ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ (PMUY) ಕನೆಕ್ಷನ್ ಪಡೆದವರು ಸಬ್ಸಿಡಿ (Subsidy) ಹಣ ಪಡೆಯಲು ಅವರ ಗ್ಯಾಸ್ ಕನೆಕ್ಷನ್ ಗೆ e-KYC ಆಗಬೇಕು ಎಂದು ಘೋಷಿಸಲಾಗಿದೆ. e-KYC ಮಾಡಿಸಲು ತಮ್ಮ ಏಜೆನ್ಸಿಗಳಿಗೆ ಭೇಟಿ ಕೊಡಬಹುದು.
ಅಥವಾ ಮನೆಯಲ್ಲಿ ಮೊಬೈಲ್ ನಲ್ಲಿ ಕುಳಿತುಕೊಂಡು ನಿಮ್ಮ ಕಂಪನಿಗಳ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಕೂಡ ಮಾಡಬಹುದು. ಆ ಪ್ರಕಾರ ಹೇಗೆ ಮೊಬೈಲ್ ನಲ್ಲಿ ಹೇಗೆ Bharath gas ನವರು e-KYC ಮಾಡಬಹುದು ಎನ್ನುವುದರ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
* ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ Google ಗೆ ಹೋಗಿ, My Bharath Gas ಎಂದು ಸರ್ಚ್ ಮಾಡಿ, Bharathgas ಎಂಬ ವೆಬ್ ಸೈಟ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ
* My Bharathgas ಪೇಜ್ ಓಪನ್ ಆಗುತ್ತದೆ, ಅದರಲ್ಲಿ ಪೇಜ್ ನ ಬಲಭಾಗದಲ್ಲಿ Sign in, New User ಎನ್ನುವ ಎರಡು ಆಯ್ಕೆಗಳು ಕಾಣುತ್ತವೆ. ಈಗಾಗಲೇ Register ಆಗಿ Login ID, Password ಪಡೆದಿದ್ದರೆ Sign in ಆಗಿ. ಇಲ್ಲವಾದಲ್ಲಿ New User ಮೇಲೆ ಕ್ಲಿಕ್ ಮಾಡಿ
* Consumer No (ನಿಮ್ಮ ಗ್ಯಾಸ್ ಪಾಸ್ ಬುಕ್ ನಲ್ಲಿ ಇರುತ್ತದೆ), Register Mobile No. (ಯಾರ ಹೆಸರಿನಲ್ಲಿ ಗ್ಯಾಸ್ ಕನೆಕ್ಷನ್ ಪಡೆದಿದ್ದೀರಾ ಅವರ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್) ನಮೂದಿಸಿ Submit ಕ್ಲಿಕ್ ಮಾಡಿ
* ಮತ್ತೊಂದು ಪುಟ ಓಪನ್ ಆಗುತ್ತದೆ, ಅದರಲ್ಲಿ OTP ಕೇಳುತ್ತದೆ. ನೀವು ನೀಡಿರುವ ಮೊಬೈಲ್ ಸಂಖ್ಯೆಗೆ OTP ಬಂದಿರುತ್ತದೆ ನಮೂದಿಸಿ Continue ಕ್ಲಿಕ್ ಮಾಡಿ.
* Login ID Create ಮಾಡುವ ಪೇಜ್ ಓಪನ್ ಆಗುತ್ತದೆ. ನೀವು Login ID, Password ಕ್ರಿಯೇಟ್ ಮಾಡಿ Continue ಕ್ಲಿಕ್ ಮಾಡಿ
* ನಂತರ ನಿಮ್ಮ ರಿಜಿಸ್ಟ್ರೇಷನ್ ಸಕ್ಸಸ್ ಆಗಿದೆ ಎನ್ನುವ ಪಾಪ್ ಆಫ್ ಮೆಸೇಜ್ ಕಾಣುತ್ತದೆ. Click here to login ಎನ್ನುವುದರ ಮೇಲೆ ಕ್ಲಿಕ್ ಮಾಡಿ, ನೀವು ಈ ಮೊದಲು ಕ್ರಿಯೇಟ್ ಮಾಡಿದ Login ID, Password ಮತ್ತು Captcha Code ಎಂಟ್ರಿ ಮಾಡಿ Login ಕ್ಲಿಕ್ ಮಾಡಿ.
ಆಗ ನಿಮ್ಮ ಗ್ಯಾಸ್ ಕಲೆಕ್ಷನ್ ಯಾರ ಹೆಸರಿನಲ್ಲಿ ಇದೆ, ಅವರ ಆಧಾರ್ ನಂಬರ್, ಡಿಸ್ಟ್ರಿಬ್ಯೂಟ್ ಕೋಡ್ ಅದರ ಸಂಪೂರ್ಣ ವಿವರ ಸಿಗುತ್ತದೆ ನಂತರ OK ಕ್ಲಿಕ್ ಮಾಡಿ, Customer Counselation ಎನ್ನುವ ಮತ್ತೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ Customer Name, LPG ID, Aadhar linking & Bank Account Linking Status ಇತ್ಯಾದಿ ಸಂಪೂರ್ಣ ವಿವರ ಇರುತ್ತದೆ.
ಇದರಲ್ಲಿ Aadhar linked With Bank A/C ಆಪ್ಷನ್ ನಲ್ಲಿ YES ಎಂದು ಇರಬೇಕು ಮತ್ತು Aadhar Linked With Distributors ನಲ್ಲಿಯೂ YES ಎಂದು ಇರಬೇಕು ಇಲ್ಲವಾದಲ್ಲಿ ಯಾವುದೇ ಬೆನಿಫಿಟ್ ಸಿಗುವುದಿಲ್ಲ.
* ಪೇಜ್ ಸ್ಕ್ರೋಲ್ ಮಾಡಿದರೆ Submit e-KYC ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ, KYC form ಓಪನ್ ಆಗುತ್ತದೆ, ಅದರಲ್ಲಿ ಕೇಳಿರುವ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಕೆಲವು ಮಾಹಿತಿಗಳು ನೀವು ಕೊಟ್ಟಿರುವ ದಾಖಲೆ ಪ್ರಕಾರ ಆಟೋಮೆಟಿಕ್ ಅಪ್ಡೇಟ್ ಆಗಿರುತ್ತದೆ ಅದು ಸರಿ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ
* ಎಲ್ಲ ವಿವರಗಳನ್ನು ಭರ್ತಿ ಮಾಡಿದ ಮೇಲೆ ಕೊನೆಯಲ್ಲಿ reason for e-KYC ಆಪ್ಷನ್ ಕಾಣುತ್ತದೆ ಅದರಲ್ಲಿ ಇರುವ ಆಯ್ಕೆಗಳಲ್ಲಿ e-KYC not Available ಸೆಲೆಕ್ಟ್ ಮಾಡಿ ಕೊನೆಯಲ್ಲಿ ಒಂದು ಡಿಕ್ಲರೇಷನ್ ಇರುತ್ತದೆ ಅದನ್ನು ಓದಿಕೊಂಡು ಚೆಕ್ ಬಾಕ್ಸ್ ಮೇಲೆ ರೈಟ್ ಕ್ಲಿಕ್ ಮಾಡಿ ನೀಡಿರುವ ಕ್ಯಾಪ್ಚಾ ಕೊಡಿ ಎಂಟ್ರಿ ಮಾಡಿ generate OTP ಕ್ಲಿಕ್ ಮಾಡಿ, ನೀವು ನೀಡಿರುವ e-mail ID ಗೆ OTP ಬರುತ್ತದೆ ಎಂಟ್ರಿ ಮಾಡಿ Update e-KYC ಸಬ್ಮಿಟ್ ಕೊಡಿ.
* ಇಷ್ಟಾದ ಮೇಲೆ ಎರಡರಿಂದ ಮೂರು ಗಂಟೆ ಒಳಗಡೆ ನಿಮ್ಮ e-KYC ಆಗಿರುತ್ತದೆ.