ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿತಗಳನ್ನಾಗಿ ಮಾಡುವ ಉದ್ದೇಶದಿಂದ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿಗಳು, ಸಬ್ಸಿಡಿ ಯೋಜನೆಗಳು ಮತ್ತು ಮಹಿಳೆಯರಿಗೆ ಹೆಚ್ಚಿನ ಲಾಭ ನೀಡುವಂತಹ ಹೂಡಿಕೆ ಯೋಜನೆಗಳು ಇತ್ಯಾದಿಗಳನ್ನು ಪರಿಚಯಿಸಿರುವ ಕೇಂದ್ರ ಸರ್ಕಾರವು ಈಗ ಹೆಣ್ಣು ಮಕ್ಕಳು ಹೊಗೆ ಮುಕ್ತ ಅಡುಗೆ ಮನೆಯ ವಾತಾವರಣ ಸೃಷ್ಟಿಸಿಕೊಡುವ ಉದ್ದೇಶದಿಂದ.
ಪ್ರಧಾನಮಂತ್ರಿ ಉಜ್ವಲ ಯೋಜನೆ (Pradhana Mantri Ujwala Yojane) ಹೆಸರಿನಲ್ಲಿ ಉಚಿತವಾಗಿ LPG ಗ್ಯಾಸ್ ಕನೆಕ್ಷನ್ ನೀಡುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಹೆಣ್ಣು ಮಕ್ಕಳು ಈ ಸೌಲಭ್ಯವನ್ನು ಪಡೆಯಬಹುದು. ಕೋಟ್ಯಂತರ ಮಹಿಳೆಯರು ಇದರ ಪ್ರಯೋಜನ ಪಡೆದಿದ್ದಾರೆ ಆ ಸಂಖ್ಯೆಯನ್ನು ಇನ್ನಷ್ಟು ಈ ವರ್ಷದಲ್ಲಿ ಹೆಚ್ಚಿಸುವ ಉದ್ದೇಶದಿಂದ ಮತ್ತೊಮ್ಮೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ನೀಡಿ ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಜಿ ಸಲ್ಲಿಸುವ ಕುರಿತಾದ ಪ್ರಮುಖ ಮಾಹಿತಿ ಹೀಗಿದೆ ನೋಡಿ.
ಯೋಜನೆಯ ಹೆಸರು:- ಪ್ರಧಾನ ಮಂತ್ರಿ ಉಜ್ವಲ ಯೋಜನೆ
ಸಿಗವ ಸೌಲಭ್ಯ:-
* ಉಚಿತ ಗ್ಯಾಸ್ ಕಲೆಕ್ಷನ್
* ಒಂದು ಗ್ಯಾಸ್ ಸಿಲೆಂಡರ್
* ಒಂದು ಗ್ಯಾಸ್ ಸ್ಟವ್
* ಒಂದು ರೆಗ್ಯುಲೇಟರ್
* ಒಂದು ಲೈಟರ್
* ವಾರ್ಷಿಕವಾಗಿ 12 ಸಿಲಿಂಡರ್ ಬುಕ್ ಮಾಡಿದ್ದಲ್ಲಿ ಪ್ರತಿ ಬುಕ್ಕಿಂಗ್ ಮೇಲೆ ಪ್ರಸ್ತುತವಾಗಿ ಗರಿಷ್ಠ ರೂ.400 ವರೆಗೆ ಸಬ್ಸಿಡಿ
ಅರ್ಜಿ ಸಲ್ಲಿಸಲು ಕಂಡಿಷನ್ ಗಳು:-
* 18 ವರ್ಷ ತುಂಬಿರುವ ಬಡತನ ರೇಖೆಗಿಂತ ಕೆಳಗಿರುವ (BPL, AAY ರೇಷನ್ ಕಾರ್ಡ್) ಕುಟುಂಬಗಳು ಮಾತ್ರ ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.
* ಒಂದು ವೇಳೆ ಈಗಾಗಲೇ ಮನೆಯಲ್ಲಿ ಗ್ಯಾಸ್ ಕನೆಕ್ಷನ್ ಇದ್ದರೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ
* ಮಹಿಳೆಯರ ಹೆಸರಿಗೆ ಮಾತ್ರ ಗ್ಯಾಸ್ ಕನೆಕ್ಷನ್ ನೀಡಲಾಗುತ್ತದೆ.
* SC / ST ವರ್ಗಕ್ಕೆ ಸೇರಿದವರು ಹಿಂದುಳಿದ ವರ್ಗದವರು ಬುಡಕಟ್ಟು ಜನಾಂಗ ಮೊದಲಾದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳಾ ಸದಸ್ಯ ಅರ್ಜಿ ಸಲ್ಲಿಸಬಹುದು.
* ಉಚಿತ ಗ್ಯಾಸ್ ಕನೆಕ್ಷನ್ ಅನ್ನು ಪಡೆಯಲು e-KYC ಕಡ್ಡಾಯ
ಬೇಕಾಗುವ ದಾಖಲೆಗಳು:-
* ಅರ್ಜಿ ಸಲ್ಲಿಸುವ ಮಹಿಳೆಗೆ ಸರ್ಕಾರದಿಂದ ನೀಡಿರುವ ಯಾವುದಾದರು ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್
* ವಿಳಾಸ ಪುರಾವೆ
* BPL ಅಥವಾ AAY ರೇಷನ್ ಕಾರ್ಡ್
* ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
* ಪಾಸ್ ಪೋರ್ಟ್ ಅಳತೆಯ ಫೋಟೋ
* ಬ್ಯಾಂಕ್ ಖಾತೆಯ ವಿವರ (ಆಧಾರ್ ಲಿಂಕ್ ಮಾಡಿಸಿ, e-KYC ಆಗಿರಬೇಕು)
ಅರ್ಜಿ ಸಲ್ಲಿಸುವ ವಿಧಾನ:-
* https://www.pmuy.gov.in/ujjwala2.html ವೆಬ್ ಸೈಟ್ ಲಿಂಕ್ ಕ್ಲಿಕ್ ಮಾಡಿ, ನಂತರ ಉಜ್ವಲ 2.0 ಯೋಜನೆಯ ಮೇಲೆ ಕ್ಲಿಕ್ ಮಾಡಿ.
* ಯಾವ ಗ್ಯಾಸ್ ಕಂಪನಿ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ಬಯಸುತ್ತೀರಿ ಅದನ್ನು ಆಯ್ಕೆ ಮಾಡಿ, ಬಳಿಕ ಆಯಾ ಗ್ಯಾಸ್ ಕಂಪನಿ ಲೋಗೋ ಮೇಲೆ ಕಾಣಿಸುವ click here to apply ಎಂದು ಆಯ್ಕೆ ಮಾಡಿ.
* ಕಂಪನಿಯ ಅಫೀಷಿಯಲ್ ಪೇಜ್ ಓಪನ್ ಆಗುತ್ತದೆ, ಅರ್ಜಿ ಫಾರಂ ನಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಿದರೆ ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗುತ್ತದೆ, ಸಂಬಂಧಪಟ್ಟ ಅಧಿಕಾರಿಗಳಿಂದ ಅರ್ಜಿ ಪರಿಶೀಲನೆ ನಡೆಸಿದ ನಂತರ ಉಚಿತ ಗ್ಯಾಸ್ ಕನೆಕ್ಷನ್ ಕೊಡಲಾಗುವುದು.