ಕರ್ನಾಟಕದ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಬುಡಕಟ್ಟುಗಳ ಕೆಲವು ಭೂಮಿ ವರ್ಗಾವಣೆ ನಿಷೇಧ ಕಾನೂನು ನಿಯಮ – 1978, ಈ ನಿಯಮವನ್ನು ಜನವರಿ 1, 1979 ರಿಂದ ಜಾರಿಗೆ ತರಲಾಯಿತು. ಈ ಕಾನೂನಿನ ಪ್ರಕಾರವಾಗಿ ಜನವರಿ 1, 1979 ಕ್ಕಿಂತ ಪೂರ್ವದಲ್ಲಿ ಅಥವಾ ನಂತರದಲ್ಲಿ SC & ST ಅವರಿಗೆ ಸರ್ಕಾರದಿಂದ ಮಂಜೂರಾಗಿರುವ ಸ್ಥಿರಾಸ್ತಿಗಳನ್ನು ಸರ್ಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ಕಾರಣಕ್ಕೂ ಪರಭಾರೆ ಮಾಡುವಂತಿಲ್ಲ ಎನ್ನುವ ನಿಯಮದ ಬಗ್ಗೆ ಕಾನೂನಿನಲ್ಲಿ ಸರಳವಾಗಿ ತಿಳಿಸಲಾಗಿದೆ.
ಇದರಿಂದ ಎಲ್ಲರಿಗೂ ಮನವರಿಕೆ ಆಗುವ ಸುಲಭ ವಿಷಯ ಏನೆಂದರೆ, ಜನವರಿ 1 1979ರಕ್ಕಿಂತ ಮುಂಚೆ ಅಥವಾ ನಂತರ ಸರ್ಕಾರದಿಂದ SC & ST ವರ್ಗದವರ ಸ್ಥಿರಾಸ್ತಿಗಳನ್ನು ಮಾರಾಟ ಮಾಡಬೇಕು ಎಂದರೆ ಸರ್ಕಾರದ ಪೂರ್ವಾನುಮತಿ ಪಡೆದಿರಲೇಬೇಕು ಎನ್ನುವುದು ಸ್ಪಷ್ಟ. ಸರ್ಕಾರದ ಪೂರ್ವಾನುಮತಿ ತೆಗೆದುಕೊಳ್ಳದೆ ಪರಭಾರೆ ಮಾಡಿದ ಪಕ್ಷದಲ್ಲಿ ಆ ಪರಿಭಾರೆ ಅಸಿಂಧು ಆಗುತ್ತದೆ.
ನೀವು ಕ್ರಯದ ಮೂಲಕ ಪರಭಾರೆ ಮಾಡಿದ್ದರು, ದಾನ ಪತ್ರದ ಮೂಲಕ ಪರಭಾಷೆ ಮಾಡಿದ್ದರು, ಉಡುಗೊರೆ ಮೂಲಕ ಸ್ಥಿರಾಸ್ತಿಯನ್ನು ಪರಭಾರೆ ಮಾಡಿದ್ದರು, ಅಡಮಾನ ಮಾಡಿದ್ದರು, ಕ್ರಯದ ಕರಾರು ಮಾಡಿದ್ದರು ಇವುಗಳಲ್ಲಿ ಯಾವುದೇ ರೀತಿ ಪರಭಾರೆ ಮಾಡಿದ್ದರು ಸಹ ಸರ್ಕಾರದ ಪೂರ್ವಾನುಮತಿ ತೆಗೆದು ಕೊಳ್ಳದೇ ಇದ್ದ ಪಕ್ಷದಲ್ಲಿ ಅದು ಅಸಿಂಧು ಆಗುತ್ತದೆ.
ಆದರೆ SC & ST ವರ್ಗದವರು ಸರ್ಕಾರದಿಂದ ಮಂಜೂರಾಗಿ ಪಡೆದ ಸ್ಥಿರಾಸ್ತಿಗಳನ್ನು ಬ್ಯಾಂಕುಗಳಿಗೆ ಅಡಮಾನ ಇಡುವುದಕ್ಕೆ ಸಂಬಂಧಪಟ್ಟಂತೆ ಈ ಕಾನೂನು ಅನ್ವಯ ಆಗುವುದಿಲ್ಲ. ಹಾಗೆ ಎಸ್ಸಿ ಎಸ್ಟಿ ವರ್ಗದವರ ಪಿತ್ರಾರ್ಜಿತ ಆಸ್ತಿಗಳಿಗೆ ಮತ್ತು ಅವರು ಸ್ವಂತವಾಗಿ ಖರೀದಿಸಿದ ಆಸ್ತಿಗಳಿಗೆ ಈ ಕಾನೂನು ಅನ್ವಯ ಆಗುವುದಿಲ್ಲ. SC ಮತ್ತು ST ವರ್ಗದವರು ಸರ್ಕಾರದಿಂದ ಮಂಜೂರಾಗಿ ಪಡೆದಿದ್ದ ಆಸ್ತಿಗಳ ಹೊರತು ಪಡಿಸಿ.
ಅವರಿಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿಗಳನ್ನು ಮತ್ತು ಸ್ವಯಾರ್ಜಿತವಾಗಿ ಅವರು ಗಳಿಸಿದ ಆಸ್ತಿಗಳನ್ನು ಇತರೆ ವರ್ಗದವರ ರೀತಿ ಯಾವ ವಿಧಾನದಲ್ಲಿ ಬೇಕಾದರೂ ಯಾರಿಗೆ ಬೇಕಾದರೂ ಪರಭಾರೆ ಮಾಡಿಕೊಡಬಹುದು, ಅದರ ಸಂಪೂರ್ಣ ಅಧಿಕಾರ ಅವರಿಗೆ ಇರುತ್ತದೆ. ಆದರೆ ಸರ್ಕಾರದಿಂದ ಮಂಜೂರಾಗಿ ಪಡೆದ ಆಸ್ತಿಗಳಿಗೆ ಸರ್ಕಾರದ ಪೂರ್ವಾನುಮತಿ ಇಲ್ಲದೆ ಪರಭಾಷೆ ನಡೆಸುವಂತಿಲ್ಲ.
ಜೊತೆಗೆ ಈ ಕಾನೂನು 1979 ಜನವರಿ 1ಕ್ಕಿಂತ ಮುಂಚೆ ಪರಭಾರೆ ಆಗಿ ಹೋಗಿದ್ದ ಎಸ್ಸಿ ಎಸ್ಟಿ ವರ್ಗದವರ ಸ್ಥಿರಸ್ತಿಗಳಿಗೆ ಅನ್ವಯ ಆಗುವುದಿಲ್ಲ ಯಾಕೆಂದರೆ ಈ ಕಾನೂನು ಜಾರಿಗೆ ಬಂದಿದ್ದು ಜನವರಿ 1, 1979 ರಲ್ಲಿ. ಅದಕ್ಕೂ ಮುನ್ನವೇ ಈ ರೀತಿ ಸರ್ಕಾರದಿಂದ ಮಂಜುರಾಗಿ ಪಡೆದಿದ್ದ ಆಸ್ತಿಯನ್ನು ಕ್ರಯದ ಮೂಲಕ ಅಥವಾ ದಾನದ ಮೂಲಕ SC & ST ವರ್ಗದವರು ಬೇರೊಬ್ಬರಿಗೆ ಪರಭಾರೆ ಮಾಡಿಬಿಟ್ಟಿದ್ದರೆ ಅಂತವರಿಗೆ ಇದು ಅನ್ವಯವಾಗುವುದಿಲ್ಲ.
ಈ ನಿಯಮ ಬಂದಮೇಲೆ ಅದು ವಿಧಿಸಿರುವ ಶರತ್ತುಗಳ ಅನ್ವಯ ಇನ್ನು ಮುಂದೆ ಎಸ್ಸಿ ಎಸ್ಟಿ ವರ್ಗದವರು ಸರ್ಕಾರದಿಂದ ಮಂಜೂರಾಗಿ ಅವರು ಪಡೆದುಕೊಂಡಿದ್ದ ಆಸ್ತಿಯನ್ನು ಪರಾಭಾರೆ ಮಾಡಬೇಕು ಎಂದರೆ ಸರ್ಕಾರದ ಪೂರ್ವಾನುಮತಿ ಪಡೆದೇ ಮಾಡಬೇಕಾಗುತ್ತದೆ. ಒಂದು ವೇಳೆ ಇದು ಉಲ್ಲಂಘನೆ ಆಗಿದ್ದಲ್ಲಿ ಸರ್ಕಾರದಿಂದ ಜಮೀನು ಪಡೆದಿದ್ದ ವ್ಯಕ್ತಿ ಅಥವಾ ಆತನ ವಾರಸುದಾರ ಎಸಿ ಅವರಿಗೆ ದೂರು ನೀಡಬಹುದು. ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಇನ್ನು ಹೆಚ್ಚಿನ ಮಾಹಿತಿಯನ್ನು ವಿವರವಾಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.
https://youtu.be/A4DomwF9lFE