ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2015ರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಎನ್ನುವ ಹೊಸದೊಂದು ಯೋಜನೆಯನ್ನು ಉದ್ಘಾಟಿಸಿದರು. ಹೆಣ್ಣು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಉದ್ದೇಶದಿಂದ ಭೇಟಿ ಪಡಾವೋ ಭೇಟಿ ಬಚಾವೋ ಎನ್ನುವ ಧ್ಯೇಯದೊಂದಿಗೆ ಈ ಯೋಜನೆ ಆರಂಭ ಆಯಿತು. ಭವಿಷ್ಯದಲ್ಲಿ ಹೆಣ್ಣು ಮಕ್ಕಳಿಗೆ ಆರ್ಥಿಕ ಸ್ವಾವಲಂಬನೆ ಇರಬೇಕು ಎನ್ನುವ ಕಾರಣಕ್ಕಾಗಿ ಹೆಣ್ಣು ಮಕ್ಕಳ ಪೋಷಕರು ಮಕ್ಕಳು ಬಾಲ್ಯವಸ್ಥೆಯಲ್ಲಿ ಇದ್ದಾಗಲೇ ಅವರ ಹೆಸರಿನಲ್ಲಿ ಹೂಡಿಕೆ ಮಾಡುವ ಯೋಜನೆ ಇದಾಗಿತ್ತು.
ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ಬಳಿಕ ಇದನ್ನು ಅವರ ಮದುವೆಯ ಖರ್ಚಿಗೆ ಅಥವಾ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಥವಾ ಇನ್ನಿತರ ಹಣಕಾಸಿನ ಅವಶ್ಯಕತೆಗಳಿಗೆ ಬಳಸಿಕೊಳ್ಳಬಹುದು ಎನ್ನುವುದು ಇದರ ಉದ್ದೇಶ ಆಗಿತ್ತು. ದೇಶದಾದ್ಯಂತ ಬಹುತೇಕ ಎಲ್ಲಾ ಹೆಣ್ಣುಮಕ್ಕಳ ಪೋಷಕರು ಕೂಡ ಈ ಯೋಜನೆಯನ್ನು ಖರೀದಿಸಿದ್ದಾರೆ.
ಹತ್ತಿರದ ಅಂಚೆ ಕಛೇರಿಗಳಲ್ಲಿ ಅಥವಾ ಯಾವುದೇ ಬ್ಯಾಂಕ್ ಗಳಲ್ಲಿ ಕೂಡ ಈ ಯೋಜನೆಗಳನ್ನು ಖರೀದಿಸುವ ಅವಕಾಶವನ್ನು ನೀಡಲಾಗಿದೆ. ಆದರೆ ಹೆಣ್ಣು ಮಕ್ಕಳಿಗೆ 10 ವರ್ಷ ವಯಸ್ಸು ತುಂಬುವುದರ ಒಳಗೆ ಈ ಯೋಜನೆಯನ್ನು ಖರೀದಿಸಬೇಕು ಮತ್ತು ಎರಡು ಹೆಣ್ಣು ಮಕ್ಕಳಿಗೆ ಮಾತ್ರ ಪೋಷಕರು ಈ ಯೋಜನೆಯನ್ನು ಖರೀದಿಸಬಹುದಾಗಿದೆ.
ಪ್ರತಿ ತಿಂಗಳು ತಮ್ಮ ಕೈಲಾದಷ್ಟು ಹಣವನ್ನು ಪಾವತಿ ಮಾಡುವ ಮೂಲಕ ವಾರ್ಷಿಕವಾಗಿ 250 ರೂಪಾಯಿಯನ್ನು ಹೂಡಿಕೆ ಮಾಡಿ ಕೂಡ ಈ ಯೋಜನೆಯನ್ನು ಮುಂದುವರಿಸಬಹುದು, ಗರಿಷ್ಠವಾಗಿ ಒಂದೂವರೆ ಲಕ್ಷದವರೆಗೂ ಕೂಡ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿರುವ ಮತ್ತೊಂದು ಅನುಕೂಲಕರ ವಿಷಯ ಎಂದರೆ ಮೆಚ್ಯುರಿಟಿ ಅವಧಿಯಲ್ಲಿ ನೀವು ಪಡೆಯುವ ಮೊತ್ತವು ಆದಾಯ ತೆರಿಗೆ ನಿಯಮ 80CC ಗೆ ಒಳಪಡುತ್ತದೆ.
ಆದ್ದರಿಂದ ಯೋಜನೆಯ ಹಣವನ್ನು ರಿಟರ್ನ್ಸ್ ಪಡೆಯುವಾಗ ಯಾವುದೇ ಟ್ಯಾಕ್ಸ್ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ. ಹೆಣ್ಣು ಮಕ್ಕಳಿಗೆ ಭದ್ರವಾದ ಆರ್ಥಿಕ ಸ್ವಾವಲಂಬನೆಯನ್ನು ಕಟ್ಟಿಕೊಡಲು ಈ ಯೋಜನೆ ಅತ್ಯುತ್ತಮವಾದ ಯೋಜನೆ ಆಗಿದ್ದು, ಎಲ್ಲ ಹೆಣ್ಣು ಮಕ್ಕಳ ಪೋಷಕರ ಗಮನ ಸೆಳೆದಿದೆ ಮತ್ತು ಪ್ರಶಂಸೆಯನ್ನು ಪಡೆದಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಸಿಗುವ ಬಡ್ಡಿ ದರವು ಉಳಿದ ಬೇರೆ ಎಲ್ಲಾ ಹಣಕಾಸಿನ ಯೋಜನೆಗಳಿಗಿಂತಲೂ ಕೂಡ ಹೆಚ್ಚಿನ ಬಡ್ಡಿದರವನ್ನು ಪಡೆಯುತ್ತದೆ.
ಪ್ರಸ್ತುತವಾಗಿ 2023ರಲ್ಲೂ ಕೂಡ 8% ಬಡ್ಡಿದರವು ಸುಕನ್ಯ ಸಮೃದ್ಧಿ ಯೋಜನೆ ಹೂಡಿಕೆ ಮೇಲೆ ಸಿಗುತ್ತಿದೆ. ಆದರಿಂದ ಯೋಜನೆಯಲ್ಲಿ ಎಷ್ಟು ಹಣವನ್ನು ಹೂಡಿಕೆ ಮಾಡುವುದರಿಂದ ಎಷ್ಟು ಹಣವನ್ನು ರಿಟರ್ನ್ಸ್ ಆಗಿ ಪಡೆಯಬಹುದು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಇಂತಹ ಉಪಯುಕ್ತ ಯೋಜನೆಯ ಪ್ರಯೋಜನವನ್ನು ತಪ್ಪದೆ ಹೆಣ್ಣು ಮಕ್ಕಳ ಪೋಷಕರು ಪಡೆದುಕೊಳ್ಳಿ.
ಈ ಯೋಜನೆಯಲ್ಲಿ ನೀವು ಪ್ರತಿದಿನವೂ ಕೂಡ 35 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಪ್ರಸ್ತುತ ಬಡ್ಡಿದರದಲ್ಲಿ ನಿಮಗೆ ಮೆಚ್ಯುರಿಟಿ ಅವಧಿಗೆ 5 ಲಕ್ಷ ಸಿಗುತ್ತದೆ. ಪ್ರತಿದಿನ 100 ರೂಪಾಯಿ ಹೂಡಿಕೆ ಮಾಡಿದರೆ ತಿಂಗಳಿಗೆ 3000 ಲೆಕ್ಕದಲ್ಲಿ ಮೆಚ್ಯುರಿಟಿ ಅವಧಿಗೆ ಬಡ್ಡಿದರವು ಸೇರಿ ಇದು 16 ಲಕ್ಷದವರೆಗೆ ದೊಡ್ಡ ಮೊತ್ತವಾಗಿರುತ್ತದೆ.
ಪ್ರತಿ ದಿನವೂ ಕೂಡ 200 ರೂಪಾಯಿಯನ್ನು ಹೂಡಿಕೆ ಮಾಡಿದರೆ ತಿಂಗಳಿಗೆ 6000 ಮತ್ತು ಮೆಚ್ಯುರಿಟಿ ವೇಳೆಗೆ 33 ಲಕ್ಷ ರೂಪಾಯಿಗಳು ಕೈ ಸೇರಲಿದೆ. ದಿನಕ್ಕೆ 300 ಉಳಿಸುವ ಯೋಜನೆ ಮಾಡಿ ತಿಂಗಳಿಗೆ 9,000 ಯನ್ನು ಹೂಡಿಕೆ ಮಾಡಿದರೆ 50 ಲಕ್ಷಕ್ಕಿಂತ ಹೆಚ್ಚು ಹಣವನ್ನು ನೀವು ರಿಟರ್ನ್ಸ್ ಆಗಿ ಪಡೆಯಬಹುದು.