ನಿಮ್ಮ ಹೆಸರಿನಲ್ಲಿ ಸಿಮ್ ಖರೀದಿಸಿ ಬೇರೆಯವರು ಬಳಸುತ್ತಿದ್ದಾರ. ಇಲ್ಲವಾ ಚೆಕ್ ಮಾಡುವ ಸುಲಭ ವಿಧಾನ.!

 

WhatsApp Group Join Now
Telegram Group Join Now

ಅಪರಾಧ ಪ್ರಕರಣಗಳನ್ನು ಭೇದಿಸಲು ಪೊಲೀಸರು ಮೊದಲು ಹುಡುಕುವ ದಾಖಲೆಯೇ ಸಿಮ್ ನೆಟ್ವರ್ಕ್. ಸಿಮ್ ನೆಟ್ವರ್ಕ್ ಮೂಲಕ ಅನೇಕ ಕೇಸ್ ಗಳನ್ನು ಪೊಲೀಸ್ ಇಲಾಖೆ ಸಾಲ್ವ್ ಮಾಡಿದೆ. ಹಾಗೆ ಅನೇಕ ಪ್ರಕರಣಗಳನ್ನು ಬೆನ್ನಟ್ಟಿ ಹೋದಾಗ ಸಿಮ್ ಕಾರ್ಡ್ ಮಾಹಿತಿಯಲ್ಲಿರುವ ವ್ಯಕ್ತಿಯ ಬೇರೆ ಅದನ್ನು ಬಳಸುವ ವ್ಯಕ್ತಿಯೇ ಬೇರೆ ಆಗಿರುತ್ತಾರೆ. ಅಪರಾಧ ನಡೆದ ಕ್ಷೇತ್ರದಲ್ಲಿದ್ದ ಸಿಮ್ ನೆಟ್ವರ್ಕ್ ಕೂಡ ಒಂದು ಎವಿಡೆನ್ಸ್ ಆಗುತ್ತದೆ.

ಈ ರೀತಿ ಅನಾವಶ್ಯಕ ಸಮಸ್ಯೆಗಳಿಂದ ಪಾರಾಗಬೇಕು ಎಂದರೆ ನಾವು ನಮ್ಮ ಸಿಮ್ ಗಳು ಬೇರೆಯವರಿಗೆ ಸಿಗದಂತೆ ಹಾಗೂ ನಮ್ಮ ಹೆಸರಿನಲ್ಲಿ ಬೇರೆ ಯಾರು ಸಿಮ್ ಕಾರ್ಡ್ ಖರೀದಿಸಿದಂತೆ ಎಚ್ಚರಿಕೆವಹಿಸಿ ನೋಡಿಕೊಳ್ಳಬೇಕು. ಇತ್ತೀಚಿಗೆ ಸಿಮ್ ಕಾರ್ಡ್ ಖರೀದಿ ವಿಷಯದಲ್ಲಿ ಕೂಡ ಸಾಕಷ್ಟು ಕಟ್ಟುನಿಟ್ಟಿನ ನಿಯಮಗಳು ಜಾರಿಗೆ ಬಂದಿವೆ ಇದರ ಹೊರತಾಗಿಯೂ ಅಪರಾಧಗಳಿಗೆ ಅಥವಾ ಅವ್ಯವಹಾರಗಳಿಗೆ ಕಡಿವಾಣ ಬಿದ್ದಿಲ್ಲ. ನಮ್ಮ ಮಾಹಿತಿಯನ್ನು ಬಳಸಿಕೊಂಡು ಅಪರಾಧಿ ಚಟುವಟಿಕೆಗಳಿಗೆ ನಮ್ಮ ಹೆಸರಿನ ಸಿಮ್ ಕಾರ್ಡ್ ಬಳಸುವ ವರ್ಗವು ಸಹ ಸಾಕಷ್ಟು ಇದೆ.

ಈ ಬಗ್ಗೆ ಜನಸಾಮಾನ್ಯರೇ ಜಾಗೃತರಾಗಬೇಕು. ನಮ್ಮ ಹೆಸರಿನಲ್ಲಿ ನಮ್ಮ ದಾಖಲೆಯನ್ನು ಬಳಸಿಕೊಂಡು ನಮಗೆ ತಿಳಿದಂತೆ ಮತ್ತೆ ಯಾರಾದರೂ ನಮ್ಮ ಹೆಸರಿನ ಸಿಮ್ ಕಾರ್ಡ್ ಬಳಸುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕು. ಅದಕ್ಕಾಗಿ ಒಂದು ಉಪಾಯ ಕೂಡ ಇದೆ. ದೂರ ಸಂಪರ್ಕ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಮೂಲಕ ನೀವು ನಿಮ್ಮ ಹೆಸರಲ್ಲಿ ಎಷ್ಟು ಸಿಮ್ ಗಳು ವರ್ಕ್ ಆಗ್ತಿದೆ ಎಂದು ತಿಳಿದುಕೊಳ್ಳಬಹುದು.

ಸಿಮ್ ಕಾರ್ಡ್ ಖರೀದಿಸುವುದಕ್ಕೆ ಆಧಾರ್ ಕಾರ್ಡ್ ಒಂದು ಮುಖ್ಯ ದಾಖಲೆ ಆಗಿರುವುದರಿಂದ ನಿಮ್ಮ ಆಧಾರ್ ಸಂಖ್ಯೆ ಎಷ್ಟು ಸಿಮ್ ಕಾರ್ಡ್ ನಂಬರ್ಗಳು ಆಕ್ಟಿವ್ ಆಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು. ಮತ್ತು ಇದೇ ವಿಧಾನದಿಂದ ನೀವು ಅಲ್ಲಿಯೇ ಅವುಗಳ ಬಗ್ಗೆ ರಿಪೋರ್ಟ್ ಕೂಡ ಮಾಡಬಹುದು. ಅದನ್ನು ತಿಳಿದುಕೊಳ್ಳಲು ಈ ವಿಧಾನಗಳನ್ನು ಪಾಲಿಸಿ.

● ಮೊದಲಿಗೆ ದೂರಸಂಪರ್ಕ ಇಲಾಖೆಯ TAFCOP portal ಗೆ, ಲಾಗಿನ್ ಆಗಬೇಕು. ವೆಬ್ ಸೈಟ್ ಲಿಂಕ್ ಮಾಡಿ ಓಪನ್ ಆದ ಪೇಜ್ ಅಲ್ಲಿ ಕಾಣುವ ಮೊಬೈಲ್ ನಂಬರ್ ಎನ್ನುವ ಆಪ್ಷನಲ್ಲಿ ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಅನ್ನು ನಮೂದಿಸಿ, OTPಗೆ ರಿಕ್ವೆಸ್ಟ್ ಕೊಟ್ಟರೆ ನಿಮ್ಮ ಮೊಬೈಲ್ ನಂಬರ್ ಗೆ OTP ಬರುತ್ತದೆ. ಅದನ್ನು ಸಬ್ಮಿಟ್ ಮಾಡುವ ಮೂಲಕ ಲಾಗಿನ್ ಆಗಬಹುದು.

● ನಂತರ ಅಲ್ಲಿ ಕಾಣುವ ವಾಲಿಡೇಟ್ ಎನ್ನುವ ಆಪ್ಷನ್ ಅನ್ನು ಕ್ಲಿಕ್ ಮಾಡಿದಾಗ ನಿಮ್ಮ ಆಧಾರ್ ಕಾರ್ಡ್ ಜೊತೆ ನೋಂದಾಯಿಸಲ್ಪಟ್ಟ ಎಲ್ಲ ಸಿಮ್ ಕಾರ್ಡ್ ನಂಬರ್ ಗಳು ಕೂಡ ಕಾಣಿಸುತ್ತವೆ. ಅವುಗಳಲ್ಲಿ ನಿಮಗೆ ತಿಳಿದಿರುವ ಸಿಮ್ ಕಾರ್ಡ್ ನಂಬರ್ ಗಳು ಹಾಗೂ ನಿಮಗೆ ಗೊತ್ತಿಲ್ಲದೇ ಖರೀದಿಸಿರುವ ನಂಬರ್ ಗಳ ವಿವರವನ್ನು ನೋಡಬಹುದು.

ಗ್ರಾಹಕರು ಆಧಾರ್ ಕಾರ್ಡ್ ಕೊಟ್ಟು ಸಿಮ್ ಕಾರ್ಡ್ ಅನ್ನು ಖರೀದಿಸುವುದು ಉತ್ತಮ. ವೋಟರ್ ಐಡಿ ಪಾನ್ ಕಾರ್ಡ್ ಗಳ ಮೂಲಕ ಸಿಮ್ ಕಾರ್ಡ್ ಗಳ ಖರೀದಿಯನ್ನು ತಪ್ಪಿಸಿ, ಜೊತೆಗೆ ಲೋಕಲ್ ಅಂಗಡಿಗಳಲ್ಲಿ ಸಿಮ್ ಗಳನ್ನು ಖರೀದಿಸುವ ಬದಲು ಅಧಿಕೃತ ನೆಟ್ವರ್ಕ್ ಕಂಪನಿಗಳ ಶಾಪ್ ಗಳಿಗೆ ಭೇಟಿಕೊಟ್ಟು ಹೊಸ ಸಿಮ್ ಕಾರ್ಡ್ ಖರೀದಿಸುವುದು ಒಳ್ಳೆಯದು.

ಇತ್ತೀಚಿಗೆ ಸಿಮ್ ಕಾರ್ಡ್ ಅಕ್ಟಿವೇಟ್ ಮಾಡಲು ನೆಟ್ವರ್ಕ್ ಕಂಪನಿಯಿಂದ ಕರೆ ಬರುವುದರಿಂದ ಸ್ವಲ್ಪ ಮಟ್ಟಕ್ಕೆ ಕಡಿವಾಣ ಬಿದ್ದಿದೆ. ಒಂದು ವೇಳೆ ನೀವು ಯಾವುದೇ ಸಂದರ್ಭದಲ್ಲಿ ನಿಮ್ಮ ಮಾಹಿತಿಗಳನ್ನು ಕೊಡುವ ಸಂದರ್ಭ ಬಂದಾಗ ದಾಖಲೆಗಳ ಮೇಲೆ ಉದ್ದೇಶವನ್ನು ಬರೆದು ಸಹಿ ಮಾಡಿಕೊಡಿ. ಇದರಿಂದ ಕೂಡ ವ್ಯವಹಾರ ಆಗುವುದು ತಪ್ಪುತ್ತದೆ. ಈ ಉಪಯುಕ್ತ ಮಾಹಿತಿ ಶೇರ್ ಮಾಡಿ ಎಲ್ಲರಿಗೂ ವಿಷಯ ತಿಳಿದಂತೆ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now