ನಮ್ಮ ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಡಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ರೂ.1000 ವೃದ್ಯಾಪ್ಯ ವೇತನ, ಮನಸ್ವಿನಿ ಯೋಜನೆಗೆ ಅವಿವಾಹಿತ ಮತ್ತು ವಿಧವಾ ಮಹಿಳೆಯರಿಗೆ ರೂ.600 ಮತ್ತು ಅಂಗವಿಕಲರಿಗೆ ರೂ.1,500 ಅಂಗವಿಕಲರ ವೇತನ ಸರ್ಕಾರದಿಂದ ಸಿಗುತ್ತಿದೆ ಈ ರೀತಿ ಸರ್ಕಾರದಿಂದ ಯಾವುದೇ ಪಿಂಚಣಿ (Pensions) ಪಡೆಯುತ್ತಿದ್ದರ, ಅವರಿಗೆ ಒಂದು ಮಹತ್ವವಾದ ಸುದ್ದಿ ಇದೆ.
ಸಾಮಾನ್ಯವಾಗಿ ಈ ರೀತಿ ಪಿಂಚಣಿ ಪಡೆಯುವವರೆಲ್ಲರೂ ಕೂಡ ತಮ್ಮ ಗ್ರಾಮದ ಪೋಸ್ಟ್ ಆಫೀಸ್ ನಿಂದ ಈ ರೀತಿಯಾದ ಪಿಂಚಣಿಯ ಹಣವನ್ನು ನಗದು ರೂಪದಲ್ಲಿ ತಮ್ಮ ಮನೆ ಬಾಗಿಲಿಗೆ ಪಡೆಯುತ್ತಿದ್ದಾರೆ. ಆದರೆ ಪ್ರತಿಬಾರಿಯೂ ಪೋಸ್ಟ್ ಮ್ಯಾನ್ ಸರಿಯಾದ ಸಮಯಕ್ಕೆ ಹಣ ತಂದು ತಲುಪಿಸಲು ಆಗುತ್ತಿಲ್ಲ.
ಕೆಲವೊಮ್ಮೆ ಕೆಲಸದ ಒತ್ತಡದಿಂದಾಗಿ ಈ ಕೆಲಸವನ್ನು ನಿಗದಿತ ಸಮಯಕ್ಕೆ ಪೂರೈಸಲು ಆಗದೆ ಇರಬಹುದು ಅಥವಾ ಪೋಸ್ಟ್ ಮ್ಯಾನ್ ತನ್ನ ವೈಯಕ್ತಿಕ ಕಾರಣಗಳಿಂದ ತಿಂಗಳುಗಟ್ಟಲೆ ರಜೆ ಇರಬಹುದು, ಅಥವಾ ಅವರು ಹಣ ಕೊಡಲು ಬಂದ ಸಮಯದಲ್ಲಿ ನೀವೇ ಮನೆ ಬಳಿ ಇಲ್ಲದೆ ಇರಬಹುದು.
.ಇಂತಹ ಸಮಯದಲ್ಲಿ ತಮ್ಮ ಜೀವನ ನಿರ್ವಹಣೆಗಾಗಿ ಈ ಹಣವನ್ನೇ ಅವಲಂಬಿಸುವವರಿಗೆ ಬಹಳ ಕ’ಷ್ಟವಾಗುತ್ತದೆ. ಮತ್ತು ಕೆಲವೆಡೆ ಹಣ ಕೊಡಲು ಕಮಿಷನ್ ಕೇಳುತ್ತಾರೆ ಅಥವಾ ಸಹಿ ಪಡೆದು ಅವರೇ ದುಡ್ಡು ತೆಗೆದುಕೊಳ್ಳುತ್ತಾರೆ ಎನ್ನುವ ಆರೋಪಗಳು ಇದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಒಂದು ನಿಯಮ ಮಾಡಿದೆ.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಸಿಹಿ ಸುದ್ದಿ ಮೊದಲ ಕಂತಿನ ಹಣ 3000 ಜಮೆ.!
ಅದೇನೆಂದರೆ ನಿಮ್ಮ ಪಿಂಚಣಿಗಳನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಡೆಪಾಸಿಟ್ (Pension transfer to Bank Accounts) ಮಾಡುವುದು ಆಗ ನೀವು ಸಮಯಕ್ಕೆ ಸರಿಯಾಗಿ ನಿಮ್ಮ ಹಣವನ್ನು ಪಡೆದುಕೊಳ್ಳಬಹುದು ಅಥವಾ ನಿಮಗೆ ಹಣದ ಅವಶ್ಯಕತೆ ಇರುವಾಗ ಪಡೆದುಕೊಳ್ಳಬಹುದು. ಹಣಕ್ಕಾಗಿ ಪೋಸ್ಟ್ ಆಫೀಸ್ ಗೆ ಅಲೆಯುವುದು ಪೋಸ್ಟ್ ಮ್ಯಾನ್ ಕಾಯುವುದು, ಇಂತಹ ಸಮಸ್ಯೆಗಳು ತಪ್ಪುತ್ತವೆ.
