ಗೃಹಲಕ್ಷ್ಮಿ 2000 ಹಣ ಯಾರಿಗೆ ಬಂದಿಲ್ಲ ಅವರು ಕಡ್ಡಾಯವಾಗಿ ಮೊಬೈಲ್ ನಲ್ಲಿ ಈ ಡಾಕ್ಯುಮೆಂಟ್ ನವೀಕರಣ ಮಾಡಿ, ಡಿಸೆಂಬರ್ 14 ಕಡೆ ಅವಕಾಶ.!

 

WhatsApp Group Join Now
Telegram Group Join Now

ಕರ್ನಾಟಕದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆಯಲಾಗದೆ ಲಕ್ಷಾಂತರ ಫಲಾನುಭವಿಗಳು ಪರಿತಪಿಸುತ್ತಿದ್ದಾರೆ. ಅವರ ಆಧಾರ್ ಕಾರ್ಡ್ ಗಳು ಬ್ಯಾಂಕ್ ಖಾತೆಗೆ ಲಿಂಕ್ ಆಗದೆ ಇರುವುದು ಮತ್ತು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಮಾಹಿತಿ ಮತ್ತು ರೇಷನ್ ಕಾರ್ಡ್ ನಲ್ಲಿ ಮಾಹಿತಿ ಹೊಂದಾಣಿಕೆ ಆಗದೆ ಇರುವುದು ಈ ರೀತಿ ಸರ್ಕಾರ ನೀಡುವ ಸಹಾಯದಿಂದ ವಂಚಿತರಾಗಲು ಕಾರಣವಾಗಿದೆ.

UIDAI ಈ ವರ್ಷದ ಆರಂಭದಲ್ಲಿ ಒಂದು ಮಹತ್ವದ ಸೂಚನೆ ನೀಡಿತ್ತು, ಯಾರೆಲ್ಲಾ ಆಧಾರ್ ಕಾರ್ಡ್ ಪಡೆದು 10 ವರ್ಷಗಳಾಗಿದ್ದು ಇನ್ನೂ ಸಹ ಒಮ್ಮೆ ಕೂಡ ಅದನ್ನು ಅಪ್ಡೇಟ್ ಮಾಡಿಸಿಲ್ಲ ಎಂದರೆ ತಪ್ಪದೇ ನಿಮ್ಮ POI ಮತ್ತು POA ದೃಡಿಕರಿಸುವ ಮೂಲಕ ನವೀಕರಣಗೊಳಿಸಿಕೊಳ್ಳಿ ಎಂದು ಹೇಳಿ ಜುಲೈ 14 ರವರೆಗೆ ಉಚಿತವಾಗಿ ಕಾಲಾವಕಾಶ ನೀಡಿತ್ತು. ಇನ್ನು ಸಹ ಅನೇಕರು ಈ ಪ್ರಕ್ರಿಯೆ ಪೂರ್ತಿಗೊಳಿಸುವುದು ಬಾಕಿ ಉಳಿದಿರುವ ಕಾರಣ ಮತ್ತೆ ಆರು ತಿಂಗಳವರೆಗೆ ಸಮಯಾವಕಾಶ ವಿಸ್ತರಣೆ ಮಾಡಿತ್ತು.

ಅಂತಿಮವಾಗಿ ಡಿಸೆಂಬರ್ 14ಕ್ಕೆ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳುವ ಸೌಕರ್ಯ ಮುಗಿಯಲಿದೆ ಈ ಅವಧಿ ಒಳಗೆ ನೀವು ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ದಂಡ ತೆತ್ತು ಮಾಡುವ ಅನಿವಾರ್ಯತೆ ಬರಬಹುದು ಅಥವಾ ನಿಮ್ಮ ಆಧಾರ್ ಕಾರ್ಡ್ ಮೂಲಕ ನಡೆಯುವ ಯಾವುದೇ ಪ್ರಕ್ರಿಯೆಯು ಕೂಡ ನಡೆಯದೆ ಸ್ಥಗಿತಗೊಳ್ಳಬಹುದು.

ಇದು ಗ್ಯಾರಂಟಿ ಯೋಜನೆಗಳ ಅನುದಾನ ಪಡೆಯಲು ಕೂಡ ಎಫೆಕ್ಟ್ ಆಗುತ್ತದೆ ಹಾಗಾಗಿ ನೀವೇನಾದರೂ 2013ಕ್ಕೂ ಮೊದಲೇ ಆಧಾರ್ ಕಾರ್ಡ್ ಪಡೆದು ಇಷ್ಟು ವರ್ಷಗಳಲ್ಲಿ ಒಮ್ಮೆ ಕೂಡ ಅದರಲ್ಲಿರುವ ಮಾಹಿತಿಯನ್ನು ಅಪ್ಡೇಟ್ ಮಾಡಿಸದೆ ಇದ್ದಲ್ಲಿ ಮೊಬೈಲ್ ಮೂಲಕ ನಾವು ಹೇಳುವ ಈ ವಿಧಾನಗಳನ್ನು ಅನುಸರಿಸಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಿ.

