ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಸಮಯದಲ್ಲಿ ಬಾಯಿಹುಣ್ಣು ಕಾಣಿಸಿಕೊಂಡಿರುತ್ತದೆ. ಮನೆಯಲ್ಲಿರುವ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರನ್ನೂ ನೋಯಿಸುವ ಕಾಯಿಲೆ ಇದು, ಇದರಿಂದ ವಿಪರೀತವಾಗಿ ನರಳುತ್ತಾರೆ. ಸರಿಯಾಗಿ ಊಟ ತಿನ್ನಲು ಆಗುವುದಿಲ್ಲ, ಖಾರ ಸೇವಿಸಲು ಆಗುವುದಿಲ್ಲ, ಒಮ್ಮೊಮ್ಮೆ ಈ ನೋವಿಗೆ ಜ್ವರ ಬಂದ ರೀತಿಯು ಆಗುತ್ತದೆ.
ಸಾಮಾನ್ಯವಾಗಿ ಈ ರೀತಿಯಾದಾಗ ಮೆಡಿಕಲ್ ಗೆ ಹೋಗಿ ಯಾವುದೋ ಲಿಕ್ವಿಡ್, ಜೆಲ್ ತೆಗೆದುಕೊಂಡು ಹಚ್ಚಿಕೊಂಡು ಗುಣಪಡಿಸಿಕೊಳ್ಳುತ್ತಾರೆ ಅಥವಾ ಬಿ ಕಾಂಪ್ಲೆಕ್ಸ್ ಮಾತ್ರೆಯನ್ನು ಸೇವಿಸಿ ಗುಣವಾಗುತ್ತದೆ ಎಂದುಕೊಳ್ಳುತ್ತಾರೆ. ಈ ರೀತಿ ಗುಣವಾದರೂ ಅದು ಆ ಕ್ಷಣಕ್ಕೆ ಮಾತ್ರ, ಈ ಸಮಸ್ಯೆ ಬರದೇ ಇರುವ ರೀತಿ ತಡೆಯಲು ಹಾಗೂ ಕೆಮಿಕಲ್ ಯುಕ್ತ ಔಷಧಿಗಳ ಬದಲು ನ್ಯಾಚುರಲ್ ಆಗಿಯೇ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಕೆಲವು ಮನೆಮದ್ದುಗಳು ಇವೆ ನೋಡಿ.
ಯಾವುದೇ ಒಂದು ಸಮಸ್ಯೆ ಆದರೂ ಅದರ ಮೂಲವನ್ನು ತಿಳಿದುಕೊಂಡಾಗ ಅದಕ್ಕೆ ಸರಿಯಾದ ಕಾರಣವನ್ನು ತಿಳಿದುಕೊಂಡಾಗ ಅದನ್ನು ಶಾಶ್ವತವಾಗಿ ಪರಿಹರಿಸಲು ಸಾಧ್ಯವಾಗುತ್ತದೆ. ಆ ರೀತಿ ಹೇಳುವುದಾದರೆ ಬಾಯಿ ಹುಣ್ಣು ಏಕೆ ಆಗುತ್ತದೆ ಎಂದರೆ ದೇಹದಲ್ಲಿ ಅತಿಯಾದ ಉಷ್ಣವಾದಾಗ, ಅಥವಾ ಪಿತ್ತದ ಅಂಶ ದೇಹದಲ್ಲಿ ಹೆಚ್ಚಾದಾಗ ಈ ರೀತಿ ಬಾಯಿ ಹುಣ್ಣು ಆಗುತ್ತದೆ ಇದನ್ನು ಸುಲಭವಾಗಿ ಪರಿಹರಿಸಲು ಈಗ ನಾವು ಹೇಳುವ ಈ ಮನೆ ಮದ್ದುಗಳನ್ನು ಪಾಲಿಸಿ.
● ಎಲ್ಲರ ಮನೆಗಳಲ್ಲೂ ಶ್ರೀಗಂಧದ ಕೊರಡು ಇರುತ್ತದೆ. ಅದರಿಂದ ಶುದ್ಧವಾದ ಶ್ರೀಗಂಧ ಸಿಗುತ್ತದೆ ಆದರೆ ಬಾಯಿ ತುಂಬಾ ಲೇಪನ ಮಾಡಬೇಕು, ಆಗ ಇದು ಗುಣವಾಗುತ್ತದೆ.
● ಶುದ್ಧವಾದ ಗುಲ್ಕಲ್ ಸೇವಿಸಿದರೆ ಗುಣವಾಗುತ್ತದೆ. ಆದರೆ ಈ ಗುಲ್ಕನ್ ನ್ನು ಶುದ್ಧವಾದ ಗುಲಾಬಿ ಹೂಗಳಿಂದ ಮಾಡಿರಬೇಕು. ಯಾವುದೇ ರೀತಿಯ ಸ್ಪ್ರೇಗಳನ್ನು ಅದಕ್ಕೆ ಸಿಂಪಡಿಸಿರಬಾರದು, ಒಂದು ವೇಳೆ ಶುದ್ದ ಗುಲ್ಕನ್ ಸಿಕ್ಕರೆ ಅದನ್ನು ಒಂದು ಚಮಚ ತೆಗೆದುಕೊಂಡು ಅದಕ್ಕೆ ತುಪ್ಪ ಹಾಗೂ ಕೆಂಪುಕಲ್ಲು ಸೇರಿಸಿ ಸೇವಿಸುವುದರಿಂದ ಕೂಡ ಬಾಯಿಹುಣ್ಣು ಮಾಯವಾಗುತ್ತದೆ.
● ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ಹುಣ್ಣಾಗಿರುವ ಭಾಗಕ್ಕೆ ಹಚ್ಚುವುದರಿಂದ ಕೂಡ ಇದು ಗುಣವಾಗುತ್ತದೆ ಶುದ್ಧವಾದ ಕೊಬ್ಬರಿ ಎಣ್ಣೆ ಇಲ್ಲ ಎಂದರೆ ಶುದ್ಧವಾದ ಹಸುವಿನ ತುಪ್ಪವನ್ನು ಕೂಡ ಹಚ್ಚಬಹುದು.
● ಮತ್ತೊಂದು ಪರಿಹಾರ ಇದೆ ಇದನ್ನು ಬಾಯಿ ಹುಣ್ಣು ಗುಣ ಮಾಡಿಕೊಳ್ಳುಲು ಮಾತ್ರವಲ್ಲದೆ ದೇಹದ ಉಷ್ಣವನ್ನು ಕೂಡ ಕಡಿಮೆ ಮಾಡಿಕೊಳ್ಳಲು ಕೂಡ ಈ ಮನೆಮದ್ದನ್ನು ಮಾಡಬಹುದು. ದೇಹದಲ್ಲಿ ಉಷ್ಣ ಕಡಿಮೆ ಆದಾಗ ಬಾಯಿ ಹುಣ್ಣು ಆಗುವ ಸಮಸ್ಯೆ ಬರುವುದಿಲ್ಲ, ಆ ಉಪಾಯ ಏನೆಂದರೆ, ಒಂದು ಸ್ವಲ್ಪ ಕೊಬ್ಬರಿಯನ್ನು ನೀವು ಇದಿಲ್ಲಲ್ಲಿ ಸುಡಬೇಕು.
ಇದ್ದಿಲು ಇಲ್ಲ ಎಂದರೆ ನಿಮಗೆ ಹೇಗೆ ಸಾಧ್ಯ ಅದೇ ರೀತಿಯಲ್ಲಿ ಸುಟ್ಟುಕೊಳ್ಳಿ. ಈಗ ಒಂದು ಚಮಚ ಗಸಗಸೆಯನ್ನು ತುಪ್ಪದಲ್ಲಿ ಹುರಿಯಿರಿ ಈಗ ಇದಕ್ಕೆ ಒಂದು ಚಮಚ ಶುದ್ಧ ಜೇನುತುಪ್ಪವನ್ನು ಸೇರಿಸಿ ಬಾಯಲ್ಲಿ ಹಾಕಿಕೊಂಡು ನಿಧಾನವಾಗಿ ಚೆನ್ನಾಗಿ ಜಗಿದು ಅದರ ರಸವನ್ನು ಕುಡಿಯಿರಿ. ಆಗ ಅಂತರಿಕ ವಿಚಾರಗಳು ಗುಣವಾಗಲು ಶುರುವಾಗುತ್ತದೆ.
● ಕೆಲವರು ಕೊಬ್ಬರಿ, ಗಸಗಸೆ ಹಾಗೂ ಕುದುಪಲು ಅಕ್ಕಿಯನ್ನು ಹಾಕಿ ಪಾಯಸ ಮಾಡಿ ಕೂಡ ಕುಡಿಯುತ್ತಾರೆ, ಇದು ಕೂಡ ಒಳ್ಳೆಯದು. ಈ ಪಾಯಸಕ್ಕೆ ಒಂದು ಚಮಚ ಶುದ್ಧವಾದ ತುಪ್ಪ ಸೇರಿಸಿ ಕುಡಿಯುವುದರಿಂದ ಕೂಡ ಬಾಯಿ ಹುಣ್ಣು ಪರಿಣಾಮಕಾರಿಯಾಗಿ ಮಾಯವಾಗುತ್ತದೆ ಮತ್ತು ದೇಹ ಉಷ್ಣಾಂಶ ಸಮತೋಲನದಲ್ಲಿ ಇರುತ್ತದೆ.