ಬಾಡಿಗೆ & ಭೋಗ್ಯ ಮನೆಯಲ್ಲಿ ಇರುವವರು ಈ ವಿಷಯ ತಪ್ಪದೆ ತಿಳಿದುಕೊಳ್ಳಿ.! ಹೊಸ ರೂಲ್ಸ್.!

 

WhatsApp Group Join Now
Telegram Group Join Now

ಹಳ್ಳಿಗಳು ಹಾಗೂ ಹೆಚ್ಚಾಗಿ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಜನರು ವಾಸಕ್ಕಾಗಿ ಬಾಡಿಗೆ ಮನೆಗಳನ್ನು (rent) ಅನುಸರಿಸುತ್ತಾರೆ. ಕೆಲವೊಬ್ಬರು ಈ ಮನೆಗಳನ್ನು ಭೋಗ್ಯ (lease) ಅಂದರೆ ಲೀಸ್ ಗೆ ಕೂಡ ಹಾಕಿಸಿಕೊಂಡಿರುತ್ತಾರೆ. ಬಾಡಿಗೆಗೆ ಪಡೆಯುವ ಸಮಯದಲ್ಲಿ ಸ್ವಲ್ಪ ಮೊತ್ತದ ಹಣವನ್ನು ಅಡ್ವಾನ್ಸ್ ಎಂದು ಕೊಟ್ಟು ಪ್ರತಿ ತಿಂಗಳು ಆ ಮನೆಗೆ ನಿಗದಿಯಾಗಿರುವ ಬಾಡಿಗೆ ನೀಡುತ್ತಾರೆ.

ಮನೆ ಖಾಲಿ ಮಾಡಿಕೊಂಡು ಹೋಗುವಾಗ ಓನರ್ ಈ ಹಣವನ್ನು ವಾಪಸ್ಸು ಮಾಡುತ್ತಾರೆ. ಆದರೆ ಭೋಗ್ಯಕ್ಕೆ ಹಾಕಿಸಿಕೊಳ್ಳುವಾಗ ದೊಡ್ಡ ಮೊತ್ತದ ಹಣವನ್ನು ನೀಡುತ್ತಾರೆ ಇವರು ಬಾಡಿಗೆ ನೀಡುವ ಅವಶ್ಯಕತೆ ಇರುವುದಿಲ್ಲ ಖಾಲಿ ಮಾಡುವಾಗ ಇವರು ನೀಡಿದ್ದ ದೊಡ್ಡ ಮೊತ್ತದ ಹಣವನ್ನು ಮಾಲೀಕರು ವಾಪಸ್ಸು ಕೊಡುತ್ತಾರೆ.

ಇದು ಮನೆಗಳಿಗೆ ಮಾತ್ರವಲ್ಲದೆ ಅಂಗಡಿ, ಮುಂಗಟ್ಟುಗಳು, ಶಾಪಿಂಗ್ ಕಾಂಪ್ಲೆಕ್ಸ್ ಗಳು, ಕೈಗಾರಿಕೆಗಳು ಇವುಗಳಿಗೂ ಕೂಡ ಅನ್ವಯವಾಗುತ್ತದೆ. ಈ ರೀತಿ ನೀವು ವಾಸಕ್ಕೆ ಅಥವಾ ವಾಣಿಜ್ಯ ಉದ್ದೇಶದಿಂದ ಯಾವುದೇ ಜಾಗವನ್ನು ಬಾಡಿಗೆ ಅಥವಾ ಲೀಸ್ ಗೆ ಪಡೆದಿದ್ದರೆ ಈಗ ನಾವು ಹೇಳುವ ಈ ಮಾಹಿತಿಯನ್ನು ಗಮನವಿಟ್ಟು ಕೇಳಿ.

ನೀವು ಇರುವ ಮನೆ ಮೇಲೆ ಒಂದು ವೇಳೆ ನಿಮ್ಮ ಮಾಲೀಕರು ಲೋನ್ ತೆಗೆದುಕೊಂಡಿದ್ದರೆ ಅದನ್ನು ಸರಿಯಾಗಿ ಪಾವತಿ ಮಾಡದೆ ಇದ್ದರೆ ಆ ಮನೆ ಸೀಝ್ (seize) ಆಗಬಹುದು. ಮನೆ ಸೀಝ್ ಆದರೆ ಅದರಲ್ಲಿ ವಾಸ ಮಾಡುವ ಭೋಗ್ಯದವರಿಗಾಗಲಿ, ಬಾಡಿಗೆಯವರಿಗಾಗಲಿ ಅವರು ಕೊಟ್ಟಿರುವ ಹಣ ವಾಪಸ್ ಸಿಗುವುದಿಲ್ಲ.

ಇನ್ನು ಮನೆ ಮುತ್ತಿಗೆ ಹಾಕಿಕೊಳ್ಳುವಾಗ ತಡೆಯಲು ಯಾವುದೇ ಇನ್ಫ್ಲುಯೆನ್ಸ್ ಕೂಡ ವರ್ಕ್ ಆಗುವುದಿಲ್ಲ. ಸಾಲ ಕೊಟ್ಟಿರುವಂತಹ ಬ್ಯಾಂಕ್ ಮ್ಯಾನೇಜರ್ ಮತ್ತು ನೀವು ಇರುವ ವ್ಯಾಪ್ತಿಗೆ ಒಳಪಡುವ ಪೊಲೀಸ್ ಅಧಿಕಾರಿಗಳು ಹಾಗೂ ವಕೀಲರು ಬಂದು ಬಾಡಿಗೆಗೆ ಭೋಗ್ಯಕ್ಕೆ ಇರುವವರ ಸಾಮಾಗ್ರಿಗಳನ್ನು ಹೊರಹಾಕಿ ಖಾಲಿ ಮಾಡಿಸುತ್ತಾರೆ.

ಉದಾಹರಣೆಗೆ 5,000 ಬಾಡಿಗೆಗೆ ಇದ್ದ ಮನೆಗೆ ರೂ.30,000 ಹಣ ಅಡ್ವಾನ್ಸ್ ಕೊಟ್ಟಿರುತ್ತೀರಿ. ಬಡವರಿಗೆ ಅದೇ ದೊಡ್ಡ ಮೊತ್ತದ ಹಣವಾಗಿರುತ್ತದೆ ಅಥವಾ ನೀವು ಅಸಹಾಯಕರಾಗಿ ಸುಮ್ಮನಾಗಬಹುದು ಆದರೆ 5 ಲಕ್ಷ ನೀವು ಕಷ್ಟಪಟ್ಟು ದುಡಿದಿದ್ದ ಹಣವನ್ನು ಮನೆಭೋಗ್ಯಕ್ಕೆ ಎಂದು ಕೊಟ್ಟಿದ್ದರೆ ಆ ಹಣ ಕಳೆದುಕೊಳ್ಳುವುದಕ್ಕೆ ಖಂಡಿತವಾಗಿಯೂ ಮನಸ್ಸು ಇರುವುದಿಲ್ಲ ಮತ್ತು ಹಣ ಕಳೆದು ಹೋದರೆ ಅದನ್ನು ಸಹಿಸಿಕೊಳ್ಳುವ ಶಕ್ತಿಯು ಇರುವುದಿಲ್ಲ.

ಈ ರೀತಿ ನಿಮ್ಮ ಹಣ ಕೈತಪ್ಪಿ ಹೋಗಬಾರದು ಎಂದರೆ ನೀವು ಕೋರ್ಟ್ ನಿಂದ ಸ್ಟೇ ಆರ್ಡರ್ ತರಬೇಕು. ತಕ್ಷಣ ಆ ಸಂದರ್ಭದಲ್ಲಿ ನೀವು ಈ ಕೆಲಸ ಮಾಡದೆ ಇದ್ದರೆ ಖಂಡಿತವಾಗಿಯೂ ನಿಮ್ಮ ಹಣ ಮತ್ತೆ ಸಿಗುವುದಿಲ್ಲ ಯಾಕೆಂದರೆ ಈಗಾಗಲೇ ಬ್ಯಾಂಕ್ ಮೇಲೆ ಆ ಆಸ್ತಿ ಇಟ್ಟು ಲೋನ್ ತೆಗೆದುಕೊಂಡಿರುವವರು, ಅದರ ಆಧಾರದ ಮೇಲೆ ಇನ್ನೆಲ್ಲೇ ಸಾಲ ಪಡೆದುಕೊಂಡರು ಕಾನೂನಿನ ಪ್ರಕಾರ ಅದು ಮಾನ್ಯ ವಾಗುವುದಿಲ್ಲ.

ಮೊದಲಿಗೆ ನೀವು ಎಲ್ಲಿಗೆ ಬಾಡಿಗೆ ಅಥವಾ ಬೋಗ್ಯಕ್ಕೆ ಹೋಗುತ್ತಿದ್ದರೆ ಅಗ್ರಿಮೆಂಟ್ (agriment) ಮಾಡಿಸಿಕೊಳ್ಳುವುದನ್ನು ಮರೆಯಬೇಡಿ ಮತ್ತು ನಿಮ್ಮ ಓನರ್ ನೀವು ನೀಡುವಷ್ಟು ಹಣವನ್ನು ವಾಪಸ್ ಕೊಡಲು ಶಕ್ತರಿದ್ದಾರೆ ಎನ್ನುವುದನ್ನು ದೃಢಪಡಿಸಿಕೊಳ್ಳಿ. ಒಂದು ವೇಳೆ ಓನರ್ ಹಣ ಕೊಡಲು ತಕರಾರು ಮಾಡುತ್ತಿದ್ದರೆ ಅಗ್ರಿಮೆಂಟ್ ಆಧಾರದ ಮೇಲೆ ರಿಕವರಿ ಸೂಟ್ (Recovery suit) ಹಾಕಿ ವಸೂಲು ಮಾಡಿ.

ಬ್ಯಾಂಕ್ ಏನಾದರೂ ಸೀಝ್ ಮಾಡಲು ನೋಟಿಸ್ ನೀಡಿದರೆ ಬ್ಯಾಂಕ್ ಹಾಗೂ ಮನೆ ಮಾಲೀಕರನ್ನು ಪಾರ್ಟಿಯನ್ನಾಗಿ ಮಾಡಿ ಸ್ಟೇ ಆರ್ಡರ್ ತೆಗೆದುಕೊಂಡು ಬನ್ನಿ. ಈ ರೀತಿ ಸ್ಟೇ ಆರ್ಡರ್ ತಂದಾಗ ನಿಮಗೆ ನಿಮ್ಮ ಹಣ ಸಿಗುವವರೆಗೂ ಕೂಡ ಅಲ್ಲೇ ವಾಸಿಸಲು ಅವಕಾಶ ಸಿಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now