ಪ್ರಧಾನಮಂತ್ರಿಯವರು ತೆಗೆದುಕೊಂಡ ನೋಟು ಅಮ್ಯಾನೀಕರಣ ನಿರ್ಧಾರವೋ ಅಥವಾ ಕೋವಿಡ್ ಪರಿಸ್ಥಿತಿಯಲ್ಲಿ ಉಂಟಾದ ಕಟ್ಟುನಿಟ್ಟಿನ ನಿಯಮ ಪಾಲನೆಯ ಸಂದಿಗ್ಧ ಪರಿಸ್ಥಿತಿಯು ಇಂದು ನಾವು ಯಶಸ್ವಿಯಾಗಿ ಲೆಸ್ ಕ್ಯಾಶ್ ಕಾನ್ಸೆಪ್ಟ್ ಕಡೆ ವಾಲಿದ್ದೇವೆ. ಎಲ್ಲಾ ಕ್ಷೇತ್ರವು ಡಿಜಟಲೀಕರಣಗೊಳ್ಳುತ್ತಿದ್ದಂತೆ ಆನ್ಲೈನ್ ಪೇಮೆಂಟ್ ವ್ಯವಹಾರಗಳು ಹೆಚ್ಚು ನಡೆಯುತ್ತಿದ್ದು UPI ಆಧಾರಿತ ಆಪ್ ಗಳ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೂಲಕವೇ ಇಂದು ಹಣದ ವ್ಯವಹಾರಗಳು ಹೆಚ್ಚಾಗಿ ನಡೆಯುತ್ತಿವೆ.
ಭಾರತದಂತಹ ದೇಶದಲ್ಲಿ ಬಹಳ ವೇಗವಾಗಿ ಎಲ್ಲರೂ ಈ ಆನ್ಲೈನ್ ಪೇಮೆಂಟ್ ವ್ಯವಹಾರಕ್ಕೆ ಹೊಂದುಕೊಳ್ಳುತ್ತಿದ್ದಾರೆ ಆದರೆ ಜನ ಆನ್ಲೈನ್ ನಲ್ಲಿ ವಾಹಿವಾಟು ಹೆಚ್ಚು ಮಾಡಿದಂತೆ ಜನರನ್ನು ವಂಚಿಸಿ ಹಣ ಹೊಡೆಯುತ್ತಿರುವ ಜಾಲವೂ ಕೂಡ ಬಲಿಷ್ಠವಾಗುತ್ತಿದೆ. ಈ ಸೈಬರ್ ಕಳ್ಳತನ ಪ್ರಕರಣವನ್ನು ಪತ್ತೆಹಚ್ಚಲು ತಡೆಯಲು ಮಟ್ಟ ಹಾಕಲು ಸೈಬರ್ ಕ್ರೈಂ ಬ್ರಾಂಚ್, ಹರಸಾಹಸವನ್ನು ಪಡುತ್ತಿದ್ದು ಇದು ಕಾಣದ ಕೈಗಳ ಆಟ ಆಗಿರುವುದರಿಂದ ನೂರಕ್ಕೆ ನೂರರಷ್ಟು ಅಂದುಕೊಂಡ ಫಲಿತಾಂಶ ಸಿಗುತ್ತಿಲ್ಲ.
RBI ಕೂಡ ಈಗ ಇದಕ್ಕೆ ಸಂಬಂಧಿಸಿದಂತೆ ಒಂದು ಹೊಸ ಸೂಚನೆಯನ್ನು ಕೊಟ್ಟು ಎಚ್ಚರಿಸಿದೆ. ಈ ಮೇಲೆ ತಿಳಿಸಿದ ಆಪ್ ಗಳ ಮೂಲಕ ನಾವು ನಮ್ಮ ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ಅವರ ಮೊಬೈಲ್ ಸಂಖ್ಯೆ ಮೂಲಕ ಹಣ ಕಳಿಸುತ್ತೇವೆ. ಸಾಮಾನ್ಯವಾಗಿ ಈ ರೀತಿ ಆದಾಗ ಅದು ತಪ್ಪಾಗುವ ಚಾನ್ಸಸ್ ಕಡಿಮೆ ಇರುತ್ತದೆ.
