆದಿರುವವರ ಕಾರ್ಡುಗಳು ಮತ್ತು ಇನ್ನಿತರ ಇತರೆ ಕಾರಣಗಳಿಂದ ಪ್ರತಿ ತಿಂಗಳು ಹಲವು ಕಾರ್ಡುಗಳು ರದ್ದಾಗುತ್ತಿವೆ. ಹಾಗೆಯೇ ಇಲಾಖೆ ವೆಬ್ಸೈಟ್ನಲ್ಲಿ ಒಂದು ತಿಂಗಳಿನಲ್ಲಿ ರದ್ದಾದ ರೇಷನ್ ಕಾರ್ಡ್ಗಳು ಮತ್ತು ಆ ತಿಂಗಳಿನಲ್ಲಿ ಚಾಲ್ತಿಯಲ್ಲಿರುವ ರೇಷನ್ ಕಾರ್ಡ್ ಗಳ ಪಟ್ಟಿ ಸಿಗುತ್ತದೆ.

ಗೃಹಲಕ್ಷ್ಮಿ ಯೋಜನೆಗೆ ಸಹಾಯಧನ ಪಡೆಯಲು ರೇಷನ್ ಕಾರ್ಡ್ ಅಗತ್ಯ ದಾಖಲೆ ಆಗಿರುವುದರಿಂದ ನಿಮ್ಮ ರೇಷನ್ ಕಾರ್ಡ್ ಸಕ್ರಿಯವಾಗಿದೆ ಮತ್ತು ನಿಮ್ಮ ಗ್ರಾಮದಲ್ಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆ ಎಂದು ಪರಿಶೀಲಿಸಿಕೊಳ್ಳಬೇಕು. ಇದು ಸರಿ ಇದ್ದರೆ ನಿಮಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ಬಂದೇ ಬರುತ್ತದೆ ಎಂದರ್ಥ ಇದನ್ನು ಚೆಕ್ ಮಾಡಲು ಈಗ ನಾವು ಹೇಳುವ ಈ ವಿಧಾನಗಳನ್ನು ಅನುಸರಿಸಿ.

50,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ, 10th ಪಾಸ್ ಆಗಿದ್ರೆ ಸಾಕು.! ಆಸಕ್ತರು ತಪ್ಪದೆ ಅರ್ಜಿ ಸಲ್ಲಿಸಿ.!

1. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ (food amd civil supply department website) ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡುವ ಮೂಲಕ ಚೆಕ್ ಮಾಡಬಹುದು.
https://ahara.kar.nic.in/Home/EServices ಲಿಂಕ್ ಬಳಸಿ ಅಥವಾ ಗೂಗಲ್ ನಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವೆಬ್ಸೈಟ್ ಎಂದು ಸರ್ಚ್ ಮಾಡಿ ವೆಬ್ಸೈಟ್ ಪುಟಕ್ಕೆ ಹೋಗಿ.

● ಈ ಸೇವೆಗಳು ಎನ್ನುವ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ ಅದರಲ್ಲಿ ಇನ್ನಷ್ಟು ಆಯ್ಕೆಗಳು ಕಾಣುತ್ತವೆ. ಆ ಸಾಲಿನಲ್ಲಿ ಹಳ್ಳಿಪಟ್ಟಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
● ಸ್ಕ್ರೀನ್ ಮೇಲೆ Village list ಎಂದು ಬರುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಎನ್ನುವ ಆಪ್ಷನ್ ಗಳು ಇರುತ್ತವೆ. ಅದರಲ್ಲಿ ನಿಮ್ಮ ವಿವರಗಳನ್ನು ಭರ್ತಿ ಮಾಡಿ.

ಪೋಸ್ಟ್ ಆಫೀಸ್ ಬಡ್ಡಿದರದಲ್ಲಿ ಏರಿಕೆ, 200 ರೂಪಾಯಿ ಹೂಡಿಕೆ ಮಾಡಿ ಸಾಕು 4,28,000 ಸಿಗುತ್ತೆ.! ಹೆಚ್ಚು ಲಾಭ ತಂದುಕೊಡುವ ಬೆಸ್ಟ್ ಸ್ಕೀಮ್

● ನೀವು ಸೆಲೆಕ್ಟ್ ಮಾಡಿದ ಗ್ರಾಮ ಪಂಚಾಯಿತಿಯಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ರೇಷನ್ ಕಾರ್ಡ್ ಗಳ ಮಾಹಿತಿ ಬರುತ್ತದೆ. ಅದರಲ್ಲಿ ರೇಷನ್ ಕಾರ್ಡ್ ಸಂಖ್ಯೆ, ರೇಷನ್ ಕಾರ್ಡ್ ನಲ್ಲಿ ಎಷ್ಟು ಸದಸ್ಯರು ಇದ್ದಾರೆ, ರೇಷನ್ ಕಾರ್ಡ್ ಮುಖ್ಯಸ್ಥರ ಹೆಸರು, ವಿಳಾಸ ಯಾವ ವಿಧದ ರೇಷನ್ ಕಾರ್ಡ್ ಇಷ್ಟು ಮಾಹಿತಿ ಇರುತ್ತದೆ.

2. ಮಾಹಿತಿ ಕಣಜ ವೆಬ್ಸೈಟ್ ಗೆ (Mahitikanaja website) ಭೇಟಿ ಕೊಡುವ ಮೂಲಕ ಕೂಡ ಇದನ್ನು ತಿಳಿದುಕೊಳ್ಳಬಹುದು.
https://mahitikanaja.karnataka.gov.in ಕ್ಲಿಕ್ ಮಾಡಿ ಅಥವಾ ಗೂಗಲ್ ನಲ್ಲಿ ಮಾಹಿತಿ ಕಣಜ ಕರ್ನಾಟಕ ಸರ್ಕಾರ ಎಂದು ಸರ್ಚ್ ಮಾಡಿ ಮುಖಪುಟಕ್ಕೆ ಹೋಗಿ.
● ನಿಮ್ಮ ಜಿಲ್ಲೆಯ ಸೆಲೆಕ್ಟ್ ಮಾಡಿ, ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ..

ಪೋಸ್ಟ್ ಆಫೀಸ್ ಬಡ್ಡಿದರದಲ್ಲಿ ಏರಿಕೆ, 200 ರೂಪಾಯಿ ಹೂಡಿಕೆ ಮಾಡಿ ಸಾಕು 4,28,000 ಸಿಗುತ್ತೆ.! ಹೆಚ್ಚು ಲಾಭ ತಂದುಕೊಡುವ ಬೆಸ್ಟ್ ಸ್ಕೀಮ್

● ನಿಮ್ಮ ರೇಷನ್ ಕಾರ್ಡ್ ಸಂಪೂರ್ಣ ವಿವರ ಬರುತ್ತದೆ. ನಿಮ್ಮ ತಾಲೂಕು, ಗ್ರಾಮ ಪಂಚಾಯಿತಿ, ಪ್ರದೇಶ, ಕಾರ್ಡ್ ಪ್ರಕಾರ, ಕಾರ್ಡ್ ಸ್ಥಿತಿ ಮತ್ತು ಮುಂದುವರೆದು ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಹೆಸರು ಇತ್ಯಾದಿ ವಿವರಗಳು ಬರುತ್ತದೆ. ಇದರಲ್ಲಿ ಕಾರ್ಡ್ ಸ್ಥಿತಿ ಸಕ್ರಿಯ ಎಂದು ಇದ್ದರೆ ನಿಮ್ಮ ಕಾರ್ಡ್ ಆಕ್ಟಿವ್ ಆಗಿದೆ ಎಂದು ಅರ್ಥ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now