5 ವರ್ಷದ ಗೃಹಜ್ಯೋತಿ ಯೋಜನೆ ಬಿಡಿ ಈಗ ಕೇಂದ್ರದಿಂದ ಉಚಿತ ವಿದ್ಯುತ್ ಒದಗಿಸುವ ಹೊಸ ಯೋಜನೆ ಬಂದಿದೆ.! 25 ವರ್ಷ ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ.! ನೀವು ಅರ್ಜಿ ಸಲ್ಲಿಸಿ.!

 

ದಿನೇ ದಿನೇ ಮನುಷ್ಯನ ಜೀವನ ದುಬಾರಿ ಆಗುತ್ತಿದೆ ದಿನಬಳಕೆಯ ಎಲ್ಲಾ ವಸ್ತುಗಳ ಬೆಲೆಯು ಕೂಡ ಗಗನಕ್ಕೇರುತ್ತಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ಕಷ್ಟವಾಗುತ್ತಿದೆ. ಇಂತಹ ಸಮಯದಲ್ಲಿ ಸರ್ಕಾರಗಳು ಜನಸಾಮಾನ್ಯರ ನೆರವಿಗೆ ಬರುತ್ತಿದೆ ಇತ್ತೀಚೆಗೆ ವಿದ್ಯುತ್ ಬಿಲ್ ಕೂಡ ಹೆಚ್ಚಾಗುತ್ತಿರುವುದನ್ನು ನಾವು ಗಮನಿಸಬಹುದು.

ಆದರೆ ಕರ್ನಾಟಕದ ಗೃಹಜ್ಯೋತಿ ಯೋಜನೆಯಂತೆ ಕೆಲವು ರಾಜ್ಯಗಳಲ್ಲಿ ಮಾತ್ರ ಕಂಡೀಷನ್ ಜೊತೆ ಉಚಿತ ವಿದ್ಯುತ್ (free electricity) ನೀಡುವ ಯೋಜನೆಗಳನ್ನು ಕೂಡ ಸರ್ಕಾರ ಕೈಗೆ ತೆಗೆದುಕೊಂಡಿದೆ. ಇದಕ್ಕೂ ಮುನ್ನ ದೇಶದಲ್ಲಿ ಮತ್ತೊಂದು ಯೋಜನೆ ಇತ್ತು ಹಾಗೂ ಅದು ಇನ್ನೂ ಸಹ ಚಾಲ್ತಿಯಲ್ಲಿದೆ ಈ ಯೋಜನೆಯ ಫಲಾನುಭವಿಗಳಾದರೆ 25 ವರ್ಷಗಳ ಕಾಲ ನೀವು ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇರುವುದಿಲ್ಲ.

ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ಲ ಅಂದ್ರೆ ಈ ರೀತಿ ಮಾಡಿ ಸಾಕು ಖಂಡಿತ ಹಣ ಜಮೆ ಆಗುತ್ತೆ. ಸರ್ಕಾರದಿಂದ ಬಿಡುಗಡೆಯಾಯ್ತು ಹೊಸ ಮಾರ್ಗಸೂಚಿ.!

ಸೋಲಾರ್ ಪ್ಯಾನಲ್ ರೂಫ್ ಟಾಪ್ ಯೋಜನೆ (Solar panel roof top Scheme) ಎನ್ನುವ ಈ ಯೋಜನೆಯು ಕಳೆದ ಕೆಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಕೇಂದ್ರ ಸರ್ಕಾರದ (Central government) ಯೋಜನೆ ಆಗಿರುವ ಈ ಯೋಜನೆಯಲ್ಲಿ ನಿಮ್ಮ ಮನೆಗೆ ಬೇಕಾದ ವಿದ್ಯುತ್ತನ್ನು ನೀವೇ ಉತ್ಪಾದಿಸಬಹುದು.

ಸರಳವಾಗಿ ನಿಮ್ಮ ಮನೆಯ ಮೇಲ್ಛಾವಣಿ ಮೇಲೆ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ ತಯಾರಿಸಿ ನಿಮ್ಮ ಗೃಹಬಳಕೆಗೆ ಅದನ್ನು ಬಳಸಬಹುದು. ನಿಮ್ಮ ಮನೆಯಲ್ಲಿನ 6-8 LED ಬಲ್ಬ್, ಮಿಕ್ಸಿ, ಟಿವಿ, ವಿದ್ಯುತ್ ಗೀಸರ್, ಫ್ರಿಡ್ಜ್ ಮುಂತಾದ ಗೃಹಬಳಕೆಗೆ ಬೇಕಾದ ವಿದ್ಯುತ್ ಗೆ ಈ ಸೋಲಾರ್ ಪ್ಯಾನೆಲ್ ವಿದ್ಯುತ್ ಉತ್ಪಾದನೆ ಮಾಡಿಕೊಡುತ್ತದೆ ಅತಿ ಕಡಿಮೆ ವೆಚ್ಚದಲ್ಲಿ ಇದನ್ನು ನೀವು ಅಳವಡಿಸಿಕೊಳ್ಳಬಹುದು.

ವಾಹನ ಚಾಲಕ (ಡ್ರೈವರ್) ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನ. 7ನೇ ತರಗತಿ ಆಗಿದ್ರೆ ಸಾಕು ವೇತನ ₹42,000/- ಆಸಕ್ತರು ಅರ್ಜಿ ಸಲ್ಲಿಸಿ.!

