ರಾಜ್ಯದ ಎಲ್ಲ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಅದೇನೆಂದರೆ ಸರ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅದಕ್ಕಾಗಿ ರೂಪುರೇಷೆಗಳನ್ನು ಒಳಗೊಂಡಿರುವ ಅಧಿಸೂಚನೆಯನ್ನು ಸಹ ಇಲಾಖೆ ಬಿಡುಗಡೆ ಮಾಡಿದೆ. ಇವು ಕರ್ನಾಟಕ ರಾಜ್ಯ ಸರ್ಕಾರದ ಖಾಯಂ ಹುದ್ದೆಗಳಾಗಿದ್ದು, ಈ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಆಸಕ್ತ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯಲ್ಲಿರುವ ಅಂಶಗಳನ್ನು ಓದಿ ಅರ್ಥೈಸಿಕೊಂಡು ಆ ಪ್ರಕಾರವಾಗಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಅದಕ್ಕಾಗಿ ಈ ಅಂಕಣದಲ್ಲಿ ಸಹ ಆಕಾಂಕ್ಷಿಗಳಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಒಟ್ಟು ಹುದ್ದೆಗಳ ಸಂಖ್ಯೆ, ಹುದ್ದೆಗಳ ವಿವರ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಅರ್ಜಿ ಶುಲ್ಕ ಹಾಗೂ ಆಯ್ಕೆಯ ವಿಧಾನ, ಅರ್ಜಿ ಸಲ್ಲಿಸಬೇಕಾದ ವಿಧಾನ ಮತ್ತು ವಿಳಾಸ ಮತ್ತಿತರ ವಿಷಯಗಳನ್ನು ತಿಳಿಸಲಾಗಿದೆ.
ಇಲಾಖೆಯ ಹೆಸರು:- ಸರ್ವೆ ಆಫ್ ಇಂಡಿಯಾ (ಭಾರತದ ಸಮೀಕ್ಷೆ).
ಒಟ್ಟು ಹುದ್ದೆಗಳ ಸಂಖ್ಯೆ:- 21
ಹುದ್ದೆಗಳ ವಿವರ:-
● ಮೋಟಾರ್ ಡ್ರೈವರ್
● ಮೆಕ್ಯಾನಿಕ್
ಉದ್ಯೋಗ ಸ್ಥಳ:- ಭಾರತದಾತ್ಯಂತ…
ವೇತನ ಶ್ರೇಣಿ:- ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಸರ್ವೆ ಆಫ್ ಇಂಡಿಯಾ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ 19,900-63,200 ರೂ. ಮಾಸಿಕ ವೇತನ ಸಿಗಲಿದೆ.
ವಯೋಮಿತಿ:-
ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ವೆ ಆಫ್ ಇಂಡಿಯಾ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರ 31 ಮೇ 2023 ಕ್ಕೆ ಸರಿಯಾಗಿ ಕನಿಷ್ಠ 18 ವರ್ಷವನ್ನು ಪೂರೈಸಿರಬೇಕು ಹಾಗೂ ಗರಿಷ್ಠ 27 ವರ್ಷವನ್ನು ಮೀರಿರಬಾರದು.
ವಯೋಮಿತಿ ಸಡಿಲಿಕೆ:-
● SC&ST ಅಭ್ಯರ್ಥಿಗಳಿಗೆ 5 ವರ್ಷಗಳು.
● OBC ಅಭ್ಯರ್ಥಿಗಳಿಗೆ 3 ವರ್ಷಗಳು.
ಶೈಕ್ಷಣಿಕ ವಿದ್ಯಾರ್ಹತೆ:-
● ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಉತ್ತೀರ್ಣರಾಗಿರುವುದರ ಜೊತೆಗೆ ಲಘು ಚಾಲನಾ ಪರವಾಗಿ ಪಡೆದಿರಬೇಕು.
● 10ನೇ ತರಗತಿ, 12ನೇ ತರಗತಿ ಪದವಿ ಅಥವಾ ಅದಕ್ಕೆ ತತ್ಸಮಾನ ವಿದ್ಯಾಭ್ಯಾಸ ಹೊಂದಿರುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.
ಆಯ್ಕೆ ವಿಧಾನ:-
●ಪ್ರಾಯೋಗಿಕ ಪರೀಕ್ಷೆ
● ಕೌಶಲ್ಯ ಪರೀಕ್ಷೆ
● ಡ್ರೈವಿಂಗ್ ಟೆಸ್ಟ್
● ಸಂದರ್ಶನ
● ದಾಖಲೆಗಳ ಪರಿಶೀಲನೆ
ಅರ್ಜಿ ಸಲ್ಲಿಸುವ ವಿಧಾನ:- ಆಫ್ಲೈನ್ ಮೂಲಕ.
● ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿಕೊಂಡು, ಇಂಗ್ಲಿಷ್ನಲ್ಲಿ ವಿವರಗಳನ್ನೆಲ್ಲ ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಬೇಕು.
● ಇದರ ಜೊತೆ ಅಧಿಸೂಚನೆಯಲ್ಲಿ ಕೇಳಲಾದ ಅರ್ಹತೆಗಳ ಎಲ್ಲ ದಾಖಲೆಗಳ ಪ್ರತಿಗಳನ್ನು ಕೂಡ ಲಗತ್ತಿಸಿ ಕಳುಹಿಸಬೇಕು.
● ಕಡೆ ದಿನಾಂಕದ ನಂತರ ಕಳಿಸುವ ಅರ್ಜಿಗಳು ಮಾನ್ಯವಾಗುವುದಿಲ್ಲ.
ಅರ್ಜಿ ಸಲ್ಲಿಸಬೇಕಾಗಿರುವ ವಿಳಾಸ:-
ನಿರ್ದೇಶಕರು,
ಕರ್ನಾಟಕ ಜಿಯೋ ಸ್ಪೆಷಲ್ – ಡಾಟಾ ಸೆಂಟರ್, ಸರ್ವೆ ಆಫ್ ಇಂಡಿಯಾ,
ಅಂಚೆ ಪೆಟ್ಟಿಗೆ ಸಂಖ್ಯೆ – 3403, ಸ
ಜಾಪುರ ರಸ್ತೆ ಕೋರಮಂಗಲ 2ನೇ ಬ್ಲಾಕ್,
ಬೆಂಗಳೂರು- 560034.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 24 ಏಪ್ರಿಲ್, 2023.
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31 ಮೇ, 2023.