ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್ಬಿಐಯು ದೇಶದ ಒಂದು ಪ್ರತಿಷ್ಠಿತ ಬ್ಯಾಂಕ್ ಆಗಿದೆ. ಕೋಟ್ಯಾಂತರ ಜನರ ನಂಬಿಕೆ ಗಿಟ್ಟಿಸಿಕೊಂಡಿರುವ ಈ ಬ್ಯಾಂಕ್ ಅಲ್ಲಿ ತಮ್ಮ ಉಳಿತಾಯ ಖಾತೆಗಳನ್ನು ತೆರೆಯಲು ಹಾಗೂ ಹಣ ಠೇವಣಿ ಇರಲು ಮತ್ತು ಇನ್ನಿತರ ಹಣಕಾಸಿನ ಅನುಕೂಲಕ್ಕಾಗಿ ಈ ಬ್ಯಾಂಕ್ ಹೆಚ್ಚು ಸೂಕ್ತ ಎಂದು ಇದರ ಮೊರೆ ಹೋಗುತ್ತಾರೆ. ಎಸ್ಬಿಐ ಬ್ಯಾಂಕ್ ಕೂಡ ತನ್ನ ವಿಶೇಷ ಯೋಜನೆಗಳ ಮೂಲಕ ಆಕರ್ಷಕ ಬಡ್ಡಿ ದರಗಳನ್ನು ನೀಡುವ ಮೂಲಕ ಪ್ರೇಕ್ಷಕರನ್ನು ತನ್ನಲ್ಲಿಯೇ ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ಕೂಡ ಮಾಡುತ್ತಿದೆ.
ಸದ್ಯಕ್ಕೆ ದೇಶದಲ್ಲಿರುವ ಹಲವು ಅನೇಕ ಬೃಹತ್ ಬ್ಯಾಂಕ್ ಗಳ ಪೈಕಿ ಎಸ್ ಬಿ ಐ ಬ್ಯಾಂಕ್ ಕೂಡ ಒಂದು. ದೇಶದಾದ್ಯಂತ ಇರುವ ಎಸ್ಬಿಐ ಬ್ಯಾಂಕಿನ ಹಲವಾರು ಬ್ರಾಂಚ್ ಗಳ ಕೋಟ್ಯಂತರ ಜನರು ತಮ್ಮ ಖಾತೆಗಳನ್ನು ತೆಗೆದಿದ್ದಾರೆ. ಎಸ್ಬಿಐ ಬ್ಯಾಂಕ್ ಕೂಡ ಕಾಲಕ್ಕೆ ಅಪ್ಡೇಟ್ ಆಗುತ್ತಿದೆ. ಗ್ರಾಹಕನ ಅವಶ್ಯಕತೆ ಹಾಗೂ ಆಸಕ್ತಿಗೆ ತಕ್ಕಂತೆ ಇತರ ಬ್ಯಾಂಕ್ ಗಳು ಹೊಂದಿರುವ ಎಲ್ಲಾ ಫೀಚರ್ ಗಳನ್ನು ಸಹಾ ಇದು ಹೊಂದಿದೆ. ಎಸ್ ಬಿ ಐ ಬ್ಯಾಂಕ್ ಮೂಲಕ ಕೂಡ ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಎಟಿಎಂ ಕಾರ್ಡ್ ಆನ್ಲೈನ್ ಬ್ಯಾಂಕಿಂಗ್ ಇನ್ನು ಮುಂತಾದ ಅನೇಕ ಸೇವೆಗಳನ್ನು ಗ್ರಾಹಕರು ಹೊಂದಬಹುದಾಗಿದೆ.
ಜೊತೆಗೆ ಹಲವು ರೀತಿಯ ಲೋನ್ ಗಳು ಕೂಡ ಗ್ರಾಹಕರಿಗೆ ನಿಯಮಗಳಿಗೆ ಅನುಸಾರವಾಗಿ ಸಿಗಲಿದೆ. ಆದರೆ ಇತ್ತೀಚೆಗೆ ಜನರಿಗೆ ಬ್ಯಾಂಕ್ ಖಾತೆ ಹೊಂದಿರುವುದೇ ಒಂದು ಕಿರಿಕಿರಿ ಆಗಿಬಿಟ್ಟಿದೆ. ಯಾಕಂದರೆ ಆನ್ಲೈನ್ ಬ್ಯಾಂಕಿಂಗ್ ಆಗಿರುವುದರಿಂದ ಕೈಯಲ್ಲಿರುವ ಮೊಬೈಲ್ ಹಿಡಿದು ಎಲ್ಲವನ್ನು ಖರೀದಿಸಲು ಹೋಗುವುದು, ಇದರಿಂದ ಯಾವುದಕ್ಕೆ ಎಷ್ಟು ಖರ್ಚಾಯಿತು ಎನ್ನುವ ಲೆಕ್ಕವೇ ಸಿಗದಂತಾಗಿದೆ.
