ಪ್ರತಿ ಆರ್ಥಿಕ ವರ್ಷದ ಆರಂಭದಲ್ಲಿ ಹಣಕಾಸು ವಿಷಯದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಇರುತ್ತದೆ. ಪ್ರತಿಯೊಬ್ಬ ಬ್ಯಾಂಕ್ ಗ್ರಾಹಕನು ಕೂಡ ತನ್ನ ಬ್ಯಾಂಕ್ ನಲ್ಲಿ ಉಂಟಾಗುವ ಬಡ್ಡಿದರದ ಪರಿಷ್ಕರಣೆ ಬಗ್ಗೆ ಬಹಳ ಗಮನ ಕೊಟ್ಟು ಕಾಯುತ್ತಿರುತ್ತಾನೆ. ಅದೇ ರೀತಿ ಈಗ HDFC ಗ್ರಾಹಕರು ಕೂಡ ಬ್ಯಾಂಕ್ ಬದಲಾಯಿಸಿದ ಒಂದು ನಿಯಮದಿಂದಾಗಿ ಶಾ’ಕ್ ಆಗಿದ್ದಾರೆ.
RBI ನ ರೆಪೋ ದರದ ಬದಲಾವಣೆಗಳು ಬ್ಯಾಂಕ್ ಉಳಿತಾಯಗಳ ಮೇಲೆ ಹಾಗೂ ಉಳಿತಾಯ ಯೋಜನೆಗಳ ಮೇಲೆ ಮತ್ತು ಗ್ರಾಹಕರು ಪಡೆವ ಸಾಲಗಳ ಮೇಲೆ ವಿಧಿಸುವ ಬಡ್ಡಿ ದರಗಳಲ್ಲಿ ಬಹಳ ಬದಲಾವಣೆ ತರುತ್ತದೆ. ಆದರೆ ಈ ಬಾರಿ RBI ತನ್ನ ರೆಪೋದರದ ಬಗ್ಗೆ ವಿವರ ಕೊಡುವ ಮುನ್ನವೇ ಭಾರತದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ HDFC ಬ್ಯಾಂಕ್ ತನ್ನ MCLR ನ್ನು ಬದಲಾವಣೆ (MCLR Hike) ಮಾಡಿದ್ದು ಈ ಹಿಂದಿನ ದರಕ್ಕಿಂತ ಹೆಚ್ಚಿಗೆ ಆಗಿರುವುದು HDFC ಗ್ರಾಹಕರಿಗೆ ಬೇಸರ ತರಿಸಿದೆ.
ಸಾಮಾನ್ಯವಾಗಿ ಬ್ಯಾಂಕ್ ಗಳು MCLR ನಿರ್ಧರಿಸುವಾಗ ಬಹಳ ವಿಷಯಗಳ ಬಗ್ಗೆ ಗಮನ ಕೊಡುತ್ತವೆ ಅದರಲ್ಲಿ ಮುಖ್ಯವಾಗಿ RBI ರೆಪೋ ದರದ ಪರಿಷ್ಕರಣೆ MCLR ಹೆಚ್ಚಳದ ಮೇಲೆ ಇದು ನಿರ್ಧಾರವಾಗುತ್ತದೆ ಎಂದು ಹೇಳಲಾಗುತ್ತಿತ್ತು ಆದರೆ ಈ ಬಾರಿ HDFC ಬ್ಯಾಂಕ್ ತೆಗೆದುಕೊಂಡಿರುವ ಈ ನಿರ್ಧಾರ ಗ್ರಾಹಕರಿಗೆ ಹೊರೆಯನ್ನು ಜಾಸ್ತಿ ಮಾಡಿದ್ದು MCLR ಹೆಚ್ಚಳವು ನೇರವಾಗಿ ಗ್ರಾಹಕರು ಪಡೆದ ಸಾಲಗಳ ಮೇಲಿನ ಬಡ್ಡಿ ತರದ ಮೇಲೆ ಪರಿಣಾಮ ಬೀರುವುದರಿಂದ EMI ಗಳು ಹೆಚ್ಚಾಗುವಂತೆ ಮಾಡಿದೆ.
MCLR ಹೆಚ್ಚಳವು ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಮುಂತಾದ ಸಾಲಗಳ ಬಡ್ಡಿದರ ಆ ಮೂಲಕ EMI ಹೆಚ್ಚಾಗುವಂತೆ ಮಾಡಿದೆ ಜೊತೆಗೆ ಹೊಸ ಸಾಲಗಳನ್ನು ಪಡೆದುಕೊಳ್ಳುವವರಿಗೆ ಕೂಡ ಹೊಸ ಬಡ್ಡಿದರವು ಅನ್ವಯವಾಗುವಂತೆ ಮಾಡಿದೆ ಮತ್ತು ಈ ಹೊಸ ದರಗಳು ಇದೇ ಡಿಸೆಂಬರ್ 7ರಿಂದನೇ ಜಾರಿಗೆ ಬರುತ್ತಿವೆ.
ಪರಿಷ್ಕರಣೆಗೊಂಡಿರುವ HDFC ಬ್ಯಾಂಕ್ ನ MCLR ವಿವರ ಹೀಗಿದೆ :-
* HDFC ಬ್ಯಾಂಕ್ ತನ್ನ ಒಂದು ರಾತ್ರಿ MCLR ನ್ನು 5BPS ನಿಂದ 8.65% ನಿಂದ 8.70% ಗೆ ಹೆಚ್ಚಿಸಿದೆ.
* HDFC ಬ್ಯಾಂಕ್ ತನ್ನ ಒಂದು ತಿಂಗಳ MCLR ನ್ನು 5BPS ನಿಂದ 8.70% ನಿಂದ 8.75% ಗೆ ಹೆಚ್ಚಿಸಿದೆ.
* HDFC ಬ್ಯಾಂಕ್ ತನ್ನ ಮೂರು ತಿಂಗಳ MCLR ನ್ನು 5BPS ನಿಂದ 8.90% ನಿಂದ 8.95% ಗೆ ಹೆಚ್ಚಿಸಿದೆ.
* HDFC ಬ್ಯಾಂಕ್ ನ ಅರ್ಧವಾರ್ಷಿಕ MCLR ನಲ್ಲಿ ಯಾವುದೇ ಬದಲಾವಣೆ ಇಲ್ಲ. ಇದುವರೆಗೂ ಇದ್ದ 9.15% ಬಡ್ಡಿ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.
* ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ HDFC ಬ್ಯಾಂಕ್ ನಿಗದಿಪಡಿಸಿದ್ದ MCLR ನಲ್ಲೂ ಯಾವುದೇ ಬದಲಾವಣೆ ಇಲ್ಲ. ಈ ಮೊದಲೇ ನಿಗದಿಯಾಗಿದ್ದ 9.20% ಬಡ್ಡಿದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.
* HDFC ಬ್ಯಾಂಕ್ 2 ವರ್ಷಕ್ಕಿಂತ ಹೆಚ್ಚಿನ ಅವಧಿಯ MCLR ನ್ನು 9.20% ನಿಂದ 9.25% ಗೆ ಹೆಚ್ಚಿಗೆ ಮಾಡಿದೆ.
* HDFC ಬ್ಯಾಂಕ್ ನಲ್ಲಿ ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ನಿಗದಿಯಾಗಿದ್ದ MCLR 9.25% ನಲ್ಲಿ ಯಾವುದೇ ಬದಲಾವಣೆ ಮಾಡದೆ ಸ್ಥಿರತೆ ಕಾಯ್ದುಕೊಂಡಿದೆ.