ಕಾಂಗ್ರೆಸ್ ಪಕ್ಷವು (Congress Party) ಕರ್ನಾಟಕ ವಿಧಾನಸಭೆ ಚುನಾವಣೆ-2023ರ (Karnataka Assembly electrion-2023) ವೇಳೆ ತನ್ನ ಪ್ರಣಾಳಿಕೆಯಲ್ಲಿ ಪಂಚ ಖಾತ್ರಿ ಯೋಜನೆಗಳನ್ನು ಘೋಷಿಸಿತ್ತು. ಆ 5 ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ ಶಕ್ತಿ ಯೋಜನೆ, ಗೃಹ ಜ್ಯೋತಿ, ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳನ್ನು ಜಾರಿಗೆ ತಂದಿದೆ.
ಐದನೇ ಯೋಜನೆಯದ ಯುವನಿಧಿ ಯೋಜನೆ (Yuvanidhi Scheme) ಜಾರಿ ತರುವುದು ಬಾಕಿ ಇದ್ದು ಮಾನ್ಯ ಮುಖ್ಯಮಂತ್ರಿಗಳು ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಈ ಯೋಜನೆ ಜಾರಿಗೆ ಬರುತ್ತದೆ ಎಂದು ತಿಳಿಸಿದ್ದರು. ಈಗ ಅಂತಿಮವಾಗಿ ಯುವನಿಧಿ ಯೋಜನೆ ಕುರಿತು ಬಿಗ್ ಅಪ್ಡೇಟ್ ಹೊರ ಬಿದ್ದಿದೆ. ಸಚಿವ ಶರಣಪ್ರಕಾಶ್ ಆರ್ ಪಾಟೀಲ್ (Minister Sharada Prakash R Patil) ರವರು ಸುದ್ದಿಗೋಷ್ಠಿ ಒಂದರಲ್ಲಿ ಯುವನಿಧಿ ಯೋಜನೆ ಜಾರಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಅವರು ತಿಳಿಸಿರುವ ಪ್ರಕಾರ ಡಿಸೆಂಬರ್ ತಿಂಗಳಿನಲ್ಲಿ (application starts from December) ಕರ್ನಾಟಕ ಯುವನಿಧಿ ಯೋಜನೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುತ್ತದೆ ಮತ್ತು ಡಿಸೆಂಬರ್ ತಿಂಗಳಿನಿಂದಲೇ ಪಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆಯಂತೆ. ಯುವನಿಧಿ ಯೋಜನೆಗೆ 250 ಕೋಟಿ ಅಂದಾಜು ಖರ್ಚಾಗಬಹುದು ಎಂದು ಸಹ ಊಹಿಸಲಾಗಿದೆ.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕು, ಅರ್ಹತೆಗಳೇನು ಮತ್ತು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎನ್ನುವುದರ ಬಗ್ಗೆ ಕೂಡ ಮಾಹಿತಿ ಸಿಕ್ಕಿದೆ. ಇದರ ಕುರಿತು ಕೆಲ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಪೂರ್ತಿ ಮಾಹಿತಿಗಾಗಿ ಕೊನೆಯವರೆಗೂ ಓದಿ.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
* 2022-23ನೇ ಸಾಲಿನಲ್ಲಿ ಪದವೀಧರರಾಗಿ ವಿದ್ಯಾಭ್ಯಾಸ ಪೂರೈಸಿರಬೇಕು ಮತ್ತು ಡಿಪ್ಲೊಮಾ ಉತ್ತೀರ್ಣರಾಗಿರುವವರು ಸಹ ಅರ್ಜಿ ಸಲ್ಲಿಸಬಹುದು.
* ಯಾವುದೇ ಪದವಿ ಅಥವಾ ಡಿಪ್ಲೊಮಾ ತೇರ್ಗಡೆಯಾದ ದಿನಾಂಕದ ನಂತರ ಕನಿಷ್ಠ 6 ತಿಂಗಳುಗಳ ಕಾಲ ನಿರುದ್ಯೋಗಿಯಾಗಿರುವವರು ಅರ್ಜಿ ಸಲ್ಲಿಸಬಹುದು.
* ಗರಿಷ್ಠ ಎರಡು ವರ್ಷಗಳವರೆಗೆ ಈ ನಿರುದ್ಯೋಗ ಭತ್ಯೆ ಸಿಗುತ್ತದೆ.
* ಎರಡು ವರ್ಷಗಳ ನಂತರ ಅಥವಾ ಎರಡು ವರ್ಷಗಳಲ್ಲಿ ಯುವಕರಿಗೆ ಉದ್ಯೋಗ ದೊರೆತ ತಕ್ಷಣ ಘೋಷಿಸಿಕೊಳ್ಳಬೇಕು ನಂತರ ಅವರಿಗೆ ನಿರುದ್ಯೋಗ ಭತ್ಯೆ ನಿಲ್ಲಿಸಲಾಗುವುದು. ಒಂದು ವೇಳೆ ಉದ್ಯೋಗ ಸಿಕ್ಕಿದ ಮಾಹಿತಿ ಮರೆಮಾಚಿದರೆ ದಂಡ ವಿಧಿಸಲಾಗುತ್ತದೆ.
ಸಿಗುವ ಸಹಾಯಧನ:-
* ನಿರುದ್ಯೋಗಿ ಪದವೀಧರರಿಗೆ ಮಾಸಿಕ ರೂ.3,000
* ಡಿಪ್ಲೊಮಾ ಪಾಸ್ ಆದವರಿಗೆ ತಿಂಗಳಿಗೆ ರೂ.1,500
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ಕರ್ನಾಟಕದ ನಿವಾಸಿ ಎನ್ನುವುದಕ್ಕೆ ಪುರಾವೆ
* ಆಧಾರ್ ಕಾರ್ಡ್
* ಪದವಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ,
* ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಡಿಪ್ಲೊಮಾ ಪ್ರಮಾಣಪತ್ರ.
* ಜಾತಿ ಪ್ರಮಾಣ ಪತ್ರ
* ಆದಾಯ ಪ್ರಮಾಣಪತ್ರ
* ಮೊಬೈಲ್ ನಂಬರ್
* ಬ್ಯಾಂಕ್ ಖಾತೆ ವಿವರ
* ಸ್ವಯಂ ಘೋಷಣ ಪತ್ರ.
ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:-
* ಯುವನಿಧಿಗೆ ಅರ್ಹತೆ ಹೊಂದಿರುವ ಯುವಕ ಯುವತಿಯರು ಸೇವಾ ಸಿಂಧುಪೋರ್ಟಲ್ನಲ್ಲಿಅರ್ಜಿ ಸಲ್ಲಿಸಬೇಕು.
* ಅರ್ಜಿ ಸಲ್ಲಿಸಲು ನಿಗದಿತ ದಿನಾಂಕ ಘೋಷಣೆ ಮಾಡಿದ ನಂತರ ಸೇವೆಗಳ ವಿವರದಲ್ಲಿ ಈ ಯೋಜನೆ ಆಪ್ಷನ್ ಕೂಡ ಕಾಣಿಸುತ್ತದೆ.
* ಮುಂದಿನ ತಿಂಗಳಲ್ಲಿ ಈ ದಿನಾಂಕದ ಬಗ್ಗೆ ಸರ್ಕಾರವೇ ಅಧಿಕೃತ ಆದೇಶ ಹೊರಡಿಸಿ ತಿಳಿಸಲಿದೆ.