ರೈತರ ಜಮೀನಿನಲ್ಲಿ ಇರುವ ಅಕ್ರಮ ಪಂಪ್ ಸೆಟ್ ಗಳಿಗೆ ಸಕ್ರಮ ಭಾಗ್ಯ ನೀಡಲು ಮುಂದಾದ ಸರ್ಕಾರ ಯಾವ ರೀತಿಯ ಪಂಪ್ ಸೆಟ್ ಗಳು ಸಕ್ರಮವಾಗಲಿದೆ ನೋಡಿ.!

 

WhatsApp Group Join Now
Telegram Group Join Now

ಸೆಪ್ಟೆಂಬರ್ 22ರಂದು ಸಚಿವ ಸಂಪುಟ ಸಭೆ ಚರ್ಚೆ ಬಳಿಕ ಉಪ ಮುಖ್ಯಮಂತ್ರಿಗಳದ್ದ ಡಿ.ಕೆ ಶಿವಕುಮಾರ್ (DCM D.K Shivakumar) ಹಾಗೂ ಕಾನೂನು ಸಚಿವರಾದ ಹೆಚ್.ಕೆ ಪಾಟೀಲ್ (Minister H.K Pateel) ರೈತ ವರ್ಗಕ್ಕೆ ಸಿಹಿ ಸುದ್ದಿ ನೀಡಿದ್ದಾರೆ. ಅಕ್ರಮವಾಗಿ ತಮ್ಮ ಜಮೀನುಗಳಿಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವ ರೈತರಿಗೆ (farmers) ಸಕ್ರಮ ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ.

ನೀರಾವರಿ ಉದ್ದೇಶದಿಂದ ಕೊಳವೆ ಬಾವಿ ಕೊರೆಸಿರುವ ರೈತರು ಸರಿಯಾದ ಸಮಯಕ್ಕೆ ವಿದ್ಯುತ್ ಕನೆಕ್ಷನ್ ಸಿಗದೇ ಇರುವುದು, ಅರ್ಜಿ ವಿಲೇವಾರಿ ತಡವಾಗಿರುವುದು, ಜೇಷ್ಠತೆ ಆಧಾರದ ಮೇಲೆ ವಿಳಂಬ ಆಗಿರುವುದು ಇತ್ಯಾದಿ ಕಾರಣಗಳಿಂದ ತಕ್ಷಣಕ್ಕೆ ನೀರಾವರಿ ಸೌಲಭ್ಯ ಬೇಕಿದ್ದಾಗ ಬೇರೆ ದಾರಿ ಇಲ್ಲದೆ ತಮ್ಮ ಜಮೀನುಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ ಎಂದು ಅಳಲು ತೋಡಿಕೊಂಡಿದ್ದ ಎಲ್ಲಾ ರೈತರಿಗೂ ಸಮಸ್ಯೆ ಪರಿಹಾರಕ್ಕೆ ಅವಕಾಶ ನೀಡಿದ್ದಾರೆ (illegal pumpset connection legal).

ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿ, S.S.L.C ಆಗಿದ್ದರೂ ಸಾಕು ಅರ್ಜಿ ಸಲ್ಲಿಸಿ.!

ಅದೇನೆಂದರೆ, ಈ ರೀತಿ ಅಕ್ರಮವಾಗಿ ಪಡೆದುಕೊಂಡಿದ್ದ ವಿದ್ಯುತ್ ಸಂಪರ್ಕವನ್ನು ಸಕ್ರಮ ಮಾಡಿಕೊಳ್ಳಲು ರೈತರಿಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಕಾನೂನು ಸಚಿವರು ಕಳೆದ ಎಂಟು ವರ್ಷಗಳಿಂದ ಈ ರೀತಿಯಲ್ಲಿ 2 ಲಕ್ಷದಷ್ಟು ಅಕ್ರಮ ಪಂಪ್ಸೆಟ್ ಗಳಿಗೆ ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಇದಕ್ಕಾಗಿ ESCOM 6,000 ಕೋಟಿಗಿಂತ ಹೆಚ್ಚು ಹಣ ಖರ್ಚು ಮಾಡಿದೆ ರೈತರ ಹಿತ ದೃಷ್ಟಿಯಿಂದ ಈ ಬಾರಿ ಕೂಡ ನಾವು ಅನುಕೂಲತೆ ಕಲ್ಪಿಸಿದ್ದೇವೆ. ಸೆಪ್ಟೆಂಬರ್ 22 ನ್ನು ಇದಕ್ಕೆ ಕಡೆ ದಿನಾಂಕ ಎಂದು ನಿರ್ಧರಿಸಲಾಗಿದೆ ಸೆಪ್ಟೆಂಬರ್ 22 ಕ್ಕೂ ಮುನ್ನ ಈ ರೀತಿ ತಮ್ಮ ಪಂಪ್ ಸೆಟ್ ವಿದ್ಯುತ್ ಕನೆಕ್ಷನ್ ಸಕ್ರಮಗೊಳಿಸಿಕೊಳ್ಳಲು ಅರ್ಜಿ ಶುಲ್ಕ ಪಾವತಿ ಮಾಡಿರುವ ರೈತರುಗಳಿಗೆ ಡೆಪಾಸಿಟ್ ಹಾಗೂ ಇನ್ನಿತರ ಮಾನದಂಡಗಳನ್ನು ಪೂರೈಸುವಂತೆ ಸೂಚಿಸಿ ಅವಕಾಶ

