Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಪ್ರತಿಯೊಬ್ಬರು ಕೂಡ ತಾವು ದುಡಿದ ಹಣದಲ್ಲಿ ಸ್ವಲ್ಪ ಮೊತ್ತವನ್ನು ಉಳಿತಾಯ ಮಾಡುತ್ತಾರೆ, ಇನ್ನು ಕೆಲವರು ನಿವೃತ್ತಿ ನಂತರ ಪಿಂಚಣಿ ಬರಲಿ ಎನ್ನುವ ಉದ್ದೇಶಕ್ಕಾಗಿ ಹೂಡಿಕೆ ಮಾಡುತ್ತಾರೆ. ಕೆಲವರು ಪ್ರತಿ ತಿಂಗಳು ಹಣವನ್ನು ಪ್ರೀಮಿಯಂ ಮಾದರಿಯಲ್ಲಿ ಕಟ್ಟುತ್ತಾ ಹೆಚ್ಚು ಲಾಭಗಳಿಸಲು ನೋಡಿದರೆ ಕೆಲವರು ತಾವು ಇದುವರೆಗೂ ಉಳಿತಾಯ ಮಾಡಿದ ಹಣವನ್ನು ಇಟ್ಟು ಪ್ರತಿ ತಿಂಗಳು ಬಡ್ಡಿ ರೂಪದಲ್ಲಿ ಆದಾಯ ಪಡೆಯಲು ಇಚ್ಛಿಸುತ್ತಾರೆ.
ಈ ರೀತಿ ಯಾವುದೇ ರೂಪದಲ್ಲಿ ಇದ್ದರೂ ಕೂಡ ಮೊದಲಿಗೆ ಜನರು ಇವುಗಳನ್ನು ಠೇವಣಿ ಇಡಲು ಅಥವಾ ಇದಕ್ಕೆ ಸಂಬಂಧಿಸಿದ ಯೋಜನೆಗಳನ್ನು ಖರೀದಿಸಲು ಆರಿಸಿಕೊಳ್ಳುವ ಹಣಕಾಸು ಸಂಸ್ಥೆಯಲ್ಲಿ ಮೊದಲು ನೋಡುವುದೇ ನಮ್ಮ ಹಣಕ್ಕೆ ಬಧ್ರತೆ ಇದೆಯೇ ಮತ್ತು ನಂತರ ಅನುಕೂಲಕರವಾದ ಲಾಭ ಸಿಗುತ್ತದೆಯೇ ಎಂದು.
ಈ ವಿಚಾರದಲ್ಲಿ 100% ಗ್ಯಾರಂಟಿ ಸಿಗುವುದು ಅಂಚೆ ಕಚೇರಿಯಲ್ಲಿ, ಯಾಕೆಂದರೆ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಅಂಚೆ ಇಲಾಖೆಯಲ್ಲಿ ಹಣ ಹೂಡಿಕೆ ಮಾಡುವುದರಿಂದ ನಮ್ಮ ಹಣಕ್ಕೆ ಸರ್ಕಾರವೇ ಗ್ಯಾರಂಟಿಯಾಗಿದ್ದು, ಅದಕ್ಕೆ ಆಕರ್ಷಣ ರೀತಿಯ ಬಡ್ಡಿ ದರವನ್ನು ಕೂಡ ನೀಡುತ್ತದೆ.
ಈ ರೀತಿ ಉಳಿತಾಯ ಮಾಡಲು ಅಥವಾ ಹೂಡಿಕೆ ಮಾಡಲು ಇಚ್ಛಿಸುವವರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದು ಇದರಲ್ಲಿ ಹೆಣ್ಣು ಮಕ್ಕಳು, ಮಹಿಳೆಯರು. ಹಿರಿಯ ನಾಗರಿಕರು ಹೀಗೆ ಪ್ರತಿಯೊಂದು ವರ್ಗಕ್ಕೂ ಪ್ರತ್ಯೇಕವಾದ ಯೋಜನೆಗಳನ್ನು ರೂಪಿಸಲಾಗಿದೆ. ಪ್ರಸ್ತುತವಾಗಿ ಅಂಚೆ ಕಚೇರಿಯಲ್ಲಿ 13ಕ್ಕೂ ಹೆಚ್ಚು ಈ ರೀತಿಯ ಯೋಜನೆಗಳು ಇವೆ. ಇವುಗಳಲ್ಲಿ ಯಾವುದರಲ್ಲಿ ಹೂಡಿಕೆ ಮಾಡಿದರೆ ಎಷ್ಟು ಬಡ್ಡಿದರ ಅನ್ವಯವಾಗುತ್ತದೆ ಎನ್ನುವುದರ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
1. ಪೋಸ್ಟ್ ಆಫೀಸ್ ಉಳಿತಾಯ ಖಾತೆ:- ಇದು ನೀವು ಪೋಸ್ಟ್ ಆಫೀಸ್ ಅಲ್ಲಿ ತೆರೆಯುವ ಖಾತೆ ಆಗಿರುತ್ತದೆ, ಈ ಖಾತೆಯಲ್ಲಿ ಇಡುವ ಹಣಕ್ಕೆ 4.0% ಬಡ್ಡಿದರ ಅನ್ವಯವಾಗುತ್ತದೆ, ನೀವೇ ಕಾತೆ ರ’ದ್ದುಪಡಿಸುವವರೆಗೂ ಕೂಡ ಇದು ಚಾಲ್ತಿಯಲ್ಲಿರುತ್ತದೆ.
2. ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ (RD):- ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ನೀವು ಕನಿಷ್ಠ ರೂ.100 ರಿಂದ ಹಣವನ್ನು ಪ್ರತಿ ತಿಂಗಳು ನಿಶ್ಚಿತ ಮೊತ್ತದ ಹಣವನ್ನು 5 ವರ್ಷಗಳವರೆಗೆ ಡೆಪಾಸಿಟ್ ಮಾಡಬೇಕು, ಪ್ರಸ್ತುತವಾಗಿ 6.7% ಬಡ್ಡಿದರ ಅನ್ವಯವಾಗುತ್ತಿದೆ, ಈ ಯೋಜನೆಯ ಮೆಚುರಿಟಿ ಅವಧಿ 5 ವರ್ಷಗಳು.
3. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ(POMIS):-
ಈ ಯೋಜನೆಯಲ್ಲಿ ನೀವು ನಿಮ್ಮ ಉಳಿತಾಯದ ಹಣವನ್ನು ಠೇವಣಿ ಇಟ್ಟು ಪ್ರತಿ ತಿಂಗಳು 7.4% ಬಡ್ಡಿ ದರದಲ್ಲಿ ಆದಾಯವನ್ನು ಪಡೆಯಬಹುದು ಈ ಯೋಜನೆಯ 5 ವರ್ಷಗಳು.
4. ಪೋಸ್ಟ್ ಆಫೀಸ್ ಸಮಯದ ಠೇವಣಿ (FD Scheme):- ಈ ಯೋಜನೆಯಲ್ಲಿ ನೀವು ಒಂದು ಮೊತ್ತದ ಹಣವನ್ನು ಠೇವಣಿ ಇಟ್ಟು ಮೆಚುರಿಟಿ ಅವಧಿ ಮುಗಿದ ಬಳಿಕ ಅದಕ್ಕೆ ಅನ್ವಯವಾಗುವ ಬಡ್ಡಿದರದ ಜೊತೆ ಹೂಡಿಕೆ ಹಣವನ್ನು ವಾಪಸ್ ಪಡೆಯಬಹುದು. 1 ವರ್ಷದ ಅವಧಿಗೆ 6.9%, 2ವರ್ಷದ ಅವಧಿಗೆ 7% , 3 ವರ್ಷದ ಅವಧಿಗೆ 7% ಮತ್ತು 5 ವರ್ಷದ ಅವಧಿಗೆ 7.5% ಬಡ್ಡಿದರ ನಿಗದಿಯಾಗಿದೆ.
5. ಕಿಸಾನ್ ವಿಕಾಸ್ ಪತ್ರ (KVP):- ಈ ಯೋಜನೆಯಡಿ ಹೂಡಿಕೆ ಮಾಡಿದ ಹಣವು 120 ತಿಂಗಳಲ್ಲಿ ಡಬಲ್ ಆಗುತ್ತದೆ.
6. ಸಾರ್ವಜನಿಕ ಭವಿಷ್ಯ ನಿಧಿ (PPF):- ಈ ಯೋಜನೆಯಡಿ ನೀವು ಹೂಡಿಕೆ ಮಾಡುತ್ತ ಬರುವ ಹಣಕ್ಕೆ 7.1% ಬಡ್ಡಿದರ ಸಿಗುತ್ತದೆ. ದೂರದ ಕನಸುಗಳಾದ ಮನೆ ಕಟ್ಟಿಸುವುದು, ಆಸ್ತಿ ಖರೀದಿಸುವುದು, ಮಕ್ಕಳ ಓದು, ಮದುವೆ ಅಥವಾ ವಿದೇಶ ಪ್ರಯಾಣ ಇಂತಹ ಕನಸುಗಳಿಗೆ ಹಣ ಹೂಡಿಕೆ ಮಾಡಲು ಈ ಯೋಜನೆ ಉತ್ತಮ, ಮೆಚುರಿಟಿ ಅವಧಿ 15 ವರ್ಷಗಳು.
7. ಸುಕನ್ಯಾ ಸಮೃದ್ಧಿ ಯೋಜನೆ (SSY):- ಹೆಣ್ಣು ಮಕ್ಕಳ ಪೋಷಕರು ಅವರಿಗೆ 10 ವರ್ಷ ತುಂಬುವುದರೊಳಗೆ ಈ ಯೋಜನೆಯನ್ನು ಮಾಡಿಸಲೇಬೇಕು. ಅತಿ ಹೆಚ್ಚು ಬಡ್ಡಿದರ 8% ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ಸಿಗುತ್ತದೆ, ವಾರ್ಷಿಕವಾಗಿ 250ಗಳನ್ನು ಕಟ್ಟಿ ಕೂಡ ಯೋಜನೆಯನ್ನು ಚಾಲ್ತಿಯಲ್ಲಿ ಇಡಬಹುದು. ಗರಿಷ್ಠ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು, ಹೆಣ್ಣು ಮಗುವಿಗೆ 18 ವರ್ಷ ತುಂಬಿದ ಬಳಿಕ ಸ್ವಲ್ಪ ಪ್ರಮಾಣದ ಹಣವನ್ನು ಮತ್ತು 21 ವರ್ಷ ತುಂಬಿದ ಬಳಿಕ ಯೋಜನೆಯನ್ನು ಕ್ಲೈಮ್ ಮಾಡಬಹುದು.
8. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(NSS):- ಈ ಯೋಜನೆಗೆ ಹೂಡಿಕೆಯ ಹಣಕ್ಕೆ 7.7% ಬಡ್ಡಿದರ ನಿಗದಿಯಾಗಿದೆ, ಮೆಚುರಿಟಿ ಅವಧಿ 5 ವರ್ಷಗಳು.
9. ಹಿರಿಯ ನಾಗರಿಕರ ಉಳಿತಾಯ ಯೋಜನೆ(SCSS):- ಈ ಯೋಚನೆಯು ಹಿರಿಯ ನಾಗರಿಕರಿಗಾಗಿ ರೂಪಿಸಲಾಗಿದೆ ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣಕ್ಕೆ 8.2% ಬಡ್ಡಿದರ ಸಿಗುತ್ತದೆ, ಮೆಚುರಿಟಿ ಅವಧಿ 5 ವರ್ಷಗಳು.
ಇವುಗಳ ಜೊತೆಗೆ ಇನ್ನು ಕೆಲವು ಯೋಜನೆಗಳು ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಇದನ್ನು ಭಾರತೀಯ ನಾಗರಿಕರು ಮಾತ್ರ ಪಡೆಯಬಹುದು, ಹಾಗೆಯೇ ಪ್ರತಿ ಮೂರು ತಿಂಗಳಿಗೊಮ್ಮೆ ಇವುಗಳಿಗೆ ಅನ್ವಯವಾಗುವ ಬಡ್ಡಿದರ ಪರಿಷ್ಕೃತಗೊಳ್ಳುತ್ತಿರುತ್ತದೆ ಮತ್ತು ಕೆಲವು ಯೋಜನೆಗಳಿಗೆ ಹೂಡಿಕೆಯ ಮಿತಿ ಕೂಡ ನಿಗದಿ ಆಗಿದೆ. ಇವುಗಳಿಗೆ ಇರುವ ಇನ್ನಷ್ಟು ಕಂಡೀಷನ್ ಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅಂಚೆ ಕಚೇರಿ ವೆಬ್ಸೈಟ್ ಗೆ ಭೇಟಿ ಕೊಡಿ ಅಥವಾ ಹತ್ತಿರದಲ್ಲಿರುವ ಅಂಚೆ ಕಚೇರಿಯನ್ನು ಸಂಪರ್ಕಿಸಿ.