ಆಸ್ತಿ ಖರೀದಿಗೆ ಮಿತಿ ವಿಧಿಸಿದ ಸರ್ಕಾರ. ಒಬ್ಬ ವ್ಯಕ್ತಿ ಎಷ್ಟು ಜಮೀನು ಖರೀದಿಸಬಹುದು ಗೊತ್ತಾ.?

 

ಒಬ್ಬ ವ್ಯಕ್ತಿಯು ನ್ಯಾಯಯುತ ಮಾರ್ಗದಲ್ಲಿ ಎಷ್ಟು ಬೇಕಾದರೂ ಹಣ ಸಂಪಾದನೆ ಮಾಡಬಹುದು, ಹಾಗೆಯೇ ಸಂಪಾದನೆ ಮಾಡಿರುವ ಹಣಕ್ಕೆ ಆದಾಯದ ಮೂಲವನ್ನು ತೋರಿಸಿ ಅದಕ್ಕೆ ಸರ್ಕಾರಕ್ಕೆ ಸಲ್ಲಿಸಬೇಕಾದ ಆದಾಯ ತೆರಿಗೆಯನ್ನು ಕೂಡ ಸಲ್ಲಿಸಿ ಎಷ್ಟು ಹಣ ಬೇಕಾದರೂ ಉಳಿತಾಯ ಮಾಡಿ ಇಟ್ಟುಕೊಳ್ಳಬಹುದು.

ಇದಕ್ಕೆ ಭಾರತದಲ್ಲಿ ಯಾವುದೇ ಮಿತಿ ಇಲ್ಲ, ಬಹುಶಃ ಪ್ರಪಂಚದ ಯಾವ ದೇಶದಲ್ಲೂ ಕೂಡ ಈ ರೀತಿ ಒಬ್ಬ ವ್ಯಕ್ತಿ ಗಳಿಸುವ ಆದಾಯದ ಮೇಲೆ ಅದು ನ್ಯಾಯಯುತ ಮಾರ್ಗದಲ್ಲಿ ಇದ್ದಾಗ ಯಾವುದೇ ಮಿತಿ ಹೇರುವುದಿಲ್ಲ. ಆದರೆ ವ್ಯಕ್ತಿ ಹೊಂದಬಹುದಾದ ಕೃಷಿ ಭೂಮಿ (Agriculture land) ಹಾಗೂ ಬಂಗಾರದ ಮೇಲೆ ಖಂಡಿತವಾಗಿಯೂ ಸರ್ಕಾರ ಮಿತಿ (limit ) ಹೇರುತ್ತದೆ ಭಾರತದಲ್ಲಿಯೂ (government rule) ಕೂಡ ಈ ರೀತಿ ಕಾನೂನು ಇದೆ.

ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಕಳುಹಿಸುವವರಿಗೆ RBI ನಿಂದ ಮಹತ್ವದ ಸೂಚನೆ.! ಈ ತಪ್ಪು ಮಾಡದಂತೆ ಎಚ್ಚರ

ಒಬ್ಬ ವ್ಯಕ್ತಿಯು ವಿವಾಹಿತನಾಗಿದ್ದರೆ ಎಷ್ಟು ಭೂಮಿಯನ್ನು ಹೊಂದಬಹುದು ಅದರಲ್ಲೂ ಕೃಷಿ ಯೋಗ್ಯಭೂಮಿ ಆದರೆ ಎಷ್ಟು ಮಿತಿ ಇದೆ, ಕೃಷಿಗೆ ಯೋಗ್ಯವಲ್ಲದ ಭೂಮಿ ಆದರೆ ಎಷ್ಟು ಮಿತಿ ಎನ್ನುವ ವ್ಯತ್ಯಾಸಗಳಿದೆ. ಈ ವಿಚಾರವಾಗಿ ಭಾರತದಲ್ಲಿ ಏಕರೂಪವಾದ ಕಾನೂನು ಇಲ್ಲ. ರಾಜ್ಯದಿಂದ ರಾಜ್ಯಕ್ಕೆ ಇದು ಭಿನ್ನವಾಗಿರುತ್ತದೆ ಇವುಗಳ ಬಗ್ಗೆ ಮತ್ತು ವಿದೇಶಿಗರಿಗೆ ಭಾರತದಲ್ಲಿ ಭೂಮಿ ಖರೀದಿಸಲು ಅರ್ಹತೆ ಇರುತ್ತದೆಯೇ ಒಂದು ವೇಳೆ ಖರೀದಿಸಲು ಸಾಧ್ಯವಿಲ್ಲ ಎಂದರೆ ಅವರು ಇನ್ಯಾವುದೇ ಮೂಲದಿಂದ ಆಸ್ತಿ ಹೊಂದಬಹುದೇ ಎನ್ನುವ ಎಲ್ಲ ಪ್ರಶ್ನೆಗೂ ಈ ಅಂಕಣದಲ್ಲಿ ಉತ್ತರ ಇದೆ.

ಭಾರತದಲ್ಲಿ ರಾಜರ ಆಳ್ವಿಕೆ ಹಾಗೂ ಬ್ರಿಟಿಷರ ಆಳ್ವಿಕೆ ಇದ್ದಾಗ ಜಮೀನ್ದಾರಿ ಪದ್ಧತಿ, ರೈತವಾರಿ ಪದ್ಧತಿ ಮಹಲ್ದಾರಿ ಪದ್ಧತಿ ಎನ್ನುವ ಕೃಷಿ ಪದ್ಧತಿ ಇತ್ತು. ಅತಿ ಹೆಚ್ಚು ಪ್ರಚಲಿತದಲ್ಲಿದ್ದ ಈ ಜಮೀನ್ದಾರಿ ಪದ್ಧತಿಯು ನಿಷೇಧ ಆದ ಬಳಿಕ ಸ್ವತಂತ್ರದ ನಂತರ ರಾಷ್ಟ್ರೀಯ ಮಟ್ಟದಲ್ಲಿ ಈ ಆಸ್ತಿ ವಿಚಾರವಾಗಿ ಅನೇಕ ಬದಲಾವಣೆಗಳಾದವು. ಅದರಲ್ಲಿ ಕೆಲವು ಅಧಿಕಾರಗಳನ್ನು ರಾಜ್ಯಕ್ಕೂ ಕೂಡ ಬಿಟ್ಟು ಕೊಡಲಾಯಿತು.

ಇನ್ಮುಂದೆ ಗಂಡಸರಿಗೂ ಪ್ರತಿ ತಿಂಗಳು 3000 ಕೊಡಲು ನಿರ್ಧರಿಸಿದ ಸರ್ಕಾರ. ಇದ್ಯಾವ ಸ್ಕೀಮ್ ಅಂತ ಒಮ್ಮೆ ನೋಡಿ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಅಲ್ಲಿಸಿ ಹಣ ಪಡೆಯಬಹುದು.!

ಆದ್ದರಿಂದ ಪ್ರತಿ ರಾಜ್ಯದಲ್ಲಿ ಭೂಮಿಯನ್ನು ಖರೀದಿಸುವ ಗರಿಷ್ಠ ಮಿತಿಯೂ ಬದಲಾಗುತ್ತದೆ. ಇದಲ್ಲದೆ, ಕೃಷಿ ಭೂಮಿಯನ್ನು ಯಾರು ಖರೀದಿಸಬಹುದು ಎನ್ನುವುದನ್ನು ಕೂಡ ರಾಜ್ಯ ನಿರ್ಧಾರ ಮಾಡುತ್ತದೆ. ಆ ಪ್ರಕಾರವಾಗಿ ಕೆಲವು ರಾಜ್ಯಗಳಲ್ಲಿ ಆಯಾ ರಾಜ್ಯ ಸರ್ಕಾರ ವಿಧಿಸಿರುವ ಮಿತಿ ಬಗ್ಗೆ ಈ ಅಂಕಣದಲ್ಲಿ ತಿಳಿಸಿದ್ದೇವೆ.

● ಕೇರಳದಲ್ಲಿ ಭೂ ತಿದ್ದುಪಡಿ ಕಾಯ್ದೆ 1963 ರ ಅಡಿಯಲ್ಲಿ ಅವಿವಾಹಿತ ವ್ಯಕ್ತಿಯೊಬ್ಬರು 7.5 ಎಕರೆ ಭೂಮಿಯನ್ನು ಮಾತ್ರ ಖರೀದಿಸಬಹುದು. ಅದೇ ಸಮಯದಲ್ಲಿ, 5 ಸದಸ್ಯರ ಕುಟುಂಬವು 15 ಎಕರೆಗಳವರೆಗೆ ಮಾತ್ರ ಕೃಷಿ ಭೂಮಿಯನ್ನು ಖರೀದಿಸಬಹುದು.
● ಮಹಾರಾಷ್ಟ್ರ ರಾಜ್ಯದಲ್ಲಿ ಕೃಷಿಯೋಗ್ಯ ಭೂಮಿಯನ್ನು ಈಗಾಗಲೇ ಕೃಷಿ ಮಾಡುತ್ತಿರುವವರು ಮಾತ್ರ ಖರೀದಿಸಬಹುದು ಆದರೆ ಗರಿಷ್ಠ ಮಿತಿ 54 ಎಕರೆ ಹೇರಿಕೆಯಾಗಿದೆ.

ಇಂದಿನಿಂದ ಉಚಿತ ವಿದ್ಯುತ್, ಆದರೆ ಈ ಜನರು ಮಾತ್ರ ಬಿಲ್ ಕಟ್ಟಬೇಕಾಗುತ್ತದೆ.! ನಿಮ್ಮ ಹೆಸರು ಈ ಲಿಸ್ಟ್ ನಲ್ಲಿದಿಯೇ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

● ಪಶ್ಚಿಮ ಬಂಗಾಳದಲ್ಲಿ ಗರಿಷ್ಠ 24.5 ಎಕರೆ ಭೂಮಿಯನ್ನು ವ್ಯಕ್ತಿಯೊಬ್ಬ ಖರೀದಿಸಬಹುದು.
3 ಹಿಮಾಚಲ ಪ್ರದೇಶದಲ್ಲಿ 32 ಎಕರೆ ಭೂಮಿಯನ್ನು ಮಾತ್ರ ಖರೀದಿಸಬಹುದು.
● ಕರ್ನಾಟಕದಲ್ಲೂ 54 ಎಕರೆ ಗರಿಷ್ಠ ಮಿತಿ.
● ಉತ್ತರ ಪ್ರದೇಶದಲ್ಲಿ ಒಬ್ಬ ವ್ಯಕ್ತಿಯು ಗರಿಷ್ಠ 12.5 ಎಕರೆ ಕೃಷಿಯೋಗ್ಯ ಭೂಮಿಯನ್ನು ಖರೀದಿಸಬಹುದು.

● ಬಿಹಾರದಲ್ಲಿ, ಕೃಷಿ ಅಥವಾ ಕೃಷಿಯೇತರ ಭೂಮಿಯಾಗಿದ್ದರೂ 15 ಎಕರೆಗಳವರೆಗೆ ಮಾತ್ರ ಖರೀದಿಸಬಹುದು.
● ಗುಜರಾತ್ ರಾಜ್ಯದಲ್ಲಿ ಕೃಷಿ ಭೂಮಿಯನ್ನು ಕೃಷಿ ಮಾಡುತ್ತಿರುವವರು ಮಾತ್ರ ಖರೀದಿಸಬಹುದು.
● ಹರಿಯಾಣದಲ್ಲಿ ನೀವು ಎಷ್ಟು ಬೇಕಾದರೂ ಕೃಷಿಯೋಗ್ಯವಲ್ಲದ ಭೂಮಿಯನ್ನು ಖರೀದಿಸಬಹುದು.

● ಹಾಗೆಯೇ ಅನಿವಾಸಿ ಭಾರತೀಯರು, ಸಾಗರೋತ್ತರ ನಾಗರಿಕರು ಭಾರತದಲ್ಲಿ ಕೃಷಿಯೋಗ್ಯ ಭೂಮಿಯನ್ನಾಗಲಿ. ಫಾರ್ಮ್ ಹೌಸ್ ಅಥವಾ ಆಸ್ತಿಯ ಪ್ಲಾಟ್ ಆಗಲಿ ಖರೀದಿಸಲು ಅವಕಾಶವಿಲ್ಲ. ಆದರೆ ಯಾರಾದರೂ ಉತ್ತರಾಧಿಕಾರದಲ್ಲಿ ಭೂಮಿಯನ್ನು ನೀಡಲು ಬಯಸಿದರೆ ಅದನ್ನು ಸ್ವೀಕರಿಬಹುದು.

Leave a Comment

%d bloggers like this: