ಈ ವರ್ಷ ರಾಜ್ಯದಲ್ಲಿ ಭೀ’ಕ’ರ ಬರಗಾಲದ (drought) ಪರಿಸ್ಥಿತಿ ಎದುರಾಗಿ ರೈತರಿಗೆ ಅಪಾರ ನ’ಷ್ಟವಾಗಿರುವುದರಿಂದ ರೈತರಿಗೆ ಪರಿಹಾರದ ಹಣ ಮಾತ್ರವಲ್ಲದೆ ಕೃಷಿ ಉದ್ದೇಶಕ್ಕಾಗಿ ರೈತರ ಮಾಡಿರುವ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ (rquest to Government for loan waiver) ಮನವಿ ಸಲ್ಲಿಕೆಯಾಗುತ್ತಿವೆ.
ಆದರೆ ಈಗಾಗಲೇ ಗ್ಯಾರಂಟಿ ಹಾಗೂ ಗ್ಯಾರಂಟಿಯೇತರವಾಗಿ ಹಲವಾರು ಜನಪರ ಯೋಜನೆಗಳನ್ನು ಕೈಗೊಂಡು ಅಪಾರ ಮೊತ್ತದ ಬಜೆಟ್ ಹೊಂದಿಸಬೇಕಾದ ಹೊಣೆ ಹೊತ್ತಿಕೊಂಡಿರುವ ರಾಜ್ಯ ಸರ್ಕಾರಕ್ಕೆ ಈಗ ಮತ್ತೊಮ್ಮೆ ರೈತರ ಸಾಲ ಮನ್ನಾ ಮಾಡಿದರೆ ಅದು ಕೂಡ ದೊಡ್ಡ ಹೊರೆಯಾಗಲಿದೆ. ಹಾಗಾಗಿ ಕಳೆದ ವಾರ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಮಾನ್ಯ ಮುಖ್ಯಮಂತ್ರಿಗಳು ರೈತರ ಸಾಲ ಮನ್ನಾ ಮಾಡುವ ಪ್ರಶ್ನೆ ಸರ್ಕಾರದ ಮುಂದಿಲ್ಲ ಎಂದು ಉತ್ತರಿಸಿ, ರೈತರಿಗೆ ಒಂದು ಸಮಾಧಾನಕರವಾದ ಒಂದು ಸಿಹಿ ಸುದ್ದಿ ನೀಡಿದ್ದಾರೆ.
ಸಹಕಾರಿ ವಲಯದಲ್ಲಿ (co-operative bank agriculture loan) ಕೃಷಿ ಉದ್ದೇಶಕ್ಕಾಗಿ ಅಲ್ಪಾವಧಿ ಸಾಲ ಮಾಡಿರುವ ರೈತರಿಗೆ ಬಡ್ಡಿ ರಹಿತವಾಗಿ (Without intrest lian for short period) ಸಾಲ ಸೌಲಭ್ಯ ಸಿಗುತ್ತಿದೆ. ಇದನ್ನು ಮಧ್ಯಮಾವಧಿ ಸಾಲ ಮಾಡಿರುವ ರೈತರಿಗೂ (Medium period) ಕೂಡ ವಿಸ್ತರಿಸಲು ಸರ್ಕಾರ ಚಿಂತನೆ ಮಾಡಿದ್ದು ಅದಕ್ಕೆ ಕಂಡಿಷನ್ ಗಳನ್ನು ಹೇರಿದೆ.
ಈ ವರ್ಷ ಮಧ್ಯಮಾವಧಿ ಅಂದರೆ ಗರಿಷ್ಠ 10 ಲಕ್ಷದವರೆಗೆ ಸಹಕಾರಿ ಸಂಘಗಳಲ್ಲಿ ಸಾಲ ಮಾಡಿರುವ ರೈತರ ಬಡ್ಡಿ ಮನ್ನವಾಗುತ್ತಿದೆ. ಆದರೆ ಯಾರು ಅಸಲು ಮರುಪಾವತಿ ಮಾಡಿರುತ್ತಾರೆ ಅಂತಹ ರೈತರಿಗೆ ಮಾತ್ರ ಈ ಅನುಕೂಲತೆ ಸಿಗುತ್ತಿದೆ. ಈ ಬಾರಿ ಬೆಳೆ ಹಾನಿಯಾಗಿರುವುದರಿಂದ ರೈತರಿಗೆ ತಾವು ಮರುಪಾವತಿ ಮಾಡಬೇಕಾದ ಅಸಲನ್ನು ಒದಗಿಸುವುದು ದೊಡ್ಡ ಸವಲಾಗಿದೆ ಹಾಗಾಗಿ ಯಶಸ್ವಿಯಾಗಿ ಎಲ್ಲಾ ರೈತರಿಗೂ ಇದು ತಲುಪುತ್ತಿಲ್ಲ ಎಂದು ರೈತ ವಲಯ ದೂರುತ್ತಿದೆ.
ಇದರ ನಡುವೆ ತುಮಕೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಹಕಾರ ಸಚಿವರಾದ ಕೆ ಎನ್ ರಾಜಣ್ಣರವರು (K.N Rajanna) ಸರ್ಕಾರದ ಹೊಸ ಯೋಜನೆ ಬಗ್ಗೆ ಪ್ರಸ್ತಾಪ ಪಡಿಸಿದ್ದಾರೆ. ಡಿಸೆಂಬರ್ 18ರ ತುಮಕೂರಿನಲ್ಲಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಸಹಕಾರ ಸಚಿವರು ರೈತರ ಸಾಲದ ವಿಚಾರವಾಗಿ ಮಾತನಾಡಿ 2017-18 ರಲ್ಲಿ 50,000 ಹಾಗೂ 2018-19 ರಲ್ಲಿ 1 ಲಕ್ಷದವರೆಗೆ ರೈತರ ಸಾಲ ಮನ್ನಾ ಮಾಡಲಾಗಿದೆ.
ಆದರೆ ಎಲ್ಲ ರೈತರು ಕೂಡ ಸಹಕಾರಿ ಸಂಘಗಳಲ್ಲಿ ಸಾಲ ತೆಗೆದುಕೊಳ್ಳುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕೂಡ ಕೃಷಿ ಉದ್ದೇಶಕ್ಕಾಗಿ ಸಾಲ ಮಾಡುತ್ತಾರೆ ಮತ್ತು ಇನ್ನಷ್ಟು ಹಣಕಾಸು ಸಂಸ್ಥೆಗಳಲ್ಲಿ ಕೂಡ ಸಾಲ ಮಾಡುತ್ತಾರೆ ಹೀಗಾಗಿ ಸಹಕಾರಿ ಸಂಘಗಳಿಂದ ಸಾಲ ಮನ್ನಾ ಮಾಡಿದರೆ ಇದು ಎಲ್ಲರಿಗೂ ಸಮಾನವಾಗಿ ತಲುಪುವುದಿಲ್ಲ ಹಾಗಾಗಿ ಆಂಧ್ರಪ್ರದೇಶದ ಮಾದರಿಯಲ್ಲಿ (AP Model) ಪರಿಹಾರ ನೀಡಲು ಸರ್ಕಾರ ಚಿಂತಿಸುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಅವರು ಹೇಳಿರುವ ಪ್ರಕಾರ ಗರಿಷ್ಠ ಐದು ಎಕರೆವರೆಗೆ ಪ್ರತಿ ಎಕರೆಗೂ ಇಂತಿಷ್ಟು ಎಂದು ಸರ್ಕಾರ ಪರಿಹಾರ ಹಣವನ್ನು ನೀಡಿದರೆ ಎಲ್ಲಾ ರೈತರಿಗೂ ಅನುಕೂಲವಾಗಲಿದೆ ಎನ್ನುವುದು ಸರ್ಕಾರದ ಚಿಂತನೆ. ಇದೇ ಮಾದರಿಯನ್ನು ಆಂಧ್ರ ಪ್ರದೇಶದಲ್ಲೂ ಕೂಡ ಅನುಸರಿಸಲಾಗುತ್ತಿದೆ. 2020ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ನಾಥ ರೆಡ್ಡಿ (Jaganatha reddy) ಯವರು ರೈತ ಭರೋಸಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ.
ನಮ್ಮ ರಾಜ್ಯದಲ್ಲಿ ರೈತ ಸಂಪರ್ಕ ಕೇಂದ್ರಗಳು ಕಾರ್ಯನಿರ್ವಹಿಸುವಂತೆ ಅಲ್ಲಿ ಭರೋಸಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದು ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಯೋಜನೆಗಳನ್ನು ರೈತನಿಗೆ ಯಶಸ್ವಿಯಾಗಿ ತಲುಪಿಸಲು ವಿಶೇಷ ಮಾದರಿಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಸದ್ಯಕ್ಕೆ ಈಗ ದೇಶದಲ್ಲಿ ಮಾದರಿ ವಿಧಾನ ಎಂದೆನಿಸಿ ರಾಜ್ಯವು ಕೂಡ ಪರಿಹಾರದ ಹಣ ನೀಡುವ ವಿಚಾರದಲ್ಲಿ ಅದನ್ನು ಅನುಸರಿಸಲು ನಿರ್ಧರಿಸಿದೆ.