ಈ ರೀತಿಯಾಗಿ ನೀವು ಕೂಡ ಪಿಂಚಣಿ ಹಣವು ನಿಮ್ಮ ಖಾತೆಗೆ ಬರುವ ರೀತಿ ಮಾಡಬೇಕು ಎಂದುಕೊಂಡರೆ ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ವಿವರ ಜೊತೆಗೆ ನಿಮಗೆ ಯಾವ ಯೋಜನೆ ಮೂಲಕ ಹಣ ಬರುತ್ತಿದೆ. ಆ ಆರ್ಡರ್ ಕಾಪಿ ತೆಗೆದುಕೊಂಡು ನಿಮ್ಮ ತಾಲೂಕು ಪಂಚಾಯಿತಿಯಲ್ಲಿ ಖಜಾನೆ / ಪತ್ರಾಂಕಿತ ವಿಭಾಗಕ್ಕೆ ಹೋಗಿ ಪಿಂಚಣಿ ಹಣ ನೇರವಾಗಿ ಖಾತೆಗೆ ಬರುವ ರೀತಿ ಮಾಡಿಕೊಡಿ ಎಂದು ದಾಖಲೆಗಳ ಸಮೇತ ನೀವು ಅವರಲ್ಲಿ ಮನವಿ ಸಲ್ಲಿಸಬೇಕು.
ನಿಮ್ಮ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ ಬ್ಯಾಂಕ್ ಖಾತೆಗೆ ಪಿಂಚಣಿ ಹೋಗುವಂತೆ ಲಿಂಕ್ ಮಾಡಿಕೊಡುತ್ತಾರೆ. ಈ ಪ್ರಕ್ರಿಯೆಯು ಎರಡು ಮೂರು ದಿನಗಳಲ್ಲಿ ಮುಗಿಯುತ್ತದೆ ಮತ್ತು ಮುಂದಿನ ತಿಂಗಳಿನಿಂದ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಪಿಂಚಣಿ ಹಣ ಜಮೆ ಆಗುತ್ತದೆ.
ನಿಮ್ಮ ಜಮೀನು, ಮನೆ, ಸೈಟ್ ಬೆಲೆ ಇಂದು ಮಾರುಕಟ್ಟೆಯಲ್ಲಿ ಎಷ್ಟಿದೆ ಎಂದು ಈ ರೀತಿ ಚೆಕ್ ಮಾಡಿ ತಿಳಿದುಕೊಳ್ಳಿ.!
ನಿಮ್ಮ ಗ್ರಾಮದಲ್ಲಿ ಹಣ ಪಡೆಯಬೇಕು ಬ್ಯಾಂಕ್ ದೂರವಿದೆ ಎನ್ನುವವರು ನಿಮ್ಮ ಗ್ರಾಮದ ಅಂಚೆ ಕಚೇರಿಯಲ್ಲಿ ಸೇವಿಂಗ್ ಅಕೌಂಟ್ ತೆಗೆದು, ಅದೇ ಖಾತೆಗೆ ಪಿಂಚಣಿ ಬರುವಂತೆ ಲಿಂಕ್ ಮಾಡಿಸಿಕೊಳ್ಳಬಹುದು ಮತ್ತು ಸೇವಿಂಗ್ ಅಕೌಂಟ್ ನಲ್ಲಿರುವ ಹಣವನ್ನು ಯಾವಾಗ ಬೇಕಾದರೂ ನೀವು ವಿಥ್ ಡ್ರಾ ಮಾಡಬಹುದು ಅಥವಾ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿದರು ನಿಮಗೆ ಸಮಯವಾದಾಗ ಹೋಗಿ ಎರಡು ಮೂರು ತಿಂಗಳಿಗೆ ಒಮ್ಮೆ ಒಟ್ಟಿಗೆ ಹಣ ಪಡೆಯಬಹುದು.
ATM Card ಸೌಲಭ್ಯವನ್ನು ಪಡೆದು ATM ಗಳ ಮೂಲಕ ಹಣ ಡ್ರಾ ಮಾಡಿಕೊಳ್ಳಬಹುದು ಇದು ಬಹಳ ಉಪಯುಕ್ತ ಮಾಹಿತಿಯಾಗಿದ್ದು, ಅನೇಕರಿಗೆ ಅನುಕೂಲವಾಗಲಿದೆ ಆದ್ದರಿಂದ ತಪ್ಪದೇ ಈ ಮಾಹಿತಿಯನ್ನು ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.