ಕರ್ನಾಟಕದಲ್ಲಿ ಸಿದ್ದರಾಮಯ್ಯ (Siddaramaih) ನೇತೃತ್ವದ ಸರ್ಕಾರವು ಹಂತ ಹಂತವಾಗಿ ಗ್ಯಾರಂಟಿ ಸ್ಕೀಮ್ ಗಳನ್ನು (Guarantee Scheme) ಜಾರಿಗೆ ತಂದಿದೆ. ಇವುಗಳ ಪೈಕಿ ಅನ್ನಭಾಗ್ಯ (Annabhagya) ಮತ್ತು ಗೃಹಲಕ್ಷ್ಮಿ (Gruhalakshmi) ಯೋಜನೆಯಿಂದ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯು ಧನ ಸಹಾಯ ಪಡೆಯುತ್ತಿದ್ದಾರೆ.
ಅನ್ನಭಾಗ್ಯ ಯೋಜನೆಯ ಮೂಲಕ ಕುಟುಂಬದಲ್ಲಿರುವ ಪ್ರತಿ ಸದಸ್ಯನಿಗೆ 170ರೂ. ನಂತೆ ಕುಟುಂಬದ ಮುಖ್ಯಸ್ಥರ ಖಾತೆಗೆ ಹಣ ಹೋಗುತ್ತಿದೆ. BPL ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರು ಅನ್ನಭಾಗ್ಯ ಯೋಜನೆಯ ಹಣವನ್ನು ಪಡೆಯಬಹುದು, ಇದಕ್ಕಾಗಿ ಯಾವುದೇ ಅರ್ಜಿ ಸ್ವೀಕರಿಸದೆ ಸರ್ಕಾರವು ನೇರವಾಗಿ ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದೆ.
ಮೆಸ್ಕಾಂ ನೇಮಕಾತಿ 2023, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…
ಈಗಾಗಲೇ ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಕೂಡ ವರ್ಗಾವಣೆ ಆಗಿದೆ ಹಾಗೆಯೇ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಯಜಮಾನಿ ಮಹಿಳೆಗೆ ಗೃಹಲಕ್ಷ್ಮಿ ಯೋಜನೆಯಿಂದ 2,000 ಸಹಾಯಧನ ಕೂಡ ಸಿಗುತ್ತಿದೆ. ಆದಾಯ ತೆರಿಗೆ ಸಲ್ಲಿಸುವ ಮತ್ತು ಸರ್ಕಾರಿ ಉದ್ಯೋಸ್ಥರು ಇರುವ ಕುಟುಂಬಗಳು ಬಿಟ್ಟು ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಂದು ಕುಟುಂಬದ ಯಜಮಾನಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ಈ ಸಹಾಯಧನವನ್ನು ಪಡೆಯಬಹುದು.
ಆಗಸ್ಟ್ 30ರಂದು ಗೃಹಲಕ್ಷ್ಮಿ ಯೋಜನೆಗೆ ಹಣ ವರ್ಗಾವಣೆ ಕಾರ್ಯಕ್ರಮ ನಡೆದಿದ್ದು ಅಂದಿನಿಂದ ಪ್ರಥಮ ಕಂತಿನ ಹಣವು ರಾಜ್ಯದ ಫಲಾನುಭವಿ ಮಹಿಳೆಯರಿಗೆ ಖಾತೆಗೆ DBT ಮೂಲಕ ವರ್ಗಾವಣೆಯಾಗಿದೆ. ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ ಇನ್ನು ಸಹ ನಿಮಗೆ ಯೋಜನೆಯ ಹಣ ಹಾಗೂ ಇದರ ಕುರಿತು SMS ಬಂದಿಲ್ಲ ಎಂದರೆ, ಅನ್ನಭಾಗ್ಯ ಹಣ ಕೂಡ ಪಡೆಯಲು ಸಾಧ್ಯವಾಗಿಲ್ಲ ಎಂದರೆ ನೀವು ಮೊದಲಿಗೆ ಈ ದಾಖಲೆಗಳು ಸರಿ ಇವೆಯೇ ಎನ್ನುವುದನ್ನು ಪರಿಶೀಲಿಸಿಕೊಂಡು ಸರಿಪಡಿಸಿಕೊಳ್ಳಿ.
ಸೋಲಾರ್ ಪಂಪ್ ಸೆಟ್ ನಿರ್ಮಾಣಕ್ಕೆ ಸರ್ಕಾರದಿಂದ ಸಿಗಲಿದೆ 1.5 ಲಕ್ಷ ಸಹಾಯಧನ ಆಸಕ್ತ ರೈತರು ತಪ್ಪದೆ ಅರ್ಜಿ ಸಲ್ಲಿಸಿ.!
