ಮನೆ ಕಟ್ಟಿಸುವುದು ಎನ್ನುವುದು ಒಂದು ಬಹಳ ದೊಡ್ಡ ವಿಷಯ. ಹಣಕಾಸಿನ ವಿಚಾರವಾಗಿ ಮಾತ್ರವಲ್ಲದೆ ಅದು ನಮ್ಮ ಭಾವನೆಗಳಿಗೆ ಸಂಬಂಧ ಪಟ್ಟ ವಿಷಯ ಕೂಡ ಆಗಿದೆ. ನಾವು ನಮ್ಮ ಸ್ವಂತ ದುಡಿಮೆಯಿಂದ ಕಷ್ಟಪಟ್ಟು ಹಣ ಕೂಡಿಟ್ಟು ನಮಗೆ ಇಷ್ಟ ಆಗುವ ರೀತಿ ಒಂದು ಮನೆಯನ್ನು ಕಟ್ಟಿಸಿಕೊಳ್ಳುತ್ತೇವೆ.
ಆ ಮನೆಯಲ್ಲಿ ನಮ್ಮ ಕುಟುಂಬದವರ ಜೊತೆಗೆ ಸಂತೋಷದಿಂದ ನೂರಾರು ಕಾಲ ಜೀವಿಸಬೇಕು ಎನ್ನುವುದು ನಮ್ಮ ಆಸೆ ಆಗಿರುತ್ತದೆ. ಇಂತಹ ಮನೆಗಳಲ್ಲಿ ನಾವು ಅಂದುಕೊಂಡಂತೆ ನೆಮ್ಮದಿಯಿಂದ ಬದುಕಬೇಕು ಎಲ್ಲ ರೀತಿಯ ಸುಖ ಶಾಂತಿ ನೆಮ್ಮದಿ ಧನೈಶ್ವರ್ಯಗಳು ಕೂಡ ಮನೆಗೆ ಬರಬೇಕು ಎಂದರೆ ಮನೆಯ ಮುಖ್ಯದ್ವಾರವು ಮುಖ್ಯವಾಗುತ್ತದೆ.
ವಾಸ್ತು ಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ಮನೆಯ ಮುಂಗಾಗಿಲಿಗೆ ಕೆಲವು ನಿಯಮಗಳು ಇವೆ ಆ ಪ್ರಕಾರವಾಗಿ ಪಾಲಿಸಿದಾಗ ಎಲ್ಲ ರೀತಿಯ ಕಾರ್ಯಗಳು ಸರಾಗವಾಗಿ ಜರುಗುತ್ತವೆ. ಮನೆಗೆ ಮುಖ್ಯ ದ್ವಾರದವೇ ಲಕ್ಷಣ. ಹಾಗಾಗಿ ಮುಖ್ಯದ್ವಾರ ಹಾಗೂ ಮುಖ್ಯ ಬಾಗಿಲಿನ ಬಗ್ಗೆ ಹೆಚ್ಚು ಗಮನಹರಿಸಬೇಕು ಇದು ಯಾವ ದಿಕ್ಕಿನಲ್ಲಿ ಇರಬೇಕು ಎನ್ನುವುದಕ್ಕೂ ಕೂಡ ವಾಸ್ತು ಶಾಸ್ತ್ರ ಹಾಗೂ ಮನೆ ಕಟ್ಟಿಸುವ ವ್ಯಕ್ತಿಯ ರಾಶಿಯ ಮೇಲೆ ನಿರ್ಧಾರ ಆಗುತ್ತದೆ.
ಆದರೆ ಮನೆ ಮುಖ್ಯ ದ್ವಾರ ಮತ್ತು ಬಾಗಿಲು ಸುಂದರವಾಗಿದ್ದು ಆಕರ್ಷಣೀಯವಾಗಿರಬೇಕು. ಒಳ್ಳೆಯ ಗುಣಮಟ್ಟದ ಮರಗಳಿಂದ ಅಂದವಾದ ಕೆತ್ತನೆಗಳನ್ನು ಮಾಡಿಸಿ ಮನೆ ಮುಖ್ಯದ್ವಾರವನ್ನು ನಿರ್ಮಿಸಬೇಕು ಮನೆಯ ಮುಖ್ಯ ದ್ವಾರದಿಂದ ಮನೆಗೆ ಸಕಾರಾತ್ಮಕ ಶಕ್ತಿಯ ಸೆಳೆತವಾಗುತ್ತದೆ.
