ಆತ್ಮೀಯವಾದಂತ ಸಂಬಂಧವೇ ನಿಜವಾಗಲು ಮನೆಗಳ ವಿನ್ಯಾಸವು, ಹಣೆಯ ಬರಹವನ್ನು ಕೈಯಾರೆ ಬರೆಯಬಹುದು ಎದೆಯಲ್ಲಿ ಅಕ್ಷರವು ಬಿತ್ತಿದ್ದರೆ ಗಾಯ ಮಾಸುವಂತಹ ಬಿಸಿಲು ಬಂದಿರುವಾಗ ಕಿಟಕಿ ಬಾಗಿಲುಗಳನ್ನು ಮುಚ್ಚಬೇಕೆ ಈ ಮಾತುಗಳು ಕನ್ನಡದ ವಾಸ್ತು ಪ್ರಕಾರ ಎನ್ನುವ ಸಿನಿಮಾದಲ್ಲಿ ಬರುವ ಹಾಡೊಂದರ ಸಾಲುಗಳು ಇದಕ್ಕೂ ಹಾಗೂ ವಾಸ್ತುವಿಗೂ ಅವಿನಾಭಾವ ಸಂಬಂಧವಿದೆ. ಇತ್ತೀಚಿನ ದಿನಗಳಲ್ಲಿ ವಾಸ್ತು ಎನ್ನುವುದು ಬಹಳ ಹೆಚ್ಚು ಪ್ರಚಲಿತದಲ್ಲಿರುವ ವಿಷಯವಾಗಿದೆ.
ತೀರ ಇತ್ತೀಚಿಗೆ ಜನ ಇದಕ್ಕೆ ಬಹಳ ಭ’ಯ ಬೀಳುತ್ತಿದ್ದಾರೆ ನಿಜಕ್ಕೂ ವಾಸ್ತು ಸರಿ ಇಲ್ಲದ ಮನೆಯಲ್ಲಿ ವಾಸಿಸುತ್ತಿರುವ ಕಾರಣ ನಾವು ಹಣಕಾಸಿನ ಮುಗ್ಗಟ್ಟುಗಳು ಎದುರಿಸುತ್ತಿದ್ದೇವಾ? ನಮ್ಮ ಮನೆಯಲ್ಲಿ ಸಂಬಂಧಿಗಳು ಹದಗೆಡುತ್ತಿದ್ದೆಯಾ? ಆರೋಗ್ಯ ಹಾಳಾಗುತ್ತಿದೆಯಾ? ಹೀಗಿದ್ದರೆ ಪರಿಹಾರ ಏನು ಎನ್ನುವ ವಿಷಯದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತೇವೆ..
ಆಸ್ತಿಕವಾಗಿ ಹೇಳುವುದಾದರೂ ಕೂಡ ವಾಸ್ತು ಪುರುಷ ಎನ್ನುವ ದೇವತೆ ಖಂಡಿತವಾಗಿಯೂ ಕೆಟ್ಟದ್ದನ್ನು ಮಾಡುವುದಿಲ್ಲ, ಶಾಪ ಹಾಕುವುದಿಲ್ಲ. ದೇವತೆಗಳು ಯಾರು ಕೂಡ ಯಾರಿಗೂ ಕೆಡುಕನ್ನು ಮಾಡುವುದಿಲ್ಲ ಹಾಗಾಗಿ ವಾಸ್ತು ಪುರುಷ ಕೋಪಿಸಿಕೊಳ್ಳುತ್ತಾನೆ, ಕೆಟ್ಟ ದೃಷ್ಟಿ ಇಟ್ಟು ನೋಡುತ್ತಿದ್ದೇನೆ ಇಂತಹ ಮಾತುಗಳನ್ನು ನಂಬುವುದು ಬೇಡ ಎನಿಸುತ್ತದೆ. ನಮ್ಮ ಮನೆಯಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯರು ಇದ್ದಾರೆ ಎಂದರೆ ಖಂಡಿತವಾಗಿಯೂ ಅವರು ಕೊನೆ ದಿನಗಳನ್ನು ಎಣಿಸುತ್ತಿದ್ದಾರೆ ಎಂದೇ ಅರ್ಥ
ಇನ್ನು ಅನಾರೋಗ್ಯದ ವಿಚಾರ ಹೇಳುವುದಾದರೆ ಪ್ರತಿಯೊಬ್ಬರಿಗೂ ಕೂಡ ಆರೋಗ್ಯ ಹದಗೆಡುತ್ತದೆ. ಜಾತಕದಲ್ಲಿ ಗ್ರಹಗತಿಗಳು ತುಂಬಾ ಚೆನ್ನಾಗಿದ್ದಾಗ ಇಲ್ಲದೆ ಇದ್ದಾಗ ಕೂಡ ಅನಾರೋಗ್ಯ ಬಂದೇ ಬರುತ್ತದೆ. ಒಂದು ಮನೆಯಲ್ಲಿ ನಾಲ್ಕೈದು ಜನ ವಾಸಿಸುತ್ತಿರುವ ಖಂಡಿತವಾಗಿಯೂ ಆರೋಗ್ಯ ಹದಗೆಡುವುದು ತುಂಬಾ ಕಾಮನ್ ವಿಷಯ.
ಹಾಗಾಗಿ ಯಾರಾದರೂ ನಿಮಗೆ ನಿಮ್ಮ ಮನೆ ವಾಸ್ತು ಸರಿ ಇಲ್ಲದ ಕಾರಣವಾಗಿ ನೀವು ಕ’ಷ್ಟದಲ್ಲಿದ್ದೀರಾ ಎಂದರೆ ಮೊದಲಿಗೆ ನಂಬಲು ಹೋಗಬೇಡಿ. ಅವರೇನಾದರೂ ನಿಮಗೆ ಸರಿಪಡಿಸಿಕೊಳ್ಳಲು ಸಲಹೆಯನ್ನು ಕೊಟ್ಟರೆ ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ನೋಡಿಕೊಂಡು ಅದನ್ನು ಸರಿದೂಗಿಸಿ ಹೊರತು ಸಾಲ ಮಾಡಿಕೊಂಡು ಮತ್ತೊಮ್ಮೆ ನ’ಷ್ಟಕ್ಕೆ ಸಿಲುಕಬೇಡಿ.
ಎಲ್ಲ ಮನೆಗಳು ಕೂಡ ಚೆನ್ನಾಗಿರುತ್ತೆ ಮೊದಲಿಗೆ ನೀವು ಮನೆ ಕಟ್ಟಿಸುವುದಾದರೆ ಗಾಳಿ ಬೆಳಕು ಚೆನ್ನಾಗಿ ಬರುವ ರೀತಿ ಮನೆ ಕಟ್ಟಿಸಿ ಮತ್ತು ನಿಮ್ಮ ಅವಶ್ಯಕತೆಗೆ ತಕ್ಕ ಹಾಗೆ ಮನೆ ಕಟ್ಟಿಸಿ ನಿಮ್ಮ ಮನೆಯಲ್ಲಿ ಇಬ್ಬರು ಇದ್ದು ನೀವು 50sq.ft ಮನೆ ಕಟ್ಟಿಸಿದರೆ ಪ್ರಯೋಜನವಿಲ್ಲ. ಅದಕ್ಕಾಗಿ ಹಣ ಹೊಂದಿಸಲು ಸಾಲ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕುವುದು ಬೇಡ ನಿಮ್ಮ ಅವಶ್ಯಕತೆಗೆ ನಿಮಗೆ ಅನುಕೂಲವಾಗುವ ಸೌಕರ್ಯಗಳು ಇರುವ ರೀತಿಯಲ್ಲಿ ಮನೆ ಕಟ್ಟಿ ಮತ್ತು ಕ’ಷ್ಟ ಪಟ್ಟು ಕೊಂಡುಕೊಂಡ ಸೈಟ್ ಇಷ್ಟಪಟ್ಟು ಕಟ್ಟಿದ ಮನೆಯನ್ನು ಬೇರೆಯವರ ಮಾತು ಕೇಳಿ ಹಾಳು ಮಾಡಿಕೊಳ್ಳಬೇಡಿ.
ನಿಜವಾಗಿಯೂ ವಾಸ್ತು ಏನು ಎಂದರೆ ಮನೆಯಲ್ಲಿ ಎಲ್ಲಾ ಸದಸ್ಯರ ಜೊತೆ ಸಂತೋಷವಾಗಿ ಇರುವುದು ಅಕ್ಕ-ಪಕ್ಕದ ಮನೆಯವರ ಜೊತೆ ಹೊಂದಾಣಿಕೆಯಿಂದ ಇರುವುದು, ಮನೆ ಸುತ್ತ ಜಾಗ ಇಟ್ಟುಕೊಂಡು ಸಾಧ್ಯವಾದರೆ ಗಿಡಮರಗಳನ್ನು ಬೆಳೆಸುವುದು ಮತ್ತು ಮೂಕಪ್ರಾಣಿ ಪಕ್ಷಿಗಳಿಗೆ ಕೂಡ ನಮ್ಮ ಮನೆಯಲ್ಲಿ ವಾಸ ಮಾಡಲು ನಮ್ಮ ಮನೆ ಮೇಲೆ ಅಥವಾ ನಮ್ಮ ಮನೆ ಸುತ್ತ ಇರುವ ಗಿಡಮರಗಳಲ್ಲಿ ಗೂಡು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡುವುದು ಇದೇ ನಿಜವಾದ ವಾಸ್ತು.
ಮನೆ ಕ್ಲೀನ್ ಆಗಿದ್ದಾಗ ಮನೆಯಲ್ಲಿ ಸಂಬಂಧಗಳು ವಿಶ್ವಾಸದಿಂದ ಇದ್ದಾಗ ಖಂಡಿತವಾಗಿಯೂ ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎಲ್ಲವೂ ಕೂಡ ಇರುತ್ತದೆ, ಇವುಗಳಿಗೆ ಗಮನ ಕೊಡಿ. ಈ ವಿಚಾರದ ಬಗ್ಗೆ ಇನ್ನಷ್ಟು ಇದೇ ರೀತಿಯ ಉತ್ತಮವಾದ ಮಾತುಗಳನ್ನು ಕೇಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.