ನಮ್ಮ ಭಾರತದ ಪರಂಪರೆ ಇಡೀ ಪ್ರಪಂಚದಲ್ಲಿ ಶ್ರೇಷ್ಠವಾದದ್ದು ಯಾಕೆಂದರೆ ವಿದೇಶಿಗರು ನಾಗರಿಕತೆ ಕಲಿಯುವ ಹೊತ್ತಿನಲ್ಲಿಯೇ ನಮ್ಮ ದೇಶದಲ್ಲಿ ಮಹಾ ಗ್ರಂಥಗಳು ರಚನೆಯಾಗಿದ್ದವು, ನಮ್ಮ ದೇಶದಲ್ಲಿದ್ದ ಗುರುಕುಲ ವ್ಯವಸ್ಥೆಗೆ ಈ ಭರತ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬರನ್ನು ಶ್ರೇಷ್ಠ ವ್ಯಕ್ತಿಗಳನ್ನಾಗಿ ಮಾಡುವ ಶಕ್ತಿ ಇತ್ತು.
ಅಲ್ಲಿನ ಜನರು ಆರೋಗ್ಯವನ್ನು ಅರಿವು ಮೊದಲೇ ನಮ್ಮಲ್ಲಿ ಆಯುರ್ವೇದ ಇತ್ತು. ಹೀಗೆ ಆರೋಗ್ಯ, ಆಧ್ಯಾತ್ಮ ವಿಜ್ಞಾನ, ಜೀವನಶೈಲಿ, ಆಹಾರ ಪ್ರತಿಯೊಂದು ವಿಚಾರದಲ್ಲೂ ಕೂಡ ಅತ್ಯುತ್ತಮರೆನಿಸಿರುವ ನಮಗೆ ಈ ಶಕ್ತಿಯನ್ನು ಕಟ್ಟಿಕೊಟ್ಟಿರುವುದು ನಮ್ಮ ಪುರಾಣಗಳು, ನಮ್ಮ ನಂಬಿಕೆ ಮತ್ತು ಆಚಾರ ವಿಚಾರಗಳು ಎಂದರೆ ತಪ್ಪಾಗುವುದಿಲ್ಲ.
ಸಂಸ್ಕೃತಿ ಸಂಪ್ರದಾಯ ಪದ್ಧತಿ ಆಚರಣೆ ಈ ವಿಷಯಗಳನ್ನು ನಮ್ಮಲ್ಲಿ ಭಾರತೀಯತೆ ಎನ್ನುವಂತೆ ರಕ್ತದ ಕಣಕಣದಲ್ಲೂ ಕೂಡ ತುಂಬಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಜೀವನಶೈಲಿಗೆ ಮಾರುಹೋಗಿ ಮತ್ತು ವಿಚಾರವನ್ನು ಕೂಲಂಕುಶವಾಗಿ ಅರ್ಥಮಾಡಿಕೊಳ್ಳದೆ ಮೂಢನಂಬಿಕೆ ಎನ್ನುವ ಪಟ್ಟಿ ಕಟ್ಟಿ ಅಲ್ಲಗಳೆದು ನಮ್ಮತನ ಕಳೆದುಕೊಳ್ಳುತ್ತಿದ್ದೇವೆ.
ಇದೆಲ್ಲವನ್ನು ಆಚೆಗೆಟ್ಟು ನೋಡಿದರೆ ನಮ್ಮ ಪುರಾಣಗಳನ್ನು ಒಮ್ಮೆ ಆಳವಾಗಿ ವಿಚಾರ ಮಾಡಿ ನೋಡಿದರೆ ಅದರಲ್ಲಿ ಅನಾರೋಗ್ಯ ಗುಣ ಮಾಡಿಕೊಳ್ಳುವುದರಿಂದ ಹಿಡಿದು ಭೂಮಿಯಿಂದ ಬೇರೆ ಗ್ರಹ ನಕ್ಷತ್ರಗಳಿರುವ ದೂರದ ವಿಜ್ಞಾನದ ವರೆಗೆ ಮತ್ತು ಸಂಪನ್ತನ್ನು ಉಳಿಸಿಕೊಳ್ಳುವ ತಂತ್ರದ ಬಗ್ಗೆ ಹೀಗೆ ಎಲ್ಲಾ ವಿಚಾರವನ್ನು ಕೂಡ ತಿಳಿಸಿ ಹೋಗಿದ್ದಾರೆ.
ಆದರೆ ಇದು ಹಂತ ಹಂತವಾಗಿ ಮುಂದಿನ ತಲೆಮಾರು ತಲುಪುವ ನಡುವೆ ನಡೆದ ಷಡ್ಯಂತರಗಳಿಂದ ಆ ಕಾರ್ಯ ಸಾಧ್ಯವಾಗದೆ ದಾರಿ ತಪ್ಪಿ ಹೋಗಿದೆ. ಈಗ ಮತ್ತೆ ಎಲ್ಲರೂ ಪುರಾತನದತ್ತ ಮುಖ ಮಾಡುತ್ತಿದ್ದೇವೆ. ಅವುಗಳಲ್ಲಿರುವ ಎಲ್ಲಾ ವಿಚಾರವನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರ ಮನಸ್ಸಿನಲ್ಲಿಯೂ ಮೂಡಿದೆ.
ಈ ರೀತಿ ಆಸಕ್ತಿ ಇರುವವರಿಗೆ ಇದರಲ್ಲಿರುವ ಒಂದು ವಿಚಾರದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳಲು ಇಚ್ಚಿಸುತ್ತಿದ್ದೇನೆ. ಅದೇನೆಂದರೆ ಮಂತ್ರಗಳಿಗೆ ಬಹಳ ಶಕ್ತಿ ಇದೆ. ನಂಬಿಕೆಯಿಂದ ಅವುಗಳನ್ನು ಉಚ್ಚಾರ ಮಾಡಿದರೆ ಅದು ಕೋಡ್ ವರ್ಲ್ಡ್ ರೀತಿ ಯೂನಿವರ್ಸ್ ಗೆ ಕನೆಕ್ಟ್ ಆಗಿ ಖಂಡಿತವಾಗಿಯೂ ಪ್ರತಿಫಲವನ್ನು ಕೊಡುತ್ತದೆ.
ಇದನ್ನೇ ನಾವು ಅಶ್ವಿನಿ ದೇವತೆಗಳು ಅಸ್ತು ಎನ್ನುತ್ತಾರೆ ಎಂದು ಆಡು ಭಾಷೆಯಲ್ಲಿ ಹೇಳುತ್ತೇವೆ ಅಥವಾ ಪಾಸಿಟಿವ್ ಅಫರ್ಮೇಷನ್ ಎಂದು ಕೂಡ ಕರೆಯುತ್ತೇವೆ. ನೇರವಾಗಿ ವಿಷಯದ ಬಗ್ಗೆ ಹೇಳುವುದಾದರೆ ನಮ್ಮ ಕಳೆದು ಹೋದ ವಸ್ತು ಒಂದನ್ನು ಹುಡುಕಿ ಕೊಡುವ ಶಕ್ತಿ ಕೂಡ ಮಂತ್ರಗಳಿಗೆ ಇದೆ.
ಮಂತ್ರಗಳು ನೇರವಾಗಿ ಆ ವಸ್ತುಗಳೇ ನಿಮ್ಮ ಮುಂದೆ ಬರುವಂತೆ ಮಾಡಬಹುದು ಅಥವಾ ಮಾಡದೇ ಇರಬಹುದು ಆದರೆ ನೀವು ಭಕ್ತಿಯಿಂದ ಉಚ್ಛಾರ ಮಾಡಿದಾಗ ಅವುಗಳನ್ನು ನೀವು ಎಲ್ಲಿಟ್ಟಿದ್ದೀರಾ ಎನ್ನುವುದು ನೆನಪಿಗೆ ಬರಬಹುದು ಅಥವಾ ಮಂತ್ರಶಕ್ತಿಯಿಂದ ಮನಸ್ಸು ಶಾಂತವಾಗಿ ನಿಮ್ಮ ತ’ಪ್ಪು ಅರಿವಾಗಬಹುದು.
ಆಗ ಕಳೆದುಹೋದ ಸಂಬಂಧ ಕೂಡ ಸರಿ ಹೋಗಬಹುದು ಅಥವಾ ನಿಮ್ಮ ದುಡುಕಿನಿಂದ ಕಳೆದುಕೊಂಡ ಉದ್ಯೋಗವನ್ನು ಮತ್ತೆ ಪಡೆದುಕೊಳ್ಳುವ ಸೋಲುವ ಮನಸ್ಸಾಗಬಹುದು ಅಥವಾ ನಿಮ್ಮ ಬುದ್ಧಿಶಕ್ತಿ ಪ್ರಕಟವಾಗಿ ನೀವೇ ಅತ್ಯುತ್ತಮ ಸ್ಥಾನಕ್ಕೆ ಹೋದಾಗ ನಿಮ್ಮನ್ನು ಬಿಟ್ಟು ಹೋದವರು ಹಿಂಬಾಲಿಸಿ ಬಂದು ಆ ಮೂಲಕ ಕೂಡ ಅದು ನಿಮಗೆ ತಲುಪಬಹುದು.
ಒಟ್ಟಿನಲ್ಲಿ ಅದು ವಸ್ತುವಾಗಿರಲಿ, ವ್ಯಕ್ತಿಯಾಗಿರಲಿ, ಸಂಬಂಧ ಆಗಿರಲಿ
ಅಥವಾ ಮತ್ತೊಂದೆ ಆಗಿರಲಿ ನಿಮಗೆ ಬಹಳ ಬೇಕಾಗಿತ್ತು ನಿಮ್ಮಿಂದ ಅದು ದೂರ ಹೋಗಿದ್ದರೆ ನಿಮಗೆ ಮತ್ತೆ ಸಿಗಲು ಈ ಒಂದು ಮಂತ್ರವನ್ನು ಪಠಿಸಿ ನಿಮಗೆ ಎಷ್ಟು ಸಾಧ್ಯ ಅಷ್ಟು ನಿಮಗೆ ಎಷ್ಟು ದಿನಗಳವರೆಗೆ ಆಗುತ್ತದೆ ಅಷ್ಟು ದಿನಗಳ ವರೆಗೆ ನಂಬಿಕೆ ಪಠಿಸಿ ನೋಡಿ ಪರಿಣಾಮ ಕಂಡು ನೀವೇ ಆಶ್ಚರ್ಯ ಪಡುತ್ತಿರಿ.
ಮಂತ್ರ:
ಕಾರ್ತವೀರ್ಯಾರ್ಜುನೋ ನಾಮ ರಾಜಾ ಬಾಹುಸಹಸ್ರವಾನ್|
ತಸ್ಯ ಸ್ಮರಣ ಮಾತ್ರೇಣ ಗತಂ ನಷ್ಟಂ ಚ ಲಭ್ಯತೇ||