ಶುಗರ್ ಬಂದ್ರೆ ಕಿಡ್ನಿ, ಲಿವರ್ ಡ್ಯಾಮೇಜ್ ಆಗುತ್ತೆ ದೃಷ್ಟಿ ಹೋಗುತ್ತದೆ ಎನ್ನುವುದು ಎಷ್ಟು ಸತ್ಯ.? ಡಾಕ್ಟರ್ ಬಿಚ್ಚಿಟ್ಟ ಸತ್ಯ ಇದು ಸಕ್ಕರೆ ಖಾಯಿಲೆ ಇರುವವರು ತಪ್ಪದೆ ಇದನ್ನು ನೋಡಿ.!,

ಇದೇ ಕೊನೆಯ ಬಾರಿ ಇನ್ನು ಮುಂದೆ ಈ ರೀತಿ ಅಕ್ರಮವಾಗಿ ಪಡೆದ ವಿದ್ಯುತ್ ಕನೆಕ್ಷನ್ ಮಾಡಿಕೊಳ್ಳುವುದು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಇದರ ಜೊತೆಗೆ ತಮ್ಮ ಪಂಪ್ ಸೆಟ್ ಗಳಲ್ಲಿ ಸೋಲಾರ್ ಪ್ಯಾನೆಲ್ (Solar panel) ಅಳವಡಿಸಿಕೊಳ್ಳಲು ಮುಂದೆ ಬರುವ ಪ್ರೋತ್ಸಾಹಿಸುವುದಾಗಿ ಭರವಸೆ ನೀಡಿ, ಕೊಳವೆ ಬಾವಿಯಿಂದ 500 ಅಡಿ ದೂರದಲ್ಲಿರುವ ಪಂಪ್ಸೆಟ್ಗಳಿಗೆ ಸೌರ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.

ಕೇಂದ್ರ ಸರ್ಕಾರದ ಯೋಜನೆಯಾದ ಪ್ರಧಾನ ಮಂತ್ರಿ ಕುಸುಮ್ ಬಿ ಯೋಜನೆ (PM Kusum B Scheme) ಬಗ್ಗೆ ಕೂಡ ಪ್ರಸ್ತಾಪಿಸಿದ ಸಚಿವರು ರಾಜ್ಯ ಸರ್ಕಾರ ಕೂಡ ಈ ಯೋಜನೆಯಲ್ಲಿ ಸೋನಾಲ್ ಪ್ಯಾನೆಲ್ ಅಳವಡಿಸಿಕೊಂಡು ಅದರ ಮೂಲಕ ವಿದ್ಯುತ್ ಶಕ್ತಿ ಬಳಸುವ ರೈತರಿಗೆ ಈ ಘಟಕವನ್ನು ನಿರ್ಮಾಣ ಮಾಡಿಕೊಳ್ಳುವುದಕ್ಕೆ ರಾಜ್ಯ ಸರ್ಕಾರದಿಂದ 50% ಸಹಾಯಧನ ನೀಡಲಾಗುವುದು.

ಒಂದೇ ಕುಟುಂಬದವರು ಎರಡು ಮೂರು ರೇಷನ್ ಕಾರ್ಡ್ ಪಡೆದವರಿಗೆ ಬಿಗ್ ಶಾ-ಕ್, ಸರ್ಕಾರದಿಂದ ಬಂದಿದೆ ಹೊಸ ರೂಲ್ಸ್.!

ಕೇಂದ್ರ ಸರ್ಕಾರದಿಂದ 30% ಅನುದಾನ ಸಿಗುತ್ತದೆ ಇನ್ನು 20% ರೈತನ ಖರ್ಚು ಮಾಡಿ ಯೋಚನೆ ಪ್ರಯೋಜನ ಪಡೆಯಬಹುದಾಗಿದೆ ಎಂದಿದ್ದಾರೆ. ಇನ್ನು ಮುಂದೆ ಅಕ್ರಮವಾಗಿ ತಮ್ಮ ಪಂಪ್ಸೆಟ್ಗಳಿಗೆ ವಿದ್ಯುತ್ ಕಲೆಕ್ಷನ್ ಪಡೆದುಕೊಳ್ಳುವವರಿಗೆ ಭಾರತೀಯ ವಿದ್ಯುತ್ ಶಕ್ತಿ ಕಾಯಿದೆ 2023 ಸೆಕ್ಷನ್ 135 ಮತ್ತು 138 ರ ಪ್ರಕಾರ ದಂಡ ಮತ್ತು ಶಿಕ್ಷೆ ವಿಧಿಸಬೇಕಾಗುತ್ತದೆ.

ಮೊದಲನೇ ಬಾರಿ ಸಿಕ್ಕಿ ಬಿದ್ದರೆ ರಾಜಿ ಪ್ರಕರಣ ಎಂದು ಪರಿಗಣಿಸಿ ಕಂಪೌಂಡಿಂಗ್ ಶುಲ್ಕ ಎಂದು ಒಂದು ವರ್ಷದವರೆಗೆ ದುಪ್ಪಟ್ಟು ಶುಲ್ಕ ಕಟ್ಟಿಸಲಾಗುತ್ತದೆ, ಎರಡನೇ ಬಾರಿ ಸಿಕ್ಕಿಬಿದ್ದರೆ ಎರಡು ತಿಂಗಳಿಂದ ಮೂರು ವರ್ಷದವರೆಗೆ ಜೈಲು ಶಿಕ್ಷೆ ಆಗಬಹುದು, ಆನಂತರ ಕೂಡ ಮತ್ತೊಮ್ಮೆ ಸಿಕ್ಕಿ ಬಿದ್ದರೆ 3 ವರ್ಷಗಳವರೆಗೆ ರೈತನ ಜಮೀನಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಜಾರಿ.! ಈ ಯೋಜನೆಯಡಿ ಸಾಲ ಪಡೆದವರು ಬಡ್ಡಿ ಕಟ್ಟುವಂತಿಲ್ಲ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now