ಗೊರಕೆ ಸಮಸ್ಯೆ ಹೆಚ್ಚಿನ ಜನರನ್ನು ಕಾಡುತ್ತದೆ ಇದು ಸುತ್ತಮುತ್ತ ಇರುವವರಿಗೆ ತೊಂದರೆ ಉಂಟು ಮಾಡುತ್ತದೆ ಕಿರಿಕಿರಿಯಾಗುತ್ತದೆ. ನ್ಯಾಷನಲ್ ಸ್ಲೀಪ್ ಫೌಂಡೇಶನ್ ಪ್ರಕಾರ ಪ್ರತಿ ಮೂರು ಪುರುಷರಲ್ಲಿ ಮತ್ತು ನಾಲ್ಕು ಮಹಿಳೆಯರಲ್ಲಿ ಒಬ್ಬರು ಪ್ರತಿ ರಾತ್ರಿ ಗೊರಕೆ ಹೊಡೆಯುತ್ತಾರೆ. ಗೊರಕೆಯನ್ನು ಸಾಮಾನ್ಯವಾಗಿ ಸಣ್ಣ ಸಮಸ್ಯೆಯೆಂದು ಕಡೆಗಣಿಸಲಾಗಿದೆ, ಆದರೆ ಅದರ ಬಗ್ಗೆ ಗಮನ ನೀಡುವುದು ಮುಖ್ಯವಾಗುತ್ತದೆ. ಈ ಗೊರಕೆ ಸಮಸ್ಯೆ ವಿವಿಧ ಕಾರಣಗಳಿಂದ ಬರುತ್ತದೆ ಬೊಜ್ಜು ಅಥವಾ ಹೆಚ್ಚಿದ ದೇಹದ ತೂಕ ಗೊರಕೆಯ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಹೇಳಲಾಗುತ್ತದೆ
ಜನರು ನಿದ್ದೆಯಲ್ಲಿದ್ದಾಗ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ ಅನಿಯಮಿತ ಉಸಿರಾಟದ ಜೊತೆಯಲ್ಲಿ ಗೊರಕೆ ಹೃದಯ ರಕ್ತನಾಳದ ಕಾಯಿಲೆಯ ಅಪಾಯದ ಸೂಚನೆ ಎಂದು ತಜ್ಞರು ಹೇಳುತ್ತಾರೆ.
ಸ್ಲೀಪ್ ಅಪ್ನಿಯಾ ತೊಂದರೆಯಿಂದ ಬಳಲುತ್ತಿದ್ದರೆ, ಇದು ಕೂಡ ಗೊರಕೆ ಸಮಸ್ಯೆ ಉಂಟಾಗಲು ಒಂದು ಕಾರಣ. ಸ್ಲೀಪ್ ಅಪ್ನಿಯಾ ಎನ್ನುವುದು ನಿದ್ರೆಯ ರೋಗವಾಗಿದ್ದು, ಇದರಲ್ಲಿ ಉಸಿರಾಟವು ಪದೇ ಪದೇ ನಿಲ್ಲುತ್ತದೆ ಮತ್ತು ಮತ್ತೆ ಆರಂಭವಾಗುತ್ತದೆ. ನಿಮಗೂ ಸಹ ಗೊರಕೆಯ ಸಮಸ್ಯೆಯಿದ್ದಲ್ಲಿ ಪರಿಹಾರ ಮಾಡಿಕೊಳ್ಳುವುದು ಉತ್ತಮ. ಇನ್ನೊಂದು ಅಂಶವೆಂದರೆ ಗೊರಕೆ ಸಮಸ್ಯೆಗೆ ಮನೆಯಲ್ಲಿಯೆ ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳಬಹುದು. ಗೊರಕೆ ಬಂದರೆ ಏನು ಮಹಾ ಇದರಿಂದ ಹೆಚ್ಚಿನದಾಗಿ ಪಕ್ಕದಲ್ಲಿ ಮಲಗುವವರ ನಿದ್ರೆ ಹಾಳಾಗಬಹುದು ಹೊರೆತು ಆರೋಗ್ಯಕ್ಕೆ ಏನು ಅಪಾಯವಿಲ್ಲ ಅಂತ ಎಲ್ಲರೂ ಭಾವಿಸುತ್ತಾರೆ.
ಆದರೆ ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಸಂಶೋಧನಾ ವರದಿಯೊಂದು ಹೇಳಿದೆ ಗೊರಕೆಯು ಭವಿಷ್ಯದ ಆರೋಗ್ಯದ ಸೂಚಕವಾಗಿದೆ. ಇನ್ನು ನಿದ್ದೆ ಯು ನಮ್ಮ ಕೆಲಸ ಶಕ್ತಿ ಮಾನಸಿಕ ಸಾಮರ್ಥ್ಯ ಸಾಮಾನ್ಯದ ಆರೋಗ್ಯದ ಮೇಲೆ ಪ್ರಭಾವ ಬೀರುವ ಜೀವನದ ಪ್ರಮುಖ ಭಾಗವಾಗಿದೆ ಅಂತ ನ್ಯೂಯಾರ್ಕ್ನ ವಿಶ್ವವಿದ್ಯಾಲಯ ನಿಲಯದ ಪ್ರಮುಖ ಸಂಶೋಧಕಿ ಹೇಳಿಕೊಂಡಿದ್ದಾರೆ. ನಿದ್ರೆಯು ಆರೋಗ್ಯಕರ ಆರೋಗ್ಯಕರವಾದ ನಿದ್ರೆ ಅಭ್ಯಾಸ ಒಟ್ಟಾರೆ ಜೀವನವನ್ನು ಉತ್ತಮ ಆರೋಗ್ಯವನ್ನು ಉತ್ತೇಜಿಸುತ್ತದೆ ಅಂತ ಅವರು ಹೇಳಿದ್ದಾರೆ ಇನ್ನು ಈ ಸಂಶೋಧನೆಯ ಅಂತಿಮ ತೀರ್ಮಾನಕ್ಕೆ ಬರುವ ಮುನ್ನ ನಿದ್ದೆಯ ಬಗ್ಗೆ ಹೆಚ್ಚು ಸಾಮಾನ್ಯವಾದ 20 ಊಹೆಗಳನ್ನು ಗುರುತಿಸಲು ಸಂಶೋಧಕರು ಎಂಟು ಸಾವಿರಕ್ಕಿಂತ ಹೆಚ್ಚು ಜಾಲತಾಣ ವೆಬ್ಸೈಟ್ಗಳನ್ನು ಪರಿಶೀಲಿಸಿದ್ದಾರೆ. ಗೊರಕೆ ಇಂದ ಆಗುವ ಅಪಾಯ ಹಾಗೂ ಸತ್ಯದ ಬಗ್ಗೆ ವೈಜ್ಞಾನಿಕ ಸಾಕ್ಷಿಗಳ ಆಧಾರದ ಮೇಲೆ ಈ ವರದಿಯನ್ನು ತಯಾರು ಮಾಡಲಾಗಿದೆ ಅಂತೆ.
ಇನ್ನು ಗೊರಕೆ ಯು ನಿರುಪದ್ರವ ವಾಗಿದ್ದರೂ ಕೂಡ ಇದು ಗಂಭೀರವಾದ ನಿದ್ರಾಹೀನತೆಗೆ ಕಾರಣವಾಗಲಿದೆ ಅಂತ ಅಧ್ಯಯನ ಹೇಳಿದೆ. ಇನ್ನು ಈ ನಿದ್ದೆ ವರ್ತನೆಯು ಹೃದಯಾಘಾತ ಅಥವಾ ಇತರ ಅಸ್ವಸ್ಥತೆಗಳಿಗೆ ಕಾರಣವಾಗಬಹುದು ಅಂತ ಅವರು ಹೇಳುತ್ತಾರೆ. ಅತಿಯಾದ ಗೊರಕೆ ಸಮಸ್ಯೆ ಇದ್ದರೆ ಅಂತಹ ವ್ಯಕ್ತಿಗಳು ವೈದ್ಯರ ಸಲಹೆ ಪಡೆಯಬೇಕು ಅಂತ ಸಂಶೋಧಕರು ತಿಳಿಸಿದ್ದಾರೆ. ಇನ್ನು ನಂಬಿಕೆಯ ಹೊರತಾಗಿಯೂ ಮಲಗುವ ಮುನ್ನ ಆಲ್ಕೊಹಾಲ್ಯುಕ್ತ ಪಾನೀಯ ಗಳನ್ನು ಸೇವಿಸುವುದರಿಂದ ನಿದ್ರೆಗೆ ಭಂಗ ಬರುವ ಸಾಧ್ಯತೆ ಇದೆ. ತೂಕ ಹೆಚ್ಚಿದ ನಂತರ ಗೊರಕೆ ಸಮಸ್ಯೆ ಕಾಣಿಸಿಕೊಂಡರೆ, ತೂಕ ಇಳಿಸುವುದು ಉತ್ತಮ. ನೀವು ನಿಮ್ಮ ಎತ್ತರ ಮತ್ತು ವಯಸ್ಸಿಗೆ ತಕ್ಕಷ್ಟು ತೂಕವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಹೆಚ್ಚು ತೂಕವಿರುವ ಜನರು ಕೊಬ್ಬಿನ ಅಂಶವನ್ನು ಹೊಂದಿರುತ್ತಾರೆ. ಇದು ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ. ನೀವು ತೂಕ ಕಡಿಮೆ ಮಾಡಿಕೊಂಡರೆ ಗೊರಕೆಯ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಕೆಲವರಿಗಂತೂ ತೂಕ ಕಡಿಮೆ ಆದ ನಂತರ ಗೊರಕೆ ಸಮಸ್ಯೆ ಪರಿಹಾರವಾಗುತ್ತದೆ.
ಕೆಲವರು ಮಲಗಿರುವಾಗ ಅಥವಾ ಅವರು ಬೆನ್ನು ಕೆಳಗೆ ಮಾಡಿ ಮಲಗಿದಾಗ ಗೊರಕೆ ಹೆಚ್ಚಾಗುತ್ತದೆ. ಬೆನ್ನು ಕೆಳಗೆ ಮಾಡಿ ಮಲಗಿರುವಾಗ, ಶ್ವಾಸನಾಳದ ಸುತ್ತಲಿನ ಅಂಗಾಂಶಗಳನ್ನು ಗುರುತ್ವಾಕರ್ಷಣೆಯಿಂದ ಕೆಳಕ್ಕೆ ಎಳೆದು ಕಿರಿದಾಗುವಂತೆ ಮಾಡುತ್ತದೆ. ಹಾಗಾಗಿ ಮಲಗುವ ಭಂಗಿಗಳನ್ನು ಬದಲಾಯಿಸಿ ನೋಡಿ. ಕೆಲವರು ಬಲ ಭಾಗದಲ್ಲಿ ತಿರುಗಿ ಮಲಗಿದರೆ ಗೊರಕೆ ಹೊಡೆಯುವುದಿಲ್ಲಮೂಗು ಕಟ್ಟಿದ್ದರೆ ಉಸಿರಾಟದ ವ್ಯತ್ಯಾಸವಾಗಿ ಗೊರಕೆ ಹೆಚ್ಚಾಗುತ್ತದೆ. ಹಾಗಾಗಿ ಮೂಗಿನ ಹೊಳ್ಳೆಗಳು ಮುಚ್ಚಬಾರದು. ಮೂಗು ಮುಚ್ಚಿದಾಗ ಗಾಳಿಯು ಹೆಚ್ಚು ವೇಗವಾಗಿ ಚಲಿಸುತ್ತದೆ, ಇದು ಗೊರಕೆಗೆ ಕಾರಣವಾಗುತ್ತದೆ. ಬಿಸಿ ಎಣ್ಣೆ ಮಸಾಜ್ ಅಥವಾ ಮೂಗಿಗೆ ಎಣ್ಣೆಯ ಹನಿಗಳನ್ನು ಹಾಕಿ ಮೂಗಿನಲ್ಲಿರುವ ಅಡೆತಡೆಗಳನ್ನು ತೆರೆಯಬಹುದು. ಅಲ್ಲದೆ, ಮಲಗುವ ಮುನ್ನ ಬಿಸಿ ಸ್ನಾನವು ಸಾಕಷ್ಟು ಪ್ರಯೋಜನಕಾರಿಯಾಗಿದೆ.