ಹನಿ ನೀರಾವರಿ ಪದ್ಧತಿ (Drip irrigation) ಬಗ್ಗೆ ರೈತರಿಗೆ (farmers) ತಿಳಿದೇ ಇರುತ್ತದೆ. ತೋಟಗಾರಿಕೆ ಕೃಷಿ ಮಾಡುವಾಗ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ನೀರು ಹರಿಸುವುದರಿಂದ ಭೂಮಿ ಸವಕಳಿಯಾಗುವುದು ತಪ್ಪುತ್ತದೆ, ಇದರಿಂದ ಭೂಮಿಯ ಫಲವತ್ತತೆ ರಕ್ಷಣೆಯಾಗುತ್ತದೆ ಹಾಗೂ ಹನಿ ನೀರಾವರಿ ಪದ್ಧತಿಯಲ್ಲಿ ಹೆಸರೇ ಹೇಳುವಂತೆ ಹನಿ ಹನಿಯಾಗಿ ಬೆಳೆಗಳಿಗೆ ನೀರು ಹರಿಯುವುದರಿಂದ ನೀರಿನ ಪೋಲಾಗುವಿಕೆ ತಪ್ಪುತ್ತದೆ.
ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆಗಳನ್ನು ಮಾತ್ರ ತಲುಪುವಂತೆ ನೀರನ್ನು ಹರಿಸುವುದರಿಂದ ಕಳೆ ಬೆಳೆಯುವುದು ಕಡಿಮೆ ಆಗುತ್ತದೆ ಹೀಗಾಗಿ ನಿರ್ವಹಣೆ ಖರ್ಚು ಕಡಿಮೆ ಆಗಿ ರೈತನ ಆದಾಯ ಹೆಚ್ಚುತ್ತದೆ. ಇದೇ ರೀತಿಯಾಗಿ ಇನ್ನು ಮುಂತಾದ ಹತ್ತು ಹಲವು ಅನುಕೂಲತೆಗಳು ಹನಿ ನೀರಾವರಿ ಪದ್ಧತಿಯಲ್ಲಿದ್ದು ಈ ಕಾರಣಗಳಿಂದಾಗಿ ರೈತರಿಗೆ ಈ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತಿದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೂಡ ತೋಟಗಾರಿಕೆ ಇಲಾಖೆಯ ಮುಖಾಂತರ ಈ ರೀತಿ ಹನಿ ನೀರಾವರಿ ಅಳವಡಿಸಿಕೊಳ್ಳುವ ರೈತನಿಗೆ ಆತನ ಘಟಕ ವೆಚ್ಚಕ್ಕೆ ಸಬ್ಸಿಡಿ (Subsidy) ನೀಡುವ ಮೂಲಕ ನೆರವಾಗುತ್ತಿದೆ. ಈ ಹನಿ ನೀರಾವರಿ ಪದ್ಧತಿಯನ್ನು ತೋಟಗಾರಿಕೆ ಬೆಳೆಗಳಾದಹಣ್ಣು ತರಕಾರಿ, ಹೂವು, ಪ್ಲಾಂಟೇಶನ್ ಬೆಳೆಗಳು, ಔಷಧಿ & ಸುಗಂಧ ಸಸ್ಯಗಳು ಹಾಗೂ ಸಾಂಬಾರು ಬೆಳೆಗಾರ ರೈತರು ಈ ಬೆಳಗಳಿಗೆ ಅಳವಡಿಸುವುದರಿಂದ ಈ ಮೇಲೆ ತಿಳಿಸಿದಂತಹ ಅನುಕೂಲತೆಗಳನ್ನು ಹೊಂದಬಹುದು.
ಸದ್ಯಕ್ಕೆ ಈಗ ಕರ್ನಾಟಕದಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ (Mudaragi taluk) ಕೊಳವೆ ಬಾವಿ ಹೊಂದಿ ತೋಟಗಾರಿಕೆ ಕೃಷಿ ಸೌಲಭ್ಯ ಹೊಂದಿರುವ ರೈತರುಗಳು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಈ ಸಹಾಯಧನವನ್ನು ಪಡೆಯಬಹುದು. ಈ ಬಗ್ಗೆ ಮಾಹಿತಿಯನ್ನು ಮುಂಡರಗಿ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಎಂ.ಎಂ. ತಾಂಬೋಟಿ ಮುಂಡರಗಿರವರು ಪತ್ರಿಕಾ ಪ್ರಕಟಣೆಯಲ್ಲಿ ಹೊರಡಿಸಿ ತಿಳಿಸಿದ್ದಾರೆ.
ಅರ್ಹ ಆಸಕ್ತ ರೈತರುಗಳು ಇಲಾಖೆಯು ಸೂಚಿಸಿರುವ ದಾಖಲೆಗಳನ್ನು ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಪ್ರಯೋಜನ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸುವ ರೀತಿ, ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಹತಾ ಮಾನದಂಡಗಳೇನು ಹಾಗೂ ಎಷ್ಟು ದಿನಗಳವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎನ್ನುವುದರ ವಿವರ ಈ ರೀತಿ ಇದೆ ನೋಡಿ.
ಅರ್ಹತೆಗಳು:-
● ಈ ಸಹಾಯಧನಕ್ಕೆ ಅರ್ಜಿ ಸಲ್ಲಿಸುವ ರೈತರು ಮೊದಲಿಗೆ ತೋಟಗಾರಿಕೆ ಇಲಾಖೆ ವತಿಯಿಂದ ಅನುಮೋದನೆಗೊಂಡ ಕಂಪನಿ ಅಥವಾ ಡೀಲರ್ ವತಿಯಿಂದ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು.
● ಈಗಾಗಲೇ ತನ್ನ ಜಮೀನಿನಲ್ಲಿ ಕೊಳವೆಬಾವಿ ಹೊಂದಿ ನೀರಾವರಿ ಸೌಲಭ್ಯ ಹೊಂದಿರುವ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು.
● ಅರ್ಜಿ ಸಲ್ಲಿಸುವ ರೈತನ ಹೆಸರಿನಲ್ಲಿಯೇ ಸಂಬಂಧಪಟ್ಟ ಎಲ್ಲಾ ದಾಖಲೆಗಳು ಸರಿಯಾಗಿ ಇರಬೇಕು.
● ಸದ್ಯಕ್ಕೆ ಈಗ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ರೈತರಿಗಷ್ಟೇ ಅವಕಾಶ ನೀಡಲಾಗಿದೆ, ಮುಂಡರಗಿ ತಾಲೂಕಿನ ತೋಟಗಾರಿಕೆ ಇಲಾಖೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಬೇಕಾಗುವ ದಾಖಲೆಗಳು:-
● ಇತ್ತೀಚಿನ ಫೋಟೋ,
● ಜಮೀನಿನ RTC,
● ಬ್ಯಾಂಕ್ ಪಾಸ್ ಬುಕ್ ವಿವರ,
● ಬೆಳೆ ದೃಢೀಕರಣ ಪತ್ರ,
● ಮಣ್ಣು & ನೀರಿನ ಪರೀಕ್ಷೆ,
● 20 ರೂ. ಛಾಪಾ ಕಾಗದದಲ್ಲಿ ಧೃಢೀಕರಣ ಪತ್ರ