ಇತ್ತೀಚಿನ ದಿನಗಳಲ್ಲಿ ಮಂಡಿ ನೋವು ಎನ್ನುವುದು ವಯಸ್ಸಾದವರಿಗೆ ಮಾತ್ರವಲ್ಲದೆ 30ರ ಆಸುಪಾಸಿನವರೆಗೂ ಕಾಣಿಸಿಕೊಳ್ಳುತ್ತಿರುವ ಸಮಸ್ಯೆಯಾಗಿ ಬಿಟ್ಟಿದೆ. ಇದಕ್ಕೆ ಕಾರಣ ಕ್ಯಾಲ್ಸಿಯಂ ಕೊರತೆ ಮತ್ತು ಕೆಲವು ವಿಟಮಿನ್ ಗಳ ಕೊರತೆ. ಅದರಲ್ಲೂ ಮುಖ್ಯವಾಗಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆ ಈ ರೀತಿಯಾದ ಪರಿಣಾಮ ಉಂಟುಮಾಡುತ್ತದೆ.
ಕೆಲವರಿಗೆ ನಡೆಯುವಾಗ ಮೆಟ್ಟಿಲು ಹತ್ತುವಾಗ ಮಂಡಿಯಲ್ಲಿ ಕಟ್ ಕಟ್ ಶಬ್ದ ಬಂದ ಹಾಗೆ ಆಗುತ್ತದೆ. ಈ ರೀತಿ ಆಗಿದೆ ಎಂದರೆ ನಿಮ್ಮ ಮೂಳೆಗಳಿಗೆ ಸಮಸ್ಯೆ ಇದೆ ಎಂದು ಅರ್ಥ. ಮೂಳೆಗಳ ಸವಕಳಿ ಹಾಕಿ ಕೂಡ ಮಂಡಿ ನೋವು ಬರುತ್ತದೆ ಇದನ್ನು ಆಸ್ಟ್ರಿಯೋ ಆರ್ಥೋರಿಟಿಸ್ ಎನ್ನುತ್ತಾರೆ. ಇದಕ್ಕೆ ಹೇಗೆ ಮನೆಯಲ್ಲೇ ಮನೆಮದ್ದು ಮಾಡಿಕೊಳ್ಳಬಹುದು ಎಂದು ಆಯುರ್ವೇದದಲ್ಲಿ ತಿಳಿಸಿರುವ ಅಂಶವನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
* ಆಯುರ್ವೇದದಲ್ಲಿ ತಿಳಿಸಿರುವ ಪ್ರಕಾರ ವಾತ ಪಿತ್ತ ಕಫ ದೋಷಗಳಿಂದಾಗಿ ಈ ಮಂಡಿ ನೋವು ಹೆಚ್ಚಾಗುತ್ತದೆ. ವಾತ ದೋಷ ಹೆಚ್ಚಾದವರಿಗೆ ಈ ಮಂಡಿ ನೋವು ವಿಪರೀತವಾಗಿರುತ್ತದೆ. ಇದನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಮುರುಗನ್ನ ಎಣ್ಣೆ, ಧನ್ವಂತರಿ ಎಣ್ಣೆ, ಮಹಾ ನಾರಾಯಣ ತೈಲ ಔಷಧಿಯಂತೆ ಕೆಲಸ ಮಾಡುತ್ತದೆ. ಈ ಎಣ್ಣೆಗಳಿಂದ ಮಸಾಜ್ ಮಾಡಿ ಬಿಸಿ ನೀರಲ್ಲಿ ತೊಳೆಯಬೇಕು.
* ಪಿತ್ತ ದೋಷ ಜಾಸ್ತಿ ಆದವರಿಗೆ ಮಂಡಿಗಳಲ್ಲಿ ಉರಿ ಇರುತ್ತದೆ. ಈ ರೀತಿ ಮಂಡಿಗಳಲ್ಲಿ ಉರಿಯ ಸಮಸ್ಯೆ ಇದ್ದವರಿಗೆ ಅದನ್ನು ಕೂಲ್ ಮಾಡುವಂತಹ ಚಿಕಿತ್ಸೆ ಸಿಗಬೇಕು ಇದು ಪಿಂಡ ತೈಲ ಎನ್ನುವ ಎಣ್ಣೆಯ ಚಿಕಿತ್ಸೆಯಿಂದ ಸಿಗುತ್ತದೆ.
* ಎಣ್ಣೆಗಳ ರಾಜ ಸಾಸಿವೆ ಎಣ್ಣೆಯಲ್ಲಿ ಆಂಟಿ ಇನಾಫ್ಲಾಮೇಟರಿ ಗುಣಗಳು ಇವೆ ಮತ್ತಿದು ನ್ಯಾಚುರಲ್ ಆಗಿ ಪೇನ್ ಕಿಲ್ಲರ್. ಈ ಎರಡು ಎಣ್ಣೆಗಳನ್ನು ಸ್ವಲ್ಪ ಉಗುರು ಬೆಚ್ಚಗೆ ಮಾಡಿ ಮಂಡಿಗಳಿಗೆ ಚೆನ್ನಾಗಿ ಮಸಾಜ್ ಮಾಡಿ ಬಿಸಿನೀರಲ್ಲಿ ಸ್ನಾನ ಮಾಡುವುದರಿಂದ ಮಂಡಿಗಳಲ್ಲಿರುವ ಉರಿ ಹಾಗೂ ನೋವು ಕಡಿಮೆ ಆಗುತ್ತದೆ.
* ಕೆಲವರಿಗೆ ಮಂಡಿ ಚಲನೆ ಮಾಡಲಾಗದಷ್ಟು ನೋ’ವು ಇರುತ್ತದೆ, ಬಿಗಿತ ಉಂಟಾಗುತ್ತದೆ. ಇದು ಸ್ಟಿಫ್ ನೆಸ್ ಸಮಸ್ಯೆ ಗುಣಪಡಿಸಲು ಮರಳಿನ ಚಿಕಿತ್ಸೆ ಮಾಡಬಹುದು. ಮರಳನ್ನು ಬಾಣಲೆಗೆ ಹಾಕಿ ಉರಿದು ಬಿಸಿ ಮಾಡಿ ಅದನ್ನು ಒಂದು ಕಾಟನ್ ಬಟ್ಟೆಗೆ ಸುತ್ತಿಕೊಂಡು ಆ ಗಂಟಿನಿಂದ ಮಂಡಿಗಳ ಮೇಲೆ ಪ್ರೆಸ್ ಮಾಡುವುದರಿಂದ ಮಂಡಿಗಳಲ್ಲಿರುವ ಊತ ಕಡಿಮೆ ಆಗುತ್ತದೆ, ಮತ್ತು ಸ್ಟಿಫ್ನೆಸ್ ಸಮಸ್ಯೆ ಸರಿ ಹೋಗುತ್ತದೆ.
* ಸಾಸಿವೆ ಎಣ್ಣೆಯ ಜೊತೆ ಹುತ್ತದ ಮಣ್ಣನ್ನು ಮಿಕ್ಸ್ ಮಾಡಿ ಮಂಡಿಗೆ ಪಟ್ಟಿ ಹಾಕುವುದರಿಂದ ಮಂಡಿ ನೋವು ನಿವಾರಣೆಯಾಗುತ್ತದೆ.
* ಆಯುರ್ವೇದ ಕೇಂದ್ರಗಳಲ್ಲಿ ನೀಡುವ ಜಾನುಬಸ್ತಿ ಚಿಕಿತ್ಸೆಯು ಮಂಡಿ ನೋವನ್ನು ಗುಣ ಮಾಡುತ್ತದೆ, ಈ ಚಿಕಿತ್ಸೆ ತೆಗೆದುಕೊಳ್ಳುವುದರಿಂದ ಮಂಡಿಗಳಲ್ಲಿರುವ ಊತವು ಕಡಿಮೆಯಾಗಿ ಮಂಡಿಗಳಿಗೆ ಶಕ್ತಿ ಬರುತ್ತದೆ. ಮಂಡಿಗಳ ಭಾಗದ ನರನಾಡಿಗಳು ಕ್ರಿಯಾಶೀಲವಾಗಿ ರಕ್ತ ಚಲನೆ ಸರಾಗವಾಗಿ ಆಗುತ್ತದೆ.
* ವ್ಯಾಯಾಮಗಳು ಕೂಡ ಈ ಸಮಸ್ಯೆಗಳಿಂದ ರಿಲೀಫ್ ಕೊಡುತ್ತವೆ ಅದರಲ್ಲಿ ಮುಖ್ಯವಾಗಿ ಒಂದು ಬೆಡ್ ಶೀಟ್ ರೋಲ್ ಮಾಡಿ ಮಂಡಿಗಳ ಕೆಳಗೆ ಇಟ್ಟುಕೊಂಡು ಮಂಡಿಗಳನ್ನು ಬೆಡ್ ಶೀಟ್ ಮೇಲೆ ಪ್ರೆಸ್ ಮಾಡುವುದು ಬಿಡುವುದು ಈ ರೀತಿ ಒಂದು ಬಾರಿಗೆ 10 ರಿಂದ 15 ಬಾರಿ ದಿನದಲ್ಲಿ ಮೂರು ಸಮಯ ಮಾಡುವುದರಿಂದ ಮಂಡಿ ನೋವು ಕಂಟ್ರೋಲ್ ಗೆ ಬರುತ್ತದೆ.
* Alternate hot and cold pack ಹಾಕಬೇಕು ಅಂದರೆ ಮೂರು ನಿಮಿಷ ಬಿಸಿ ನೀರ ಬ್ಯಾಗ್ ಇಡುವುದು ಒಂದು ನಿಮಿಷ ತಣ್ಣೀರಿನ ಇಡುವುದು ಈ ರೀತಿಯ ಚಿಕಿತ್ಸೆ ಮಾಡುವುದರಿಂದ ಕೂಡ ಸಮಸ್ಯೆ ಕಂಡು ಬರುತ್ತದೆ.