ಜೀವಜಲ ಯೋಜನೆ, ಉಚಿತ ಕೊಳವೆಬಾವಿ ಸೌಲಭ್ಯಕ್ಕೆ ಸಣ್ಣ ರೈತರಿಗೆ 4.75 ಲಕ್ಷ ಸಹಾಯಧನ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!

 

WhatsApp Group Join Now
Telegram Group Join Now

ನಮ್ಮ ರಾಜ್ಯದಲ್ಲಿ ಗಂಗಾ ಕಲ್ಯಾಣ ಎನ್ನುವ ಯೋಜನೆ ಇದೆ. ಈ ಯೋಜನೆ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಸಣ್ಣ ರೈತರಿಗೆ ಕೃಷಿ ಭೂಮಿಗಳಲ್ಲಿ ಬೋರ್ವೆಲ್ ಹಾಕಿಸಿಕೊಳ್ಳಲು ಸಬ್ಸಿಡಿ ರೂಪದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ. ಇದನ್ನೇ ಹೋಲುವ ಮತ್ತೊಂದು ಯೋಜನೆ ಇದೆ ಇದರ ಹೆಸರು ಜೀವಜಲ ಯೋಜನೆ (Jeevajala yojane 2023).

ಈ ಯೋಜನೆ ಮೂಲಕ ರಾಜ್ಯದಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ (Veerashaiva lingayath welfare department) ವತಿಯಿಂದ 3B ವರ್ಗಕ್ಕೆ ಸೇರಿದ ತನ್ನ ಭೂ ಹಿಡುವಳಿದಾರರಿಗೆ ತಮ್ಮ ಜಮೀನುಗಳಲ್ಲಿ ತೆರೆದ ಬಾವಿ ಹಾಗೂ ಕೊಳವೆ ಬಾವಿ ನಿರ್ಮಿಸಿಕೊಳ್ಳಲು ಸಬ್ಸಿಡಿ ರೂಪದಲ್ಲಿ ಸಹಾಯಧನ ನೀಡಲಾಗುತ್ತದೆ. ಎಂದಿನಂತೆ ಈ ವರ್ಷವೂ ಕೂಡ 2023-24 ನೇ ಜೀವ ಜಲ ಯೋಜನೆಯಡಿ ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಜಿ ಸಲ್ಲಿಸುವುದರ ಕುರಿತು ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಕೇವಲ 190 ರೂಪಾಯಿ ಕಟ್ಟಿ LIC ನಲ್ಲಿ ಖಾತೆ ತೆರೆಯಿರಿ 40 ಲಕ್ಷ ಸಿಗುತ್ತೆ.!

ಯೋಜನೆಯ ಹೆಸರು:- ಜೀವ ಜಲ ಯೋಜನೆ, ಜೀವ ಎಂದರೆ ಜೀವನ, ಬದುಕು. ಜಲ ಎಂದರೆ ಗಂಗೆ, ನೀರು ಕೃಷಿಕರಿಗೆ ಜೀವನಾಧಾರವೇ ಜಲವಾದ್ದರಿಂದ ಯೋಜನೆಗೆ ಈ ಹೆಸರನ್ನು ಇಡಲಾಗಿದೆ.

ಅರ್ಜಿ ಸಲ್ಲಿಸಲು ಅರ್ಹತೆಗಳು:-

● ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ರೈತನಾಗಿರಬೇಕು
● 18 ವರ್ಷದಿಂದ 55 ವರ್ಷದ ಒಳಗಿನ ರೈತನಾಗಿರಬೇಕು
● ಪ್ರಸ್ತುತವಾಗಿ ಆತ ತನ್ನ ಜಮೀನಿಗೆ ನೀರಾವರಿ ಸೌಲಭ್ಯ ಹೊಂದಿರದೆ, ಮಳೆ ಆಧಾರಿತ ಖುಷ್ಕಿ ಹಿಡುವಳಿದಾರನಾಗಿರಬೇಕು.
● ಈ ಯೋಜನೆಯ ಸೌಲಭ್ಯ ಪಡೆಯಲು ರೈತನು ತನ್ನ ಹೆಸರಿನಲ್ಲಿ ಜಮೀನು ಹೊಂದಿರಬೇಕು.

1. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ರೈತರು ಕನಿಷ್ಠ 2 ಎಕರೆ ಜಮೀನು ಹೊಂದಿರಬೇಕು.
2. ಇತರೆ ಜಿಲ್ಲೆಗಳಲ್ಲಿ ರೈತರು ಕನಿಷ್ಠ 2 ಎಕರೆ ಜಮೀನನ್ನು ಹೊಂದಿರಬೇಕು.
3. ಗರಿಷ್ಠ ಮಿತಿ 5 ಎಕರೆ

ಎಲ್ಲಾ ದಾಖಲೆ ಸರಿ ಇದ್ರು ಗೃಹಲಕ್ಷ್ಮಿ ಮೊದಲನೇ ಕಂತಿನ ಹಣ ಬಂದಿಲ್ವಾ.? ಸೆಪ್ಟೆಂಬರ್ ತಿಂಗಳು ಮುಗಿದೆ ಹೋಗಿದೆ ಹಣ ಬರುತ್ತಾ? ಇಲ್ವಾ? ಎನ್ನುವ ಅನುಮಾನವೇ ಇಲ್ಲಿದೆ ನೋಡಿ ನಿಖರ ಮಾಹಿತಿ.!