ಮನೆ ಮುಂಬಾಗಿಲನ್ನು ನೋಡಿದರೆ ನೋಡುಗರಿಗೂ ಕೂಡ ಒಳ್ಳೆಯ ಅಭಿಪ್ರಾಯ ಮೂಡುವಂತಿರಬೇಕು, ಆಗ ಮನೆಯಲ್ಲಿ ನೆಲೆಸುವವರ ಬದುಕಲ್ಲಿ ಒಳ್ಳೆಯ ರೀತಿಯ ಬದಲಾವಣೆಗಳು ನಡೆಯುತ್ತವೆ. ಇದಕ್ಕೆ ವಿರುದ್ಧವಾಗಿ ಮನೆಯ ಬಾಗಿಲನಲ್ಲಿಯೇ ದೋಷಗಳಿದ್ದರೆ ಮನೆಗೆ ಹೋಗುವವರು ಹಾಗೂ ಮನೆಯಲ್ಲಿರುವವರಿಗೂ ಸಮಸ್ಯೆಯಾಗುತ್ತದೆ.
ಮನೆಗೆ ಅದೃಷ್ಟ ಹೊತ್ತು ತರುವ ಈ ಮುಖ್ಯ ದ್ವಾರವು ಯಾವ ರಾಶಿಯವರಿಗೆ ಯಾವ ಕಡೆ ಇದ್ದರೆ ಒಳ್ಳೆಯದು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಮೇಷ, ಸಿಂಹ, ಧನಸ್ಸು ರಾಶಿಯವರ ಮನೆಯ ಮುಖ್ಯದಾರರು ಉತ್ತರದ ದಿಕ್ಕಿನಲ್ಲಿರಬೇಕು. ವೃಷಭ, ತುಲಾ, ಕುಂಭ ರಾಶಿಯವರಿಗೆ ಪಶ್ಚಿಮದ ದ್ವಾರ ಶುಭ.
ಮಿಥುನಾ, ಮಕರ, ಕನ್ಯಾ ರಾಶಿಯವರಿಗೆ ದಕ್ಷಿಣದ ದಿಕ್ಕು ಮತ್ತು ಕಟಕ ವೃಶ್ಚಿಕ ಮೀನ ರಾಶಿಯವರಿಗೆ ಪೂರ್ವ ದಿಕ್ಕಿನಲ್ಲಿ ಮನೆಯ ಮುಖ್ಯದ್ವಾರ ಇದ್ದರೆ ಒಳ್ಳೆಯದು ಎಂದು ತಿಳಿಸಲಾಗಿದೆ. ಮನೆಗೆ ಮುಖ್ಯದ್ವಾರವನ್ನು ಸ್ಥಾಪಿಸುವಾಗ ಸೋಮವಾರ ಬುಧವಾರ ಗುರುವಾರ ಅಥವಾ ಶುಕ್ರವಾರದಂದು ಶುಭ ಮುಹೂರ್ತದಲ್ಲಿ ಪಂಚಲೋಹ ಹಾಗೂ ಪಂಚ ರತ್ನದ ಅಕ್ಷತೆಗಳಿಂದ ಹಾಲು ಮತ್ತು ನೀರನ್ನು ಹಾಕಿ ಹೆಬ್ಬಾಗಿಲು ಹೊಸ್ತಿಲನ್ನು ಪೂಜೆ ಮಾಡಿ ಸ್ಥಾಪಿಸಬೇಕು.
ಇದಾದ ಬಳಿಕವೂ ಕೂಡ ಮನೆಯಲ್ಲಿ ನೆಲೆಸಲು ಆರಂಭಿಸಿದ ಮೇಲೆ ತಪ್ಪದೆ ಪ್ರತಿದಿನವೂ ಹೊಸ್ತಿಲ ಪೂಜೆಯನ್ನು ಮಾಡಬೇಕು. ಸ್ವಂತ ಮನೆ ಖರೀದಿಸುವಾಗ ಮಾತ್ರವಲ್ಲದೆ ಬಾಡಿಗೆ ಮನೆಗಳಲ್ಲಿ ವಾಸಿಸುವ ಸಂದರ್ಭ ಬಂದಾಗ ಅಥವಾ ವ್ಯಾಪಾರಕ್ಕಾಗಿ ಅಂಗಡಿಗಳನ್ನು ವಹಿವಾಟಿಗಾಗಿ ಕಚೇರಿಗಳನ್ನು ಆರಂಭಿಸುವಾಗಲು ಕೂಡ ಈ ರೀತಿ ತಮಗೆ ಶುಭ ದಿಕ್ಕು ಅಥವಾ ತಮಗೆ ಕೂಡಿಬರುವ ದಿಕ್ಕಿಗೆ ಮುಖ್ಯ ದ್ವಾರ ಇರುವುದನ್ನೇ ಆರಿಸುವುದರಿಂದ ಕೈಗೊಂಡ ಕಾರ್ಯಗಳಲ್ಲಿ ಅತ್ಯಂತ ಯಶಸ್ವಿಯಾಗುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾಗಿ ಇನ್ನು ಮುಂದೆ ಇವುಗಳ ಬಗ್ಗೆ ಗಮನ ಕೊಡಿ.