ಹೆಂಡತಿ 2ನೇ ಮದುವೆ ಆದ್ರೂ ಕೂಡ ಮೊದಲನೇ ಪತಿ ಜೀವನಾಂಶ ಕೊಡಲೇಬೇಕಾ.?

 

WhatsApp Group Join Now
Telegram Group Join Now

ಮದುವೆ ಆಗಿರುವ ದಂಪತಿಗಳು ಯಾವುದಾದರೂ ಪರಿಸ್ಥಿತಿಯಲ್ಲಿ ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದು ನಿರ್ಧಾರ ಮಾಡಿ ಪರಸ್ಪರ ಬೇರೆ ಜೀವಿಸುತ್ತಿರುವಾಗ ಕಾನೂನು ಮೂಲಕ ವಿ’ಚ್ಛೇ’ದ’ನ ಪಡೆದುಕೊಂಡರೆ ಆಗ ಕೋರ್ಟ್ ನಲ್ಲಿ ಹೆಂಡತಿ ಜೀವನಾಂಶಕ್ಕೆ (Alimony) ಅರ್ಜಿ ಹಾಕುತ್ತಾರೆ. ಪ್ರತಿ ತಿಂಗಳು ಮೇಂಟೆನೆನ್ಸ್ ಗೆ (maintainence) ಹಣ ಕೊಡಬೇಕು ಅಥವಾ ಮಕ್ಕಳಿಗಾಗಿ ಒಂದಿಷ್ಟು ಆಸ್ತಿ ಕೊಡಬೇಕು ಇಲ್ಲವೇ ಪರಮನೆಂಟ್ ಆಗಿ ಒಂದು ಮೊತ್ತದ ಹಣವನ್ನು ಕೊಟ್ಟು ಕೊಟ್ಟು ಸೆಟಲ್ ಮಾಡಬೇಕು ಎಂದು ಕೇಳುತ್ತಾರೆ.

ಆಗ ಕೋರ್ಟ್ ಕೂಡ ಹೆಂಡತಿಯ ಜೀವನ ನಿರ್ವಹಣೆಗೆ ಪ್ರತಿ ತಿಂಗಳು ಹಣ ನೀಡಬೇಕು ಎಂದು ಆರ್ಡರ್ ಮಾಡುತ್ತದೆ. ಆದರೆ ಕೆಲವೊಂದು ಸಮಯದಲ್ಲಿ ಪತಿಯು ಜೀವನಾಂಶ ನೀಡುವುದಕ್ಕೆ ಬಾಧ್ಯನಾಗಿರುವುದಿಲ್ಲ ಅಥವಾ ಪತ್ನಿಯ ಜೀವನಾಂಶ ಪಡೆಯುವುದಕ್ಕೆ ಅರ್ಹಳಾಗಿರುವುದಿಲ್ಲ ಅದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಮನೆ ಕಟ್ಟಲು 5 ಲಕ್ಷ, ಮನೆ ದುರಸ್ತಿಗೆ 3 ಲಕ್ಷ, ಸರ್ಕಾರದಿಂದ ಸಹಾಯಧನ ನೀಡುತ್ತಿದ್ದಾರೆ. ಆಸಕ್ತರು ಅರ್ಜಿ ಸಲ್ಲಿಸಿ ಧನಸಹಾಯ ಪಡೆಯಿರಿ.!

● ಜೀವನಾಂಶ ಪಡೆಯುವುದಕ್ಕೆ ಆರ್ಡರ್ ಪಡೆದ ಮೇಲೆ ಹೆಂಡತಿ ಏನಾದರೂ ಮರು ಮದುವೆ (re marriage) ಆದರೆ ಅಂತಹ ಸಂದರ್ಭದಲ್ಲಿ ಅವಳ ಹೊಣೆಗಾರಿಕೆ ಗಂಡನಿಗೆ ಬರುವುದಿಲ್ಲ , ಹಾಗಾಗಿ ಆತನು ಮೇಂಟೆನೆನ್ಸ್ ಕೊಡುವ ಅವಶ್ಯಕತೆ ಇರುವುದಿಲ್ಲ.
● ಹೆಂಡತಿಗೆ ಅನೈತಿಕ (adultery) ಸಂಬಂಧ ಇದೆ ಎನ್ನುವುದನ್ನು ಪತಿ ಕೋರ್ಟ್ ಮುಂದೆ ಸಾಬೀತುಪಡಿಸಿದರೆ ಆ ಸಂದರ್ಭದಲ್ಲಿ ಕೂಡ ಮೆಂಟೇನೆನ್ಸ್ ಕೊಡುವ ಅಗತ್ಯವಿರುವುದಿಲ್ಲ.

● ಹೆಚ್ಚಿನ ಜನರು ವಿಚ್ಛೇದನಕ್ಕೆ ಗ್ರೌಂಡ್ಸ್ ಗಳೆಂದು ಕರೆಯಲಾಗುವ ಕಾರಣಗಳಾದ ಮಾನಸಿಕ ರೋಗ, ದೈಹಿಕ ರೋಗ, ಅನೈತಿಕ ಸಂಬಂಧ, ದೌರ್ಜನ್ಯ ಈ ರೀತಿ ಸೂಕ್ತ ಕಾರಣ (genuine reason) ನೀಡದೆ ವಿಚ್ಛೇದನ ಪಡೆದಿದ್ದರೆ ಅಂತಹ ಸಂದರ್ಭದಲ್ಲಿ ಕೂಡ ಜೀವನಾಂಶ ನೀಡುವ ಅವಶ್ಯಕತೆ ಇರುವುದಿಲ್ಲ.
● ಹೆಂಡತಿ ಸ್ವಾವಲಂಬಿ (independent wife) ಆಗಿದ್ದು ಆಕೆಗೆ ಆದಾಯದ ಮೂಲ ಇದ್ದರೆ ಅದನ್ನು ಕೋರ್ಟ್ ಗಮನಕ್ಕೆ ತೊಂದರೆ ಪತಿಯು ಜೀವನಾಂಶ ನೀಡುವ ಅವಶ್ಯಕತೆ ಇರುವುದಿಲ್ಲ.

