ಹೊಸ ರೇಷನ್ ಕಾರ್ಡ್ ಪಡೆಯಲು, ರೇಷನ್ ಕಾರ್ಡ್ ಹೆಸರು ಸೇರ್ಪಡೆ, ಹೆಸರು ತೆಗೆದು ಹಾಕುವುದು, ಎಲ್ಲಾ ರೀತಿಯ ತಿದ್ದುಪಡಿಗೆ 1 ತಿಂಗಳ ಕಾಲಾವಕಾಶ ನೀಡಿದ ಸರ್ಕಾರ.!

 

ಕರ್ನಾಟಕದಲ್ಲಿ ಈಗ ಅನ್ನಭಾಗ್ಯ, ಗೃಹಲಕ್ಷ್ಮಿ ಮುಂತಾದ ಗ್ಯಾರಂಟಿ ಕಾರ್ಡ್ ಯೋಜನೆಗಳ (Guarantee Scheme) ಫಲಾನುಭವಿಗಳಾಗಲು ರೇಷನ್ ಕಾರ್ಡ್ (Ration card) ಒಂದು ಕಡ್ಡಾಯ ದಾಖಲೆಯಾಗಿದೆ ಇದೇ ಸಮಯದಲ್ಲಿ ಅನೇಕರಿಗೆ ರೇಷನ್ ಕಾರ್ಡ್ ಇಲ್ಲದೆ ಸಮಸ್ಯೆಯಾಗಿದೆ.

ಯಾಕೆಂದರೆ ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದ್ದ 2,95,986 ಅರ್ಜಿಗಳು ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದ (Code of Conduct) ಕಾರಣ ವಿತರಣೆಯಾಗಿಲ್ಲ ಹಾಗೂ ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರಿಗೆ ರೇಷನ್ ಕಾರ್ಡ್ ಅಲ್ಲಿ ಇರುವ ಹೆಸರು ಹಾಗೂ ಆಧಾರ್ ಕಾರ್ಡ್ ಅಲ್ಲಿರುವ ಹೆಸರು ಹೊಂದಾಣಿಕೆ ಆಗದ ಕಾರಣ ತಿದ್ದುಪಡಿ ಮಾಡಿಸಬೇಕಾದ ಅವಶ್ಯಕತೆ ಇದೆ ಮತ್ತು ಇನ್ನು ಕೆಲವರ ಹೆಸರುಗಳು ರೇಷನ್ ಕಾರ್ಡ್ ಅಲ್ಲಿ ಸೇರ್ಪಡೆ ಆಗಿಲ್ಲ ಇವರೆಲ್ಲರೂ ಕೂಡ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಪಟ್ಟಿ ಬಿಡುಗಡೆ ಈ ಲಿಸ್ಟ್ ನಲ್ಲಿ ಹೆಸರು ಇದ್ದವರಿಗೆ ಮಾತ್ರ ಸಿಗುತ್ತದೆ 2000 ನಿಮ್ಮ ಹೆಸರು ಈ ಲಿಸ್ಟ್ ನಲ್ಲಿದಿಯೇ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಆದರೆ ಗೃಹಲಕ್ಷ್ಮಿ ಯೋಜನೆಗೆ ಕಡೆ ದಿನಾಂಕ ನಿಗದಿಪಡಿಸಿದ ಕಾರಣ ಹೊಸ ರೇಷನ್ ಕಾರ್ಡ್ ಪಡೆದ ಬಳಿಕವೂ ಕೂಡ ಅಥವಾ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಂಡ ಬಳಿಕವೂ ಕೂಡ ಅರ್ಜಿ ಸಲ್ಲಿಸಿ ಫಲಾನುಭವಿಗಳಾಗಬಹುದು. ಯಾವಾಗ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುತ್ತದೆ ಹಾಗೂ ತಿದ್ದುಪಡಿಗೆ ಅವಕಾಶ ಯಾವಾಗ ನೀಡುತ್ತದೆ ಎಂದು ಎಲ್ಲರೂ ಕಾಯುತ್ತಿದ್ದಾರೆ ಅಂತವರಿಗೆ ಈಗ ಸಿಹಿಸುದ್ದಿ.

ಯಾಕೆಂದರೆ, ಚುನಾವಣೆ ನೀತಿ ಸಂಹಿತೆಯಿಂದ ಸ್ಥಗಿತಗೊಂಡಿದ್ದ ಹೊಸ ರೇಷನ್ ಕಾರ್ಡ್ ಅರ್ಜಿ ವಿತರಣೆ ಕಾರ್ಯಕ್ಕೆ ಈಗ ಚಾಲನೆ ಸಿಕ್ಕಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಅರ್ಜಿಗಳ ಪರಿಶೀಲನೆ ನಡೆಸಿ ಆರ್ಥಿಕ ಇಲಾಖೆಯ ಸಲಹೆ ಮೇರೆಗೆ ಅರ್ಹರಿಗೆ BPL ರೇಷನ್ ಕಾರ್ಡ್ ನೀಡುವುದಾಗಿ ಆಹಾರ ಇಲಾಖೆ ಸಚಿವರಾದ ಕೆ.ಎಚ್. ಮುನಿಯಪ್ಪ ರವರು ( Food and Civil supply Minister K.H Muniyappa) ತಿಳಿಸಿದ್ದಾರೆ ಹಾಗೂ BPL ರೇಷನ್ ಕಾರ್ಡ್ ರದ್ದು ಮಾಡುವ ಬಗ್ಗೆ ಸರ್ಕಾರ ಮಾಡಿರುವ ಹೊಸ ಆದೇಶದ ಬಗ್ಗೆ ಕೂಡ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

SSC ಬೃಹತ್ ನೇಮಕಾತಿ, 1207 ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ.! ವೇತನ 34,800/- ಆಸಕ್ತರು ಅರ್ಜಿ ಸಲ್ಲಿಸಿ.!

ಗ್ಯಾರಂಟಿ ಯೋಜನೆಗಳ ಕಾರಣವಾಗಿ ಮತ್ತು BPL ಕಾರ್ಡ್ ಹೊಂದಿರುವವರಿಗೆ ಸಿಗುವ ವೈದ್ಯಕೀಯ ಸೌಲಭ್ಯ ಇನ್ನಿತರ ಕಾರಣಗಳಿಗಾಗಿ ಅನುಕೂಲಸ್ಥರು ಕೂಡ ನಕಲಿ ದಾಖಲೆಗಳನ್ನು ಕೊಟ್ಟು ಅಥವಾ ಸರ್ಕಾರಕ್ಕೆ ವಂ’ಚಿ’ಸಿ BPL ರೇಷನ್ ಕಾರ್ಡ್ ಗಳನ್ನು ಪಡೆಯುತ್ತಿದ್ದಾರೆ.

ಇದು ಇಲಾಖೆಯ ಗಮನಕ್ಕೆ ಬಂದಿದೆ ಹಾಗಾಗಿ ಇನ್ನು ಮುಂದೆ ಇನ್ನು ಕಟ್ಟುನಿಟ್ಟಿನ ನಿಯಮಗಳನ್ನು ಮಾಡಲಾಗುತ್ತದೆ ವೈಟ್ ಬೋರ್ಡ್ ಕಾರ್ (White bord Card) ಹೊಂದಿರುವ ಕುಟುಂಬಗಳಿಗೂ BPL ಕಾರ್ಡ್ ನೀಡುವುದಿಲ್ಲ, ಒಂದು ವೇಳೆ ಈಗಾಗಲೇ ಅವರು ಕಾರ್ಡ್ ಪಡೆದಿದ್ದರು ಕೂಡ ಅವರ ಕಾರ್ಡ್ ಗಳು ರದ್ದಾಗುತ್ತವೆ (BPL Card Cancel) ಆದರೆ ಉದ್ಯೋಗದ ಕಾರಣಕ್ಕಾಗಿ ಎಲ್ಲೋ ಬೋರ್ಡ್ ಕಾರ್ (Yellow Bord Card) ಹೊಂದಿದ್ದರೆ BPL ರೇಷನ್ ಕಾರ್ಡ್ ಪಡೆಯುವುದಕ್ಕೆ ಸಮಸ್ಯೆ ಇರುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಹೆಂಡತಿ 2ನೇ ಮದುವೆ ಆದ್ರೂ ಕೂಡ ಮೊದಲನೇ ಪತಿ ಜೀವನಾಂಶ ಕೊಡಲೇಬೇಕಾ.?

ಸರ್ಕಾರ ಮಾಹಿತಿ ಸಂಗ್ರಹಣೆ ಯಾವ ರೀತಿ ಮಾಡುತ್ತದೆ ಎಂದರೆ ಈಗ ಎಲ್ಲಾ ದಾಖಲೆಗಳಿಗೂ ಆಧಾರ್ ಕಾರ್ಡ್ ಕಡ್ಡಾಯ ಆಗಿರುವುದರಿಂದ ಅದರ ಆಧಾರದ ಮೇಲೆ ತನಿಖೆ ಕೈಗೊಂಡು ಅನುಕೂಲಸ್ಥರು BPL ಕಾರ್ಡ್ ಹೊಂದಿದ್ದರೆ ರದ್ದು ಮಾಡುವ ಕಾರ್ಯಕ್ಕೆ ಮುಂದಾಗಲು ಚಿಂತನೆ ಮಾಡುತ್ತಿದೆ ಎನ್ನುವುದು ತಿಳಿದು ಬಂದಿದೆ. ಸರ್ಕಾರ ಕೈಗೊಂಡಿರುವ ಈ ಹೊಸ ನಿಯಮದ ಪರ ವಿರೋಧವಾಗಿ ಚರ್ಚೆಯೂ ಆರಂಭವಾಗಿದೆ.

ಆದರೆ ಸಚಿವರು ವೈದ್ಯಕೀಯ ಕಾರಣಕ್ಕಾಗಿ BPL ಕಾರ್ಡ್ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಆಂಧ್ರಪ್ರದೇಶದಲ್ಲಿ (Andrapradesh) ಜಾರಿ ಇರುವುದಂತೆ ಆಹಾರಕ್ಕಾಗಿ ಎ ಕಾರ್ಡ್ (A card) ವೈದ್ಯಕೀಯ ಚಿಕಿತ್ಸೆಗಾಗಿ ಬಿ ಕಾರ್ಡ್ (B Card) ಮಾದರಿಯಲ್ಲಿ ವಿತರಣೆ ಮಾಡಲು ಅಧಿಕಾರಿಗಳ ತಂಡವನ್ನು ಆ ರಾಜ್ಯಕ್ಕೆ ಕಳುಹಿಸಿ ಅಧ್ಯಯನದ ವರದಿ ಪಡೆಯುತ್ತೇವೆ ಬಳಿಕ ಆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಮನೆ ಕಟ್ಟಲು 5 ಲಕ್ಷ, ಮನೆ ದುರಸ್ತಿಗೆ 3 ಲಕ್ಷ, ಸರ್ಕಾರದಿಂದ ಸಹಾಯಧನ ನೀಡುತ್ತಿದ್ದಾರೆ. ಆಸಕ್ತರು ಅರ್ಜಿ ಸಲ್ಲಿಸಿ ಧನಸಹಾಯ ಪಡೆಯಿರಿ.!

Leave a Comment

%d bloggers like this: