FIR ವಿಷಯದಲ್ಲಿ ಜನಸಾಮಾನ್ಯರು ಸುಳ್ಳು FIR ಎಂದು ಮಾತನಾಡುವುದನ್ನು ನಾವು ಕೇಳಿರಬಹುದು. ಆದರೆ ಈ ರೀತಿ ವಿಷಯವೇ ಇಲ್ಲ, ಒಬ್ಬ ಮನುಷ್ಯನ ಮೇಲೆ ಯಾರಾದರೂ ಕಂಪ್ಲೇಂಟ್ ಕೊಟ್ಟು FIR ಮಾಡಿಸಿರುತ್ತಾರೆ ಅಷ್ಟೇ ಆತನ ಮೇಲೆ ಬಂದಿರುವುದು ನಿಜವೋ ಅಥವಾ ಸುಳ್ಳು ಆರೋಪವೋ ಎನ್ನುವುದು ಕೋರ್ಟ್ಗಳಲ್ಲಿ ನಡೆಯುವ ನಂತರದ ವಿಚಾರಣೆಗಳ ಬಳಿಕ ಅಷ್ಟೇ ಸಾಬೀತಾಗುತ್ತದೆ.
ಹಾಗಾದರೆ ಯಾರಾದರೂ ಒಬ್ಬ ವ್ಯಕ್ತಿಯು ನಿಮ್ಮ ಮೇಲೆ ಯಾವುದೇ ಸೂಕ್ತ ದಾಖಲೆ ಇಲ್ಲದೆ ನಿಮ್ಮ ಮೇಲೆ ಆರೋಪ ಮಾಡಿದ್ದರೆ ಆಗುವ ಸಮಸ್ಯೆಗಳು ಏನು ಅಥವಾ ನೀವು ಯಾವ ರೀತಿ ಪರಿಹಾರ ಪಡೆಯಬಹುದು ಎನ್ನುವ ಒಂದು ಉಪಯುಕ್ತ ಮಾಹಿತಿಯ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.
ಈ ರೀತಿ ಯಾರ ಮೇಲೆ FIR ಆಗಿರುತ್ತದೆ ಅವರು CrPC ಸೆಕ್ಷನ್ 438 ಕೆಳಗಡೆ ಆಂಟಿಸಿಪೇಟರಿ ಬೇಲ್ ತೆಗೆದುಕೊಳ್ಳಬಹುದು. ನಂತರ ಯಾರೂ ನಿಮ್ಮ ಮೇಲೆ ಕಂಪ್ಲೇಂಟ್ ನೀಡಿ ಕೋರ್ಟ್ ಗೆ ಹೋಗಿರುತ್ತಾರೆ ಆ ವ್ಯಕ್ತಿಯು ನಿಮ್ಮ ಮೇಲೆ ಯಾವುದೇ ಸಾಕ್ಷಿ ಆಧಾರ ಇಲ್ಲದೆ ಸುಳ್ಳು ಆರೋಪ ಮಾಡಿಸಿದ್ದಾರೆ ಎಂದರೆ ನೀವು ಹೈಕೋರ್ಟ್ ನಲ್ಲಿ CrPC 482 ನಡಿ ಕ್ವಾಷಿಂಗ್ ಹಾಕಬಹುದು.
ಕೋರ್ಟ್ ಗಳಲ್ಲಿ ಟ್ರಯಲ್ ಆರಂಭವಾಗುವುದಕ್ಕಿಂತ ಮುನ್ನ CePC 227 ನಡಿ ಪೊಲೀಸರು ಚಾರ್ಜ್ ಶೀಟ್ ಹಾಕಿ ಅಂತಿಮ ವರದಿ ಸಲ್ಲಿಕೆ ಮಾಡುವ ಮುನ್ನವೇ ನೀವು ಡಿಸ್ಚಾರ್ಜ್ ಅಪ್ಲಿಕೇಶನ್ ಕೂಡ ಹಾಕಬಹುದು. ಈ ಡಿಸ್ಚಾರ್ಜ್ ಅಪ್ಲಿಕೇಶನ್ ಹಾಕುವ ವೇಳೆಯಲ್ಲಿ ನೀವು ನಿಮ್ಮ ಮೇಲೆ ಏನು ದೂರು ಇದೆ ಎಂದು ಚಾರ್ಜ್ ಶೀಟ್ ಕೂಡ ನೋಡಬಹುದು.
ಚಾರ್ಜ್ ಶೀಟ್ ನಲ್ಲಿ ವಿವರವಾಗಿ ನಿಮ್ಮ ಮೇಲೆ ಇರುವ ಆರೋಪದ ಬಗ್ಗೆ ಪೊಲೀಸರು ವರದಿ ಬರೆದಿರುತ್ತಾರೆ. ಅದನ್ನು ನೋಡಿಕೊಂಡು ಯಾವುದನ್ನು ಚಾರ್ಜಾ ಶೀಟ್ ನಲ್ಲಿ ಗಮನಿಸಿಲ್ಲ, ಆ ರೀತಿ ನಿಮ್ಮ ಮೇಲೆ ಚಾರ್ಟ್ ಶೀಟ್ ಹಾಕುವುದಕ್ಕೆ ಯಾಕೆ ಸಾಧ್ಯವಿಲ್ಲ ಅದಕ್ಕೆ ಕಾರಣಗಳು ಏನು ಎನ್ನುವುದನ್ನು ನಿಮ್ಮ ಪರವಾಗಿರುವ ವಿಷಯಗಳನ್ನು ನೀವು ಹೇಳಿಕೊಂಡು ರಿಲೀಫ್ ಗಾಗಿ ಡಿಸ್ಚಾರ್ಜ್ ಅಪ್ಲಿಕೇಶನ್ ಹಾಕಬಹುದು.
ನೀವು ಯಾಕೆ ಈ ಕೇಸ್ ನಿಂದ ನಿಮ್ಮನ್ನು ಹೊರಿಗಿಡುವಂತೆ ಕೇಳುಕೊಳ್ಳುತ್ತಿದ್ದೀರಾ ಎನ್ನುವುದನ್ನು ಕೂಡ ಸ ವಿವರವಾಗಿ ಅದರಲ್ಲಿ ತಿಳಿಸಬೇಕು. ಇದಿಷ್ಟು ಮಾತ್ರವಲ್ಲದೆ ಹೈ ಕೋರ್ಟ್ ನಲ್ಲಿ ಆರ್ಟಿಕಲ್ 226ನಡಿ ಮ್ಯಾಂಟಮಸ್ ಮತ್ತು ಪ್ರೊಹಿಬಿಷನ್ ಎನ್ನುವ ಎರಡು ರೀತಿಯ ರಿಟ್ ಪ್ರಿಟಿಷನ್ ಗಳನ್ನು ಕೂಡ ಹಾಕಬಹುದು.
ಇದರಲ್ಲಿ ಮ್ಯಾಂಡಮಸ್ ಅನ್ನು ಚಾಟ್ ಶೀಟ್ ವಿರುದ್ಧ ಪೊಲೀಸರಿಗೆ ಸಲ್ಲಿಸಬಹುದು ಇದರಲ್ಲಿ ಯಾವುದೇ ಸಾಕ್ಷಿ ಇಲ್ಲದ ಆರೋಪ ಇದೆ ಇದು ಜೋಡಿಕಲ್ ಡಿಸ್ಟ್ರಿಕ್ಷನ್ಸ್ ವ್ಯಾಪ್ತಿಗೆ ಬರುತ್ತಿಲ್ಲ ಎನ್ನುವ ಅಂಶಗಳ ಮೇಲೆ FIR ಮ್ಯಾಂಡಮೆಸ್ ರಿಟರ್ನ್ ಫೈಲ್ ಮಾಡಬಹುದು ಕೆಲ ನ್ಯಾಯಾಲಯಗಳಲ್ಲಿ ನಿಮ್ಮ ಕೇಸ್ ಟ್ರಯಲ್ ನಡೆಯುತ್ತಿರುವುದನ್ನು ನಿಲ್ಲಿಸಿ ಎಂದು ಪ್ರೋಹಿಬಿಷನ್ ರಿಟ್ ಹೊರಡಿಸಬಹುದು.
ಇದಿಷ್ಟು FIR ಆಗಿರುವ ಆರೋಪಿಗಳಿಗೆ ಇರುವ ಅವಕಾಶಗಳು ಇವುಗಳನ್ನು ಅವರು ಬಳಕೆ ಮಾಡಿಕೊಳ್ಳಬಹುದು. ಒಂದು ವೇಳೆ ಹೈ ಕೋರ್ಟ್ ನಲ್ಲಿ ರಿಟ್ ಅರ್ಜಿಗಳು ತಿರಸ್ಕೃತಗೊಂಡರು ಅವರು ಬೇಲ್ ತೆಗೆದುಕೊಂಡಿರುವುದರಿಂದ ಬಂಧನದ ಭೀತಿ ಇಲ್ಲದೆ ಇರಬಹುದು. ಈ ವಿಚಾರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಉಚಿತ ಕಾನೂನು ಸಲಹಾ ಕೇಂದ್ರಗಳನ್ನು ಸಂಪರ್ಕಿಸಿ.