ಸೆಪ್ಟೆಂಬರ್ 30ರ ಒಳಗೆ ಹಳೆ ಬಾಕಿ ಪಾವತಿಸದೆ ಇದ್ದರೆ ಗೃಹಜ್ಯೋತಿ ಉಚಿತ ಕರೆಂಟ್ ಬಂದ್.!

● ಒಂದು ವೇಳೆ ಕೋರ್ಟಿನಲ್ಲಿ ಜೀವನಾಂಶ ನೀಡಬೇಕು ಎಂದು ಆರ್ಡರ್ ಆದಮೇಲೆ ಪ್ರತಿ ತಿಂಗಳನ್ನು ಮೇಂಟೆನೆನ್ಸ್ ನೀಡುತ್ತಿರುವ ಸಂದರ್ಭದಲ್ಲಿ ಪತ್ನಿಯು ಕೆಲಸಕ್ಕೆ ಹೋಗಲು ಶುರು ಮಾಡಿದರೆ ಆಕೆಗೆ ಅವಳ ಜೀವನ ನಿರ್ವಹಣೆಗೆ ಬೇಕಾದಷ್ಟು ಹಣ ಸಂಪಾದನೆ ಮಾಡುವ ಶಕ್ತಿ ಬಂದಲ್ಲಿ ಪತಿಯು ಜೀವನಾಂಶ ನೀಡಬೇಕಾದ ಅವಶ್ಯಕತೆ ಇರುವುದಿಲ್ಲ.

● ಈ ರೀತಿ ಪ್ರತಿ ತಿಂಗಳ ಮೇಂಟೆನೆನ್ಸ್ ಗೆ ಹಣ ನೀಡುತ್ತಿರುವಾಗ ಯಾವುದಾದರೂ ಒಂದು ಸಂದರ್ಭದಲ್ಲಿ ಆತ ಅನಾರೋಗ್ಯಕ್ಕೆ ತುತ್ತಾದರೆ ಅಥವಾ ಕೆಲಸ ಕಳೆದುಕೊಂಡರೆ ಇನ್ಯಾವುದೋ ಕಾರಣದಿಂದಾಗಿ ಆತನ ಪರಿಸ್ಥಿತಿ ಹದಗೆಟ್ಟಾಗ ಜೀವನಾಂಶ ನೀಡುವ ಅವಶ್ಯಕತೆ ಇರುವುದಿಲ್ಲ.

ಕಾನೂನಿನ ಪ್ರಕಾರ ವಿಚ್ಛೇದನ ಇಲ್ಲದೆ ಎರಡನೇ ಮದುವೆ ಆಗಬಹುದ.?

● ಅದೇ ರೀತಿ ಹೆಂಡತಿಗೂ ಕೂಡ ಅವಕಾಶ ಇದೆ. ಕೋರ್ಟ್ ಇಂದ ಇಂತಿಷ್ಟು ಮೇಂಟೆನೆನ್ಸ್ ಪ್ರತಿ ತಿಂಗಳು ನೀಡಬೇಕು ಎಂದು ಆರ್ಡರ್ ಆದಮೇಲೆ ಪತಿಯು ತಾನು ಈ ಹಿಂದೆ ಮಾಡುತ್ತಿದ್ದ ಹಣಕ್ಕಿಂತ ಹೆಚ್ಚಿನ ಹಣವನ್ನು ಸಂಪಾದನೆ ಮಾಡುತ್ತಿರುವುದು ಹೆಂಡತಿಗೆ ತಿಳಿದು ಬಂದಾಗ ಅಥವಾ ಆತ ಇನ್ನೂ ಎತ್ತರದ ಹುದ್ದೆಗೆ ಹೋದಾಗ ಆತನ ಆದಾಯ ಹೆಚ್ಚಾದಾಗ ಅದನ್ನು ಪತ್ನಿಯು ಕೋರ್ಟ್ ಗಮನಕ್ಕೆ ತಂದರೆ ಹೆಚ್ಚಿನ ಜೀವನಾಂಶವನ್ನು ಪಡೆಯಬಹುದು. ಪತಿಯ ಜೀವನ ಶೈಲಿ ಹೇಗಿರುತ್ತದೆ ಅದೇ ಮಟ್ಟದ ಜೀವನಶೈಲಿ ಪಡೆಯಲು ಹೆಂಡತಿ ಅರ್ಹರಾಗಿರುತ್ತಾಳೆ ಎಂದು ಹೇಳಿ ಹೆಚ್ಚಿಗೆ ಜೀವನಾಂಶ ನೀಡುವುದಕ್ಕೆ ಆರ್ಡರ್ ಮಾಡುತ್ತದೆ.

● ಈ ರೀತಿ ಮೆಂಟೇನೆನ್ಸ್ ಸಂಬಂಧಿಸಿದ ಯಾವುದೇ ತಕರಾರು ಇದ್ದರೂ ಅದನ್ನು ಕ್ಯಾನ್ಸಲ್ ಮಾಡಿಸಬಹುದು ಅಥವಾ ಮಾಡರೇಟ್ ಮಾಡಿಸಿ ಜೀವನಾಂಶ ಹೆಚ್ಚಾಗುವಂತೆ ಅಥವಾ ಕಡಿಮೆ ಮಾಡುವಂತೆ ಕೋರ್ಟ್ ಗೆ ಮನವಿ ಸಲ್ಲಿಸಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now