ಶೂನ್ಯ ವಿದ್ಯುತ್ ಬಿಲ್ ಗೆ ಕಾಯುತ್ತಿದ್ದವರಿಗೆ ನಿರಾಸೆ 100 ಯೂನಿಟ್ ಬಳಸಿದ್ರೂ ಕೂಡ ಕರೆಂಟ್ ಬಿಲ್ ಕಟ್ಟಬೇಕಾಗುತ್ತೆ. ಯಾಕೆ ಗೊತ್ತ.?

 

ಸರ್ಕಾರದ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ (Guarantee card scheme ) ಒಂದಾದ ಗೃಹಜ್ಯೋತಿ (Gruhajyothi) ಯೋಜನೆಗೆ ಜೂನ್ ತಿಂಗಳಿನಿಂದ ಸರ್ಕಾರ ಅರ್ಜಿ ಸ್ವೀಕರಿಸುತ್ತಿದೆ. ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿ ಪ್ರತಿ ಕುಟುಂಬಗಳಿಗೂ ಕೂಡ 200 ಯೂನಿಟ್ ವರೆಗೆ ಉಚಿತ ವಿದ್ಯುತ್ (free current) ಎಂದು ಹೇಳುತ್ತಾದರೂ ಈ ಯೋಜನೆಗೆ ಆದೇಶ ಹೊರಡಿಸಿರುವಾಗ ಕೆಲ ಕಂಡಿಷನ್ ಗಳನ್ನು ಹಾಕಿ ಮಾರ್ಗಸೂಚಿ ಸಿದ್ಧಪಡಿಸಿತ್ತು.

ಅಂತಿಮವಾಗಿ ಅರ್ಜಿ ಆಹ್ವಾನ ಕಾರ್ಯಕ್ರಮ ಶುರುವಾಗಿದ್ದು ಅರ್ಹ ಫಲಾನುಭವಿಗಳಿಗೆ ಜುಲೈ ತಿಂಗಳಿನಿಂದ ಗೃಹಜ್ಯೋತಿ ಯೋಜನೆಯ ಅಪ್ಲೈ ಆಗುತ್ತದೆ. ಸರ್ಕಾರ (government) ಗೃಹ ಜ್ಯೋತಿ ಯೋಜನೆಗೆ ಹಾಕಿದ್ದ ಕಂಡಿಷನ್ ಗಳೇನೆಂದರೆ (condition) 200 ಯೂನಿಟ್ ವರೆಗೆ ಉಚಿತವಾಗಿ ಇದ್ದರೂ ಕೂಡ ಕಳೆದ 12 ತಿಂಗಳಿನಿಂದ ಬಳಸಿದ ಸರಾಸರಿ (12 months average) ವಿದ್ಯುತ್ ಮೇಲೆ 10% ಅಷ್ಟೇ ಹೆಚ್ಚು ಬಳಸಬಹುದು.

ಗೃಹಲಕ್ಷ್ಮಿ ಯೋಜನೆಗೆ ಮತ್ತೆ 8 ಕಂಡಿಷನ್ ಹಾಕಿದ ಸರ್ಕಾರ.! ಇಂಥವರಿಗೆ 2000 ಸಿಗಲ್ಲ.!

ಅದಕ್ಕಿಂತ ಹೆಚ್ಚಿನ ಬಳಕೆಗೆ ಶುಲ್ಕ ಪಾವತಿ ಮಾಡಬೇಕು ಮತ್ತು 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದ ಪಕ್ಷದಲ್ಲಿ ಸಂಪೂರ್ಣ ವಿದ್ಯುತ್ ಬಿಲ್ ಅನ್ನು ಕಟ್ಟಬೇಕು. ಜುಲೈ 25ರ ಒಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಜುಲೈ ತಿಂಗಳ ಬಳಕೆಗೆ ಆಗಸ್ಟ್ ನಲ್ಲಿ ಕಟ್ಟುತ್ತಿದ್ದ ಕರೆಂಟ್ ಬಿಲ್ ಫ್ರೀ ಆಗುತ್ತದೆ, ಜುಲೈ 25ರ ನಂತರ ಅರ್ಜಿ ಸಲ್ಲಿಸಿದವರು ಮುಂದಿನ ತಿಂಗಳಿನಿಂದ ಗೃಹಜ್ಯೋತಿ ಯೋಜನೆ ವ್ಯಾಪ್ತಿಗೆ ಬರುತ್ತಾರೆ ಎನ್ನುವುದಾಗಿತ್ತು.

ಆದರೆ ಸ್ಪಷ್ಟವಾಗಿ ಸರ್ಕಾರ ಯಾವ 12 ತಿಂಗಳುಗಳ ಸರಾಸರಿ ತೆಗೆದುಕೊಳ್ಳುತ್ತದೆ ಎನ್ನುವುದನ್ನು ತಿಳಿಸಿರಲಿಲ್ಲ ಆದರೆ ಈಗ ESCOM M.D ಆಗಿರುವಂತಹ ಮಹಾಂತೇಶ್ ಬೀಳಗಿ ಅವರು ಈ ಬಗ್ಗೆ ಸ್ಪಷ್ಟತೆ ಕೊಟ್ಟಿದ್ದಾರೆ. 2022 ಏಪ್ರಿಲ್ ಯಿಂದ 2023 ಮಾರ್ಚ್ ಈ 12 ತಿಂಗಳುಗಳ ಲೆಕ್ಕವನ್ನು ಸರ್ಕಾರ ತೆಗೆದುಕೊಳ್ಳಲಿದೆ. ಇದರಲ್ಲಿ ಇನ್ನೂ ಒಂದು ಶಾ’ಕ್ ಆಗುವ ವಿಚಾರ ಏನೆಂದರೆ.

