ರಾಜ್ಯದಲ್ಲಿ ಸರ್ಕಾರ ತನ್ನ 5 ಗ್ಯಾರಂಟಿಗಳ ಜಾರಿಗೆ ತಯಾರಿ ನಡೆಸುತ್ತಿದ್ದರೂ ಕೂಡ ಇತರ ಜನೋಪಯೋಗಿ ಯೋಜನೆಗಳಿಗೂ ಚಿಂತನೆ ನಡೆಸಿ, ಅವುಗಳ ಜಾರಿಗೂ ತಯಾರಿ ನಡೆಸಿದೆ. ಅಂತೆಯೇ ಇದೀಗ ಸರ್ಕಾರವು ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.
ಹೌದು, ಶಕ್ತಿ ಯೋಜನೆ(Shakthi yojane)ಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿ, ಗೃಹ ಲಕ್ಷ್ಮೀ(Gruha lakshmi) ಯೋಜನೆಯಡಿ ಮನೆ ಯಜಮಾನಿಗೆ ಹಣ ನೀಡಲು ತಯಾರಿ ನಡೆಸುತ್ತಿರುವ ನಡುವೆಯೇ ಸರ್ಕಾರವು ರಾಜ್ಯದ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದ್ದು, ಶೀಘ್ರದಲ್ಲೇ ರೈತರ ಪಂಪ್ ಸೆಟ್(Pump set) ಗೆ ಸೌರವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಜಾರಿಯಾಗಲಿದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿದ್ದಾರೆ.
ಹೌದು, ರಾಜ್ಯ ಸರಕಾರವು ರಾಜ್ಯದ ಜನತೆಗೆ ‘ಗೃಹಜ್ಯೋತಿ’ 200 ಯೂನಿಟ್ ಉಚಿತ ವಿದ್ಯುತ್ ಒದಗಿಸಿದ ಬೆನ್ನಲ್ಲೇ ಇದೀಗ ರೈತರ ಪಂಪ್ಸೆಟ್ಗಳಿಗೆ ಸೌರವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಜಾರಿಗೊಳಿಸುವ ತಯಾರಿಯಲ್ಲಿದೆ. ಶೀಘ್ರದಲ್ಲೇ ರೈತರ ಪಂಪ್ಸೆಟ್ಗಳಿಗೆ ಸೌರವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಯನ್ನು ವ್ಯವಸ್ಥಿತವಾಗಿ ಜಾರಿಯಾಗಲಿದೆ ಎಂದು ಇಂಧನ ಸಚಿವ ಕೆ. ಜೆ. ಜಾರ್ಜ್ ಹೇಳಿದರು.
ಅಂದಹಾಗೆ ಸದ್ಯ ಬೆಂಗಳೂರಿನ ವಿಧಾನಸೌಧದಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುತ್ತಿದ್ದು, ಈ ಕಲಾಪದ ವೇಳೆ ಮಾತನಾಡಿದ ಸಚಿವರು, ʻಶೀಘ್ರದಲ್ಲೇ ರೈತರ ಪಂಪ್ ಸೆಟ್ ಗೆ ಸೌರವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಜಾರಿಯಾಗಲಿದೆ , ರೈತರು ಪಂಪ್ ಸೆಟ್ ಗಳಿಗೆ ಸೌರ್ ವಿದ್ಯುತ್ ಕಲ್ಪಿಸಿಕೊಳ್ಳಲು ಸುಮಾರು 4.5 ಲಕ್ಷ ರೂ ಖರ್ಚಾಗಬಹುದು. ಆದರೆ, ಇದರಲ್ಲಿ ಸುಮಾರು 3.5 ಲಕ್ಷದಷ್ಟು ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರವೇ ನೀಡುತ್ತದೆʼ ಎಂದಿದ್ದಾರೆ.
3.4 ಲಕ್ಷ ರೂಪಾಯಿ ಸಬ್ಸಿಡಿ
ಕಲಾಪದ ವೇಳೆ ಮಾತನಾಡಿದ ಸಚಿವರು ಶೀಘ್ರದಲ್ಲೇ ರೈತರ ಪಂಪ್ಸೆಟ್ಗಳಿಗೆ ಸೌರವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಜಾರಿಯಾಗಲಿದೆ. ರೈತರು ಪಂಪ್ಸೆಟ್ಗಳಿಗೆ ಸೌರ್ ವಿದ್ಯುತ್ ಕಲ್ಪಿಸಿಕೊಳ್ಳಲು ಸುಮಾರು 4.5 ಲಕ್ಷ ರೂಪಾಯಿ ಖರ್ಚಾಗಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರ 3.5 ಲಕ್ಷ ರೂಪಾಯಿ ಸಹಾಯಧನ ದೊರೆಯಲಿದೆ.
16,000 ಕೋಟಿ ರೂಪಾಯಿ ಸಹಾಯಧನ
ಅಲ್ಲದೆ ಉಳಿದ 1 ಲಕ್ಷವನ್ನು ಬ್ಯಾಂಕ್ ಮೂಲಕ ನೀಡುವ ಸೌಲಭ್ಯ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. ನಮ್ಮ ಸರ್ಕಾರ ರೈತರ ಕೃಷಿ ಪಂಪ್ಸೆಟ್ಗಳಿಗೆ ಸಹಾಯ ಧನದ ರೂಪದಲ್ಲಿ 16 ಸಾವಿರ ಕೋಟಿ ರೂ. ನೀಡಲು ಚಿಂತನೆ ನಡೆಸಿದೆ. ಅಲ್ಲದೆ ಇದನ್ನು ಅತಿ ಶೀಘ್ರದಲ್ಲಿ ಜಾರಿ ಮಾಡುತ್ತೇವೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿದರು.
ರೈತರ ಕರೆಂಟ್ ಸಮಸ್ಯೆಗಳಿಗೆ ಪರಿಹಾರವಾಗಿ ಕೇಂದ್ರ ಸರಕಾರದ ಪಿಎಂ-ಕುಸುಮ್ (ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್) ಯೋಜನೆ ಜಾರಿಯಲ್ಲಿದ್ದು, ಹಿಂದಿನ ಬಿಜೆಪಿ ಸರಕಾರದಲ್ಲಿಯೇ ಸದರಿ ಯೋಜನೆ ರಾಜ್ಯದಲ್ಲಿ ವ್ಯವಸ್ಥಿತವಾಗಿ ಅನುಷ್ಠಾನ ಮಾಡುವ ಸಿದ್ಧತೆ ನಡೆದಿತ್ತು.
‘ಶಿರಾ ವಿಧಾನಸಭಾ ಕ್ಷೇತ್ರದಲ್ಲಿ 1,560 ರೈತರು ಮೂರು ವರ್ಷಗಳಿಂದ ಕಾಯುತ್ತಿದ್ದಾರೆ. ಈವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಸೌರ ವಿದ್ಯುತ್ ಚಾಲಿತ ಪಂಪ್ ವಿತರಣೆ ಸೂಕ್ತ’ ಎಂದು ಜಯಚಂದ್ರ ಸಲಹೆ ನೀಡಿದರು.
ಬಿಜೆಪಿಯ ಎನ್. ಚಂದ್ರಪ್ಪ ಮಾತನಾಡಿ, ‘ಸೌರ ವಿದ್ಯುತ್ ಚಾಲಿತ ಪಂಪ್ ನೀಡಿದರೆ 300 ರಿಂದ 400 ಅಡಿ ಆಳದವರೆಗಿನ ಕೊಳವೆ ಬಾವಿಗಳಿಂದ ಮಾತ್ರ ನೀರು ಎತ್ತಬಹುದು. ಇನ್ನೂ ಆಳದ ಕೊಳವೆ ಬಾವಿಗಳಿಗೆ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಸಂಪರ್ಕ ಬೇಕಾಗುತ್ತದೆ’ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘150 ಎಕರೆಯಷ್ಟು ಜಮೀನು ಲಭ್ಯವಾದರೆ 50 ಮೆಗಾ ವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಸ್ಥಾಪಿಸಿ ನೀರಾವರಿ ಪಂಪ್ಸೆಟ್ಗಳಿಗೆ ಗುಣಮಟ್ಟದ ವಿದ್ಯುತ್ ಒದಗಿಸಬಹುದು’ ಎಂದು ಹೇಳಿದರು.