ಹಲವು ಕಂಪನಿಗಳು ಈ ರೀತಿ ವಿದ್ಯುತ್ ಪ್ಯಾನಲ್ ಅಳವಡಿಸಿಕೊಳ್ಳುವುದಕ್ಕೆ ಅರ್ಜಿ ಕೂಡ ಆಹ್ವಾನ ಮಾಡಿದೆ. ಅವುಗಳಿಗೆ ನೀವು ಅರ್ಜಿ ಸಲ್ಲಿಸಿ ನೋಂದಣಿ ಆದರೆ ಅದರ ಖರ್ಚಿನಲ್ಲಿ 40% ಸರ್ಕಾರದಿಂದ ಸಬ್ಸಿಡಿ (40% Subsidy) ಕೂಡ ಸಿಗುತ್ತದೆ. ಈ ಯೋಜನೆಗೆ ಆರಂಭಿಕ ಹಂತದಲ್ಲಿ 1,20,000 ವರೆಗೆ ಖರ್ಚಾಗುತ್ತದೆ.

ಅದರಲ್ಲಿ ಸಬ್ಸಿಡಿ ರೂಪದಲ್ಲಿ ಸರ್ಕಾರವು ಸಹಾಯ ನೀಡುವ ಕಾರಣ 72,000 ಖರ್ಚಿನಲ್ಲಿ ನೀವು ಇದನ್ನು ಅಳವಡಿಸಿಕೊಳ್ಳಬಹುದು. ನೀವೇನಾದರೂ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಿದರೆ ಸರ್ಕಾರವೇ ಆ ವಿದ್ಯುತ್ ಅನ್ನು ಖರೀದಿಸಿ ನಿಮಗೆ ಹಣ ನೀಡುತ್ತದೆ ಇಂತಹ ಸರಳವಾದ ಯೋಜನೆಯನ್ನು ಭಾರತದ ಎಲ್ಲಾ ರಾಜ್ಯಗಳಿಗೂ ಕೂಡ ಜಾರಿ ತರಲಾಗಿದೆ.

ಸೆಪ್ಟೆಂಬರ್ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ ಹಣ ಬಂದ್, ಆಹಾರ ಇಲಾಖೆ ಸಚಿವ K.H. ಮುನಿಯಪ್ಪ ಅವರಿಂದ ಸ್ಪಷ್ಟನೆ.!

ಸೋಲಾರ್ ಪ್ಯಾನೆಲ್ ರೂಫ್ ಟಾಪ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:-

● ಸ್ಮಾರ್ಟ್ ವಿದ್ಯುತ್ ಆಪ್ (Smart Electricity app) ಮೂಲಕ ಕೂಡ ಅರ್ಜಿ ಸಲ್ಲಿಸಬಹುದು.
● ಮೊನೊಪಾರ್ಕ್ ಬೈಫೇಶಿಯಲ್ ತಂತ್ರಜ್ಞಾನದೊಂದಿಗೆ (Monopark bifacial) ಸೌರ ಫಲಕಗಳಿಗೆ ಮಾತ್ರ ಸರ್ಕಾರವು ಸಬ್ಸಿಡಿ ನೀಡುತ್ತದೆ ಎಂಬುದು ಇಲ್ಲಿ ಮುಖ್ಯವಾಗಿದೆ. ಈ ತಂತ್ರಜ್ಞಾನದ ಸೌರ ಫಲಕಗಳು ಎರಡೂ ಕಡೆ ಶಕ್ತಿಯನ್ನು ಉತ್ಪಾದಿಸುತ್ತವೆ ಎನ್ನುವುದು ಇದರ ವಿಶೇಷ.

● ಸೌರ ಫಲಕಕ್ಕಾಗಿ ನೀವು ವಿದ್ಯುತ್ ಇಲಾಖೆಯ ಅಧಿಕೃತ ವೆಬ್‌ಸೈಟ್ ಗೆ ಹೋಗಿ ಸೌರ ಮೇಲ್ಛಾವಣಿಗಾಗಿ ಅರ್ಜಿ ಸಲ್ಲಿಸುವ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕು. ನಂತರ ನೀವು ನಿಮ್ಮ ರಾಜ್ಯದ ಪ್ರಕಾರ ಸಬ್ಸಿಡಿ ಫಾರ್ಮ್ ಅನ್ನು ಸೆಲೆಕ್ಟ್ ಮಾಡಿ ಭರ್ತಿ ಮಾಡಬೇಕು, ಸರಿಯಾದ ವಿವರಗಳೊಂದಿಗೆ ಅರ್ಜಿ ಭರ್ತಿ ಮಾಡಿ ಕೇಳಲಾಗುವ ದಾಖಲೆಗಳನ್ನು ಸಲ್ಲಿಸಿದರೆ ಸಂಬಂಧ ಪಟ್ಟ ಅಧಿಕಾರಿಗಳು ಇದರ ಪರಿಶೀಲನೆ ನಡೆಸಿ ಸಹಾಯಧನಕ್ಕೆ ಅನುಮೋದನೆ ಮಾಡುತ್ತಾರೆ. 30 ದಿನಗಳ ನಂತರ ಸಬ್ಸಿಡಿ ನಿಮ್ಮ ಖಾತೆಗೆ ಜಮಾ ಆಗುತ್ತದೆ.

Leave a Comment

%d bloggers like this: