ಸೋನು ಶ್ರೀನಿವಾಸ್ ಗೌಡ ಅವರು ತಿಂಗಳಿಗೆ ಎಷ್ಟು ಸಂಪಾದನೆ ಮಾಡುತ್ತಾರೆ ಎಂದು ಯಾರು ಸಹ ಊಹಿಸಲು ಸಾಧ್ಯವಿಲ್ಲ ಕೇವಲ ಸೋಶಿಯಲ್ ಮೀಡಿಯಾ ದಿಂದ ಬೆಳಕಿಗೆ ಬಂದಂತಹ ಹುಡುಗಿ ಇಷ್ಟರ ಮಟ್ಟಿಗೆ ತಿಂಗಳಿಗೆ ಸಂಪಾದನೆ ಮಾಡುತ್ತಿದ್ದಾರೆ ಎಂದು ಕೇಳಿದರೆ ಎಂತಹವರಿಗೂ ಸಹ ಆಶ್ಚರ್ಯ ಉಂಟಾಗುವುದು ಖಂಡಿತ. ಕೆಲವೊಂದು ರೀಲ್ಸ್ ಮಾಡುವ ಮುಖಾಂತರ ತನ್ನ ಪ್ರತಿಭೆಯನ್ನು ತೋರಿಸಿಕೊಂಡಂತಹ ಸೋನು ಗೌಡ ಅವರು ನಂತರದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು ಹಾಗೆಯೆ ಹೊಸ ಪ್ರಾಡಕ್ಟ್ಸ್ ಗಳನ್ನು ಪ್ರಮೋಷನ್ ಮಾಡುವ ಮುಖಾಂತರ ಒಂದಷ್ಟು ಹಣವನ್ನು ಇವರು ಸಂಪಾದನೆ ಮಾಡುತ್ತಿದ್ದರು. ಸಾಕಷ್ಟು ಜನರು ಸೋನು ಶ್ರೀನಿವಾಸ್ ಗೌಡ ಅವರ ಮೇಲೆ ನೆಗೆಟಿವ್ ಆಗಿ ಕಮೆಂಟ್ಸ್ ಗಳನ್ನು ಮಾಡುತ್ತಾರೆ.
ಬಿಗ್ ಬಾಸ್ ಓಟಿಪಿಯಲ್ಲಿ ಸ್ಪರ್ಧಿಸಿದ ನಂತರ ಸಾಕಷ್ಟು ಜನರು ಇವರ ಮೇಲೆ ಕೆಂಡಮಂಡಲ ಕಾರಿದ್ದಾರೆ. ಒಂದಷ್ಟು ಜನರು ಸ್ಪರ್ಧೆಯಿಂದ ಹೊರಹಾಕಬೇಕು ಎಂದು ಸಹ ಹೇಳಿದ್ದರು ಆದರೆ ಇದ್ಯಾವುದಕ್ಕೂ ಚಾನೆಲ್ ತಲೆಕೆಡಿಸಿಕೊಳ್ಳಲಿಲ್ಲ ಸೋನು ಶ್ರೀನಿವಾಸ ಗೌಡ ಅವರು ಫೈನಲ್ ತನಕ ಬಂದು ನಂತರದಲ್ಲಿ ಇದೀಗ ಎಲಿಮಿನೇಟ್ ಆಗಿದ್ದಾರೆ. ಯಾರೇ ಇವರ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದರು ತಹ ಇವರು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ತಮ್ಮಂತೆ ತಾವು ಇರುತ್ತಾರೆ ಹಾಗೆ ತಮ್ಮ ಮನಸ್ಸಿಗೆ ಏನು ಅನ್ನಿಸುತ್ತಿದೆಯೋ ಅದನ್ನೇ ಮಾಡುತ್ತಾರೆ ಇತರರ ಬಗ್ಗೆ ಏನನ್ನು ಸಹ ಇವರು ಯೋಚನೆ ಮಾಡುವುದಿಲ್ಲ ಹಾಗೆಯೇ ತಮ್ಮ ಮುಂದೆ ಇರುವವರಿಗೆ ತಮ್ಮ ಮನಸ್ಸಿನಲ್ಲಿ ಇದ್ದದ್ದನ್ನು ನೇರವಾಗಿ ಹೇಳುತ್ತಾರೆ ಯಾವುದನ್ನು ಇವರು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ.
ಒಂದಷ್ಟು ಜನ ಇವರ ನೇರ ಮಾತನ್ನು ನೋಡಿದರೆ ಇಷ್ಟವಾಗುವುದಿಲ್ಲ ಮನಸ್ಸಿಗೆ ತೋಚಿದ ಹಾಗೆ ಮಾತನಾಡುತ್ತಾರೆ ಹಾಗೆಯೇ ಯಾವುದನ್ನು ಸಹ ಯೋಚಿಸಿ ಮಾತನಾಡುವುದಿಲ್ಲ, ಮಾತಿನಲ್ಲಿ ಪ್ರಜ್ಞೆ ಇಲ್ಲ ಎಂದು ಹಲವಾರು ಜನರು ಹೇಳುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಅವರು ರಾಕೇಶ್ ಅಡಿಗ ಅವರೊಂದಿಗೆ ತುಂಬಾ ಅನ್ಯೂನ್ಯವಾಗಿ ಇದ್ದರು ಇವರಿಬ್ಬರನ್ನು ನೋಡಿದಂತಹ ನೆಟ್ಟಿಗರು ಈ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳುತ್ತಿದ್ದರು ಆದರೆ ಹೊರಗೆ ಬಂದ ನಂತರ ನಮ್ಮ ಮಧ್ಯೆ ಯಾವುದೇ ರೀತಿಯಾದಂತಹ ಸಂಬಂಧ ಇಲ್ಲ ಕೇವಲ ಸ್ನೇಹಿತರು ಎಂದು ಸ್ವತಃ ಹೇಳಿಕೊಂಡಿದ್ದಾರೆ. ಇನ್ನು ಸೋನು ಶ್ರೀನಿವಾಸ ಗೌಡ ಅವರ ಸಂಪಾದನೆಯ ಬಗ್ಗೆ ನೋಡುವುದಾದರೆ ಇವರು ತಿಂಗಳಿಗೆ 3 ಲಕ್ಷ ರೂಪಾಯಿಗಳನ್ನು ದುಡಿಯುವುದಾಗಿ ಹೇಳಿಕೊಂಡಿದ್ದಾರೆ.
ಈ ಒಂದು ವಿಚಾರವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿರುವಂತಹ ಸೋನು ಶ್ರೀನಿವಾಸ್ ಗೌಡ ಅವರು ಇಷ್ಟೊಂದು ಹಣವನ್ನು ಹೇಗೆ ಸಂಪಾದನೆ ಮಾಡುತ್ತಾರೆ ಎಂದು ನೋಡುವುದಾದರೆ ಸೋಶಿಯಲ್ ಮೀಡಿಯಾ ಅಂದರೆ instagram ಗಳಲ್ಲಿ ರೀಲ್ಸ್ ಗಳನ್ನು ಮಾಡುವ ಮುಖಾಂತರ ಹಾಗೆಯೆ ಹೊಸ ಹೊಸ ರೀತಿಯಾದಂತಹ ಪ್ರಾಡಕ್ಟ್ ಗಳನ್ನು ಪ್ರಮೋಷನ್ ಮಾಡುವ ಮುಖಾಂತರ ಇವರಿಗೆ ಇಷ್ಟೊಂದು ಹಣ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಇವರ ಸಂಪಾದನೆಯಲ್ಲಿ ಸ್ವತಃ ತಾವೇ ಒಂದು ಸ್ವಂತ ಮನೆಯನ್ನು ಸಹ ಕಟ್ಟಿಸಿದ್ದಾರೆ. ಒಟ್ಟಾರೆಯಾಗಿ ನೋಡುವುದಾದರೆ ಒಂದು ಹುಡುಗಿ ತಿಂಗಳಿಗೆ 3 ಲಕ್ಷ ಸಂಪಾದನೆ ಮಾಡುತ್ತಾರೆ ಎಂಬುದ ದೊಡ್ಡ ವಿಷಯವೇ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.