ಆದರೆ ಆ ಸಂಪರ್ಕದಲ್ಲಿರುವ ವ್ಯಕ್ತಿಯು ಒಂದೊಮ್ಮೆ ಮೊಬೈಲ್ ಸಂಖ್ಯೆ ಬದಲಾಯಿಸಿದ್ದರೆ ಅಥವಾ ಬಹಳ ದಿನಗಳವರೆಗೆ ಆತ ಆ ಮೊಬೈಲ್ ಸಂಖ್ಯೆ ಬಳಸದೆ ಇದ್ದಾಗ ಆ ಮಾಹಿತಿ ಗೊತ್ತಿಲ್ಲದೆ ಹಣ ಕಳಿಸಿದರೆ ಸಮಸ್ಯೆಗಳು ಆಗುವ ಸಾಧ್ಯತೆಗಳು ಇರುತ್ತವೆ. ಇದನ್ನು ಹೊರತುಪಡಿಸಿ ನಾವೆಲ್ಲರೂ ಸ್ಕ್ಯಾನ್ ಮಾಡಿ ಹಣ ಕಳಿಸುತ್ತೇವೆ ಇದರಲ್ಲಿ ಹೆಚ್ಚು ಸೇಫ್ ಇರುತ್ತದೆ.
ಸ್ಕ್ಯಾನ್ ಮಾಡಿದ ವ್ಯಕ್ತಿ ಖಾತೆಗೆ ಹಣ ಹೋಗುತ್ತದೆ ಇದರಲ್ಲಿ ಸಮಸ್ಯೆ ಆಗುವುದು ಕಡಿಮೆ ಆದರೆ ನೇರವಾಗಿ ಬ್ಯಾಂಕ್ ಖಾತೆ ಸಂಖ್ಯೆ ಹಾಕುವ ಮೂಲಕ ಹಣ ವರ್ಗಾವಣೆ ಮಾಡುವ ಆಪ್ಷನ್ ಕೂಡ ಇದೆ. ಇದರಲ್ಲಿ ಗ್ರಾಹಕರು ಅವರದ್ದೇ ಸ್ವಯಂ ಕೃತ್ಯ ಅ’ಪ’ರಾ’ಧ’ದಿಂದ ಹಣ ಕಳೆದುಕೊಳ್ಳುತ್ತಾರೆ. ತಪ್ಪಾದ ಖಾತೆ ಸಂಖ್ಯೆ ಹಾಕಿ ಹಣ ಕಳುಹಿಸಿದಾಗ ಅದು ಅವರೇ ಮಾಡಿದ ತ’ಪ್ಪಾಗಿರುತ್ತದೆ.
ಸಣ್ಣ ಪ್ರಮಾಣದ ಹಣ ಆದರೆ ನಾವು ಮಾಡಿದ ತಪ್ಪಿಗೆ ಶಿ’ಕ್ಷೆ ಎಂದುಕೊಂಡು ಸುಮ್ಮನಾಗಬಹುದು. ಆದರೆ ದೊಡ್ಡ ಮಟ್ಟದ ಹಣವಾಗಿದ್ದರೆ ಖಂಡಿತವಾಗಿಯೂ ಗೊಂದಲಗಳಾಗುತ್ತದೆ, ಅದರ ಬಗ್ಗೆ ಚಿಂತೆ ಆಗುತ್ತದೆ, ಅದನ್ನು ವಾಪಸ್ ಪಡೆಯಲೇಬೇಕಾದ ಅವಶ್ಯಕತೆಯೂ ಇರುತ್ತದೆ.
