ದೇಶದ ಪ್ರತಿಷ್ಠಿತ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ SBI ಕೂಡ ಒಂದು. SBI ಈಗಾಗಲೇ ತನ್ನ ಗ್ರಾಹಕರಿಗಾಗಿ ಹಲವು ವಿಶಿಷ್ಟ ಯೋಜನೆಗಳನ್ನು ಜಾರಿಗೆ ತಂದಿದೆ. SBI ನ ಹಿರಿಯ ನಾಗರಿಕರ ಯೋಜನೆ ಮತ್ತು ಅಮೃತ ಕಳಶ ಯೋಜನೆ ಮುಂತಾದ ಯೋಜನೆಗಳು ಗ್ರಾಹಕರ ಜನಮನ ಸೆಳೆದಿದೆ.
SBI ಬ್ಯಾಂಕಿನಲ್ಲಿ ಹೂಡಿಕೆ ಮಾಡುವ ಹಣದ ಮೇಲೆ ಸಿಗುವ ಬಡ್ಡಿ ದರ ಉಳಿದ ಬ್ಯಾಂಕುಗಳಿಗಿಂತ ಹೆಚ್ಚಿಗೆ ಇರುವುದರಿಂದ ಇದು ಗ್ರಾಹಕರ ಉಳಿತಾಯದ ಅಚ್ಚುಮೆಚ್ಚಿನ ಬ್ಯಾಂಕ್ ಆಗಿದೆ ಮತ್ತು ಗ್ರಾಹಕರು ಉಳಿತಾಯ ಮಾಡಿದ ಹಣದ ವಿಚಾರದಲ್ಲಿ ಅಷ್ಟೇ ಭದ್ರತೆ ಕೂಡ ಇದೆ ಇಷ್ಟೆಲ್ಲಾ ಅನುಕೂಲತೆಯನ್ನು ನೀಡಿರುವ ಬ್ಯಾಂಕ್ ಈಗ ಹೆಣ್ಣು ಮಕ್ಕಳ ಸಲುವಾಗಿ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಈಗ SBI ಬ್ಯಾಂಕ್ ಗಳ ಮೂಲಕವೂ ಕೂಡ ಖರೀದಿಸಬಹುದಾಗಿದೆ. SBI ಬ್ಯಾಂಕಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಪಡೆಯುವುದರಿಂದ ಹೂಡಿಕೆ ಮಾಡಿದವರಿಗೆ ಏನೆಲ್ಲ ಅನುಕೂಲತೆ ಆಗಲಿದೆ ಮತ್ತು ಎಷ್ಟು ಲಾಭ ಸಿಗಲಿದೆ ಎನ್ನುವ ಮಾಹಿತಿಯ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ. ನೀವು ಸಹ ಹೆಣ್ಣು ಮಕ್ಕಳ ಪೋಷಕರಾಗಿದ್ದರೆ ತಪ್ಪದೆ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ.
ಯೋಜನೆಯ ಹೆಸರು:- SBI ಸುಕನ್ಯಾ ಸಮೃದ್ಧಿ ಯೋಜನೆ…
ಯೋಜನೆಯ ಕುರಿತಾದ ಪ್ರಮುಖ ಅಂಶಗಳು:-
● ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಭಾರತೀಯ ನಾಗರಿಕರಷ್ಟೇ ಅರ್ಹರಾಗಿರುತ್ತಾರೆ.
● ಹೆಣ್ಣು ಮಕ್ಕಳಿನ ಪೋಷಕರು ಮಕ್ಕಳ ಹೆಸರಿನಲ್ಲಿ ಈ ಯೋಜನೆಯನ್ನು ಮಾಡಿಸಬಹುದು.
● ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಈ ಯೋಜನೆಯನ್ನು ಖರೀದಿಸಲು ಅವಕಾಶ. ಒಂದು ವೇಳೆ ಎರಡನೇ ಮಗುವಿನ ಜನರ ಸಮಯದಲ್ಲಿ ಎರಡು ಹೆಣ್ಣು ಅವಳಿ ಮಕ್ಕಳಾಗಿದ್ದರೆ, ಆಗ ಮೂರು ಹೆಣ್ಣುಮಕ್ಕಳ ಹೆಸರಿನಲ್ಲೂ ಕೂಡ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಖರೀದಿಸಬಹುದು. ಇದನ್ನು ಜಂಟಿಯಾಗಿ ಕೂಡ ಖರೀದಿಸಬಹುದು.
● ಮಗುವಿಗೆ ಹತ್ತು ವರ್ಷ ತುಂಬುವುದರ ಒಳಗೆ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಮಾಡಿಸಬೇಕು.
● ಕನಿಷ್ಠ 250ರೂ. ಇಂದ ಗರಿಷ್ಠ 1,50,000 ರೂವರೆಗೆ ಈ ಯೋಜನೆಯಲ್ಲಿ ವಾರ್ಷಿಕವಾಗಿ ಹೂಡಿಕೆ ಮಾಡಬಹುದು.
● ಈ ಯೋಜನೆ ತೆರೆಯಲು ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ ಸೇರಿದಂತೆ ಕೆಲ ಅಗತ್ಯ ದಾಖಲೆಗಳ ಅವಶ್ಯಕತೆ ಇರುತ್ತದೆ. ಇವುಗಳನ್ನು ಸಲ್ಲಿಸುವುದರ ಮೂಲಕ ಯೋಜನೆ ಆರಂಭಿಸಬಹುದು.
● ಯೋಜನೆಯ ಮೆಚುರಿಟಿ ಅವಧಿ 15 ವರ್ಷಗಳು ಆಗಿರುತ್ತದೆ ನಿಮ್ಮ ಮಗುವಿಗೆ 18 ವರ್ಷ ತುಂಬಿದ ಬಳಿಕ ಆಕೆಯ ಉನ್ನತ ವಿದ್ಯಾಭ್ಯಾಸಕ್ಕೆ ಅಥವಾ ಮದುವೆ ಖರ್ಚಿಗೆ ಅಥವಾ ಆಕೆ ಯಾವುದಾದರೂ ಉದ್ಯಮ ಮಾಡಲು ಬಯಸಿದರೆ ಆಕೆಗೆ ಇದು ಹಣಕಾಸಿನ ಭದ್ರತೆಯಾಗಿ ನೆರವಿಗೆ ಬರುತ್ತದೆ.
● ಉದಾಹರಣೆಗೆ ನೀವು ವಾರ್ಷಿಕವಾಗಿ ಈ ಯೋಜನೆಯಲ್ಲಿ ಒಂದು ಲಕ್ಷದ 50,000 ಹೂಡಿಕೆ ಮಾಡುತ್ತಾ ಬಂದರೆ 15 ವರ್ಷಕ್ಕೆ ನೀವು ಹೂಡಿಕೆ ಮಾಡಿದ ಹಣದ ಮೊತ್ತ 22,50,000ರೂಗಳು ಆಗಿರುತ್ತದೆ. SBI ಬ್ಯಾಂಕಿನಲ್ಲಿ ಸುಕನ್ಯ ಸಮೃದ್ಧಿ ಯೋಜನೆ ಮೇಲೆ 7.6% ಬಡ್ಡಿದರ ನಿಗದಿ ಆಗಿದೆ. ಈ ಕಾರಣದಿಂದಾಗಿ ಬಡ್ಡಿದರ ಸೇರಿದಂತೆ ಅಂತಿಮವಾಗಿ ನೀವು ಪಡೆಯುವ ಹಣ 43,43,071 ಆಗಿರುತ್ತದೆ.
● ಈ ರಿಟರ್ನ್ಸ್ ಮೇಲೆ ಆದಾಯ ತೆರಿಗೆಯ ವಿನಾಯಿತಿಯು ಕೂಡ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ SBI ಶಾಖೆಗೆ ಬೇಟಿಕೊಟ್ಟು ಮಾಹಿತಿ ಪಡೆಯಿರಿ ಅಥವಾ SBI ಬ್ಯಾಂಕಿನ ಅಧಿಕೃತ ವೆಬ್ಸೈಟ್ ಅಲ್ಲಿ ಕೂಡ ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.