ಕೃಷಿ ಭೂಮಿಯಲ್ಲಿ ಕರೆಂಟ್ ಕಂಬ ಅಥವಾ ಟಿಸಿ ಇದ್ದವರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ ತಿಂಗಳಿಗೆ 5 ರಿಂದ 10 ಸಾವಿರ ಹಣ.!

ಈ 12 ತಿಂಗಳಿನಲ್ಲಿ ಯಾವುದಾದರೂ ಒಂದು ತಿಂಗಳು ಕೂಡ 200 ಯೂನಿಟ್ ಗಿಂತ ಹೆಚ್ಚು ಬಳಕೆ ಮಾಡಿದ್ದರೆ ಅವರು ಈಗ 200 ಯೂನಿಕ್ ಮಿತಿ ಒಳಗೆ ವಿದ್ಯುತ್ ಬಳಕೆ ಮಾಡುತ್ತಿದ್ದರು ಕೂಡ ಗೃಹಜ್ಯೋತಿ ಯೋಜನೆಗೆ ಅರ್ಹರಾಗಿರುವುದಿಲ್ಲ ಎನ್ನುವುದು. ಅವರು ಇನ್ನೂ ಒಂದು ವರ್ಷಗಳ ಕಾಲ 200 ಯೂನಿಟ್ ಒಳಗೆ ಅಥವಾ ಅವರ ಸರಾಸರಿಗಿಂತ 10% ಒಳಗೆ ವಿದ್ಯುತ್ ಬಳಸಿ ಮಾಡಿದ್ದರು ಕೂಡ ಸಂಪೂರ್ಣ ವಿದ್ಯುತ್ ಬಿಲ್ ಕಟ್ಟಲೇಬೇಕು ಈ ಹೊಸ ನಿಯಮವನ್ನು ಸರ್ಕಾರ ಹೇರಿದೆ.

ಇದು ಬಾಡಿಗೆ ಮನೆಗಳಲ್ಲಿ ವಾಸಿಸುವವರೆಗೂ ಕೂಡ ಅಪ್ಲೈ ಆಗುತ್ತದೆ ಎನ್ನುವುದು ಇನ್ನಷ್ಟು ಬೇಸರದ ವಿಷಯ. ಈಗಷ್ಟೇ ಎರಡು, ಮೂರು ಅಥವಾ ಆರು ತಿಂಗಳ ಹಿಂದೆ ಬಾಡಿಗೆ ಮನೆಗೆ ಬಂದು ಅವರು 100 ಯೂನಿಟ್ ಒಳಗೆ ಖರ್ಚು ಮಾಡಿದ್ದರು ಈ ಹಿಂದೆ ಬಾಡಿಗೆ ಇದ್ದವರು ಏಪ್ರಿಲ್ 2022 ರಿಂದ ಮಾರ್ಚ್ 2023ರವರೆಗೆ ಯಾವುದಾದರೂ ಒಂದು ತಿಂಗಳು ಹೆಚ್ಚು ಬಳಕೆ ಮಾಡಿದ್ದರು ಅದು ನೇರವಾಗಿ ಈಗ ಬಾಡಿಗೆಗೆ ಇರುವವರ ಮೇಲೆ ಪರಿಣಾಮ ಬೀರಲಿದೆ.

ಜುಲೈ ತಿಂಗಳಿನಲ್ಲಿ ಕರೆಂಟ್ ಬಿಲ್ ಕಟ್ಟಿದ್ದವರಿಗೆ ಗುಡ್ ನ್ಯೂಸ್, ವಾಪಸ್ ಬರಲಿದೆ ನಿಮ್ಮ ಹಣ ಸರ್ಕಾರದ ನಿರ್ಧಾರಕ್ಕೆ ಜನ ಫುಲ್ ಖುಷ್.!

ಒಂದು ವೇಳೆ ನಿಮಗೆ ಗೃಹಜ್ಯೋತಿ ಯೋಜನೆಯ ಪ್ರಯೋಜನ ಸಿಗಬೇಕು ಎಂದರೆ ನೀವು ಒಂದು ವರ್ಷ ಕಾಯಬೇಕು ಜೊತೆಗೆ ಈ ಒಂದು ವರ್ಷದಲ್ಲಿ ಯಾವುದೇ ತಿಂಗಳು ಕರೆಂಟ್ ಬಳಕೆ 200 ಯೂನಿಟ್ ಮೀರದಂತೆ ನೋಡಿಕೊಳ್ಳಬೇಕು ಆಗ ಮಾತ್ರ ಶೂನ್ಯ ವಿದ್ಯುತ್ ಬಿಲ್ (Zero current bill) ಪಡೆಯಲು ಅರ್ಹರಾಗುತ್ತೀರಿ ಎನ್ನುವುದು ಸರ್ಕಾರದ ಹೊಸ ರೂಲ್ಸ್ (government new rule).

Leave a Comment

%d bloggers like this: