ಕರ್ನಾಟಕದಲ್ಲಿ ನೀರಾವರಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ತರಲು ನೀರಾವರಿ ಕೃಷಿಕರಿಗೆ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಪರಿಚಯಿಸುತ್ತಿದೆ. ಇವುಗಳ ಮೂಲ ಉದ್ದೇಶ ರೈತರಿಗೆ ಅನುಕೂಲತೆಯನ್ನು ಸೃಷ್ಟಿಸಿ ಕೃಷಿ ಕ್ಷೇತ್ರವನ್ನು ಉತ್ತೇಜಿಸಿ ರೈತನ ವೆಚ್ಚವನ್ನು ಕಡಿಮೆ ಮಾಡಿ ಆದಾಯವನ್ನು ಹೆಚ್ಚಿಸುವುದು. ನೀರಾವರಿ ಕೃಷಿ ಮಾಡುವ ರೈತರಿಗೆ ಮುಖ್ಯವಾಗಿ ಬೇಕಾಗಿರುವ ವಿದ್ಯುತ್ ಸಂಪರ್ಕ ಹಾಗೂ ಪಂಪ್ಸೆಟ್ ವಿಚಾರವಾಗಿ ಸರ್ಕಾರ ಈಗ ಮತ್ತೊಂದು ಯೋಜನೆಯನ್ನು ಜಾರಿಗೆ ತರುತ್ತಿದೆ.
ಸೂರ್ಯ ರೈತ ಯೋಜನೆ ಎನ್ನುವ ಹೆಸರಿನ ಈ ಯೋಜನೆಯಲ್ಲಿ ರೈತರು ಸೋಲಾರ್ ಪಂಪ್ ಸೆಟ್ ಗಳನ್ನು ಅಳವಡಿಸಿಕೊಳ್ಳುವ ಮೂಲಕ ಪಂಪ್ ಸೆಟ್ ಗೆ ವಿದ್ಯುತ್ ಅಭಾವವನ್ನು ತಪ್ಪಿಸಬಹುದು ಮತ್ತು ಹೆಚ್ಚುವರಿ ವಿದ್ಯುತ್ ಅನ್ನು ಅತಿಯಾದ ವಿದ್ಯುತ್ ಗ್ರಿಡ್ ಗಳಿಗೆ ವರ್ಗಾಯಿಸುವ ಮೂಲಕ ಸ್ಥಿರ ಆದಾಯವನ್ನು ಕೂಡ ಪಡೆಯಬಹುದು.
ಈ ಸೋಲಾರ್ ಪಂಪ್ ಸೆಟ್ ಗಳು ಐಪಿ ಪಂಪ್ಸೆಟ್ಗಳಿಗಿಂತ ಒಂದೂವರೆ ಪಟ್ಟು ಹೆಚ್ಚು ನೀರನ್ನು ಪಂಪ್ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಅಲ್ಲದೆ ಉತ್ಪಾದಿಸಿದ ಶಕ್ತಿಯ ಮೂರರಲ್ಲಿ ಒಂದು ಭಾಗವನ್ನು ಮಾತ್ರ ಇದಕ್ಕಾಗಿ ಖರ್ಚು ಮಾಡುತ್ತದೆ. ಉಳಿದ ಭಾಗವನ್ನು ವಿದ್ಯುತ್ ಗ್ರಿಡ್ ಜೊತೆ ಒಪ್ಪಂದ ಮಾಡಿಕೊಂಡು ವರ್ಗಾವಣೆ ಮಾಡುವ ಮೂಲಕ ರೈತರು ವಾರ್ಷಿಕವಾಗಿ ಆದಾಯ ಗಳಿಸುವ ಮತ್ತೊಂದು ಮೂಲವನ್ನು ಪಡೆದಂತಾಗುತ್ತದೆ.
ಈಗ ಇವುಗಳನ್ನು ಅಳವಡಿಸಿಕೊಳ್ಳಲು ಇಚ್ಛೆ ಪಡುವ ರೈತರಿಂದ ಸರ್ಕಾರ ಅರ್ಜಿಯನ್ನು ಆಹ್ವಾನ ಮಾಡಿದೆ. 2024ನೇ ಸಾಲಿನ ಸೂರ್ಯ ರೈತ ಯೋಜನೆಗೆ ಅರ್ಜಿ ಸಲ್ಲಿಸುವ ರೈತರಿಗೆ ಇರಬೇಕಾದ ಅರ್ಹತೆಗಳೇನು ಕೇಳಲಾಗುವ ದಾಖಲೆಗಳನ್ನು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎನ್ನುವ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಕರ್ನಾಟಕ ಸೂರ್ಯ ರೈತ ಯೋಜನೆ 2024 ಫಲಾನುಭವಿಗಳಾಗಲು ರೈತರಿಗೆ ಇರಬೇಕಾದ ಅರ್ಹತೆಗಳು:-
● ಕರ್ನಾಟಕ ರಾಜ್ಯದಲ್ಲಿರುವ ನೀರಾವರಿ ಕೃಷಿ ಮಾಡುತ್ತಿರುವ ರೈತರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
● ಅರ್ಜಿದಾರರು ಕಡ್ಡಾಯವಾಗಿ ಅವರ ಹೆಸರಿನಲ್ಲಿ ಭೂ ಹಿಡುವಳಿ ಹೊಂದಿರಬೇಕು ಮತ್ತು ಕೃಷಿಯಲ್ಲಿ ತೊಡಗಿಸಿಕೊಂಡಿರಬೇಕು.
ಸೂರ್ಯ ರೈತ ಯೋಜನೆ 2024 ಕ್ಕೆ ಅರ್ಜಿ ಬೇಕಾಗಿರುವ ಅವಶ್ಯಕ ದಾಖಲೆಗಳು:-
● ರೈತನ ಆಧಾರ್ ಕಾರ್ಡ್
● ವಿಳಾಸದ ಪುರಾವೆ
● ಭೂಮಿಯ ವಿವರಗಳು
● ಬ್ಯಾಂಕ್ ಖಾತೆ ವಿವರಗಳು
● ಗುರುತಿನ ಪುರಾವೆ
● ಪಾಸ್ಪೋರ್ಟ್ ಗಾತ್ರದ ಫೋಟೋ
● ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
ಕರ್ನಾಟಕ ಸೂರ್ಯ ರೈತ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:-
● ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
● ಮೊದಲಿಗೆ ಕರ್ನಾಟಕ ಸೂರ್ಯ ರೈತ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಆದ https://kredl.karnataka.gov.in/
ಗೆ ನೀಡಿ.
● ಮುಖಪುಟದಲ್ಲಿ PM-KUSUM ಕಾಂಪೊನೆಂಟ್ – B ಅಡಿಯಲ್ಲಿ ಆಫ್ ಗ್ರಿಡ್ ಸೋಲಾರ್ ವಾಟರ್ ಪಂಪಿಂಗ್ ಸಿಸ್ಟಮ್ಗಾಗಿ ಆನ್ಲೈನ್ ಅಪ್ಲಿಕೇಶನ್ ಎನ್ನುವ ಆಯ್ಕೆ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ
ಅರ್ಜಿ ಫಾರಂ ಪೇಜ್ ಕಾಣುತ್ತದೆ.
● ಈಗ ಅರ್ಜಿ ಫಾರಂ ಅಲ್ಲಿರುವ ಎಲ್ಲಾ ಅಗತ್ಯವಿರುವ ವಿವರಗಳಾದ ಅರ್ಜಿದಾರರ ಹೆಸರು ತಂದೆ ಅಥವಾ ಗಂಡನ ಹೆಸರು ಮುಂತಾದ ವಿವರಗಳನ್ನು ಫಿಲ್ ಮಾಡಿ.
● ಕೇಳಲಾಗುವ ದಾಖಲೆ ಪ್ರತಿಗಳ ಕಾಪಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
● ಅರ್ಜಿ ಸಲ್ಲಿಕೆ ಪೂರ್ತಿ ಆದ ಬಳಿಕ ಭವಿಷ್ಯದ ಅನುಕೂಲತೆಗಾಗಿ ಅರ್ಜಿ ಸ್ವೀಕೃತಿ ಪ್ರತಿಯನ್ನು ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಿ.