ಮನೆಯಲ್ಲಿ ನಾವು ಪದೇ ಪದೇ ಬಳಸುವ ಯಾವುದೇ ವಸ್ತುವಾದರೂ ಕೂಡ ಅದು ಬೇಗ ಕೊಳೆಯಾಗುತ್ತದೆ. ಮನೆಯ ಬಾಗಿಲು ಹಿಡಿಕೆಗಳು, ಮನೆಯ ಸ್ವಿಚ್ ಬೋರ್ಡ್ ಗಳು ಇತ್ಯಾದಿ .ಅದರಲ್ಲೂ ಕೂಡ ಸ್ವಿಚ್ ಬೋರ್ಡ್ ಗಳು ಬಿಳಿ ಬಣ್ಣದ್ದಾಗಿರುವುದರಿಂದ ಅದರ ಮೇಲೆ ಆದ ಕೊಳೆಗಳು ಎದ್ದು ಕಾಡುತ್ತವೆ ಮತ್ತು ನಾವು ಮನೆಯನ್ನು ಸ್ವಚ್ಚವಾಗಿ ಇಟ್ಟುಕೊಂಡಿಲ್ಲ ಎನ್ನುವುದನ್ನು ತೋರಿಸುತ್ತದೆ.
ಆದಕಾರಣ ಪದೇ ಪದೇ ಮನೆ ಸ್ವಿಚ್ ಬೋರ್ಡ್ ಅನ್ನು ಕ್ಲೀನ್ ಮಾಡುತ್ತಲೇ ಇರಬೇಕು. ಅದಲ್ಲದೆ ಅಡುಗೆ ಮನೆ ಮುಂತಾದ ಕಡೆ ಇರುವ ಮನೆ ಸ್ವಿಚ್ ಬೋರ್ಡ್ ಗಳಂತೂ ವಿಪರೀತ ಕಲೆಗಳಾಗಿರುತ್ತವೆ. ಮಸಾಲೆ ಪದಾರ್ಥಗಳ, ಎಣ್ಣೆಯ ಜಿಡ್ಡಿನಾಂಶ ನಮ್ಮ ಕೈಯಲ್ಲಿರುವ ಕೊಳೆ ಇವೆಲ್ಲಾ ಸೇರಿ ಹಳದಿ ಬಣ್ಣಕ್ಕೆ ಇಲ್ಲ ಕಪ್ಪು ಬಣ್ಣಕ್ಕೆ ಕಂದು ಬಣ್ಣವಾಗಿ ಬಿಟ್ಟಿರುತ್ತವೆ. ಇದೆಲ್ಲವೂ ಹೋಗಿ ಮೊದಲಿನ ತರ ಫಳ ಫಳ ಎಂದು ಹೊಳೆಯಬೇಕು ಎಂದರೆ ಈ ವಿಧಾನ ಬಳಸಿ.
ಹೆಚ್ಚಿನ ಜನ ಸಾಮಾನ್ಯವಾಗಿ ನೀರನ್ನು ಬಳಸಿ ಕ್ಲೀನ್ ಮಾಡುತ್ತಾರೆ. ಅದು ತುಂಬಾ ತಪ್ಪು ಏಕೆಂದರೆ ನೀರನ್ನು ಸ್ವಿಚ್ ಬೋರ್ಡ್ ಮೇಲೆ ಹಾಕುವುದರಿಂದ ನೀರು ಹಾಕಿದ ಪರಿಣಾಮ ಕರೆಂಟ್ ಸರ್ಕ್ಯೂಟ್ ಆಗಿ ಮನೆ ಪೂರ್ತಿ ವಿದ್ಯುತ್ ಅಪಘಾತಕ್ಕೆ ಒಳಗಾಗಬಹುದು, ಕೆಲವೊಮ್ಮೆ ಕ್ಲೀನ್ ಮಾಡುವ ವ್ಯಕ್ತಿಗೂ ಮಾರಣಾಂತಿಕ ತೊಂದರೆಗಳು ಕೂಡ ಆಗಬಹುದು. ಆದ ಕಾರಣ ನೀರನ್ನು ಬಳಸಿ ಸ್ವಿಚ್ ಬೋರ್ಡ್ ಗಳನ್ನು ಕ್ಲೀನ್ ಮಾಡಲು ಹೋಗಬೇಡಿ.
ಹಾಗಾದರೆ ಸ್ವಿಚ್ ಬೋರ್ಡ್ ಫಳ ಫಳ ಎಂದು ಹೊಳೆಯಬೇಕು ಎಂದರೆ ಯಾವುದಾದರೂ ದುಬಾರಿ ಬೆಲೆಯ ಜೆಲ್ ಅಥವಾ ಸೋಪು ಬಳಸಬೇಕೆ ಎಂದು ಚಿಂತೆ ಮಾಡಬೇಡಿ, ಅದರ ಅಗತ್ಯವೂ ಇಲ್ಲ. ನಿಮ್ಮ ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡೇ ನೀವು ಇದನ್ನು ಕ್ಲೀನ್ ಮಾಡಬಹುದು.
ಅದಕ್ಕೂ ಮೊದಲು ಮನೆಯ ಮೇನ್ ಸ್ವಿಚ್ ಆಫ್ ಮಾಡುವುದನ್ನು ಮರೆಯಬೇಡಿ. ಹಾಗೆ ಮನೆಗೆ MCB ಸ್ವಿಚ್ ಅಳವಡಿಸಿದ್ದರೆ ಅದನ್ನು ಕೂಡ ಆಫ್ ಮಾಡಿ. ಜೊತೆಗೆ ನೀವು ಯಾವುದೇ ವಿಧಾನದಿಂದ ಕ್ಲೀನ್ ಮಾಡಿದರೂ ಕೂಡ ಕ್ಲೀನ್ ಮಾಡಿದ ತಕ್ಷಣವೇ ಕರೆಂಟ್ ಆನ್ ಮಾಡಬೇಡಿ. ಅರ್ಧ ತಾಸು ಅಥವಾ ಒಂದು ತಾಸು ನಂತರ ಅದು ಪೂರ್ತಿಯಾಗಿ ಆರಿದ ಮೇಲೆ ಸ್ವಿಚ್ ಗಳನ್ನು ಆನ್ ಮಾಡಿ.
● ನೇಲ್ ಫಾಲಿಶ್ ರಿಮೂವರ್ ಬಳಸಿ ಕ್ಲೀನ್ ಮಾಡಿದರೆ ಅದು ಬಹಳ ಚೆನ್ನಾಗಿ ಕ್ಲೀನ್ ಆಗುತ್ತದೆ. ನೇಲ್ ರಿಮೂವರಲ್ಲಿ ಅಸಿಟೋನ್ ಅಂಶ ಇರುವುದರಿಂದ ಅದು ಎಲ್ಲಾ ಕೊಳೆಗಳನ್ನು ಕ್ಲೀನ್ ಮಾಡುತ್ತದೆ. ಹತ್ತಿ ಸಹಾಯದಿಂದ ನೇಲ್ ರಿಮೂವರ್ ಹಾಕಿಕೊಂಡು ವಿದ್ಯುತ್ ಫಲಕ ಕ್ಲೀನ್ ಮಾಡಿ.
● ಟೂತ್ಪೇಸ್ಟ್ ಬಳಸುವ ಮೂಲಕ ಕ್ಲೀನ್ ಮಾಡಿ. ಇದರಲ್ಲೂ ಕಲೆಗಳನ್ನು ತೊಳೆದು ಹಾಕುವ ಅಂಶ ಇರುತ್ತದೆ. ಅದು ಜಿಡ್ಡು ಹಾಗೂ ಹಳದಿ ಕಲೆ ಹೋಗಿ ಫಳ ಫಳ ಹೊಳೆಯುವಂತೆ ಮಾಡುತ್ತವೆ. ಆದ್ದರಿಂದ ಒಂದು ಒದ್ದೆ ಬಟ್ಟೆಗೆ ಟೂತ್ಪೇಸ್ಟ್ ಹಾಕಿಕೊಂಡು ಸ್ವಿಚ್ ಬೋರ್ಡ್ ಗಳನ್ನು ಕ್ಲೀನ್ ಮಾಡಿ.
● ವಿನೆಗರ್ ಬಳಸಿ ಕ್ಲೀನ್ ಮಾಡಿ, ವಿನೆಗರ್ ನಲ್ಲಿರುವ ಅಂಶ ಸ್ವಿಚ್ ಬೋರ್ಡ್ ಮೇಲೆ ಇರುವ ಜಡ್ಡಿನಾಂಶ ಹಾಗೂ ಮಸಾಲೆ ಕಲೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದ್ದರಿಂದ ಒಂದು ಕಪ್ ನೀರಿಗೆ ಎರಡು ಚಮಚ ವಿನೆಗರ್ ಹಾಕಿ ನಿಮ್ಮ ಮನೆಯ ಸ್ವಿಚ್ ಬೋರ್ಡ್ ಅನ್ನು ಕ್ಲೀನ್ ಮಾಡಿ.
● ಅಡುಗೆ ಸೋಡದಿಂದ ಕೂಡ ಕ್ಲೀನ್ ಮಾಡಬಹುದು . ಎರಡು ಮೂರು ಚಮಚ ಅಡುಗೆಸೋಡಕ್ಕೆ ನಿಂಬೆರಸವನ್ನು ಹಾಕಿ ಅದರಿಂದ ನಿಮ್ಮ ಸ್ವಿಚ್ ಬೋರ್ಡ್ ಅನ್ನು ಕ್ಲೀನ್ ಮಾಡಿದರೆ ಕೀಟಗಳಿಂದಾದ ಕಲೆ ಹಾಗೂ ಕೈಯಿಂದ ಆದ ಕಲೆ ಹೋಗಿ ಹೊಸ ಹೊಳಪು ಬರುತ್ತದೆ.