ಟೆಕ್ನಾಲಜಿ ಹೆಚ್ಚಾದಂತೆ ಅದರಿಂದ ನಮಗೆ ಉಪಯೋಗ ಹೆಚ್ಚಾಗಬೇಕಿತ್ತು, ಆದರೆ ಇಂದು ನಾವು ಉಪಯೋಗಿಸುತ್ತಿರುವ ಉಪಕರಣಗಳಿಂದ ನಮಗೆ ಉಪಕಾರದ ಜೊತೆಗೆ ಅಷ್ಟೇ ಹಾನಿಯೂ ಕೂಡ ಆಗುತ್ತಿದೆ. ಇದಕ್ಕೆ ಅತ್ಯುತ್ತಮ ನಿದರ್ಶನ ಮೊಬೈಲ್ ಮೊಬೈಲ್ ಗೆ ಅಡಿಕ್ಟ್ ಆಗುವುದರಿಂದ ಮಾನಸಿಕ ಆರೋಗ್ಯ ಹಾಳಾಗುತ್ತದೆ.
ಹೆಚ್ಚು ಹೊತ್ತು ಮೊಬೈಲ್ ನಲ್ಲಿ ಇರುವುದರಿಂದ ಕಣ್ಣು ಹಾಗೂ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ ದೈಹಿಕ ಸ್ವಾಸ್ಥ್ಯ ಹಾಳಾಗುತ್ತದೆ ಈ ಎಲ್ಲಾ ಆರೋಪಗಳು ಇದ್ದಿದ್ದೇ ಆದರೆ ಈ ಮೊಬೈಲ್ ಗೆ ಸಂಸಾರಗಳನ್ನು ಒಡೆಯುವ ಶಕ್ತಿ ಇದೆ. ಯಾಕೆಂದರೆ ಇತ್ತೀಚೆಗೆ ಜನ ಯಾರನ್ನು ಸಹ ನಂಬದಾಗಿದ್ದಾರೆ ಹಾಗಾಗಿ ಇದೇ ಟೆಕ್ನಾಲಜಿ ಉಪಯೋಗಿಸಿಕೊಂಡ ಮತ್ತೊಬ್ಬರ ಮೇಲೆ ಪತ್ತೆಗಾರಿಕೆ ಮಾಡುತ್ತಿದ್ದಾರೆ.
ಸೀದಾ ಸಾದಾ ಸರಳವಾಗಿ ಹೇಳುವುದಾದರೆ ಪ್ರತಿಯೊಬ್ಬರೂ ಮಾಡುವ ಒಂದು ಮಿಸ್ಟೇಕ್ ಬೇರೆಯವರ ಕಾಲ್ ರೆಕಾರ್ಡ್ ಮಾಡುವುದು. ಈ ರೀತಿ ಮತ್ತೊಬ್ಬರ ಅನುಮತಿ ಇಲ್ಲದೆ ಅವರು ನಿಮ್ಮ ಜೊತೆಯೇ ಕರೆ ಮಾಡಿ ಮಾತನಾಡುತ್ತಿದ್ದರು ಕೂಡ ಅದನ್ನು ರೆಕಾರ್ಡ್ ಮಾಡುವ ಅಧಿಕಾರ ನಿಮಗಿರುವುದಿಲ್ಲ.
ಯಾಕೆಂದರೆ ಇದು ಸಂವಿಧಾನದ ಪ್ರಕಾರ 21ನೇ ವಿಧಿ ತಿಳಿಸುವ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ. ಮತ್ತೊಬ್ಬರಲ್ಲಿ ಸ್ವತಃ ನಿಮ್ಮ ಕುಟುಂಬದ ಸದಸ್ಯರ ಪತಿ-ಪತ್ನಿ ನಡುವೆಯೂ ಕೂಡ ಇದಕ್ಕೆ ಅಧಿಕಾರವಿಲ್ಲ. ಪತಿಯು ಅನುಮಾನ ಪಟ್ಟು ಪತ್ನಿಯ ಕಾಲ್ ರೆಕಾರ್ಡ್ ಮಾಡಿದರೆ ಆತ ಕಂಬಿ ಎಣಿಸಬೇಕಾಗಿ ಕೂಡ ಬರಬಹುದು.
ಪತ್ನಿ ಅನುಮತಿ ಇಲ್ಲದೆ ಈ ಕಾರ್ಯ ಮಾಡಿದ್ದಕ್ಕಾಗಿ ವ್ಯಕ್ತಿಯೊಬ್ಬ ಈಗ ಹೈಕೋರ್ಟ್ ನಲ್ಲಿ ಛೀಮಾರಿ ಹಾಕಿಸಿಕೊಂಡಿದ್ದಾರೆ. ಛತ್ತೀಸ್ ಘಡ್ ಹೈಕೋರ್ಟ್ ನಲ್ಲಿ ಕಳೆದ ವಾರ ನಡೆದ ಪ್ರಕರಣದ ಉದಾಹರಣೆಯೊಂದಿಗೆ ಈ ವಿಚಾರವನ್ನು ನಿಮಗೆ ತಿಳಿಸುತ್ತಿದ್ದೇನೆ. ಛತ್ತೀಸ್ ಘಡ್ ರಾಜ್ಯದಲ್ಲಿ 2019ರಲ್ಲಿ 38 ವರ್ಷದ ಮಹಿಳೆಯೊಬ್ಬರು ತನ್ನ 40ನೇ ವರ್ಷದ ಪತಿಯ ಮೇಲೆ ವಿ’ಚ್ಛೇ’ದ’ನದ ಕೇಸ್ ಹಾಕಿ ಜೀವನಾಂಶ ಕೋರಿದ್ದರು.
ಈ ಸಂದರ್ಭದಲ್ಲಿ ಕೌಟುಂಬಿಕ ನ್ಯಾಯಾಲಯದ ವಿಚಾರಣೆಯಲ್ಲಿ ಪತಿಯು ಆಕೆ ದಾಂಪತ್ಯಕ್ಕೆ ದ್ರೊ’ಹ ಬಗೆದಿದ್ದಾಳೆ ಹಾಗಾಗಿ ಡಿ’ವೋ’ರ್ಸ್ ಬಳಿಕ ಜೀವನಾಂಶ ಕೊಡುವುದಿಲ್ಲ ಎಂದು ವಾದಿಸಿ ಇದನ್ನು ಸಾಬೀತುಪಡಿಸುವುದಾಗಿ ಆಕೆಯ ಮೊಬೈಲ್ ರೆಕಾರ್ಡಿಂಗ್ ಪ್ರಸ್ತಾಪಿಸಿದ್ದ. ಇದನ್ನು ಆಧರಿಸಿ ಕೌಟುಂಬಿಕ ನ್ಯಾಯಾಲಯವು ಪತಿ ಪರವಾಗಿ ಜಡ್ಜ್ಮೆಂಟ್ ನೀಡಿತ್ತು.
ಆದರೆ ಈ ಆದೇಶದ ವಿರುದ್ಧ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ ಮಹಿಳೆಯು ಪತಿಯ ಈ ಕೃತ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ತನಗೆ ಜೀವನಾಂಶ ಕೊಡಿಸಬೇಕೆಂದು ಮನವಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಮಹತ್ವದ ಅಂಶದ ಕುರಿತು ಬೆಳಕು ಚೆಲ್ಲಿದೆ. ಪತ್ನಿಯ ಅನುಮತಿ ಇಲ್ಲದೆ ಫೋನ್ ಕದ್ದಾಲಿಸುವುದು, ರೆಕಾರ್ಡ್ ಮಾಡುವುದು ಮಹಿಳೆಯ ಖಾಸಗಿತನ ಹಕ್ಕಿನ ಉಲ್ಲಂಘನೆ ಎಂದು ಹೈಕೋರ್ಟ್ ತಿಳಿಸಿದೆ.
ಆಕೆಗೆ ತಿಳಿಯದಂತೆ ಫೋನ್ ಕಾಲ್ ರೆಕಾರ್ಡ್ ಮಾಡಿ ಆಕೆಯ ವಿರುದ್ಧವೇ ಅದನ್ನು ಬಳಸಲು ಮುಂದಾಗಿದ್ದನ್ನು ಖಂಡಿಸಿದ ಹೈಕೋರ್ಟ್ ನ್ಯಾಯಮೂರ್ತಿ ರಾಕೇಶ್ ಮೋಹನ್ ಪಾಂಡೆ ಯವರು ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಬದಿಗೆ ಸರಿಸಿ ಪ್ರತಿವಾದಿಯು ಪತ್ನಿಯ ಫೋನ್ ಸಂಭಾಷಣೆಯನ್ನು ಅವಳ ಬೆನ್ನಿನ ಹಿಂದೆಯೇ ಅವರಿಗೆ ಗೊತ್ತಾಗದಂತೆ ರೆಕಾರ್ಡ್ ಮಾಡಿರುವುದು ಕಂಡುಬರುತ್ತದೆ.
ಇದು ಅವರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಿದೆ ಮತ್ತು ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಅರ್ಜಿದಾರರ ಹಕ್ಕನ್ನು ಸಹ ಉಲ್ಲಂಘಿಸಿದೆ ಎಂದು ಹೇಳಿ ಕೌಟುಂಬಿಕ ನ್ಯಾಯಾಲಯ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