ನಮ್ಮ ರೈತರಿಗೆ ಬೆಳೆ ಕುರಿತಾದ ನೂರೆಂಟು ಸಮಸ್ಯೆಗಳ ಜೊತೆಗೆ ಅವರು ಕೃಷಿ ಮಾಡಲು ಮುಖ್ಯವಾಗಿ ಬೇಕಾದ ಆಸ್ತಿಯಾದ ಜಮೀನಿಗೆ ಸಂಬಂಧಪಟ್ಟ ಹಾಗೆ ಕೂಡ ಅನೇಕ ರೀತಿಯ ಸಮಸ್ಯೆಗಳಿವೆ. ಇದರಲ್ಲಿ ರೈತ ಕೃಷಿ ಮಾಡುತ್ತಿದ್ದರೂ ರೈತನಿಗೆ ಆತನ ಹೆಸರಿನಲ್ಲಿ ಜಮೀನು ಇಲ್ಲದೇ ಇರುವುದು, ಅಥವಾ ಜಮೀನು ಜಂಟಿ ಖಾತೆಯಾಗಿರುವುದು ಇತ್ಯಾದಿ ಸಮಸ್ಯೆಗಳು ಸೇರಿವೆ.
ರೈತನ ಜಮೀನು ಆತನ ಹೆಸರಿನಲ್ಲಿ ಇರದೇ ಇನ್ನು ಪೂರ್ವಿಕರ ಹೆಸರಿನಲ್ಲಿ ಇದ್ದರೆ ಅಥವಾ ಅಣ್ಣ ತಮ್ಮ ಸಂಬಂಧಿಕರೊಡನೆ ಜಂಟಿ ಖಾತೆಯಲ್ಲಿದ್ದರೆ ರೈತನಿಗಾಗಿ ರೂಪಿಸಿರುವ ಸರ್ಕಾರದ ಯಾವುದೇ ಯೋಜನೆಯ ಪ್ರತಿಫಲ ಪಡೆಯಲು ಆಗುವುದಿಲ್ಲ. ಸರ್ಕಾರದಿಂದ ಸಿಗುವ ಪ್ರೋತ್ಸಾಹ ಧನ, ಬೆಳೆ ಹಾನಿ ಪರಿಹಾರ, ಬರ ಪರಿಹಾರ, ಬೆಳೆ ವಿಮೆ ಇತ್ಯಾದಿ ಹಣವನ್ನಾಗಲಿ ಅಥವಾ ಸಬ್ಸಿಡಿ ರೂಪದಲ್ಲಿ ಸಿಗುವ ಬಿತ್ತನೆಬೀಜ ಗೊಬ್ಬರ ಯಂತ್ರೋಪಕರಣಗಳನ್ನಾಗಲಿ ಪಡೆಯುವುದಕ್ಕೆ ಆಗುವುದಿಲ್ಲ.
ಈ ಸುದ್ದಿ ಓದಿ:- ಕರ್ನಾಟಕ ರೇಷ್ಮೆ ಇಲಾಖೆ ನೇಮಕಾತಿ, ವೇತನ 56,600/- ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!
ಇವುಗಳನ್ನು ಪಡೆಯಲು ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು, ಆ ದಾಖಲೆಯು ರೈತನ ಹೆಸರಿನಲ್ಲಿ ಇರಬೇಕು, ಇಲ್ಲವಾದಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಸಿಗುವುದಿಲ್ಲ . ಇವಿಷ್ಟು ಅಲ್ಲದೆ ಬ್ಯಾಂಕ್ ಗಳಲ್ಲಿ ಸಿಗುವ ಕೃಷಿ ಸಾಲ ಪಡೆಯಲು ಮತ್ತು ಆ ಜಮೀನನ್ನು ಕ್ರಯ ಮಾಡಲು ಅಥವಾ ದಾನಪತ್ರ ಮಾಡಿ ಕೊಡಲು ಕೂಡ ಆಗುವುದಿಲ್ಲ.
ಹಾಗಾಗಿ ಈ ಬಗ್ಗೆ ರೈತ ಅರಿತುಕೊಂಡು ತನ್ನ ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು ಹಾಗಾಗಿ ಇಂದು ಈ ಲೇಖನದಲ್ಲಿ ಎಲ್ಲ ರೈತರಿಗೂ ಅನುಕೂಲ ಆಗಲಿ ಎನ್ನುವ ಉದ್ದೇಶದಿಂದ ಜಮೀನು ಜಂಟಿ ಆಗಿದ್ದರೆ ಅದನ್ನು ಯಾವ ರೀತಿ ಸಿಂಗಲ್ ಖಾತೆಯನ್ನಾಗಿ ಪರಿವರ್ತಿಸಬೇಕು.
ಈ ಸುದ್ದಿ ಓದಿ:- ಬೋರ್ವೆಲ್ ಕೊರೆಸುವ ರೈತರಿಗೆ, 101% ಪಕ್ಕಾ ನೀರು, USA, ಜಪಾನೀಸ್ ಟೆಕ್ನಾಲಜಿ ಬಳಸಿ ನೀರಿನ ಪಾಯಿಂಟ್ ಮಾಡಲಾಗುತ್ತದೆ.!
ಸಿಂಗಲ್ ಖಾತೆಯನ್ನಾಗಿ ಪರಿವರ್ತಿಸಲು ಯಾವ ದಾಖಲೆಗಳು ಬೇಕಾಗುತ್ತದೆ ಮತ್ತು ಆ ಅರ್ಜಿಯನ್ನು ಎಲ್ಲಿ ಮತ್ತು ಹೇಗೆ ಸಲ್ಲಿಸಬೇಕು? ಯಾವ ಸಂದರ್ಭಗಳಲ್ಲಿ ಜಂಟಿ ಖಾತೆ ಸಿಂಗಲ್ ಖಾತೆಯಾಗಿ ಬದಲಾವಣೆ ಆಗುತ್ತದೆ. ಈ ಪ್ರಕ್ರಿಯೆ ಹೇಗೆ ಜರುಗುತ್ತದೆ? ಎಷ್ಟು ದಿನಗಳ ಸಮಯ ತೆಗೆದುಕೊಳ್ಳುತ್ತದೆ? ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ರೈತರೊಡನೆ ಶೇರ್ ಮಾಡಿ.
ಜಂಟಿ ಖಾತೆ ಬದಲಾವಣೆ ಪ್ರಕ್ರಿಯೆ:-
* ಉದಾಹರಣೆಯೊಂದಿಗೆ ಹೇಳುವುದಾದರೆ ಒಂದು ಪಹಣಿಯ ಕಾಲಂ ನಂಬರ್ ಒಂಬತ್ತರಲ್ಲಿ ಹಲವಾರು ಖಾತೆದಾರರು ಇದ್ದಾರೆ ಎಂದುಕೊಳ್ಳೋಣ. ಈಗ ಇದನ್ನು ಬದಲಾಯಿಸುವುದಾದರೆ
ಮೊದಲು ಎಲ್ಲ ಅರ್ಜಿದಾರರು ಸೇರಿ ತಾತ್ಕಾಲ್ ಪೋಡಿಗೆ ಅರ್ಜಿ ಸಲ್ಲಿಸಬೇಕು.
* ಅರ್ಜಿ ಸಲ್ಲಿಸಿದ ಬಳಿಕ ಸ್ವಲ್ಪ ದಿನಗಳೊಳಗೆ ನಿಗದಿ ಪಡಿಸಿದ ದಿನಾಂಕದಂದು ಆ ಜಮೀನಿಗೆ ಕಂದಾಯ ಇಲಾಖೆ ಕಡೆಯಿಂದ ಭೂ ಮಾಪಕರು ಬಂದು ಜಮೀನಿನ ಸರ್ವೆ ಮಾಡುತ್ತಾರೆ. ಹಾಗೆಯೇ ದಾಖಲೆಗಳನ್ನು ಸಿದ್ದಪಡಿಸುತ್ತಾರೆ.
* ಇದು ಮುಗಿದಾದ ಬಳಿಕ 20 ದಿನಗಳ ನಂತರ ಸರ್ವೆ ಇಲಾಖೆಯಿಂದ ನೋಂದಣಿಗೆ ಬೇಕಾದ ಅವಶ್ಯಕ ದಾಖಲೆಗಳನ್ನು ತೆಗೆದುಕೊಂಡು (ಯಾವೆಲ್ಲ ಎಂದು ಈ ಲೇಖನದ ಕೊನೆಯಲ್ಲಿ ತಿಳಿಸಲಾಗಿದೆ) ಜಂಟಿ ಖಾತೆದಾರರು ತಮ್ಮ ತಮ್ಮ ಅನುಭೋಗದ ತಕ್ಕಂತೆ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಜಮೀನು ನೋಂದಣಿ ಮಾಡಿಕೊಳ್ಳಬೇಕು.
* ನೋಂದಣಿ ಪ್ರಕ್ರಿಯೆ ಮುಗಿದ ನಂತರ ನೋಂದಣಿಯಾದ ಕಡಿತವು ಭೂಮಿ ಕೇಂದ್ರಕ್ಕೆ ಹೋಗಿ ಅಲ್ಲಿ ಕಾರ್ಯಗತವಾಗುತ್ತದೆ. ಈ ರೀತಿಯಾಗಿ ಪ್ರತ್ಯೇಕವಾಗಿ ಹಕ್ಕುಪತ್ರ ಮಾಡಿಕೊಳ್ಳಬಹುದು.
ಈ ಸುದ್ದಿ ಓದಿ:- ಮನೆ ಕಟ್ಟಿಸುತ್ತಿದ್ದೀರಾ.? ಈ ಮಾಹಿತಿ ತಿಳಿದುಕೊಳ್ಳಿ ಇಲ್ಲದಿದ್ರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ, ಕಿಚನ್ ಗೆ ಯಾವ ಸಿಂಕ್ ಉತ್ತಮ ನೋಡಿ.!
ಬೇಕಾಗುವ ದಾಖಲೆಗಳು:-
* 11E ಸ್ಕೆಚ್
* ಆಧಾರ್ ಕಾರ್ಡ್
* ಸಾಕ್ಷಿದಾರರ ಸಹಿ
* ವಂಶಾವಳಿ ಪ್ರಮಾಣ ಪತ್ರ
* ಒಪ್ಪಿಗೆ ಪತ್ರ
* ಪಹಣಿ ಮತ್ತು ಫಾರಂ 10.