ವೃದ್ಯಾಪ್ಯದಲ್ಲಿ (retired life) ಅನೇಕ ಸಮಸ್ಯೆಗಳು ಬರುತ್ತವೆ, ಅದರಲ್ಲಿ ಆರ್ಥಿಕ ಸಮಸ್ಯೆ ಕೂಡ ಒಂದು. ಆ ವಯಸ್ಸಿನಲ್ಲಿ ದುಡಿಯಲು ಉದ್ಯೋಗ ಇರುವುದಿಲ್ಲ, ದೇಹದಲ್ಲಿ ಶಕ್ತಿಯೂ ಇರುವುದಿಲ್ಲ. ಜೀವನದ ಇಳಿ ಸಮಯದಲ್ಲಿ ಮತ್ತೊಬ್ಬರಿಗೆ ಹೊರೆಯಾಗದೆ ಬದುಕಬೇಕು (economical independence) ಎಂದರೆ, ಹಣಕಾಸು ತೊಂದರೆ ಎದುರಿಸಬಾರದು ಎಂದರೆ ಈಗಿನಿಂದಲೇ ಅದರ ಬಗ್ಗೆ ಯೋಚನೆ ಮಾಡಬೇಕು.
ಈಗಂತೂ ಸಂಧ್ಯಾ ಜೀವನವನ್ನು ಸರಳ ಮಾಡಿಕಕೊಳ್ಳಲು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಹಲವಾರು ಯೋಜನೆಗಳನ್ನು ಪರಿಚಯಿಸಿವೆ. ಇವುಗಳಲ್ಲಿ ನೀವು ಹೂಡಿಕೆ ಮಾಡಿದರೆ, 60 ವರ್ಷ ಆದ ಬಳಿಕ ನಿಮಗೆ ಪ್ರತಿ ತಿಂಗಳು ಒಂದು ನಿಶ್ಚಿತ ಆದಾಯವು ಖಾತೆಗೆ ಸೇರುತ್ತದೆ. ಅದನ್ನು ನೀವು ನಿಮ್ಮ ದಿನನಿತ್ಯದ ಖರ್ಚು ವೆಚ್ಚಗಳಿಗೆ ವಿನಿಯೋಗಿಸಿಕೊಳ್ಳಬಹುದು.
ಕೇಂದ್ರ ಸರ್ಕಾರವು ಕೂಡ ಶ್ರಮ ಯೋಗಿ ಮಂದನ್ ಯೋಜನೆ, ಹಿರಿಯ ನಾಗರಿಕರ ಪಿಂಚಣಿ ಯೋಜನೆ ಮುಂತಾದ ಇನ್ನಿತರ ಯೋಜನೆಗಳನ್ನು ಪರಿಚಯಿಸಿದೆ. ನೀವು ಅಂಚೆ ಕಚೇರಿ ಹಾಗೂ ರಾಷ್ಟ್ರೀಕತ ಬ್ಯಾಂಕ್ ಗಳಲ್ಲಿ ವಿಚಾರಿಸಿ ಕೇಂದ್ರ ಸರ್ಕಾರದಿಂದ ಈ ರೀತಿ ಪಿಂಚಣಿಗಾಗಿ (Pension Schemes ) ಯಾವೆಲ್ಲ ಯೋಜನೆ ಇದೆ ಎನ್ನುವುದರ ವಿವರ ಸಿಗುತ್ತದೆ.
ಇದನ್ನು ಹೊರತುಪಡಿಸಿ ಖಾಸಗಿ ಸಂಸ್ಥೆಗಳು ಕೆಲವು ಪಿಂಚಣಿಗಾಗಿ ಹೂಡಿಕೆ ಮಾಡಿ ಹಣ ಉಳಿಸುವಂತಹ ಯೋಜನೆಗಳನ್ನು ಜಾರಿಗೆ ತಂದಿವೆ. ಈ ಯೋಜನೆಯಲ್ಲಿ ಕೂಡ ನೀವು 60 ವರ್ಷಗಳವರೆಗೆ ಉಳಿತಾಯ ಮಾಡಿ ಬಳಿಕ ಪಿಂಚಣಿ ಬರುವ ರೀತಿ ಆಯ್ಕೆ ಮಾಡಿಕೊಳ್ಳಬಹುದು.
ಯೋಜನೆ ಹೆಸರು:- LIC ಜೀವನ್ ಶಾಂತಿ ಯೋಜನೆ (LIC Jeevan Shanti Scheme)
* LIC ಜೀವನ್ ಶಾಂತಿ ಯೋಜನೆಯಲ್ಲಿ ಗಂಡ ಹೆಂಡತಿ ಜಂಟಿಯಾಗಿ ಕೂಡ ಖಾತೆ ತೆರೆಯಬಹುದು.
* ಈ ಯೋಜನೆಯಲ್ಲಿ ಕನಿಷ್ಠ 1.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕು, ಗರಿಷ್ಠ ಕೆಲಸ ಯಾವುದೇ ಮಿತಿ ಇಲ್ಲ.
* 30 ವರ್ಷದಿಂದ ಮೇಲ್ಪಟ್ಟು 79 ವರ್ಷ ವಯಸ್ಸಿನ ಒಳಗಿನವರು ಮಾತ್ರ LIC ಜೀವನ್ ಶಾಂತಿ ಯೋಜನೆ ಖರೀದಿಸಬಹುದು.
* ನೀವು ಯೋಜನೆ ಖರೀದಿಸಿದ ಸಮಯದಿಂದ ಮಾಸಿಕವಾಗಿ, ತ್ರೈಮಾಸಿಕವಾಗಿ ಅಥವಾ ಅರ್ಥ ವಾರ್ಷಿಕವಾಗಿ, ವಾರ್ಷಿಕವಾಗಿ ಸಾಧ್ಯವಾದಷ್ಟು ಹಣವನ್ನು ಹೂಡಿಕೆ ಮಾಡುತ್ತಾ ಬಂದರೆ ಅದರ ಆಧಾರದ ಮೇಲೆ 60 ವರ್ಷ ತುಂಬಿದ ಬಳಿಕ ಪೆನ್ಷನ್ ಬರುತ್ತದೆ,
ನೀವು ಎಷ್ಟು ಹೆಚ್ಚಿನ ಹಣವನ್ನು ಹೂಡಿಕೆ ಮಾಡುತ್ತಿರುವ ಅಷ್ಟು ಹೆಚ್ಚಿನ ಹಣವನ್ನು ಮಾಸಿಕ ಪಿಂಚಣಿಯಾಗಿ ಪಡೆದುಕೊಳ್ಳಬಹುದು.
* LIC ಜೀವನ್ ಶಾಂತಿ ಯೋಜನೆಯಡಿಯಲ್ಲಿ ಹೂಡಿಕೆ ಹಣಕ್ಕೆ 6.1% ನಿಂದ 14.62% ವರೆಗೆ ಬಡ್ಡಿ ಸಿಗುತ್ತದೆ.
* ನೀವು ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿಗಳ ಪಿಂಚಣಿ ಪಡೆದುಕೊಳ್ಳಲು 12 ವರ್ಷಗಳವರೆಗೆ ಒಂದು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.
* 10 ಲಕ್ಷ ರೂಪಾಯಿಗಳ ಹೂಡಿಕೆ ಮಾಡಿದ್ದರೆ ಪ್ರತಿ ತಿಂಗಳು 11,000 ಪಿಂಚಣಿ ಬರುತ್ತದೆ.
* ನಾಮಿನಿ ಫೆಸಿಲಿಟಿ ಇರುತ್ತದೆ ಹೂಡಿಕೆ ಮಾಡಿದವರು ಅಕಾಲಿಕವಾಗಿ ಮೃ’ತ್ಯು ಹೊಂದಿದ್ದರೆ ಕಾನೂನು ಪ್ರಕಾರವಾಗಿ ಸೇರಬೇಕಾದ ಮೊತ್ತವು ನಾಮನಿಗೆ ಸೇರುತ್ತದೆ.
* ಯೋಜನೆ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ಸರ್ಕಾರದ ವೆಬ್ಸೈಟ್ಗಳಲ್ಲಿ ಅಥವಾ LIC ಯ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ಪಡೆಯಿರಿ ಅಥವಾ ನಿಮ್ಮ ಹತ್ತಿರದ LIC ಶಾಖೆಗೆ ಬೇಟಿ ಕೊಟ್ಟು ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ಪಡೆಯಿರಿ.