ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಯೋಜನ ಎಷ್ಟು ಲಾಭದಾಯಕ ಗೊತ್ತ.? ಇಂದೇ ತಿಳಿದುಕೊಳ್ಳಿ.

ಸುಕನ್ಯಾ ಸಮೃದ್ಧಿ ಯೋಜನೆ ಇದು ಭಾರತದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಅತ್ಯಂತ ಸುಲಭದ ಕೆಲಸ. ಈ ಕುರಿತ ವಿವರ ಇಲ್ಲಿದೆ. ‘ಬೇಟಿ ಬಚಾವೊ ಬೇಟಿ ಪಡಾವೊ’ ಅಭಿಯಾನದ ಅಂಗವಾಗಿ ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆಗೆ ಬಂದಿದೆ. ಅಪ್ರಾಪ್ತ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಹತ್ವಾಕಾಂಕ್ಷೆಯ ಯೋಜನೆಯು ಬಂದಿದೆ. ಈ ಯೋಜನೆಯಡಿ ಹೂಡಿಕೆ ಮಾಡುವ ಹಣಕ್ಕೆ ತೆರಿಗೆ ವಿನಾಯಿತಿಯೂ ಲಭ್ಯವಿದೆ. ಇದು ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉತ್ತಮ ಉಳಿತಾಯ ಯೋಜನೆ ಕೂಡ ಹೌದು. ಹೆಣ್ಣು ಮಗುವಿನ ಉನ್ನತ ವಿದ್ಯಾಭ್ಯಾಸ, ಮದುವೆ ಖರ್ಚಿಗೆ ಇದು ಅತ್ಯುತ್ತಮ ಹಣ ಉಳಿತಾಯದ ಮಾರ್ಗವಾಗಿದೆ.ಈ

WhatsApp Group Join Now
Telegram Group Join Now

ಖಾತೆ ತೆರೆಯಲು ಪೋಷಕರು ಮಾಡಬೇಕಿರುವುದು ಏನು? ಅದಕ್ಕೆ ನೀಡಬೇಕಿರುವ ಕಡ್ಡಾಯ ದಾಖಲೆಗಳು ಯಾವುದು? ಪುರಾವೆಗಳನ್ನು ಸಲ್ಲಿಸುವುದು ಹೇಗೆ? ಮೊದಲಾದ ಪೂರ್ಣ ಮಾಹಿತಿ ಇಲ್ಲಿದೆ. ಕೇಂದ್ರ ಸರಕಾರದ ‘ಬೇಟಿ ಬಚಾವೊ ಬೇಟಿ ಪಡಾವೊ’ ಅಭಿಯಾನದ ಅಂಗವಾಗಿ ಸುಕನ್ಯಾ ಸಮೃದ್ಧಿ ಯೋಜನೆ ಆರಂಭಿಸಲಾಗಿದೆ. ಇದು ಹೆಣ್ಣು ಮಗುವಿಗಾಗಿ ಇರುವ ಸಣ್ಣ ಉಳಿತಾಯ ಠೇವಣಿ ಯೋಜನೆಯಾಗಿದೆ. ಇದನ್ನು 2015ರ ಜನವರಿ 22ರಂದು ಆರಂಭಿಸಲಾಯಿತು. ಹೆಣ್ಣು ಮಕ್ಕಳಿಗೆ ಮಾತ್ರವೇ ಸುಕನ್ಯಾ ಸಮೃದ್ಧಿ ಖಾತೆ ಹೊಂದಲು ಅರ್ಹರಾಗಿರುತ್ತಾರೆ. ಖಾತೆ ತೆರೆಯುವ ಸಮಯದಲ್ಲಿ, ಹೆಣ್ಣು ಮಗುವಿಗೆ 10 ವರ್ಷಕ್ಕಿಂತ ಕಡಿಮೆ ಇರಬೇಕು. ಖಾತೆ ತೆರೆಯುವಾಗ, ಹೆಣ್ಣು ಮಗುವಿನ ವಯಸ್ಸಿನ ಪುರಾವೆ (ಜನನ ಪ್ರಮಾಣಪತ್ರ) ಕಡ್ಡಾಯವಾಗಿರಬೇಕು.

ಆಯಾ ಸರ್ಕಾರಿ ಪೋರ್ಟಲ್‍ನಿಂದ ಫಾರ್ಮ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು. ಫಾರ್ಮ್‍ನಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ. ಇವುಗಳನ್ನು ಒಳಗೊಂಡಿರುವ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಒಯ್ಯಿರಿ. ಹೆಣ್ಣು ಮಗು ಮತ್ತು ಪೋಷಕರು ಒಟ್ಟಿಗೆ ಇರುವ ಛಾಯಾಚಿತ್ರಗಳು, ಗುರುತಿನ ಪುರಾವೆ, ವಿಳಾಸ ಪುರಾವೆ, ಆಧಾರ್ ಕಾರ್ಡ್ ಕಡ್ಡಾಯ ಹಾಗೂ ಹೆಣ್ಣು ಮಗುವಿನ ಜನನ ಪ್ರಮಾಣಪತ್ರ. ಅಂಚೆ ಕಛೇರಿ ಅಥವಾ ವಾಣಿಜ್ಯ ಬ್ಯಾಂಕುಗಳ ಯಾವುದೇ ಅಧಿಕೃತ ಶಾಖೆಯಲ್ಲಿ ‘ಸುಕನ್ಯಾ ಸಮೃದ್ಧಿ ಯೋಜನೆ’ಯಡಿ ಖಾತೆ ತೆರೆಯಬಹುದು. ಹೆಣ್ಣು ಮಗು ಜನಿಸಿದ 10 ವರ್ಷದೊಳಗೆ ಕನಿಷ್ಠ 250 ರೂಪಾಯಿ ಠೇವಣಿಯೊಂದಿಗೆ ಖಾತೆ ತೆರೆಯಬಹುದು. ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಗರಿಷ್ಠ 1.5 ಲಕ್ಷ ರೂ. ವರಗೆ ಠೇವಣಿ ಮಾಡಲು ಅವಕಾಶವಿದೆ.

ಸುಕನ್ಯ ಸಮೃದ್ಧಿ ಯೋಜನೆಯಡಿ ಪಾಲಕರು ಗರಿಷ್ಠ ಎರಡು ಖಾತೆಗಳನ್ನು ತೆರೆಯಬಹುದು. ಅಂದರೆ, ಪ್ರತಿ ಒಬ್ಬ ಮಗಳಿಗೆ ಒಂದು ಖಾತೆಯಂತೆ ಗರಿಷ್ಠ ಇಬ್ಬರು ಪುತ್ರಿಯರಿಗೆ ಖಾತೆ ತೆರೆಯಬಹುದು. ಒಂದು ವೇಳೆ ಮೊದಲ ಅಥವಾ ಎರಡನೆಯ ಹೆರಿಗೆಯಿಂದ ಅವಳಿ ಹೆಣ್ಣುಮಕ್ಕಳು ಜನಿಸಿದರೆ, ಈ ಯೋಜನೆಯು ಪೋಷಕರಿಗೆ ಮೂರನೇ ಖಾತೆ ತೆರೆಯಲು ಅನುವು ಮಾಡಿಕೊಡುಲಾಗುತ್ತದೆ.ಈ ಯೋಜನೆಯಡಿ ನಿಮಗೆ ಶೇಕಡಾ 7.6 ರ ದರದಲ್ಲಿ ಬಡ್ಡಿ ನೀಡಲಾಗುತ್ತಿದೆ. ಇದು ಆದಾಯ ತೆರಿಗೆ ವಿನಾಯಿತಿಯೊಂದಿಗೆ, ಇದಕ್ಕೂ ಮೊದಲು ಶೇ.9.2ರವರೆಗೆ ಬಡ್ಡಿ ನಿಗದಿಯಾಗಿತ್ತು. ಇಷ್ಟೇ ಅಲ್ಲ 8 ವರ್ಷದ ನಂತರ, ಮಗಳ ಉನ್ನತ ಶಿಕ್ಷಣದ ವೆಚ್ಚದ ವಿಷಯದಲ್ಲಿ ಶೇ.50 ರಷ್ಟು ಹಣವನ್ನು ಹಿಂಪಡೆಯಬಹುದು. ಪ್ರಸ್ತುತ, ಆದಾಯ ತೆರಿಗೆ ವಿನಾಯಿತಿಯೊಂದಿಗೆ ಶೇ.7.6ರ ದರದಲ್ಲಿ ಬಡ್ಡಿ ನೀಡಲಾಗುತ್ತಿದೆ. ನಿಮ್ಮ ಪ್ರೀತಿಯ ಮಗಳ ಭವಿಷ್ಯದ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ಇಂದೇ ಈ ಯೋಜನೆಯ ಲಾಭ ಪಡೆದುಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now