● ವೀರಶೈವ ಲಿಂಗಾಯತ ಸಮುದಾಯದ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯಲ್ಲಿ ಒಳಪಡುವ ನಿಗಮಗಳಲ್ಲಿ ಯಾವುದೇ ಯೋಜನೆಗಳಲ್ಲಿ ಸಾಲ ಅಥವಾ ಇತರ ಯಾವುದೇ ಆರ್ಥಿಕ ಸೌಲಭ್ಯ ಹೊಂದಿರಬಾರದು.
● ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದ ವರಿಗೆ ವಾರ್ಷಿಕವಾಗಿ 98,000 ಮೀರಿರಬಾರದು ನಗರ ಪ್ರದೇಶಗಳಲ್ಲಿ ಸೇರಿದವರಿಗೆ 1,20,000 ಮಿತಿಯಲ್ಲಿರಬೇಕು.
● ಈ ಯೋಜನೆಗೆ ಅರ್ಜಿ ಸಲ್ಲಿಸಲು ರೈತನಿಗೆ ಕೇಳಲಾಗುವ ಎಲ್ಲಾ ದಾಖಲೆಗಳನ್ನು ತನ್ನ ಹೆಸರಿನಲ್ಲಿಯೇ ಒದಗಿಸಬೇಕು.

ಪ್ರಯೋಜನ :-

● ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಿಗೆ ವೈಯುಕ್ತಿಕ ಕೊಳವೆಬಾವಿ ಯೋಜನೆಗೆ ಘಟಕ ವೆಚ್ಚ 4.75 ಲಕ್ಷ ನೀಡಲಾಗುತ್ತದೆ. ಇದರಲ್ಲಿ 4.25 ಲಕ್ಷ ಸಬ್ಸಿಡಿ ಹಾಗೂ 50,000ರೂ. ಗೆ 4% ಬಡ್ಡಿದರ ಅನ್ವಯಿಸುತ್ತದೆ
● ಉಳಿದ ಜಿಲ್ಲೆಗಳ ರೈತರಿಗೆ 3.75 ಲಕ್ಷ ಸಹಾಯಧನ ಸಿಗುತ್ತದೆ. ಇದರಲ್ಲಿ 3.25 ಲಕ್ಷ ಸಬ್ಸಿಡಿ ಆಗಿದ್ದು 50,000ರೂ. ವನ್ನು 4% ಬಡ್ಡಿದರದಲ್ಲಿ ನೀಡಲಾಗುತ್ತದೆ
● ಈ ಯೋಜನೆ ಮೂಲಕ ರೈತರು ತಮ್ಮ ಜಮೀನುಗಳಲ್ಲಿ ನೀರಾವರಿ ಸೌಲಭ್ಯ ಪಡೆದು ವಾರ್ಷಿಕ ಬೆಳೆಗಳನ್ನು ಬೆಳೆದು ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸಿಕೊಳ್ಳಲಿ ಎನ್ನುವುದೇ ಯೋಜನೆಯ ಉದ್ದೇಶ.

60 ವರ್ಷ ದಾಟಿದವರಿಗೆ ಪ್ರತಿ ತಿಂಗಳು 10,000 ಪಿಂಚಣಿ ಘೋಷಣೆ, ಹಣ ಪಡೆಯಲು ಮುಗಿಬಿದ್ದ ಜನ.!

ಬೇಕಾಗುವ ದಾಖಲೆಗಳು :-

● ರೈತನ ಆಧಾರ್ ಕಾರ್ಡ್
ವೀರಶೈವ ಲಿಂಗಾಯತ ಪ್ರವರ್ಗ 3B ರಲ್ಲಿ ಬರುವ ಉಪ ಜಾತಿಯಲ್ಲಿ ಸೇರಿರುವುದಕ್ಕೆ ಸಕ್ಷಮ ಪ್ರಾಧಿಕಾರದಿಂದ ಪಡೆದ ನಿಗದಿತ ನಮೂನೆಯ ಪ್ರಮಾಣ ಪತ್ರ
● ಆದಾಯ ಪ್ರಮಾಣ ಪತ್ರ
● ಸಣ್ಣ ಹಾಗೂ ಅತಿ ಸಣ್ಣ ರೈತನಾಗಿರುವುದಕ್ಕೆ ಕಂದಾಯ ಇಲಾಖೆಯಿಂದ ಪ್ರಮಾಣ ಪತ್ರ
● ಜಮೀನಿನ ದಾಖಲೆಗೆ ಸಂಬಂಧಿಸಿದಂತೆ ಪಹಣಿ ಪತ್ರ ಅಥವಾ ಇನ್ಯಾವುದಾದರೂ ದಾಖಲೆ
● ನೀರಾವರಿ ಹೊಂದಿಲ್ಲ ಎನ್ನುವುದಕ್ಕೆ ಸ್ವಯಂ ಘೋಷಣೆ ಪತ್ರ
● ಘಟಕ ವೆಚ್ಚ ಹೆಚ್ಚಾದಲ್ಲಿ ಸಾಲ ಪಡೆಯುವ ಬಗ್ಗೆ ಒಪ್ಪಿಗೆ ಪತ್ರ
● ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು

ಅರ್ಜಿ ಸಲ್ಲಿಸಲು ವೆಬ್ಸೈಟ್ ವಿಳಾಸ:-
https://dbcdc.karnataka.gov.in

ಸಹಾಯವಾಣಿ ಸಂಖ್ಯೆ:-
● 080-22865522.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now