● DBT ಮೂಲಕ ಹಣ ವರ್ಗಾವಣೆ ಆಗುವುದರಿಂದ ನಿಮ್ಮ ಬ್ಯಾಂಕ್ ಖಾತೆ ಗೆ ಆಧಾರ್ ಕಾರ್ಡ್ ಸೀಡಿಂಗ್ ಆಗಿ NPCI ಮ್ಯಾಪಿಂಗ್ (Aadhar Seeding NPCI Mapping) ಆಗಿರಬೇಕು.
● ಅಷ್ಟೇ ಅಲ್ಲದೆ ಆ ಖಾತೆ ಆಕ್ಟಿವ್ ಆಗಿದೆಯೇ ಎನ್ನುವುದನ್ನು ನೀವು ಚೆಕ್ ಮಾಡಿಕೊಳ್ಳಬೇಕು. ಒಂದು ವೇಳೆ ಆ ಖಾತೆ Inactive ಆಗಿದ್ದರೆ ಅದಕ್ಕೆ ಹಣ ತುಂಬಿಸುವ ಮೂಲಕ ಚಾಲ್ತಿಯಲ್ಲಿರಿಸಬೇಕು ಅಥವಾ ನೀವು ನಿಮ್ಮ ಇನ್ಯಾವುದೇ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಲು ಬಯಸಿದರೆ ಅದಕ್ಕೆ ಆ ಖಾತೆಗೆ ಆಧಾರ್ ಕಾರ್ಡ್ ಸೀಡಿಂಗ್ ಗಾಗಿ ಅರ್ಜಿ ಸಲ್ಲಿಸಬೇಕು. UIDAI ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡುವ ಮೂಲಕ ಬ್ಯಾಂಕ್ ಸೀಡಿಂಗ್ ಸ್ಟೇಟಸ್ ಚೆಕ್ ಮಾಡಬಹುದು.
● ನಿಮ್ಮ ಬ್ಯಾಂಕ್ ಖಾತೆ ಹೆಸರು, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಈ ಎಲ್ಲಾ ದಾಖಲೆಗಳಲ್ಲೂ ಕೂಡ ನಿಮ್ಮ ಹೆಸರು ಸರಿಯಾಗಿದೆಯೇ ಎನ್ನುವುದನ್ನು ದೃಢಪಡಿಸಿಕೊಳ್ಳಬೇಕು. ಒಂದು ವೇಳೆ ಲಿಪ್ಯಂತಕರಣ ದೋಷಗಳಿದ್ದರೂ, ಹೆಸರಿನಲ್ಲಿ ವ್ಯತ್ಯಾಸವಿದ್ದರೂ (Spelling mistakes or name chamges) ಕೂಡ ಹಣ ವರ್ಗಾವಣೆಯಾಗಲೂ ಸಮಸ್ಯೆ ಆಗುತ್ತದೆ. ಹಾಗಾಗಿ ಯಾವ ದಾಖಲೆಯಲ್ಲಿ ವ್ಯತ್ಯಾಸವಾಗಿದೆ ಅದನ್ನು ತಿದ್ದುಪಡಿ ಮಾಡಿಸಿಕೊಳ್ಳಬೇಕು.
ಇವೆಲ್ಲವೂ ಸರಿ ಇದ್ದು ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಆಗಿಲ್ಲ ಎಂದರೆ ಗಾಬರಿಗೊಳ್ಳುವ ಅಗತ್ಯ ಇಲ್ಲ. ಆಗಸ್ಟ್ 30ರಂದು ಯೋಚನೆ ಲಾಂಚ್ ಆಗಿದ್ದರೂ ಕೂಡ ಪೂರ್ತಿಯಾಗಿ ಎಲ್ಲಾ ಫಲಾನುಭವಿಗಳ ಖಾತೆಗೆ ಇನ್ನೂ ಸಹ ಹಣ ವರ್ಗಾವಣೆ ಆಗಿಲ್ಲ. ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದಕ್ಕೆ ಉತ್ತರಿಸಿದ್ದು ಪ್ರತಿದಿನವೂ ಕೂಡ 25 ಲಕ್ಷ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ, ಮೊದಲಿನ ಕಂತಿನ ಹಣವಾಗಿರುವ ಕಾರಣ ಅನೇಕ ತೊಡಕುಗಳಿಂದಾಗಿ ತಡವಾಗುತ್ತಿದೆ. ಆದರೆ ಮುಂದಿನ ತಿಂಗಳಿಂದ ಪ್ರತಿ ತಿಂಗಳ 15ನೇ ತಾರೀಕು ನಿಖರವಾಗಿ ಫಲಾನುಭವಿಗಳ ಖಾತೆಗೆ ಹಣ ಹೋಗಲಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ ಹಾಗಾಗಿ ಸ್ವಲ್ಪ ದಿನ ಕಾದು ನೋಡಿ.