* ನಿಮ್ಮ ಮೊಬೈಲ್ ನಲ್ಲಿ ಕ್ರೋಮ್ ಬ್ರೌಸರ್ ಗೆ ಹೋಗಿ ಸರ್ಚ್ ಬಾರ್ ನಲ್ಲಿ My Aadhar ಎಂದು ಟೈಪ್ ಮಾಡಿ ಸರ್ಚ್ ಮಾಡಿ
* My Aadhar ಲಿಂಕ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ, Welcome to my Aadhar ಎನ್ನುವ ಪೇಜ್ ಕಾಣುತ್ತದೆ ನೀವು log in ಆಗಲು ಯಾರ ಆಧಾರ್ ಕಾರ್ಡ್ ನವೀಕರಣ ಮಾಡಬೇಕು ಅವರ ಆಧಾರ್ ಸಂಖ್ಯೆ ಬಳಸಬೇಕು.
* Aadhar no. & Captcha code ಹಾಕುವ ಮೂಲಕ Send OTP ಕ್ಲಿಕ್ ಮಾಡಿ, ಆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ನಮೂದಿಸುವ ಮೂಲಕ login ಆಗಿ.

* documents update ಆಪ್ಷನ್ ಕ್ಲಿಕ್ ಮಾಡಿ ಅಲ್ಲಿ ಕೆಲವು ಸೂಚನೆಗಳನ್ನು ನೀಡಲಾಗಿರುತ್ತದೆ ಅವುಗಳನ್ನು ಪೂರ್ತಿಯಾಗಿ ಓದಿ. ಮತ್ತು ನೀಡಿರುವ ಸೂಚನೆಯಂತೆ ನೀವು ಅಪ್ಡೇಟ್ ಮಾಡಬೇಕಾಗುತ್ತದೆ. (ಮುಖ್ಯವಾಗಿ ಡಾಕ್ಯುಮೆಂಟ್ ಗಾತ್ರವು 2mb ಗಿಂತ ಕಡಿಮೆ ಇರಬೇಕು, ಬೆಂಬಲಿತ ಫೈಲ್ ಫಾರ್ಮೆಟ್ ಗಳು jpj, pnj ಅಥವಾ pdf ರೂಪದಲ್ಲಿರಬೇಕು)

* ಮುಂದಿನ ಹಂತದಲ್ಲಿ ನಿಮ್ಮ ವಿಳಾಸದ ಪುರಾವೆ (POA) ಅಪ್ಲೋಡ್ ಮಾಡಿ ಎನ್ನುವ ಆಪ್ಷನ್ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ POA ಆಗಿ ಮಾನ್ಯವಾಗುವ ಎಲ್ಲ ಡಾಕ್ಯುಮೆಂಟ್ ಗಳ ಲಿಸ್ಟ್ ಬರುತ್ತದೆ. ಅದರಲ್ಲಿ ನಿಮ್ಮ ಬಳಿ ಇರುವ ಯಾವುದಾದರೂ ಒಂದು ಡಾಕ್ಯುಮೆಂಟ್ ಕ್ಲಿಕ್ ಮಾಡಿ ಮತ್ತು ನಿಮ್ಮ ಗ್ಯಾಲರಿ ಇಂದ ಅದನ್ನು ಸೆಲೆಕ್ಟ್ ಮಾಡಿ ಈ ಮೇಲೆ ತಿಳಿಸಿದ ಸೂಚನೆಯ ಮಾದರಿಯಂತೆ ಅಪ್ಲೋಡ್ ಮಾಡಿ.

* ನೀವು ಕೊಟ್ಟಿರುವ ವಿವರಗಳು ಸರಿಯಾಗಿದೆ ಎನ್ನುವುದನ್ನು ದೃಢೀಕರಿಸಿ ಒಪ್ಪಿ ನೀಡಿರುವ ಚೆಕ್ ಬಾಕ್ಸ್ ನಲ್ಲಿ ರೈಟ್ ಕ್ಲಿಕ್ ಮಾಡಿ.
* ಆಧಾರ್ ನಲ್ಲಿರುವ ನಿಮ್ಮ ಜನಸಂಖ್ಯಾ ವಿವರಗಳೊಂದಿಗೆ ನಿಖರವಾಗಿ ಹೊಂದಿಕೆಯಾಗುವ ನಿಮ್ಮ ಜನಸಂಖ್ಯೆ ವಿವರಗಳನ್ನು ಡಾಕುಮೆಂಟ್ ನಲ್ಲಿ ಖಚಿತಪಡಿಸಿ ಎನ್ನುವ ಅಥೇಂಟಿಕೇಶನ್ ಕಾಣಿಸುತ್ತದೆ.

ಧೃಡೀಕರಿಸಲು ಸರಿ ಕ್ಲಿಕ್ ಮಾಡಿ ಎನ್ನುವ ಸೂಚನೆ ಇರುತ್ತದೆ, ಸರಿ ಎನ್ನುವುದನ್ನು ಕ್ಲಿಕ್ ಮಾಡಿ ನಂತರ Submit ಕ್ಲಿಕ್ ಮಾಡಿ. ಪ್ರಕ್ರಿಯೆ ಯಶಸ್ವಿಯಾಗಿದೆ ಎನ್ನುವುದು ತಿಳಿದು ಬಂದ ಮೇಲೆ ಅರ್ಜಿ ಸ್ವೀಕೃತಿ ಪ್ರತಿಯನ್ನು (Acknowlegdment copy) ಪಡೆದುಕೊಳ್ಳಿ.
* ಡಿಸೆಂಬರ್ 14 ರವರೆಗೆ ಈ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿರುತ್ತದೆ ನಂತರ ಶುಲ್ಕ ಪಾವತಿ ಮಾಡಬೇಕಾಗಿ ಬರಬಹುದು.

 

https://youtu.be/MBGPjnCtNIA?si=9SrwQ60RLqpsXUPd

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now