Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಕರ್ನಾಟಕದ ಗ್ಯಾರಂಟಿ ಯೋಚನೆಗಳಾದ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ (Gruhalakshmi and Annabhagya Scheme amount ) ಮೂಲಕ ಕುಟುಂಬದ ಹಿರಿಯ ಮಹಿಳೆಯರು ಸರ್ಕಾರದಿಂದ ಹಣ ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆ ಯ ಮೂಲಕ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ 2000ರೂ. ಸಹಾಯಧನ ಮತ್ತು ಅನ್ನ ಭಾಗ್ಯ ಯೋಜನೆಯಡಿ ಕುಟುಂಬದ ಸದಸ್ಯರ 5Kg ಅಕ್ಕಿ ಹಣವನ್ನು ಆ ಕುಟುಂಬದ ಮುಖ್ಯಸ್ಥರು ಪಡೆಯುತ್ತಿದ್ದಾರೆ.
ಆದರೆ ಅನೇಕರಿಗೆ ಅದು ಯಾವ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ ಎನ್ನುವುದು ತಿಳಿಯುತ್ತಿಲ್ಲ, ಇನ್ನು ಕೆಲವರಿಗೆ ಯಾವ ತಿಂಗಳು ಎಷ್ಟು ಹಣ ಜಮೆ ಆಗಿದೆ ಎನ್ನುವುದೇ ಗೊತ್ತಿರುವುದಿಲ್ಲ. ಈ ರೀತಿ ಸಮಸ್ಯೆಗಳಾಗಿದ್ದರೆ ನಿಮ್ಮ ಸ್ಟೇಟಸ್ (Status) ಏನಾಗಿದೆ ಎನ್ನುವುದನ್ನು ಮೊಬೈಲ್ ಮೂಲಕವೇ ಸರಳವಾಗಿ ಚೆಕ್ ಮಾಡಿಕೊಳ್ಳಬಹುದು ಅದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಕರ್ನಾಟಕ ಸರ್ಕಾರದ ಅಪ್ ಆಗಿರುವ DBT ಕರ್ನಾಟಕ (DBT Karnataka app) ಎನ್ನುವ ಆಪ್ ಮೂಲಕ ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸರ್ಕಾರದ ಯಾವುದೇ ಅನುದಾನಗಳ ಹಣ ನಿಮ್ಮ ಖಾತೆಗೆ ಜಮೆ ಆಗಿದ್ದರೆ ಅದನ್ನು ಮೊಬೈಲ್ ಮೂಲಕವೇ ಯಾವ ಬ್ಯಾಂಕ್ ಖಾತೆಗೆ ಯಾವ ದಿನಾಂಕದಂದು ಯಾವ ಯೋಚನೆಯಿಂದ ಎಷ್ಟು ಹಣ ಜಮೆ ಆಗಿದೆ ಎಂದು ಚೆಕ್ ಮಾಡಬಹುದು.
ಅದರೊಂದಿಗೆ ತಾಳೆ ಹಾಕಿ ನೀವು ನಿಮಗೆ ಈ ತಿಂಗಳ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಬಂದಿದಯೇ ಎಂದು ತಿಳಿದುಕೊಳ್ಳಬಹುದು ಅದಕ್ಕಾಗಿ ಈ ಸುಲಭ ಹಂತಗಳನ್ನು ಪಾಲಿಸಿ.
* ಮೊದಲಿಗೆ ನಿಮ್ಮ ಮೊಬೈಲ್ ಫೋನ್ ನಲ್ಲಿ ಪ್ಲೇ ಸ್ಟೋರ್ ಗೆ ಹೋಗಿ DBT ಕರ್ನಾಟಕ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ (install DBT Karnataka app)
* ಈ ಆಪ್ ಅನ್ನು ಓಪನ್ ಮಾಡಿದ ತಕ್ಷಣ ನಿಮಗೆ ಕೆಲವು ಪರ್ಮಿಷನ್ ಗಳನ್ನು ಕೇಳಲಾಗುತ್ತದೆ ನೀವು ಅದಕ್ಕೆ allow ಎಂದು ಕ್ಲಿಕ್ ಮಾಡಬೇಕು.
* ನಿಮ್ಮ ಮೊಬೈಲ್ ನಿಂದಲೇ ಚೆಕ್ ಮಾಡಬೇಕೆಂಬ ನಿಯಮ ಇಲ್ಲ. ನೀವು ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡರೆ ಯಾವುದೇ ಫಲಾನುಭವಿಯ ವಿವರವನ್ನು ಕೂಡ ಚೆಕ್ ಮಾಡಬಹುದು. ನೀವು ಯಾರ ಸ್ಟೇಟಸ್ ಚೆಕ್ ಮಾಡುತ್ತಿದ್ದೀರಾ ಅವರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, ಅವರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಹೋಗುತ್ತದೆ ಆ OTP ಯನ್ನು ಎಂಟ್ರಿ ಮಾಡಿ.
* mPIN ಕ್ರಿಯೇಟ್ ಮಾಡಲು ಕೇಳಲಾಗುತ್ತದೆ ನಿಮ್ಮ ಇಚ್ಛೆಯ ನಾಲ್ಕು ಸಂಖ್ಯೆಗಳನ್ನು ಸೆಕ್ಯೂರಿಟಿ ಕೋಡ್ ಆಗಿ ಸೆಲೆಕ್ಟ್ ಮಾಡಿ ನಮೂದಿಸಿ ಮತ್ತೊಮ್ಮೆ ಅದನ್ನು ಹಾಕುವ ಮೂಲಕ ಕನ್ಫರ್ಮ್ ಮಾಡಿ.
* ಇಷ್ಟಾಗುತ್ತಿದ್ದಂತೆ ನೀವು ಯಾವ ಫಲಾನುಭವಿಗೆ ವಿವರವನ್ನು ಚೆಕ್ ಮಾಡುತ್ತಿದ್ದೀರಾ ಅವರ ಆಧಾರ್ ಕಾರ್ಡ್ ಡೀಟೇಲ್ಸ್ ಸ್ಕ್ರೀನ್ ಮೇಲೆ ಬರುತ್ತದೆ. ಅವರ ಹೆಸರು ಹುಟ್ಟಿದ ದಿನಾಂಕ ಇರುತ್ತದೆ ಕೊನೆಯಲ್ಲಿ ಮೊಬೈಲ್ ಸಂಖ್ಯೆ ಇರುತ್ತದೆ ಸರಿಯಾಗಿದ್ದರೆ OK ಕ್ಲಿಕ್ ಮಾಡಿ, ತಪ್ಪಾಗಿದ್ದರೆ ಅವರ ಆಧಾರ್ ಕಾರ್ಡ್ ಗೆ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಹಾಕಿ OK ಎಂದು ಕ್ಲಿಕ್ ಮಾಡಿ.
* ಸ್ಕ್ರೀನ್ ಮೇಲೆ ನಾಲ್ಕು ಆಪ್ಷನ್ ಗಳು ಕಾಣುತ್ತವೆ. ಅದರಲ್ಲಿ ಪೇಮೆಂಟ್ ಸ್ಟೇಟಸ್ (Payment Status) ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಸರ್ಕಾರದ ಯಾವ ಯೋಜನೆಗಳಿಂದ DBT ಮೂಲಕ ಹಣ ವರ್ಗಾವಣೆ ಆಗಿದೆ ಎನ್ನುವುದರ ಸಂಪೂರ್ಣ ವಿವರ ಸಿಗುತ್ತದೆ.