ಈಗ ಈ ಕುರಿತು RBI ಒಂದು ಸೂಚನೆ ನೀಡಿದೆ. ಈ ರೀತಿ ಹಣದ ವ್ಯವಹಾರ ನಡೆಸುವಾಗ ಗ್ರಾಹಕರು ತಪ್ಪಾದ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದರೆ ಅಥವಾ ತಪ್ಪಾಗಿ ಈ ಪ್ರಕ್ರಿಯೆ ಮಾಡಿ ಹಣ ಕಳೆದುಕೊಂಡರೆ ಅವರೇ ಜವಬ್ದಾರಗುತ್ತದೆ ಎಂದು RBI ಹೇಳಿದೆ.ಯಾವುದೇ ಖಾತೆಗೆ ಹಣ ಹಾಕುವ ಮುನ್ನ, ಅಕೌಂಟ್ ನಂಬರ್, IFSC ಕೋಡ್ ವೆರಿಫೈ ಮಾಡಿಕೊಂಡು ಹಣ ಹಾಕಬೇಕು.
ಅಪ್ಪಿ ತಪ್ಪಿ ಸಂಖ್ಯೆಗಳನ್ನ ತಪ್ಪಾಗಿ ಹಾಕಿ, ಅಪರಿಚಿತರ ಖಾತೆಗೆ ಹಣ ಹಾಕಿದರೆ ಇದರ ಸಂಪೂರ್ಣ ಜವಾಬ್ದಾರಿ ಹಣ ಕಳುಹಿಸಿದ್ದವರದ್ದೇ ಆಗಿರುತ್ತದೆ. ಈ ಸಂದರ್ಭದಲ್ಲಿ ಬ್ಯಾಂಕ್ ನಿಮ್ಮ ಹಣವನ್ನು ತರುವ ಪ್ರಯತ್ನ ಮಾಡುತ್ತದಾದರೂ ಆದರೆ ಇದರ ಸಂಪೂರ್ಣ ಜವಾಬ್ದಾರಿ ಬ್ಯಾಂಕ್ ಹೊರುವುದಿಲ್ಲ ಎಂದು RBI ನಿಯಮ ಹೇಳುತ್ತದೆ.
ಹೀಗಾಗಿ ಇನ್ನು ಮುಂದೆ ಯಾರಿಗಾದರೂ ನೀವು UPI ಪೇಮೆಂಟ್ಸ್ ಮೂಲಕ ಹಣ ಸಂದಾಯ ಮಾಡುತಿದ್ದರೆ, ಎರಡು ಬಾರಿ ಖಚಿತ ಪಡಿಸಿಕೊಂಡು ಹಣ ವರ್ಗಾವಣೆ ಮಾಡುವಂತೆ ಸೂಚಿಸಲಾಗಿದೆ. ಆಕ್ಟಿವ್ ಆಗಿರದ ಖಾತೆಗೆ ಹಣ ಹಾಕಿದರೆ ಹಣ ವಾಪಸ್ಸು ಬರುವ ಸಾಧ್ಯತೆ ಇರುತ್ತದೆ ಆದರೆ ಎಲ್ಲಾ ಸಲವೂ ತಪ್ಪಾಗಿ ಹಾಕಿದ ಖಾತೆಗಳಿಂದ ಹಣ ಹಿಂಪಡೆಯಲು ಸಾಧ್ಯವಿಲ್ಲ.
ಒಂದು ವೇಳೆ ಈ ರೀತಿ ಸಮಸ್ಯೆ ಆದಾಗ ಕೂಡಲೇ ಬ್ಯಾಂಕ್ ಶಾಖೆಗೆ ಬೇಟಿ ಕೊಟ್ಟು ದೂರು ದಾಖಲಿಸಬೇಕು ಅಥವಾ ಬ್ಯಾಂಕ್ ಕಸ್ಟಮರ್ ಕೇರ್ ಗೆ ಕರೆ ಮಾಡಿ ಮಾಹಿತಿ ತಿಳಿಸಿ ನೆರವು ಪಡೆಯಬಹುದು. ಹಣ ವಾಪಸ್ ಬರುವ ಯಾವುದೇ ಗ್ಯಾರಂಟಿ ಇರುವುದಿಲ್ಲ.