ಜೊತೆಗೆ ಬ್ಯಾಂಕ್ ಗಳಿಂದ ಬೀಳುವ ವಿಪರೀತವಾದ ಆರ್ಥಿಕ ಕಡಿತಗಳು. ಇದಕ್ಕಿದ್ದಂತೆ ಅಕೌಂಟ್ ಅಲ್ಲಿರುವ ಹಣದಲ್ಲಿ ಒಂದಷ್ಟು ಹಣ ಬ್ಯಾಂಕ್ ಇಂದಲೇ ಕಡಿತವಾಗಿರುತ್ತದೆ. ಇದಕ್ಕೆ ಕಾರಣ ಕೂಡ ಕೆಲವೊಮ್ಮೆ ಸರಿಯಾಗಿ ಹೋಗುತ್ತದೆ. ಈ ಬಾರಿ ಕೂಡ ಎಸ್ಬಿಐ ಬ್ಯಾಂಕ್ ಖಾತೆ ಹೊಂದಿರುವವರಿಗೆ ಅಂತಹ ಅವರ ಖಾತೆ ಹಣದಿಂದ 295 ಕಡಿತವಾಗಿದೆ. ಯಾಕೆ ಎನ್ನುವ ಗೊಂದಲದಲ್ಲಿ ಇನ್ನೂ ಅನೇಕರಿದ್ದಾರೆ. ಅದಕ್ಕೆ ವಿವರಣೆ ಹೀಗಿದೆ ನೋಡಿ. ಎಸ್ ಬಿ ಐ ಬ್ಯಾಂಕ್ ಮಾತ್ರ ಅಲ್ಲದೆ ದೇಶದ ಅನೇಕ ಬ್ಯಾಂಕ್ಗಳು ತಮ್ಮ ಖಾತೆದಾರಿಗೆ ಕನಿಷ್ಠ ಉಳಿತಾಯ ಹಣವನ್ನು ಹೊಂದಬೇಕು ಎನ್ನುವ ನಿಯಮ ಮಾಡಿದೆ.
ಒಂದು ವೇಳೆ ಅದು ತಪ್ಪಿದ್ದಲ್ಲಿ ಅದಕ್ಕೆ ದಂಡ ಕೂಡ ಬೀಳುತ್ತದೆ ಹಾಗೆಯೇ ಈ ಬಾರಿ ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್ ಕಾರಣದಿಂದ ಹಣ ಕಡಿತವಾಗಿದೆ. ಖಾತೆಯಿಂದ ಇಎಂಐ ಗಳ ಆಟೋ ಪಾವತಿಗಾಗಿ ನ್ಯಾಚ್ ಬಳಸಲಾಗುತ್ತದೆ. ನೀವು ಇಎಂಐ ಮೂಲಕ ಸಾಲ ಪಡೆಯುವಾಗ, ಖರೀದಿ ಮಾಡುವಾಗ ನಿಮ್ಮ ಖಾತೆಯಿಂದ ಹಣ ಕಡಿತ ಮಾಡಲಾಗುತ್ತದೆ. ನಿಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತ ಇಲ್ಲ ಎನ್ನುವ ಕಾರಣಕ್ಕಾಗಿ ಈ ರೀತಿ ಹಣ ಕಡಿತ ಮಾಡಲಾಗಿದೆ. ಇಎಂಐ ಡೆಬಿಟ್ ಆಗದೆ ನೇರವಾಗಿ ಡೆಬಿಟ್ ಆದರೆ 295 ದಂಡ ಬೀಳಲಿದೆ. ಖಾತೆಯಲ್ಲಿ ಹಣ ಇಲ್ಲದೆ ಇದ್ದರೆ ಬ್ಯಾಂಕ್ ರೂ.250 ದಂಡ ವಿಧಿಸುತ್ತದೆ ಅದಕ್ಕೆ 18% ಜಿ ಎಸ್ ಟಿ ಸೇರುವುದರಿಂದ ಒಟ್ಟು ರೂ.295 ಆಗುತ್ತದೆ. ನಿಮ್ಮ ಖಾತೆಯಲ್ಲಿ ಹಣ ಕಡಿತಗೊಂಡಿದ್ದರೆ ಇದೇ ಕಾರಣಕ್ಕಾಗಿ ಆಗಿರುತ್ತದೆ.